ಸುನಿ ಸಿನಿಮಾಸ್ ಅರ್ಪಿಸುವ, ಸಹ್ಯಾದ್ರಿ ಸ್ಟುಡಿಯೋಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ರಕ್ಷಿತ್ ಕುಮಾರ್ ನಿರ್ದೇಶನದ ಹಾಗೂ ಯಶ್ ಶೆಟ್ಟಿ, ಹರ್ಷಿತ ರಾಮಚಂದ್ರ, ಉಗ್ರಂ ಮಂಜು, ಬಲ ರಾಜವಾಡಿ, ದೀಪಕ್ ರೈ ಪಾಣಾಜೆ, ಚಂದ್ರಹಾಸ್ ಉಳ್ಳಾಲ್ ಮುಂತಾದವರು ಅಭಿನಯಿಸಿರುವ ” ಜಂಗಲ್ ಮಂಗಲ್” ಚಿತ್ರ ಕಳೆದವಾರ ಬಿಡುಗಡೆಯಾಗಿ ಜನಮನ ಗೆಲ್ಲುತ್ತಿದೆ. ಇದೊಂದು ಕಾಡಿನಲ್ಲಿ ನಡೆಯುವ ಕಥೆಯಾಗಿದ್ದು, ಕಾಡಿನ ಕಥೆಗೆ ನಾಡಿನ ಜನರು ಫಿದಾ ಆಗಿದ್ದಾರೆ. ಸಕ್ಸಸ್ ಮೀಟ್ ನಲ್ಲಿ ಚಿತ್ರತಂಡದ ಸದಸ್ಯರು ಚಿತ್ರದ ಪ್ರಸ್ತುತ ವಿಷಯದ ಬಗ್ಗೆ ಮಾತನಾಡಿದರು.
ನಮ್ಮ ಚಿತ್ರ ಕಮರ್ಷಿಯಲ್ ಆಗಿ ಗೆದ್ದಿದೆ ಎಂದು ಹೇಳಲು ಸಕ್ಸಸ್ ಮೀಟ್ ಆಯೋಜಿಸಿಲ್ಲ. ಆದರೆ ಇಲ್ಲಿಯವರೆಗೂ ನೋಡಿರುವವರ ಮನ ಗೆದ್ದಿದೆ ಎಂದು ಹೇಳಲು ಪತ್ರಿಕಾಗೋಷ್ಠಿ ಆಯೋಜಿಸಿದ್ದೇವೆ. ಚಿತ್ರ ಬಿಡುಗಡೆಯಾದಗಿನಿಂದ ಈವರೆಗೂ ನಮ್ಮ ಚಿತ್ರ ನೋಡಿದ ಯಾರೊಬ್ಬರೂ ಕೂಡ ಚಿತ್ರ ಚೆನ್ನಾಗಿಲ್ಲ ಎಂದು ಹೇಳಿಲ್ಲ. ಅದು ನಮಗೆ ಬಹಳ ಖುಷಿಯಾದ ವಿಚಾರ. ಇನ್ನೂ ನಮ್ಮ ಚಿತ್ರ ವೀಕ್ಷಿಸಿದ ಗುರು ದೇಶಪಾಂಡೆ ಅವರು, ತಾವೇ ಸ್ವತಃ ಶರಣ್ ಹಾಗೂ ಧ್ರುವ ಸರ್ಜಾ ಅವರಿಗೆ ಕರೆ ಮಾಡಿ ಚಿತ್ರ ಚೆನ್ನಾಗಿದೆ.
ಇದರಿಂದ ಒಂದು ಕಡೆ ಖುಷಿ. ಮತ್ತೊಂದು ಕಡೆ ಬೇರೆ ಭಾಷೆಯವರು ಈ ಚಿತ್ರ ನೋಡಿ ಕನ್ನಡದಲ್ಲಿ ಒಂದೊಳ್ಳೆ ಸಿನಿಮಾ ಬಂದಿದೆ ಎಂದು ಹೇಳಬೇಕು. ಮುಂದೊಂದು ದಿನ ಆ ದಿನ ಬರುತ್ತದೆ ಎಂಬ ವಿಶ್ವಾಸವಿದೆ. ಎರಡನೇ ವಾರಕ್ಕೆ ಅಡಿ ಇಡುತ್ತಿರುವ ಈ ಸಂದರ್ಭದಲ್ಲೂ ಅನೇಕ ಚಿತ್ರಮಂದಿರಗಳಲ್ಲಿ ನಮ್ಮ ಚಿತ್ರ ಪ್ರದರ್ಶನ ಕಾಣುತ್ತಿದೆ. ಹೆಚ್ಚಿನ ಜನರು ನಮ್ಮ ಚಿತ್ರವನ್ನು ನೋಡುವ ಮೂಲಕ ಪ್ರೋತ್ಸಾಹ ನೀಡಿ ಎನ್ನುತ್ತಾರೆ ನಿರ್ದೇಶಕ ರಕ್ಷಿತ್ ಕುಮಾರ್.
ನನ್ನ ಪಾತ್ರಕ್ಕೆ ಹಾಗೂ ಚಿತ್ರಕ್ಕೆ ಸಿಗುತ್ತಿರುವ ಪ್ರಶಂಸೆಗೆ ಬಹಳ ಸಂತೋಷವಾಗಿದೆ ಎಂದು ನಟ ಉಗ್ರಂ ಮಂಜು ತಿಳಿಸಿದರು.
ಮೊದಲ ಚಿತ್ರಕ್ಕೆ ಜನರು ತೋರುತ್ತಿರುವ ಒಲವಿಗೆ ನಾಯಕಿ ಹರ್ಷಿಕ ರಾಮಚಂದ್ರ ಧನ್ಯವಾದ ಹೇಳಿದರು.
