ಡ್ರ್ಯಾಗನ್ ಫೂಟೇಜ್ ಡಿಲೀಟ್..ಜೂನಿಯರ್ ಎನ್‌ಟಿಆರ್‌‌-ಪ್ರಶಾಂತ್ ನೀಲ್ ರೀ ಶೂಟ್..!!

10% ಮಾತ್ರ ಉಳಿಸಿಕೊಂಡು ಡಿಲೀಟ್ ಮಾಡಿದ್ಯಾಕೆ ಗೊತ್ತಾ..?

Untitled design 2025 10 15t182325.145

ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದ ತ್ರಿಬಲ್ ಆರ್‌‌ ಚಿತ್ರದ ಗ್ಲೋಬಲ್ ಸ್ಟಾರ್ ಜೂನಿಯರ್ ಎನ್‌ಟಿಆರ್‌‌ ಫ್ಯಾನ್ಸ್‌ಗೆ ಒಂದು ಬಿಗ್ ಶಾಕಿಂಗ್ ನ್ಯೂಸ್. ಮಾನ್‌ಸ್ಟರ್ ಡೈರೆಕ್ಟರ್ ಪ್ರಶಾಂತ್ ನೀಲ್ ಜೊತೆ ಬಣ್ಣ ಹಚ್ಚಿದ್ದ ಡ್ರ್ಯಾಗನ್ ಚಿತ್ರದ ಫೋಟೇಜ್‌‌ನ ಡಿಲೀಟ್ ಮಾಡಲಾಗಿದೆಯಂತೆ. ಅದೂ ಉದ್ದೇಶಪೂರ್ವಕವಾಗಿ ಅನ್ನೋದು ಅಚ್ಚರಿ ತಂದಿದೆ. ಯಾಕೆ ಅನ್ನೋ ಕ್ಯೂರಿಯಾಸಿಟಿಗೆ ಈ ಸ್ಟೋರಿ ಒಮ್ಮೆ ನೋಡಿ.

ಜೂನಿಯರ್‌‌ ಎನ್‌ಟಿಆರ್.. ಇತ್ತೀಚೆಗಷ್ಟೇ ಹೃತಿಕ್ ರೋಷನ್ ಜೊತೆ ವಾರ್-2 ಸಿನಿಮಾ ಮಾಡಿದ್ರು. ಆ ಮೂಲಕ ಬಾಲಿವುಡ್‌ಗೂ ಗ್ರ್ಯಾಂಡ್ ಎಂಟ್ರಿ ಕೊಟ್ಟರು. ಅದಕ್ಕೂ ಮುನ್ನ ಮಾಡಿದಂತಹ ದೇವರ, ಅದರ ಹಿಂದಿನ ರಾಜಮೌಳಿಯ ತ್ರಿಬಲ್ ಆರ್ ಸಿನಿಮಾಗಳು ಮಾಡಿದ ಮೋಡಿ ಎಂಥದ್ದು ಅನ್ನೋದನ್ನ ಪ್ರತ್ಯೇಕವಾಗಿ ವಿವರಿಸಬೇಕಿಲ್ಲ.

ಇದೀಗ ನಮ್ಮ ಕೆಜಿಎಫ್ ಚಿತ್ರದ ಖ್ಯಾತಿಯ ಮಾನ್‌ಸ್ಟರ್ ಪ್ರಶಾಂತ್ ನೀಲ್ ಜೊತೆ ಡ್ರ್ಯಾಗನ್ ಅನ್ನೋ ಸಿನಿಮಾನ ಕಿಕ್‌ಸ್ಟಾರ್ಟ್‌ ಮಾಡಿದ್ದಾರೆ ಜೂನಿಯರ್ ಎನ್‌ಟಿಆರ್. ಅದ್ರ ಮೊದಲ ಹಂತದ ಶೂಟಿಂಗ್ ಕರಾವಳಿಯ ಡಕಲ ತೀರದಲ್ಲಿ ಸೆಟ್ ಹಾಕಿ ಮಾಡಲಾಗಿತ್ತು. ಇದೀಗ ರಾಮೋಜಿರಾವ್ ಫಿಲ್ಮ್ ಸಿಟಿಯಲ್ಲಿ 15 ಕೋಟಿ ರೂಪಾಯಿ ಸೆಟ್ ತಯಾರಿಸಿ ಚಿತ್ರಿಸಲಾಗ್ತಿದೆ. ಅದ್ರ ಒಂದಷ್ಟು ಸ್ಟಿಲ್ ಫೋಟೋಸ್ ಕೂಡ ಲೀಕ್ ಆಗಿತ್ತು. ಆದ್ರೀಗ ಇಲ್ಲಿಯವರೆಗೂ ಶೂಟ್ ಆದ ಅಷ್ಟೋ ಫೂಟೇಜ್‌‌ನ ಡಿಲೀಟ್ ಮಾಡಲಾಗಿದೆಯಂತೆ.

