ಸ್ಟಾರ್ ನಟರು ಹಾಗೂ ಸ್ಟಾರ್ ಡೈರೆಕ್ಟರ್‌ಗಳ ಮೇಲೆ ನಾಲಿಗೆ ಹರಿಬಿಟ್ಟು ಬಹುದೊಡ್ಡ ವಿವಾದಕ್ಕೆ ಕಾರಣರಾಗಿದ್ದ ನಿರ್ಮಾಪಕ ಕನಕಪುರ ಶ್ರೀನಿವಾಸ್ ಬೇಷರತ್ ಕ್ಷಮೆ ಯಾಚಿಸಿದ್ದಾರೆ. ಫಿಲ್ಮ್ ಚೇಂಬರ್ ಅಧ್ಯಕ್ಷೆ ಜಯಮಾಲಾ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ಯಶಸ್ವಿ ಆಗಿದ್ದು, ತಪ್ಪಿನ ಅರಿವಾಗಿ, ಇನ್ಮುಂದೆ ತಮ್ಮ ನಾಲಿಗೆಯನ್ನ ಹತೋಟಿಯಲ್ಲಿ ಇಟ್ಟಿಕೊಳ್ಳೋ ಭರವಸೆ ನೀಡಿದ್ದಾರೆ ವಿವಾದಾತ್ಮಕ ನಿರ್ಮಾಪಕ.
ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ವಿವಾದಕ್ಕೆ ಕಾರಣವಾದ ಘಟನೆ ಫೆಬ್ರವರಿ 5ರಂದು ನಡೆದ ‘ಕಾಟನ್ ಪೇಟೆ ಗೇಟ್’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಆರಂಭವಾಯಿತು. ಹಿರಿಯ ನಿರ್ಮಾಪಕ ಕನಕಪುರ ಶ್ರೀನಿವಾಸ್, ಜೋಗಿ ಪ್ರೇಮ್, ಎ ಪಿ ಅರ್ಜುನ್, ಪುನೀತ್ ರಾಜ್ ಕುಮಾರ್, ಡಿ ಕೆ ಶಿವಕುಮಾರ್ ಸೇರಿದಂತೆ ಹಲವು ನಟರ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿ ಅಸಮಾಧಾನ ಹೊರಹಾಕಿದರು. ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಚಿತ್ರರಂಗದೊಳಗೆ ತೀವ್ರ ಪ್ರತಿಕ್ರಿಯೆ ಹುಟ್ಟಿಸಿತು. ಚಿತ್ರರಂಗದ ಗೌರವಕ್ಕೆ ಧಕ್ಕೆ ತಂದುಕೊಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿತು. ಹೀಗಾಗಿ ಪ್ರೇಮ್ ಹಾಗು ಎ ಪಿ ಅರ್ಜುನ್ ಫಿಲಂ ಚೇಂಬರ್ ಗೆ ದೂರು ನೀಡಿದ್ರು.
ಫಿಲ್ಮ್ ಚೇಂಬರ್‌ನಲ್ಲಿ ಕನಕಪುರ ಶ್ರೀನಿವಾಸ್ ಕ್ಷಮೆಯಾಚನೆ
ಪುನೀತ್ ಸರ್ ದೇವರು..7 ಕೋಟಿ ಕನ್ನಡಿಗರಿಗೆ ಕ್ಷಮೆ ಇರಲಿ
ವಿಷಯ ತೀವ್ರವಾಗುತ್ತಿದ್ದಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಗಮನ ಹರಿಸಿತು. ಈ ಹಿನ್ನೆಲೆಯಲ್ಲಿ ಫಿಲ್ಮ್ ಚೇಂಬರ್ ಅಧ್ಯಕ್ಷೆ ಜಯಮಾಲಾ ಅವರು ಕನಕಪುರ ಶ್ರೀನಿವಾಸ್ ಅವರಿಗೆ ಸ್ಪಷ್ಟಿಕರಣ ನೀಡಲು ಬುಲಾವ್ ನೀಡಿದರು. ಅಧ್ಯಕ್ಷರ ನೇತೃತ್ವದಲ್ಲಿ ಇಂದು ಒಂದೂವರೆ ಗಂಟೆ ಚರ್ಚೆ ನಡೆದಿದ್ದು, ಚರ್ಚೆಯ ಬಳಿಕ ಶ್ರೀನಿವಾಸ್ ಮಾತು ತಪ್ಪು ಅನ್ನೋದು ಅವರಿಗೆ ಅರಿವಾಗಿದೆ, ಕ್ಷಮೆ ಕೇಳಿದ್ದಾರೆ. ಇನ್ನು ಮುಂದೆ ಹೀಗೆ ಮಾತಾಡುವುದಿಲ್ಲ ಎಂದು ತಿಳಿಸಿದ್ದಾರೆ ಎಂದು ಜಯಮಾಲಾ ಹೇಳಿದರು.
