13 ವಾಚ್.. 30 ಕೋಟಿ.. ಇದು Jr. NTR ವಾಚ್ ಕಲೆಕ್ಷನ್

ಕನ್ನಡದ ಹೆಣ್ಣು ಮಗಳ ಮಗ ತಾರಕ್ ಸದ್ಯ ಗ್ಲೋಬಲ್ ಸ್ಟಾರ್

Untitled design 2025 08 29t200431.461

ಬೆಂಗಳೂರು: ನಮ್ಮ ಕುಂದಾಪುರ ಕುವರಿ ಶಾಲಿನಿ ನಂದಮೂರಿ ಪುತ್ರ, ಎನ್‌ಟಿಆರ್ ಮೊಮ್ಮಗ ಜೂನಿಯರ್ ಎನ್‌ಟಿಆರ್ ಸದ್ಯ ಗ್ಲೋಬಲ್ ಸ್ಟಾರ್ ಆಗಿ ಎಲ್ಲೆಡೆ ರಾರಾಜಿಸ್ತಿದ್ದಾರೆ. ವಾರ್-2 ಸಕ್ಸಸ್ ಖುಷಿಯಲ್ಲಿರೋ ತಾರಕ್‌ಗೆ ಕೈ ಗಡಿಯಾರ ಅಂದ್ರೆ ಸಿಕ್ಕಾಪಟ್ಟೆ ಕ್ರೇಜ್. ಅವ್ರ ವಾಚ್ ಕಲೆಕ್ಷನ್‌‌‌ನಲ್ಲಿ ಬರೋಬ್ಬರಿ 30ಕೋಟಿಯಷ್ಟು ದುಬಾರಿ ವಾಚ್‌‌ಗಳಿವೆ. ಅವುಗಳ ಪಿನ್ ಟು ಪಿನ್ ಡಿಟೈಲ್ಸ್ ಇಲ್ಲಿದೆ.

ಜೂನಿಯರ್ ಎನ್‌ಟಿಆರ್, ಆಂಧ್ರ ಮಾಜಿ ಮುಖ್ಯಮಂತ್ರಿ, ಸೂಪರ್ ಸ್ಟಾರ್ ನಂದಮೂರಿ ತಾರಕ ರಾಮರಾವ್‌ರ ಮೊಮ್ಮಗ. ನಂದಮೂರಿ ಹರಿಕೃಷ್ಣ ಹಾಗೂ ಕನ್ನಡದ ಹೆಣ್ಣು ಮಗಳು ಶಾಲಿನಿ ನಂದಮೂರಿಯ ಮುದ್ದಿನ ಮಗ. ಸದ್ಯ ತಾರಕ್ ಸಿನಿ ಕರಿಯರ್‌ಗೆ 24 ವರ್ಷ. ನಿನ್ನು ಚೂಡಾಲನಿ, ಸ್ಟೂಡೆಂಟ್ ನಂ.1 ಚಿತ್ರದಿಂದ ಹಂತ ಹಂತವಾಗಿ ತಾರಕ್, ಟಾಲಿವುಡ್‌‌ನ ಸೂಪರ್ ಸ್ಟಾರ್ ಆಗಿ, ಗ್ಲೋಬಲ್ ಸ್ಟಾರ್ ಆಗಿ ಬೆಳೆದ ಪರಿ ನಿಜಕ್ಕೂ ಅದ್ಭುತ.

