ಪ್ರಶಾಂತ್​ ನೀಲ್ ಯೂನಿವರ್ಸ್‌ಗೆ ಬಿಟೌನ್ ಸ್ಟಾರ್ಸ್ ಲಗ್ಗೆ..!

ಶೂಟಿಂಗ್​ನಿಂದ ಬ್ರೇಕ್​..ಬೆಡ್​ ರೆಸ್ಟ್​ನಲ್ಲಿ ತಾರಕ್​..!

Your paragraph text 2026 09 04T182944.478

ಪ್ರಶಾಂತ್​ ನೀಲ್​ ಹಾಗೂ ಜೂ. NTR ಕಾಂಬಿನೇಶನ್​ನಲ್ಲಿ ಮೂಡಿಬರುತ್ತಿರುವ ಡ್ರ್ಯಾಗನ್​ ಸಿನಿಮಾ ಈಗಾಗಲೇ ಸಖತ್​ ಹೈಪ್ ಕ್ರಿಯೆಟ್​ ಮಾಡಿದೆ. ಈ ನಡುವೆ ಬಾಲಿವುಡ್​ನ ಇಬ್ಬರು ಸ್ಟಾರ್ಸ್​ ಡ್ರ್ಯಾಗನ್​ ಅಡ್ಡಾಗೆ ಎಂಟ್ರಿ ಕೊಡ್ತಾರೆ ಎಂಬ ಮಾತುಗಳು ಕೇಳಿ ಬರ್ತಾಯಿದೆ..ಹಾಗಾದ್ರೆ ಅದು ಯಾರು ಅಂತೀರಾ ಈ ಸ್ಟೋರಿ ನೋಡಿ.

ಪ್ರಶಾಂತ್​ ನೀಲ್​ ಹಾಗೂ ಜೂ. NTR ಕಾಂಬಿನೇಶನ್​ನಲ್ಲಿ ಮೂಡಿಬರುತ್ತಿರುವ ಡ್ರ್ಯಾಗನ್​ ಸಿನಿಮಾ ಈಗಾಗಲೇ ಸಖತ್​ ಹೈಪ್ ಕ್ರಿಯೆಟ್​ ಮಾಡಿದೆ.. ಬಿಗ್​ ಬಜೆಟ್​ನಲ್ಲಿ ನಿರ್ಮಾಣ ಆಗಿತ್ತಿರುವ ಈ ಸಿನಿಮಾದಲ್ಲಿ ಘಟಾನುಘಟಿ ಕಲಾವಿದರು ಅಭಿನಯಿಸ್ತಾ ಇದ್ದಾರೆ. ಸದ್ಯ ಶೂಟಿಂಗ್​ ವೇಳೆ ಜೂ. NTRಗೆ ಗಾಯವಾಗಿದ್ದು ಇತ್ತೀಚೆಗೆ ಅವರಿಗೆ ಸರ್ಜರಿ ಕೂಡ ಆಗಿತ್ತು.. , ತಾರಕ್​ ಬೆಡ್​ ರೆಸ್ಟ್​ನಲ್ಲಿದ್ದಾರೆ.. ಈ ಬೆನ್ನಲ್ಲೇ ಡ್ರ್ಯಾಗನ್​ ಸಿನಿಮಾ ಬಗ್ಗೆ ಮತ್ತೊಂದು ಹೊಸ ಸುದ್ದಿ ಕೇಳಿಬರ್ತಾತಯಿದೆ.

