‘ಜಸ್ಟ್ ಮ್ಯಾರೀಡ್’ ಚಿತ್ರದ ಭಾವಪೂರ್ಣ ಗೀತೆ ‘ತಪ್ಪು ಮಾಡೋದು ಸಹಜ’ ಬಿಡುಗಡೆ!

Web 2025 08 01t110717.976

ಬಹುನಿರೀಕ್ಷಿತ ಕನ್ನಡ ಸಿನಿಮಾ ‘ಜಸ್ಟ್ ಮ್ಯಾರೀಡ್’ ಚಿತ್ರದ ‘ತಪ್ಪು ಮಾಡೋದು ಸಹಜ’ ಎಂಬ ಸುಂದರ ಗೀತೆ ಇಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. ಅನನ್ಯಾ ಭಟ್ ಅವರ ಧ್ವನಿಯಲ್ಲಿ ಮೂಡಿಬಂದಿರುವ ಈ ಹಾಡಿಗೆ, ಬಿ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ ಹಾಗೂ ಧನಂಜಯ್ ರಂಜನ್ ರವರು ಸಾಹಿತ್ಯ ಬರೆದಿದ್ದಾರೆ.

ಈ ಗೀತೆಯು ಆಧುನಿಕ ಬದುಕಿನ ಪ್ರತಿಯೊಬ್ಬರ ಜೀವನದ ಕನ್ನಡಿಯಂತಿದೆ. ಖ್ಯಾತ ನಿರ್ದೇಶಕ ಮತ್ತು ನಟ ರಾಜ್ ಬಿ ಶೆಟ್ಟಿ ಅವರು ಈ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಅವರ ಉಪಸ್ಥಿತಿಯು ಹಾಡಿನ ಬಿಡುಗಡೆಗೆ ಮತ್ತಷ್ಟು ಮೆರುಗು ನೀಡಿತು.

ಸಿ.ಆರ್. ಬಾಬಿ ಬರೆದು ನಿರ್ದೇಶಿಸಿರುವ ಈ ಚಿತ್ರವನ್ನು, ಎಬಿಬಿಎಸ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಬಿ. ಅಜನೀಶ್ ಲೋಕನಾಥ್ ಮತ್ತು ಸಿ.ಆರ್. ಬಾಬಿ ನಿರ್ಮಿಸಿದ್ದಾರೆ. ವಿ.ಕೆ ಫಿಲಂಸ್ ಚಿತ್ರವನ್ನು ವಿತರಿಸಲಿದೆ.

ಚಿತ್ರದಲ್ಲಿ ಶೈನ್ ಶೆಟ್ಟಿ ಮತ್ತು ಅಂಕಿತಾ ಅಮರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಅನುಪ್ ಭಂಡಾರಿ, ಸಾಕ್ಷಿ ಅಗರ್ವಾಲ್, ಶ್ರುತಿ ಹರಿಹರನ್, ದೇವರಾಜ್, ಅಚ್ಯುತ್ ಕುಮಾರ್, ಶ್ರುತಿ ಕೃಷ್ಣ, ಮತ್ತು ಶ್ರೀಮಾನ್ ಸೇರಿದಂತೆ ಅನೇಕ ಪ್ರತಿಭಾವಂತ ಕಲಾವಿದರು ಅಭಿನಯಿಸಿದ್ದಾರೆ.’ಜಸ್ಟ್ ಮ್ಯಾರೀಡ್’ ಚಿತ್ರವು ಇದೇ ಆಗಸ್ಟ್ 22, 2025 ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

Exit mobile version