Jr. ಕಿರೀಟಿಯಲ್ಲಿ ಅಪ್ಪುನ ಕಂಡ ಶಿವಣ್ಣ.. ಡ್ಯಾನ್ಸ್ ಧಮಾಕ

ಜುಲೈ-18ರಿಂದ ಜೂನಿಯರ್ ಪ್ರದರ್ಶನ.. ಮಸ್ತ್ ಟ್ರೈಲರ್

Untitled design 2025 07 15t154756.970

ಜೂನಿಯರ್ ರಿಲೀಸ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಅಪ್ಪು ಹಾಗೂ ಅಪ್ಪನ ಆಶೀರ್ವಾದದಿಂದ ಹೀರೋ ಆಗಿ ಲಾಂಚ್ ಆಗ್ತಿರೋ ಗಾಲಿ ಜನಾರ್ದನ ರೆಡ್ಡಿ ಮಗ ಕಿರೀಟಿ, ಚೊಚ್ಚಲ ಚಿತ್ರದಲ್ಲಿ ಭರವಸೆ ಮೂಡಿಸಿದ್ದಾರೆ. ಇತ್ತೀಚೆಗೆ ನಡೆದ ಪ್ರೀ-ರಿಲೀಸ್ ಇವೆಂಟ್ ಹೈಲೈಟ್ಸ್ ಏನು..? ಶಿವಣ್ಣ, ಕ್ರೇಜಿಸ್ಟಾರ್, ಜೆನಿಲಿಯಾ ಹೇಳಿದ್ದೇನು ಅನ್ನೋದ್ರ ಝಲಕ್ ಇಲ್ಲಿದೆ ನೋಡಿ.

ಇದು ಜೂನಿಯರ್ ಸಿನಿಮಾದ ಟ್ರೈಲರ್ ಝಲಕ್. ಗಾಲಿ ಜನಾರ್ದನ ರೆಡ್ಡಿ ಪುತ್ರ ಕಿರೀಟಿ ನಟನೆಯ ಚೊಚ್ಚಲ ಸಿನಿಮಾ ಇದಾಗಿದ್ದು, ಇದೇ ಜುಲೈ 18ರಂದು ಗ್ರ್ಯಾಂಡ್ ಆಗಿ ತೆರೆಗಪ್ಪಳಿಸುತ್ತಿದೆ. ರಾಧಾಕೃಷ್ಣ ರೆಡ್ಡಿ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಚಿತ್ರ, ಈಗಾಗ್ಲೇ ತನ್ನ ಕಂಟೆಂಟ್‌ ಮೂಲಕ ನೋಡುಗರ ನಾಡಿಮಿಡಿತ ಹೆಚ್ಚಿಸಿದೆ. ಪರ್ಫೆಕ್ಟ್ ಯೂತ್ ಅಂಡ್ ಫ್ಯಾಮಿಲಿ ಎಂಟರ್‌ಟೈನರ್ ಆಗಿರೋ ಜೂನಿಯರ್‌‌ನಿಂದ ಸ್ಯಾಂಡಲ್‌ವುಡ್‌ಗೆ ಒಬ್ಬ ಭರವಸೆಯ ನಾಯಕನಟ ಸಿಕ್ಕಿದಂತಾಗಿದೆ.

ಇತ್ತೀಚೆಗೆ ಜೂನಿಯರ್‌ ಪ್ರೀ-ರಿಲೀಸ್‌ ಇವೆಂಟ್‌ ಹಮ್ಮಿಕೊಂಡಿತ್ತು ಚಿತ್ರತಂಡ. ಕಾರ್ಯಕ್ರಮಕ್ಕೆ ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ ಕುಮಾರ್‌ ವಿಶೇಷ ಅತಿಥಿಯಾಗಿ ಆಗಮಿಸಿ, ಕಿರೀಟಿ ಚಿತ್ರಕ್ಕೆ ಸಪೋರ್ಟ್‌ ಮಾಡಿದ್ರು. ಜನಾರ್ದನ ರೆಡ್ಡಿ, ನಟಿ ಜೆನಿಲಿಯಾ ಡಿಸೋಜಾ, ರವಿಚಂದ್ರನ್, ಶ್ರೀಲೀಲಾ ಇನ್ನೂ ಹಲವಾರು ಮಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಅಪ್ಪುನ ಕಿರೀಟಿಯಲ್ಲಿ ಕಾಣ್ತಿರೋದಾಗಿ ಹೇಳಿದ ಶಿವಣ್ಣ, ಶ್ರೀಲೀಲಾ ಜೊತೆ ಕ್ಯೂಟ್ ಆಗಿ ಸ್ಟೆಪ್ ಕೂಡ ಹಾಕಿದ್ರು.

ನಟ ರವಿಚಂದ್ರನ್ ಹಾಗೂ ನನ್ನದು ಎರಡು ದೇಹ ಒಂದೇ ಆತ್ಮ ಅಂತ ಶಿವಣ್ಣ ತಮ್ಮ ಗೆಳೆತನದ ಬಗ್ಗೆ ಕೂಡ ಮಾತನಾಡಿದ್ರು.

