ಱಪ್ ಸಾಂಗ್ ಶೈಲಿಯಲ್ಲಿ ‘ಕಮಲ್ ಶ್ರೀದೇವಿ’ ಟೀಸರ್..!

ಆಟೋ ಮೇಲಿನ ಸಾಲು ಕಮಲ್ ಶ್ರೀದೇವಿಗೆ ಸ್ಫೂರ್ತಿ

Untitled design 2025 08 06t194553.292

ಶೀರ್ಷಿಕೆಯಿಂದಲೇ ಸಂಚಲನ ಸೃಷ್ಟಿಸಿದ್ದ ‘ಕಮಲ್ ಶ್ರೀದೇವಿ’ ಸಿನಿಮಾ, ಇದೀಗ ಱಪ್ ಟೀಸರ್‌ನಿಂದ ಸ್ಯಾಂಡಲ್‌ವುಡ್‌‌‌ನಲ್ಲಿ ಹೊಸತನಕ್ಕೆ ನಾಂದಿ ಹಾಡಿದೆ. ಇಡೀ ಸಿನಿಮಾದ ಕಥೆಯನ್ನ ಒಂದೂವರೆ ನಿಮಿಷದ ಱಪ್ ಸಾಂಗ್‌‌ನಲ್ಲಿ ಹೇಳುವಲ್ಲಿ ಯಶಸ್ವಿ ಆಗಿದ್ದಾರೆ ಡೈರೆಕ್ಟರ್. ಸಚಿನ್- ಸಂಗೀತಾ ಭರ್ಜರಿ ಕಂಬ್ಯಾಕ್ ಮಾಡ್ತಿರೋ ಈ ಚಿತ್ರದಲ್ಲಿ ಅದ್ಭುತ ಕಲಾವಿದರ ಸಮಾಗಮ ಆಗಿದೆ.

ಕಮಲ್ ಶ್ರೀದೇವಿ ಟೈಟಲ್ ಎಷ್ಟು ಇಂಟೆರೆಸ್ಟಿಂಗ್ ಆಗಿದೆ ಅಲ್ವಾ..? ಯಾವ್ದೋ ಬಾಲಿವುಡ್ ಸಿನಿಮಾ ಶೀರ್ಷಿಕೆ ಇರಬೋದೇನೋ ಅಂತ ಒಮ್ಮೆ ಯೋಚನೆ ಮಾಡೋದು ಗ್ಯಾರಂಟಿ. ಆದ್ರೆ ಇದು ಪಕ್ಕಾ ಕನ್ನಡ ಸಿನಿಮಾ.. ಕನ್ನಡತಿ ಸಂಗೀತಾ ಭಟ್ ಹಾಗೂ ಸಚಿನ್ ಚಲುವರಾಯಸ್ವಾಮಿ ಅಭಿನಯಿಸಿರೋ ಕಂಟೆಂಟ್ ಬೇಸ್ಡ್ ಸಿನಿಮಾ. ಈಗಾಗಲೇ ಪೋಸ್ಟರ್ ಮೂಲಕ ಗಮನ ಸೆಳೆದಿದ್ದ ಈ ಚಿತ್ರದ ಟೀಸರ್ ಈಗ ಬಿಡುಗಡೆ ಆಗಿದೆ. ಸಿನಿಮಾ ಬಿಡುಗಡೆಗೂ ಮೊದಲೇ ಚಿತ್ರದ ಟೀಸರ್‌‌ನಲ್ಲಿ ಒಂದು ಡೈಲಾಗ್ ರಿವೀಲ್ ಆಗಿದೆ. ಅದೇ ಚಿತ್ರದ ಅಸಲಿ ಕಥೆ.

‘ಕಾಮಕ್ಕೆ ಹೆಂಡ್ತಿ ಇಲ್ಲ ಅಂದ್ರೆ ರೇಪ್ ಮಾಡ್ತಾರೆ. ಹೊಟ್ಟೆ ಪಾಡಿಗಾಗಿ ದೇಹ ಮಾರಿಕೊಂಡ್ರೆ ಕೊಲೆ ಮಾಡ್ತಾರೆ’.. ಈ ಒಂದು ಮಾತು ಇಡೀ ಕಮಲ್ ಶ್ರೀದೇವಿ ಸಿನಿಮಾದ ಕಥೆಯನ್ನು ಹೇಳುತ್ತೆ. ಸಂಗೀತಾ ಭಟ್ ಪಾತ್ರದ ಬಗ್ಗೆ ಹೇಳೋದಾದ್ರೆ ಸಿನಿಮಾದಿಂದ ಸಿನಿಮಾಗೆ ಇವರ ಆಯ್ಕೆ, ಆಲೋಚನೆ ಬೇರೆ ತಿರುವು ಪಡೆದುಕೊಳ್ತಿದೆ. ಹಿಂದೆಂದೂ ಕಾಣದ ಬೋಲ್ಡ್ ಪಾತ್ರದಲ್ಲಿ ಸಂಗೀತಾ ಭಟ್ ಅಭಿನಯಿಸಿದ್ದಾರೆ. ಇನ್ನೂ ನಟ ಸಚಿನ್ ಚಲುವರಾಯಸ್ವಾಮಿ ಪಾತ್ರದಲ್ಲಿ ಸಾಕಷ್ಟು ಟ್ವಿಸ್ಟ್ ಇದೆ ಅನ್ನೋದು ಟೀಸರ್ ಹೇಳ್ತಿದೆ. ಅದ್ರಲ್ಲೂ ಟೀಸರ್ ಆರಂಭದ ಸೌಂಡ್ ಟ್ರ್ಯಾಕ್ ಹಾಗೂ ಱಪ್ ಹಾಡಿನ ಮೂಲಕ ಟೀಸರ್‌‌ನ ನೀಡಿದ ಐಡಿಯಾ ನಿಜಕ್ಕೂ ವ್ಹಾವ್ ಫೀಲ್ ಕೊಡುತ್ತೆ.