ಹೌದು, ಸಿಂಹಾದ್ರಿ, ಯಮದೊಂಗ, ಟೆಂಪರ್, ಜನತಾ ಗ್ಯಾರೇಜ್, ನಾನ್ನಕು ಪ್ರೇಮತೋ, ಅರವಿಂದ ಸಮೇತ ಹೀಗೆ ಸಾಲು ಸಾಲು ಬ್ಲಾಕ್ ಬಸ್ಟರ್ ಹಿಟ್‌‌ಗಳಿಂದ ಸ್ಟಾರ್‌‌ಡಮ್ ಜೊತೆ ಅಭಿಮಾನಿ ಬಳಗ ಹೆಚ್ಚಿಸಿಕೊಂಡಿದ್ರು ತಾರಕ್. ಆದ್ರೆ ರಾಜಮೌಳಿಯ ತ್ರಿಬಲ್ ಆರ್ ಸಿನಿಮಾ ಹಾಗೂ ಅದರಲ್ಲಿದ್ದ ಕೊಮರಂ ಭೀಮ್ ರೋಲ್ ತಾರಕ್‌ಗೆ ಗ್ಲೋಬಲ್ ಸ್ಟಾರ್ ತಂದುಕೊಡ್ತು. ಅದಾದ ಬಳಿಕ ಬಂದಂತಹ ದೇವರ ಕೂಡ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿತ್ತು.

ಇತ್ತೀಚೆಗೆ ತೆರೆಕಂಡ ಹೃತಿಕ್ ರೋಷನ್‌ ಜೊತೆಗಿನ ವಾರ್-2 ಸಿನಿಮಾದ ಮೂಲಕ ಬಾಲಿವುಡ್‌ಗೂ ಕಾಲಿಟ್ಟಿರೋ ತಾರಕ್‌ಗೆ ವಿಶ್ವದ ಮೂಲೆ ಮೂಲೆಯಲ್ಲಿ ಫ್ಯಾನ್ಸ್ ಇದ್ದಾರೆ. ಮಾಸ್‌ಗೆ ಕೇರ್ ಆಫ್ ಅಡ್ರೆಸ್ ಆಗಿ ಮಿಂಚು ಹರಿಸ್ತಿರೋ ತಾರಕ್‌ ನೆಟ್ ವರ್ತ್ ಹೆಚ್ಚೂ ಕಡಿಮೆ 500 ಕೋಟಿ ಅಂದ್ರೆ ನಂಬಲೇಬೇಕು. ಆ ಪೈಕಿ ಅವರ ಬಳಿ ಇರೋ ವಾಚ್‌‌‌ಗಳ ಮೊತ್ತವೇ ಬರೋಬ್ಬರಿ 30 ಕೋಟಿ. ಹೌದು, ವಿಶ್ವದ ದುಬಾರಿ ವಾಚ್‌‌ಗಳ ಕಲೆಕ್ಷನ್ ಜೂನಿಯರ್ ಎನ್‌ಟಿಆರ್ ಬಳಿಯಿದೆ.

ಸುಮಾರು 13 ದುಬಾರಿ ವಾಚ್‌‌ಗಳನ್ನು ಹೊಂದಿರೋ ತಾರಕ್ ಬಳಿ ಯಾವ್ಯಾವ ಬ್ರ್ಯಾಂಡ್ ವಾಚ್‌‌ಗಳಿವೆ, ಅವುಗಳ ಒಂದೊಂದರ ಬೆಲೆ ಎಷ್ಟು ಕೋಟಿ ಅಂತೀರಾ..?

Jr. NTR ವಾಚ್ ವಾರ್ಡ್‌ರೋಬ್ ಕಲೆಕ್ಷನ್ 

ವಾಚ್ ಬ್ರಾಂಡ್

ಮಾಡೆಲ್

ಬೆಲೆ (ಕೋಟಿ/ಲಕ್ಷ ರೂ.)

