‘ದೇಶ ಮೊದಲು.. ಕಲೆ ಕಾಯಲಿದೆ’.. ಕಮಲ್ ಥಗ್ ಲೈಫ್

Untitled design 2025 05 10t173759.759

ಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್ ಥಗ್ ಲೈಫ್ ಚಿತ್ರದ ಆಡಿಯೋ ಲಾಂಚ್ ಇವೆಂಟ್ ಪೋಸ್ಟ್‌ಪೋನ್ ಆಗಿದೆ. ಉಗ್ರರ ವಿರುದ್ಧದ ಕದನದ ಹಿನ್ನೆಲೆ ಮೋಸ್ಟ್ ಎಕ್ಸ್‌ಪೆಕ್ಟೆಡ್ ಮಲ್ಟಿಸ್ಟಾರರ್ ಥಗ್ ಲೈಫ್ ಚಿತ್ರದ ಪ್ರಮೋಷನ್ಸ್‌ಗೆ ಬ್ರೇಕ್ ಬಿದ್ದಿದೆ. ಈ ಬಗ್ಗೆ ಸಕಲಕಲಾವಲ್ಲಭ ದೇಶ ಮೊದಲು, ಕಲೆ ಕಾಯಲಿದೆ ಅಂತ ಅದ್ಭುತ ಮಾತುಗಳನ್ನಾಡಿದ್ದಾರೆ.

ಆಡು ಮುಟ್ಟದ ಸೊಪ್ಪಿಲ್ಲ.. ಕಮಲ್ ಹಾಸನ್ ಮಾಡದ ಪಾತ್ರವಿಲ್ಲ. ಹೌದು.. ಯೂನಿವರ್ಸಲ್ ಸ್ಟಾರ್ ಕಮಲ್ ವೆರೈಟಿ ಜಾನರ್ ಸಿನಿಮಾಗಳಿಂದ ಬೆಳ್ಳಿತೆರೆಯಲ್ಲಿ ಕಮಾಲ್ ಮಾಡಿದ್ದಾರೆ. ಎಂಥದ್ದೇ ಪಾತ್ರ ಕೊಟ್ಟರೂ ಲೀಲಾಜಾಲವಾಗಿ ಅದಕ್ಕೆ ಜೀವ ತುಂಬಬಲ್ಲ ಅಭಿನಯ ಚತುರ. ಅದರಲ್ಲೂ ದೇಶಪ್ರೇಮ ಸಾರುವ ಸಿನಿಮಾಗಳಿಗೆ ಬ್ರ್ಯಾಂಡ್ ಅಂಬಾಸಿಡರ್ ಅಂದ್ರೆ ತಪ್ಪಾಗಲ್ಲ.

ಇಂಡಿಯನ್ ಆಗಿ ಲಂಚತನದ ವಿರುದ್ಧ ಒಮ್ಮೆ ಅಲ್ಲ ಎರಡೆರಡು ಬಾರಿ ಕಮಲ್ ಹಾಸನ್ ಮಿಂಚು ಹರಿಸಿದ್ರು. ಹೇಯ್ ರಾಮ್, ಥೇವರ್ ಮಗನ್, ಅಪೂರ್ವ ಸಗೋಧರರ್ಗಳ್ ಹೀಗೆ ಸಾಲು ಸಾಲು ಚಿತ್ರಗಳು ಸಾಕ್ಷಿ ಆಗಿವೆ. ಸದ್ಯ ಕಮಲ್ ಹಾಸನ್‌ರ ಥಗ್ ಲೈಫ್ ಸಿನಿಮಾದ ರಿಲೀಸ್ ಡೇಟ್ ಲಾಕ್ ಆಗಿದೆ. ಜೂನ್ 5ಕ್ಕೆ ಥಗ್ ಲೈಫ್ ಸಿನಿಮಾ ತೆರೆಗಪ್ಪಳಿಸುತ್ತಿದ್ದು, ಈಗಾಗ್ಲೇ ಟೀಸರ್‌‌ಗಳ ಜೊತೆ ರಿಲೀಸ್ ಆಗಿರೋ ಹಾಡೊಂದು ದೊಡ್ಡ ಮಟ್ಟಕ್ಕೆ ಹಿಟ್ ಆಗಿದೆ.