ಶಿವಣ್ಣ, ದರ್ಶನ್, ಧ್ರುವ ಅಷ್ಟೇ ಅಲ್ಲ ಅವ್ರ ಫ್ಯಾನ್ಸ್‌ಗೂ ಸಾರಿ
ಪ್ರೇಮ್, AP ಅರ್ಜುನ್..ದುಡ್ಡು ಬೇಡ ಸಿನಿಮಾ ಮಾಡ್ಕೊಡಿ
ಚರ್ಚೆಯ ಬಳಿಕ ಮಾಧ್ಯಮಗಳ ಮುಂದೆ ಪ್ರತಿಕ್ರಿಯಿಸಿದ ಕನಕಪುರ ಶ್ರೀನಿವಾಸ್ ಭಾವೋದ್ರಿಕ್ತವಾಗಿ ಕ್ಷಮೆ ಯಾಚಿಸಿದರು. ಒತ್ತಡದಲ್ಲಿ, ದುಃಖದಲ್ಲಿ ಹೇಳಿದ ಮಾತು. ಏಳು ಕೋಟಿ ಕನ್ನಡಿಗರಿಗೆ ಕ್ಷಮೆ ಕೇಳುತ್ತೇನೆ ಎಂದರು. ಪುನೀತ್ ರಾಜ್‌ಕುಮಾರ್ ಅವರನ್ನು “ದೇವರು” ಎಂದು ಕೊಂಡಾಡಿ, ಅಭಿಮಾನಿಗಳಲ್ಲಿ ಕ್ಷಮೆ ಕೇಳಿದರು. ಶಿವರಾಜ್‌ಕುಮಾರ್, ದರ್ಶನ್ ಹಾಗೂ ಧ್ರುವ ಸರ್ಜಾ ಬಗ್ಗೆ ಗೌರವ ವ್ಯಕ್ತಪಡಿಸಿ, ಕಲಾವಿದರು ಇಲ್ಲದೆ ಸಿನಿಮಾ ಸಾಧ್ಯವಿಲ್ಲ. ಕನ್ನಡ ಇಂಡಸ್ಟ್ರಿ ನನ್ನ ಉಳಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
“ದುಡ್ಡು ಬೇಡ..ಸಿನಿಮಾ ಮಾಡಿಕೊಡಿ ಸಾಕು” ಎಂದು ಕನಕಪುರ ಶ್ರೀನಿವಾಸ್, ಜೋಗಿ ಪ್ರೇಮ್ ಗೆ ಕೈಮುಗಿದು ವಿನಂತಿ ಮಾಡಿದ್ದಾರೆ. ಪ್ರೇಮ್ ಸಿನಿಮಾ ಮಾಡಲು ಒಪ್ಪಿದ್ದಾರೆ ಎಂಬ ಮಾತು ಹೊರಬಿದ್ದರೂ, ಈಗಾಗಲೇ ಮಾನನಷ್ಟ ಮೊಕದ್ದಮೆ ದಾಖಲಿಸಿರುವ ಹಿನ್ನೆಲೆ ಅವರ ಅಂತಿಮ ನಿಲುವು ಏನು ಎನ್ನುವುದು ಸ್ಯಾಂಡಲ್‌ವುಡ್‌ನಲ್ಲಿ ಕುತೂಹಲ ಮೂಡಿಸಿದೆ. ಇತ್ತ ಫಿಲ್ಮ್ ಚೇಂಬರ್ ಅಧ್ಯಕ್ಷೆ ಜಯಮಾಲಾ ಖಡಕ್ ಎಚ್ಚರಿಕೆ ನೀಡಿದ್ದು “ಇನ್ಮುಂದೆ ಯಾರೂ ಕಲಾವಿದರ ಬಗ್ಗೆ ಹಗುರವಾಗಿ ಮಾತನಾಡಬಾರದು” ಎಂದು ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಇದರ ನಡುವೆ ‘ಕಾಟನ್ ಪೇಟೆ ಗೇಟ್ ಚಿತ್ರದ ರಿಲೀಸ್ ಡೇಟ್ ಪೋಸ್ಟ್ ಫೋನ್ ಆಗಿದ್ದು ಮಾರ್ಚ್ 6ಕ್ಕೆ ಬಿಡುಗಡೆ ದಿನಾಂಕ ಫಿಕ್ಸ್ ಆಗಿದೆ. ವಿವಾದದ ಬೆಂಕಿಯಲ್ಲಿ ಸಿನಿಮಾ ಭವಿಷ್ಯವೂ ಚರ್ಚೆಗೆ ಗ್ರಾಸವಾಗಿದೆ.
ಈಗಾಗಲೇ ನಷ್ಟದ ಒತ್ತಡದಲ್ಲಿರುವ ಶ್ರೀನಿವಾಸ್‌ಗೆ ಈ ಕಂಟ್ರೋವರ್ಸಿ ಡಬಲ್ ಶಾಕ್ ನೀಡಿದಂತಾಗಿದೆ. ಕ್ಷಮೆ ಕೇಳಿ ಮಾತು ವಾಪಸ್ ಪಡೆದರೂ, ಮುಂದಾದರೂ ನಾಲಿಗೆಗೆ ಬ್ರೇಕ್ ಹಾಕ್ತಾರಾ ಎಂಬ ಪ್ರಶ್ನೆ ಗಾಳಿಯಲ್ಲಿ ತೇಲುತ್ತಿದೆ. ಚಿತ್ರರಂಗ ಒಗ್ಗಟ್ಟಾಗಿ ವಿಷಯವನ್ನು ಕ್ಲೋಸ್ ಮಾಡುತ್ತದೆಯಾ? ಅಥವಾ ಕಾನೂನು ಹಾದಿ ಇನ್ನಷ್ಟು ಕಾವು ಪಡೆದುಕೊಳ್ಳುತ್ತದೆಯಾ? ಕಾದು ನೋಡಬೇಕು.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