ಯೆಸ್.. ಇದನ್ನ ಕೇಳಿ ಅಕ್ಷರಶಃ ತಾರಕ್ ಹಾಗೂ ನೀಲ್ ಫ್ಯಾನ್ಸ್ ಶಾಕ್ ಆಗಿದ್ದಾರೆ. ಫೂಟೇಜ್ ಡಿಲೀಟ್ ಮಾಡೋಕೆ ಪ್ರಮುಖ ಕಾರಣ ಅಂದುಕೊಂಡಂತೆ ಸಿನಿಮಾ ಬಂದಿಲ್ಲ ಅನ್ನೋದು. ಅಂದಹಾಗೆ ಅದ್ರಲ್ಲಿ ಕೇವಲ 10 ಪರ್ಸೆಂಟ್ ವಿಶ್ಯುವಲ್‌‌ನ ಮಾತ್ರ ಉಳಿಸಿಕೊಂಡು, ಉಳಿದೆಲ್ಲಾ ವಿಶ್ಯುವಲ್ಸ್‌‌ನ ಉದ್ದೇಶಪೂರ್ವಕವಾಗಿಯೇ ಡಿಲೀಟ್ ಮಾಡಲಾಗಿದೆ ಎನ್ನಲಾಗ್ತಿದೆ. ಅಲ್ಲದೆ, ರೀ ಶೂಟ್ ಮಾಡೋಕೆ ನವೆಂಬರ್‌‌ನಿಂದ ಶೆಡ್ಯೂಲ್ ಪ್ಲ್ಯಾನ್ ಮಾಡಿದ್ದಾರಂತೆ.

ರಿಲೀಸ್ ಡೇಟ್ ಈಗಾಗ್ಲೇ ಎರಡು ಬಾರಿ ಬದಲಾಗಿದ್ದು, ಇದೀಗ ಚಿತ್ರಿಸಿರೋ ದೃಶ್ಯಗಳನ್ನೇ ಕಸದ ಬುಟ್ಟಿಗೆ ಹಾಕಿರೋ ಹಿನ್ನೆಲೆ ರಿಲೀಸ್ ಮತ್ತಷ್ಟು, ಮಗದಷ್ಟು ವಿಳಂಬವಾಗಲಿದೆ. ಮೂಲಗಳ ಪ್ರಕಾರ 2027ರ ಸಂಕ್ರಾಂತಿ ಹಬ್ಬಕ್ಕೆ ಡ್ರ್ಯಾಗನ್ ಸಿನಿಮಾ ತೆರೆಗಪ್ಪಳಿಸಲಿದೆ. ಅಂದಹಾಗೆ ಜೂನಿಯರ್‌‌ ಎನ್‌ಟಿಆರ್ ಈ ಚಿತ್ರಕ್ಕಾಗಿ ಇತ್ತೀಚೆಗೆ ಜಿಮ್‌‌ನಲ್ಲಿ ಸಿಕ್ಕಾಪಟ್ಟೆ ಬೆವರಿಳಿಸುತ್ತಿದ್ದು, ಸಣ್ಣ ಕೂಡ ಆಗಿದ್ದಾರೆ. ಕಾಂತಾರ ಪ್ರಮೋಷನ್ಸ್ ವೇಳೆ ನಾವು ಅದನ್ನ ನೋಡಿದ್ವಿ ಕೂಡ. ಆದ್ರೆ ನೀಲ್ ಅಂದುಕೊಂಡಿದ್ದನ್ನ ಸಾಧಿಸೋವರೆಗೂ ನಿದ್ದೆ ಮಾಡದಂತಹ ತಂತ್ರಜ್ಞ. ಹಾಗಾಗಿ ಈ ಬಾರಿ ಏನೆಲ್ಲಾ ಪ್ರಯೋಗಗಳನ್ನ ಮಾಡ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version