ಸಾಂಗ್ ಲಾಂಚ್ ದಿನವೇ ಆಡಿಯೋ ಬಿಡುಗಡೆ ದಿನಾಂಕವನ್ನು ನಿಗದಿ ಪಡಿಸಿದ್ದ ಕಮಲ್ ಹಾಸನ್, ಮೇ 16ಕ್ಕೆ ಅದನ್ನ ಗ್ರ್ಯಾಂಡ್ ಆಗಿ ಮಾಡೋದಾಗಿ ಘೋಷಿಸಿದ್ದರು. ಆದ್ರೀಗ ಕಮಲ್ ಹಾಸನ್ ಹಾಗೂ ಸಿಂಬು ಇಬ್ಬರೂ ಫ್ಯಾನ್ಸ್‌ಗೆ ಬೇಸರ ತರುವಂತ ಸುದ್ದಿಯೊಂದು ಹೊರಬಿದ್ದಿದೆ. ಥಗ್ ಲೈಫ್ ಆಡಿಯೋ ಲಾಂಚ್ ಫಂಕ್ಷನ್ ಮುಂದೂಡಲಾಗಿದೆ. ಅದಕ್ಕೆ ಕಾರಣ ಉಗ್ರರ ವಿರುದ್ಧ ಭಾರತ ಸಾರಿರುವ ನಾನ್‌ಸ್ಟಾಪ್ ಯುದ್ಧ.

ಈ ಕುರಿತು ಕಮಲ್ ಹಾಸನ್ ಪತ್ರ ಕೂಡ ರಿಲೀಸ್ ಮಾಡಿದ್ದು, ಅದರಲ್ಲಿ ದೇಶ ಮೊದಲು. ಕಲೆ ಬೇಕಾದ್ರೆ ಕಾಯಲಿದೆ ಅಂತ ಆರ್ಟ್‌ ಆಫ್ ಸಿನಿಮಾ ಬಗ್ಗೆ ಮುಕ್ತವಾಗಿ ಬರೆದುಕೊಂಡಿದ್ದಾರೆ. ಇಂಡಿಯನ್‌ ಕಮಲ್ ಹೀಗೆ ದೇಶವೇ ಮೊದಲು, ಅದಕ್ಕಿಂತ ಮುಖ್ಯ ಏನೂ ಅಲ್ಲ ಅಂದಿರೋ ಮಾತುಗಳಿಗೆ ಫ್ಯಾನ್ಸ್ ಜೊತೆ ಭಾರತೀಯರು ದಿಲ್‌ಖುಷ್ ಆಗಿದ್ದಾರೆ.

ಒಂದು ವೇಳೆ ಭಾರತ- ಪಾಕ್ ಕದನ ನಿಲ್ಲದಿದ್ರೆ, ಆಡಿಯೋ ಲಾಂಚ್ ಅಷ್ಟೇ ಅಲ್ಲ, ಥಗ್ ಲೈಫ್ ಸಿನಿಮಾನೇ ಪೋಸ್ಟ್‌ಪೋನ್ ಆಗುವ ಸಾಧ್ಯತೆ ಇರಲಿದೆ. ಆಪರೇಷನ್ ಸಿಂದೂರ್ ಪರೋಕ್ಷವಾಗಿ ಎಲ್ಲಾ ಕ್ಷೇತ್ರಗಳಿಗೂ ಎಫೆಕ್ಟ್ ನೀಡುತ್ತಿದ್ದು, ಇದೀಗ ಚಿತ್ರರಂಗಕ್ಕೂ ಲೈಟ್ ಆಗಿ ಅಫೆಕ್ಟ್ ನೀಡುತ್ತಿದೆ. ಅದೇನೇ ಇರಲಿ, ಕಮಲ್ ಹಾಸನ್ ಹೇಳಿದಂತೆ ಕಲೆಗಿಂತ ದೇಶವೇ ಮೊದಲು. ದೇಶ ಇದ್ರೆ ಕಲೆ ಉಳಿಯಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್  

Exit mobile version