ಕನ್ನಡ ಭಾಷೆಯ ಕುರಿತು ಖ್ಯಾತ ನಟ ಕಮಲ್ ಹಾಸನ್ ನೀಡಿರುವ ವಿವಾದಾತ್ಮಕ ಹೇಳಿಕೆಯು ಕನ್ನಡಿಗರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಅವರ ಈ ಹೇಳಿಕೆಗೆ ನಟಿ ಹಾಗೂ ಮಾಜಿ ಸಂಸದೆ ಸುಮಲತಾ ಪ್ರತಿಕ್ರಿಯಿಸಿದ್ದು, ಕಮಲ್ ಹಾಸನ್ ಅವರು ಹೇಳಿದ್ದು ಸರಿ ಅಲ್ಲ. ನಮ್ಮ ನಾಡಿಗೆ ಬಂದು ನಮ್ಮ ಮೇಲೆ ದಬ್ಬಾಳಿಕೆ ಮಾಡೋದು ಸರಿ ಅಲ್ಲ, ಅವರು ಕ್ಷಮೆ ಕೇಳಲೇಬೇಕು ಎಂದು ಗುಡುಗಿದ್ದಾರೆ.
ಕನ್ನಡ ಚಿತ್ರರಂಗದ ದಿಗ್ಗಜರಾದ ದಿವಂಗತ ಡಾ. ಅಂಬರೀಶ್‌ರವರ 73ನೇ ಜನ್ಮದಿನದ ಪ್ರಯುಕ್ತ ಅಂಬರೀಶ್ ಸಮಾಧಿಗೆ ಸುಮಲತಾ ಅಂಬರೀಶ್ ಅವರಿಂದ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಮಲ್ ಹಾಸನ್, ಭಾರತೀಯ ಚಿತ್ರರಂಗದ ಒಬ್ಬ ಸೀನಿಯರ್ ಕಲಾವಿದರಾಗಿ ಎಲ್ಲರಿಂದಲೂ ಗೌರವಕ್ಕೆ ಪಾತ್ರರಾಗಿದ್ದಾರೆ. ಆದರೆ ಅವರು ನೀಡಿದ ಒಂದು ಹೇಳಿಕೆಯು ಕನ್ನಡಿಗರಲ್ಲಿ ಕೋಪ ಮತ್ತು ಅಸಮಾಧಾನವನ್ನು ಉಂಟುಮಾಡಿದೆ. ಯಾರು ಪಂಡಿತರಲ್ಲ, ಯಾವ ಭಾಷೆಯಿಂದ ಯಾವ ಭಾಷೆ ಹುಟ್ಟಿದೆ ಅಂತ ಹೇಳೋದಕ್ಕೆ ಆಗಲ್ಲ. ಎಲ್ಲವೂ ಅವ್ರ ಅಭಿಪ್ರಾಯ. ಇತಂಹ ಹೇಳಿಕೆಗಳನ್ನು ಕೊಡಬೇಕಾದ್ರೆ ಯೋಚನೆ ಮಾಡಬೇಕು. ನಮ್ಮ ನಾಡಿಗೆ ಬಂದು ನಮ್ಮ ಮೇಲೆ ದಬ್ಬಾಳಿಕೆ ಮಾಡೋದು ಸರಿ ಅಲ್ಲ. ಅವರು ಕ್ಷಮೇ ಕೇಳಲೇಬೇಕು ಎಂದು ಹೇಳಿದರು.
ಸುಮಲತಾ ಅಂಬರೀಶ್‌ರವರ ಹೇಳಿಕೆ: ಡಾ. ಅಂಬರೀಶ್‌ರ 73ನೇ ಜನ್ಮದಿನ
ಡಾ. ಅಂಬರೀಶ್‌ರವರ 73ನೇ ಜನ್ಮದಿನದ ಸಂದರ್ಭದಲ್ಲಿ, ಸುಮಲತಾ ಅಂಬರೀಶ್‌ರವರು ಅಭಿಮಾನಿಗಳಿಗೆ ಧನ್ಯವಾದ ಸೂಚಿಸಿದ್ದಾರೆ. ಅಂಬರೀಶ್‌ರವರಿಗೆ ಕನ್ನಡಿಗರೆಂದರೆ ಅಪಾರ ಪ್ರೀತಿ. “ಇಷ್ಟು ಜನ ಬಂದಿರುವುದು ಅಭಿಮಾನಿಗಳ ಸಂತೋಷ. ಈ ವಿಶೇಷ ದಿನದಂದು ಅದೇ ಪ್ರೀತಿ, ವಿಶ್ವಾಸ ಮುಂದುವರಿಯಲಿ,” ಎಂದು ಹೇಳಿದ್ದಾರೆ.
ಡಾ. ಅಂಬರೀಶ್‌ರವರು ತಮ್ಮ ಜೀವನದಲ್ಲಿ ಎಂದಿಗೂ ಸರಳತೆಯನ್ನು ಕಳೆದುಕೊಳ್ಳಲಿಲ್ಲ. ಸ್ನೇಹಿತರ ಜೊತೆ ಸಮಯ ಕಳೆಯುವುದು, ತಮ್ಮ ಮೊಮ್ಮಗನ ಜೊತೆ ಖುಷಿಯಿಂದಿರುವುದು, ಮಕ್ಕಳ ಮೇಲಿನ ಅವರ ಪ್ರೀತಿಯನ್ನು ಸುಮಲತಾರವರು ತಮ್ಮ ನೆನಪಿಸಿದ್ದಾರೆ. ಅವರಿಗೆ ದೇವರ ನಂಬಿಕೆಯಿದ್ದರೂ, ದೇವಸ್ಥಾನಕ್ಕೆ ಹೋಗುವುದು ಕಡಿಮೆಯಿತ್ತು. ಆದರೆ, ಅವರ ಜೀವನದ ಪ್ರತಿ ದಿನವೂ ಹೊಸದಿನವಾಗಿತ್ತು. ಅವರ ಸರಳತೆ ಮತ್ತು ಜನರೊಂದಿಗಿನ ಸಂಪರ್ಕವೇ ಅವರನ್ನು ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿರಿಸಿದೆ ಎಂದರು.