ರವಿಚಂದ್ರನ್‌ ಮಾತನಾಡಿ, ಶಿವ ಇರುವಾಗ ನನಗೆ ಏಕೆ ಭಯ. ಇವತ್ತು ಎಮೋಷನಲ್‌ ಅನಿಸುತ್ತದೆ. ಈ ಸಿನಿಮಾ ಅಪ್ಪನ ಕನಸು. ಇದು ತೆರೆ ಹಿಂದಿನ ಕಥೆ. ಆನ್‌ ಸ್ಕ್ರೀನ್‌ ನನ್ನ ಜೂನಿಯರ್.‌ ನನ್ನ ಕನಸು. ಈ ಸಿನಿಮಾ ಮೂರು ವರ್ಷದ ಜರ್ನಿ. ಅಷ್ಟು ಸಿಂಪಲ್‌ ಆಗಿ ನಡೆದ ಸಿನಿಮಾ ಇದಲ್ಲ. ಪ್ರತಿ ಕುಟುಂಬದಲ್ಲಿ ನಡೆದ ಎಮೋಷನ್, ನೋವು ಇದರಲ್ಲಿದೆ. ಈ ಸಿನಿಮಾವನ್ನು ಮೊನ್ನೆ ಪತ್ನಿ ಜೊತೆ ನೋಡಿದೆ. ಈ ಚಿತ್ರ ನೋಡಿದಾಗ ಮಾಣಿಕ್ಯ ನೆನಪಾಯ್ತು. ನಾನು ಈ ಚಿತ್ರದಲ್ಲಿ ತಂದೆ ರೋಲ್‌ ಪ್ಲೇ ಮಾಡಿದ್ದೇನೆ ಎಂದರು.

ತಂದೆ ಮಗನ ಎಮೋಷನ್‌ ಈ ಚಿತ್ರದ ಮೂಲಕ ತಲುಪುತ್ತದೆ. ಈ ಚಿತ್ರ ಕಣ್ಣೀರು ಹಾಕಿಸುತ್ತದೆ. ಕಿರೀಟಿ ನೂರರಷ್ಟು ಎಫರ್ಟ್‌ ಹಾಕಿದ್ದಾನೆ. ಎಂದಿಗೂ ಜನಾರ್ಧನ ರೆಡ್ಡಿ ಮಗ ತರ ವರ್ತನೆ ಮಾಡಿಲ್ಲ. ಅವನು ತನ್ನ ಪಾತ್ರದಲ್ಲಿ ಜೀವಿಸಿದ್ದಾನೆ ಅಂದ್ರು ಕ್ರೇಜಿಸ್ಟಾರ್.

‘ಜೋಗಿ’ ಸಿನಿಮಾದ ಹೊಡಿ ಮಗ ಸಾಂಗ್ ನಾನು ಡಾನ್ಸ್ ಮಾಡಿದ ಮೊದಲ ಸಾಂಗ್ ಅಂದ್ರು ಕಿರೀಟಿ. ನನಗೆ ಅಪ್ಪು ಅವರ ‘ಜಾಕಿ’ ಸಿನಿಮಾ ನಟನಾಗಲು ಸ್ಫೂರ್ತಿ ಕೊಟ್ಟಿತು. 13 ವರ್ಷ ಆದ್ಮೇಲೆ ಕನ್ನಡಕ್ಕೆ ಜೆನಿಲಿಯಾ ಕಮ್ ಬ್ಯಾಕ್ ಮಾಡಿದ್ದಾರೆ. ನಮ್ಮ ತಂದೆ ನನಗೋಸ್ಕರ ತುಂಬಾ ತ್ಯಾಗ ಮಾಡಿದ್ದಾರೆ. ನನಲ್ಲಿ ಛಲ ತುಂಬಿದ್ದೆ ನನ್ನ ತಂದೆ, ಅದ್ಭುತವಾದ ತಂದೆಗೆ ಮಗನಾಗಿ ಹುಟ್ಟಿದ್ದು ನನ್ನ ಪುಣ್ಯ, ಅಣ್ಣನ ಸಮಾನ ಯುವ ಅವರ ಎಕ್ಕ ಸಿನಿಮಾ ದಿನವೇ ನಮ್ಮ ಸಿನಿಮಾ ರಿಲೀಸ್ ಆಗ್ತಿದೆ. ಅವರ ಸಿನಿಮಾಗೂ ಕನ್ನಡಿಗರ ಆಶೀರ್ವಾದ ಇರಲಿ. ತಾಯಿ ಸಮಾನ ಅಶ್ವಿನಿ ಮೇಡಂ ಆಶೀರ್ವಾದ ನನ್ನ ಮೇಲಿದೆ ಅಂತಾರೆ ಕಿರೀಟಿ.