ಯೆಸ್​, ಜೂನಿಯರ್ ಎನ್‌ಟಿಆರ್ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಷನ್‌ನಲ್ಲಿ ಚಿತ್ರದ ಪ್ರತಿಯೊಂದು ಅಪ್‌ಡೇಟ್ ಕೂಡ ಅಭಿಮಾನಿಗಳಲ್ಲಿ ನಿರೀಕ್ಷೆಯನ್ನು ಹೆಚ್ಚಿಸುತ್ತಿದೆ. ಈಗಾಗಲೇ ಬಾಲಿವುಡ್‌ನ ಹಿರಿಯ ನಟ ಅನಿಲ್ ಕಪೂರ್ ಚಿತ್ರತಂಡಕ್ಕೆ ಸೇರ್ಪಡೆಯಾಗಿರುವುದು ‘ಡ್ರ್ಯಾಗನ್’ಗೆ ಮತ್ತಷ್ಟು ತಾರಾ ಮೆರುಗು ತಂದಿದೆ. ಇದರ ಬೆನ್ನಲ್ಲೇ ಬಾಲಿವುಡ್‌ನ ಸ್ಟಾರ್ ನಟರಾದ ಆಲಿಯಾ ಭಟ್ ಮತ್ತು ಶಾಹಿದ್ ಕಪೂರ್ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ವೈರಲ್​ ಆಗಿದೆ.

ಯೆಸ್​ ಟಾಲಿವುಡ್​ ಅಂಗಳದಲ್ಲಿ ಕೇಳಿಬರುತ್ತಿರುವ ಲೇಟೇಸ್ಟ್​ ಮಾಹಿತಿ ಪ್ರಕಾರ , ಆಲಿಯಾ ಭಟ್ ಮತ್ತು ಶಾಹಿದ್ ಕಪೂರ್ ಇಬ್ಬರೂ ‘ಡ್ರ್ಯಾಗನ್’ ತಂಡವನ್ನು ಸೇರಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆಲಿಯಾ ಭಟ್ ಈಗಾಗಲೇ ಬಾಲಿವುಡ್ ಮಾತ್ರವಲ್ಲದೆ ದೇಶಾದ್ಯಂತ ದೊಡ್ಡ ಅಭಿಮಾನಿ ಬಳಗ ಹೊಂದಿರುವ ನಟಿ. ಅವರಂತಹ ಜನಪ್ರಿಯ ನಟಿ ಜೂನಿಯರ್ ಎನ್‌ಟಿಆರ್ ಜೊತೆ ತೆರೆ ಹಂಚಿಕೊಳ್ಳುತ್ತಿರುವುದು ಚಿತ್ರದ ಪ್ಯಾನ್ ಇಂಡಿಯಾ ವ್ಯಾಪ್ತಿಗೆ ಮತ್ತಷ್ಟು ಬಲ ನೀಡುವ ಸಾಧ್ಯತೆಯಿದೆ.ಇನ್ನು, ಶಾಹಿದ್ ಕಪೂರ್ ಹಾಗೂ ಜೂನಿಯರ್ ಎನ್‌ಟಿಆರ್ ಕಾಂಬಿನೇಷನ್ ಕೂಡ ಸಿನಿಪ್ರಿಯರಿಗೆ ಸಾಕಷ್ಟು ಕುತೂಹಲ ಮೂಡಿಸಿದೆ.

ಪ್ರಶಾಂತ್ ನೀಲ್ ಅವರು ತಮ್ಮ ಸಿನಿಮಾಗಳಲ್ಲಿ ಬೃಹತ್ ಆ್ಯಕ್ಷನ್ ಸನ್ನಿವೇಶಗಳು, ಮಾಸ್ ಎಲಿಮೆಂಟ್ಸ್ ಮತ್ತು ದೊಡ್ಡ ಮಟ್ಟದ ಪಾತ್ರಗಳನ್ನು ಕಟ್ಟಿಕೊಡುವುದಕ್ಕೆ ಹೆಸರುವಾಸಿ. ‘ಡ್ರ್ಯಾಗನ್’ನಲ್ಲೂ ಇದೇ ರೀತಿಯ ಅದ್ದೂರಿ ಟ್ರೀಟ್‌ಮೆಂಟ್ ನಿರೀಕ್ಷಿಸಲಾಗುತ್ತಿದೆ. ಸದ್ಯ ಜೂನಿಯರ್ ಎನ್‌ಟಿಆರ್ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದ್ದು, ಅವರ ಅನುಪಸ್ಥಿತಿಯಲ್ಲಿ ಪ್ರಶಾಂತ್ ನೀಲ್ ಇತರ ಕಲಾವಿದರನ್ನು ಒಳಗೊಂಡ ದೃಶ್ಯಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್.

Exit mobile version