ರಿಚರ್ಡ್ ಮಿಲ್ಲೆ

RM 40-01 ಟರ್ಬ್ಯುಲನ್

6.2 ಕೋಟಿ

ರಿಚರ್ಡ್ ಮಿಲ್ಲೆ

ಬಬ್ಬಾ ವ್ಯಾಟ್ಸನ್ RM 055

4.5 ಕೋಟಿ

ರಿಚರ್ಡ್ ಮಿಲ್ಲೆ

RM-03 ಮೆಕ್‌ಲಾರೆನ್

4.2 ಕೋಟಿ

ಆಡೋಮಾರ್ಸ್ ಪಿಗ್ಯೂಯೆಟ್

ರಾಯಲ್ ಓಕ್ ಡಬಲ್ ಬ್ಯಾಲೆನ್ಸ್

3.36 ಕೋಟಿ

ಆಡೋಮಾರ್ಸ್ ಪಿಗ್ಯೂಯೆಟ್

ರಾಯಲ್ ಓಕ್ ಕಾನ್ಸೆಪ್ಟ್

1.7 ಕೋಟಿ

ಆಡೋಮಾರ್ಸ್ ಪಿಗ್ಯೂಯೆಟ್

ರಾಯಲ್ ಓಕ್ ಕ್ರೋನೋಗ್ರಾಫ್

1.4 ಕೋಟಿ

ಆಡೋಮಾರ್ಸ್ ಪಿಗ್ಯೂಯೆಟ್

ರಾಯಲ್ ಓಕ್ ಆಫ್‌ಶೋರ್

22 ಲಕ್ಷ

ಆಡೋಮಾರ್ಸ್ ಪಿಗ್ಯೂಯೆಟ್

ರಾಯಲ್ ಓಕ್ ವ್ಯಾಂಪೈರ್

18.5 ಲಕ್ಷ

ವ್ಯಾಂಚೆರನ್ ಕಾನ್‌ಸ್ಟಾಂಟಿನ್

ಓವರ್‌ಸೀಸ್ ಪರ್ಪೆಚುವಲ್

1.2 ಕೋಟಿ

MB & F

ಪ್ರಿಪೆಚುವಲ್ ಇವೋ ಗ್ರೀನ್

1.9 ಕೋಟಿ

ಪಾಟೆಕ್ ಫಿಲಿಪ್ಪೆ

ಗ್ರ್ಯಾಂಡ್ ಕಾಂಪ್ಲಿಕೇಷನ್ಸ್

2.74 ಕೋಟಿ

ಪಾಟೆಕ್ ಫಿಲಿಪ್ಪೆ

ನಾಟಿಲಸ್ ಟ್ರಾವೆಲ್ ಟೈಮ್

1.05 ಕೋಟಿ

ರೋಲೆಕ್ಸ್

ಸಬ್‌ಮರೈನರ್ ಡೇಟ್

13 ಲಕ್ಷ

ಹೌದು, ಈ ಹದಿಮೂರೂ ದುಬಾರಿ ವಾಚ್‌‌ಗಳ ಬೆಲೆ 30ಕೋಟಿ ಗಡಿ ಮುಟ್ಟಿದೆ. ಅಬ್ಬಬ್ಬಾ! ಈ ಸೌತ್ ಸ್ಟಾರ್‌‌ಗೆ ವಾಚ್ ಗಳು ಅಂದ್ರೆ ಇಷ್ಟು ಇಷ್ಟನಾ ಅಂತ ಇದನ್ನು ಕಂಡು ಅವ್ರ ಫ್ಯಾನ್ಸ್ ಸೇರಿದಂತೆ ಚಿತ್ರಪ್ರೇಮಿಗಳೆಲ್ಲಾ ಹುಬ್ಬೇರಿಸ್ತಿದ್ದಾರೆ. ನಮ್ಮ ಸೌತ್ ಸ್ಟಾರ್ ಒಬ್ರು ಹೀಗೆ ದುಬಾರಿ ವಾಚ್ ವಾರ್ಡ್‌ರೋಬ್ ಕಲೆಕ್ಷನ್ ಹೊಂದಿರೋದು ನಿಜಕ್ಕೂ ಇಂಟರೆಸ್ಟಿಂಗ್. ಇದು ಬರೀ ವಾಚ್‌‌ಗಳ ಕಥೆ ಆದ್ರೆ ಕಾರ್, ಬೈಕ್‌, ಶೂ ಕಲೆಕ್ಷನ್ ಹೇಗಿರಬೇಡ ಅಂತ ಎಲ್ಲರೂ ಮಾತಾಡಿಕೊಳ್ತಿದ್ದಾರೆ.

Exit mobile version