ನಾನು ಮೊದಲ ವರ್ಷ ಎಂಬಿಬಿಎಸ್ ವಿದ್ಯಾರ್ಥಿ ಆಗಿದ್ದಾಗ ಈ ಸಿನಿಮಾದ ಚಿತ್ರೀಕರಣ ಪ್ರಾರಂಭವಾಯ್ತು, ಈಗ ನಾನು ಡಾಕ್ಟರ್. ಈಗ ಬಿಡುಗಡೆ ಆಗ್ತಿದೆ ಸಿನಿಮಾ. ನಿರ್ದೇಶಕರು ನಿಧಾನ ಆದ್ರೂ ಒಳ್ಳೆಯ ಸಿನಿಮಾ ಮಾಡಿದ್ದಾರೆ. ಆರು ತಿಂಗಳಿಗೆ ಒಂದಾದರೂ ಕನ್ನಡ ಸಿನಿಮಾ ಆಫರ್​ಗಳು ನನಗೆ ಸಿಗಲಿ ಎಂಬುದು ನನ್ನ ಆಸೆ. ನಾನು ಆ ಕಾಲದಲ್ಲಿ ಇದ್ದಿದ್ರೆ ರವಿಚಂದ್ರನ್ ಅವರಿಗೆ ನಾಯಕಿ ಆಗುತ್ತಿದ್ದೆ. ಇನ್ನು ಶಿವರಾಜ್ ಕುಮಾರ್ ಅವರ ಸಿನಿಮಾದಲ್ಲಿ ನಟಿಸಿಯೇ ನಟಿಸುತ್ತೀನಿ ಎಂದರು.

ನನ್ನ ಮೊದಲ ಕನ್ನಡ ಸಿನಿಮಾ ಶಿವರಾಜ್ ಕುಮಾರ್ ಅವರ ಜೊತೆಗೆ ನಟಿಸಿದ ‘ಸತ್ಯ ಇನ್ ಲವ್’. ಈಗ 13 ವರ್ಷದ ಬಳಿಕ ಕನ್ನಡ ಸಿನಿಮಾ ಮಾಡಿದ್ದೀನಿ. ಕನ್ನಡ ಚಿತ್ರರಂಗ ಬಹಳ ಲಕ್ಕಿ ಏಕೆಂದರೆ ಅವರಿಗೆ ಕಿರೀಟಿ ಅಂತಹ ನಾಯಕ ನಟ ಸಿಕ್ಕಿದ್ದಾರೆ ಎಂದರು.

ಜೂನಿಯರ್‌ ಸಿನಿಮಾದಲ್ಲಿ ಕಿರೀಟಿ ಜೊತೆಗೆ ಕ್ರೇಜಿಸ್ಟಾರ್ ರವಿಚಂದ್ರನ್, ಜೆನಿಲಿಯಾ ಡಿಸೋಜಾ, ಶ್ರೀಲೀಲಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪುನೀತ್ ರಾಜ್‌ಕುಮಾರ್ ನಿರ್ಮಿಸಿದ್ದ ‘ಮಾಯಾಬಜಾರ್’ ಸಿನಿಮಾದ ನಿರ್ದೇಶಕ ರಾಧಾಕೃಷ್ಣ ರೆಡ್ಡಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಬಾಹುಬಲಿ, ಆರ್‌ಆರ್‌ಆರ್ ಅಂತಹ ಸಿನಿಮಾಗೆ ಕ್ಯಾಮರಾ ವರ್ಕ್ ಮಾಡಿರುವ ಕೆ.ಕೆ ಸೆಂಥಿಲ್ ಕುಮಾರ್ ಈ ಚಿತ್ರಕ್ಕೆ ಕೆಲಸ ಮಾಡಿದ್ದಾರೆ.

ಸಿನಿಮಾಗೆ ಖ್ಯಾತ ಆಕ್ಷನ್ ಕೊರಿಯೋಗ್ರಾಫರ್ ಪೀಟರ್ ಹೇನ್ಸ್ ಸಾಹಸ ದೃಶ್ಯಗಳನ್ನು ನೀಡಿದ್ದಾರೆ. ದಕ್ಷಿಣ ಚಿತ್ರರಂಗದ ರಾಕ್‌ ಸ್ಟಾರ್‌ ಅಂತಲೇ ಫೇಮಸ್ ಆಗಿರೋ ದೇವಿಶ್ರೀ ಪ್ರಸಾದ್‌ ಸಂಗೀತ ಚಿತ್ರಕ್ಕಿದೆ. ಸಿನಿಮಾ ಪ್ರಾರಂಭವಾದಾಗ ನಿರ್ದೇಶಕ ರಾಜಮೌಳಿ ಮುಹೂರ್ತಕ್ಕೆ ಆಗಮಿಸಿ, ಶುಭಾಶಯ ಕೋರಿದ್ರು. ಕನ್ನಡ, ತೆಲುಗು, ತಮಿಳು ಹೀಗೆ ತ್ರಿಭಾಷೆಯಲ್ಲಿ ತೆರೆಗೆ ಬರ್ತಿರೋ ಜೂನಿಯರ್‌ಗೆ ಈಗ ಶಿವಣ್ಣನ ಆಶೀರ್ವಾದ ಸಿಕ್ಕಿರೋದು ಇಂಟರೆಸ್ಟಿಂಗ್.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version