ಅಂದಹಾಗೆ ನಟ ಕಿಶೋರ್ ಕುಮಾರ್ ಈ ಹಿಂದೆ ಸಹ ಪೊಲೀಸ್ ಪಾತ್ರದಲ್ಲಿ ಅಬ್ಬರಿಸಿದ್ದು ನೋಡಿದ್ದೀರಾ. ಈಗ ಮತ್ತೆ ಕಮಲ್ ಶ್ರೀದೇವಿಯಲ್ಲೂ ಖಾಕಿಯ ಗಮ್ಮತ್ತು ತೋರಿಸಿದ್ದಾರೆ. ಸಮಾಜದ ಬೇರೆ ಬೇರೆ ವರ್ಗಗಳಿಂದ ಬಂದ ಪಾತ್ರಗಳು ಒಂದು ಹೆಣ್ಣನ್ನು ನೋಡುವ ದೃಷ್ಟಿಕೋನ, ಆ ಹೆಣ್ಣಿನ ಜೀವನದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ. ಈ ಚಿತ್ರದ ಮೂಲಕ ನಾವು ಕೇವಲ ನಟನೆಯನ್ಷ್ಟೇ ಮಾಡ್ತಿಲ್ಲ, ಧ್ವನಿ ಎತ್ತುತ್ತಿದ್ದೇವೆ ಅಂತಾರೆ ನಟ ಕಿಶೋರ್.

ಇಂಟೆರೆಸ್ಟಿಂಗ್ ಅಂದ್ರೆ ಕಮಲ್ ಶ್ರೀದೇವಿ ಸಿನಿಮಾ ಆಗೋಕೆ ಆಟೋ ಮೇಲಿನ ಆ ಸಾಲು ಸ್ಫೂರ್ತಿ ಆಗಿತ್ತು ಅಂತ ನಟ ಹಾಗೂ ನಿರ್ಮಾಪಕ ರಾಜವರ್ಧನ್ ಹೇಳಿದ್ದಾರೆ. ‘ನೀನೆಂದರೆ ನನಗೆ ಆಸೆಯೂ ಅಲ್ಲ, ಆಕರ್ಷಣೆಯೂ ಅಲ್ಲ. ಮನದಲ್ಲಿ ಮೂಡಿದ ಮಧುರ ಭಾವನೆಯಷ್ಟೇ’ ಎಂದು ಆಟೋ ಹಿಂದೆ ಬರ್ದಿದ್ರು. ಈ ಒನ್‌ಲೈನ್‌ ಅನ್ನೇ ಇದೀಗ ಸಿನಿಮಾ ಮಾಡಿದ್ದೇವೆ. ಕಮಲ್‌ಗೆ ಶ್ರೀದೇವಿ ಆಸೆಯೂ ಅಲ್ಲ, ಆಕರ್ಷಣೆಯೂ ಅಲ್ಲ. ಆಕೆ ಅವನ ಮನದಲ್ಲಿ ಮೂಡಿದ ಮಧುರ ಭಾವವಷ್ಟೇ. ಅವಳ ಮೇಲೆ ಈ ಸಿನಿಮಾದ ಕಥೆ ಇದೆ ಎಂದ್ರು ರಾಜವರ್ಧನ್.

ವಿಎ ಸುನಿಲ್ ಕುಮಾರ್ ನಿರ್ದೇಶಿಸಿದ ಕಮಲ್ ಶ್ರೀದೇವಿಯಲ್ಲಿ ರಮೇಶ್ ಇಂದಿರಾ, ಮಿತ್ರ ಮತ್ತು ಉಮೇಶ್ ಕೂಡ ನಟಿಸಿದ್ದಾರೆ. ಚಿತ್ರವನ್ನು ಸ್ವರ್ಣಾಂಬಿಕಾ ಪಿಕ್ಚರ್ಸ್ ಅಡಿಯಲ್ಲಿ ಬಿ.ಕೆ. ಧನಲಕ್ಷ್ಮಿ ನಿರ್ಮಿಸಿದ್ದಾರೆ. ರಾಜವರ್ಧನ್ ಸಹ-ನಿರ್ಮಾಣವಿದ್ದು, ಕೀರ್ತನ್ ಸಂಗೀತ ಸಂಯೋಜಿಸಿದ್ದಾರೆ. ಱಪರ್ ಬಿಜು ಟೀಸರ್ ನಲ್ಲಿರೋ ಱಪ್ ಹಾಡಿಗೆ ಸಾಹಿತ್ಯ ಬರೆದು, ಧ್ವನಿ ನೀಡಿದ್ದಾರೆ. ಇನ್ನೂ ನಾಗೇಶ್ ವಿ ಆಚಾರ್ಯ ಛಾಯಾಗ್ರಾಹಕರಾಗಿ ತಮ್ಮ ಕೈಚಳಕ ತೋರಿಸಿದ್ದಾರೆ. ಸೆಪ್ಟೆಂಬರ್ 19ರಂದು ಕಮಲ್ ಶ್ರೀದೇವಿ ರಾಜ್ಯಾದ್ಯಂತ ಬಿಡುಗಡೆ ಆಗ್ತಿದ್ದು, ಹಿಟ್ ಸಿನಿಮಾಗಳ ಲಿಸ್ಟ್ ಸೇರುವ ಸೂಚನೆ ನೀಡಿದೆ.

ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್

Exit mobile version