ಗಾಯಕಿ ಜೊತೆ ಜಯಂ ರವಿ ಸುತ್ತಾಟದ ಬೆನ್ನಲ್ಲೇ ನಟನ ಪತ್ನಿ ಭಾವನಾತ್ಮಕ ಪೋಸ್ಟ್

Untitled design 2025 05 09t212759.820

ತಮಿಳು ಚಿತ್ರರಂಗದ ಖ್ಯಾತ ನಟ ಜಯಂ ರವಿ ಮತ್ತು ಅವರ ಪತ್ನಿ ಆರತಿ ರವಿ ನಡುವಿನ ಕೌಟುಂಬಿಕ ವಿವಾದ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗುರಿಯಾಗಿದೆ. 18 ವರ್ಷಗಳ ಸುದೀರ್ಘ ಸಂಸಾರದ ಬಳಿಕ, ಜಯಂ ರವಿ 2024ರ ಸೆಪ್ಟೆಂಬರ್‌ನಲ್ಲಿ ಆರತಿಗೆ ವಿಚ್ಛೇದನ ನೀಡುವುದಾಗಿ ಘೋಷಿಸಿದ್ದರು. ಈ ಘೋಷಣೆ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿತು. ಆದರೆ, ಈಗ ಈ ವಿವಾದವು ಗಾಯಕಿ ಕೆನಿಶಾ ಫ್ರಾನ್ಸಿಸ್‌ ಜೊತೆಗಿನ ಜಯಂ ರವಿಯ ಸಂಬಂಧದಿಂದಾಗಿ ಮತ್ತಷ್ಟು ತಿರುವು ಪಡೆದುಕೊಂಡಿದೆ.

ಜಯಂ ರವಿ ಮತ್ತು ಕೆನಿಶಾ ಫ್ರಾನ್ಸಿಸ್ ಇಬ್ಬರೂ ಡೇಟಿಂಗ್‌ನಲ್ಲಿರುವ ಆರೋಪವು ಆರಂಭದಲ್ಲಿ ವದಂತಿಯಾಗಿತ್ತು. ಆದರೆ, ಇತ್ತೀಚೆಗೆ ಇಸಾರಿ ಗಣೇಶ್ ಅವರ ಮಗಳ ವಿವಾಹ ಸಮಾರಂಭದಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದು, ಕೈ ಕೈ ಹಿಡಿದು ಕ್ಯಾಮರಾಗೆ ಪೋಸ್ ನೀಡಿದ್ದು ಈ ಆರೋಪಕ್ಕೆ ಬಲ ನೀಡಿದೆ. ಈ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಆರತಿ ರವಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಭಾವನಾತ್ಮಕವಾದ ಸುದೀರ್ಘ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

ಆರತಿಯ ಪೋಸ್ಟ್‌ನಲ್ಲಿ, “18 ವರ್ಷಗಳ ಕಾಲ ಒಟ್ಟಿಗಿದ್ದ ವ್ಯಕ್ತಿ ಎಲ್ಲವನ್ನೂ ಬಿಟ್ಹೋಟುದ. ಇಷ್ಟು ದಿನ ನನ್ನ ಇಬ್ಬರು ಮಕ್ಕಳಿಗಾಗಿ ಸುಮ್ಮನಿದ್ದೆ. ಈಗ ಇಡೀ ಜಗತ್ತೇ ಇದನ್ನು ನೋಡುತ್ತಿದೆ,” ಎಂದು ಹತಾಶೆಯನ್ನು ವ್ಯಕ್ತಪಡಿಸಿದ್ದಾರೆ. ತಮ್ಮ 10 ಮತ್ತು 14 ವರ್ಷದ ಇಬ್ಬರು ಗಂಡು ಮಕ್ಕಳಿಗಾಗಿ ಈವರೆಗೆ ತಾಳ್ಮೆಯಿಂದ ಇದ್ದೆವು ಎಂದು ಆರತಿ ಹೇಳಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ಯಾವುದೇ ಸೇಡು ಅಥವಾ ಅಸೂಯೆ ಇಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ತಾಯಿಯಾಗಿ ತಮ್ಮ ಮಕ್ಕಳ ಕ್ಷೇಮಕ್ಕಾಗಿ ಈ ಹೇಳಿಕೆಯನ್ನು ನೀಡುತ್ತಿರುವುದಾಗಿ ತಿಳಿಸಿದ್ದಾರೆ.

ಆರತಿ ತಮ್ಮ ಪೋಸ್ಟ್‌ನಲ್ಲಿ ಕಾನೂನಾತ್ಮಕ ವಿಚ್ಛೇದನ ಇನ್ನೂ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ನನ್ನನ್ನು ಜಯಂ ರವಿಯ ಮಾಜಿ ಪತ್ನಿ ಎಂದು ಕರೆಯಬೇಡಿ. ಅವರು ತಮ್ಮ ಹೆಸರನ್ನು ರವಿ ಮೋಹನ್ ಎಂದು ಬದಲಾಯಿಸಿಕೊಂಡಿರಬಹುದು, ರೇಷ್ಮೆ ಉಡುಗೆ ಧರಿಸಿ ಹೊಸಬರ ಜೊತೆ ತಿರುಗಾಡಬಹುದು. ಆದರೆ, ಅವರಿಗೆ ತಂದೆ ಎಂದು ಕರೆಯುವ ಇಬ್ಬರು ಮಕ್ಕಳಿದ್ದಾರೆ,” ಎಂದು ಆರತಿ ತಿಳಿಸಿದ್ದಾರೆ. ಜಯಂ ರವಿಯ ಈ ನಡವಳಿಕೆಯನ್ನು ತಂದೆಯ ಕರ್ತವ್ಯದ ತಿರಸ್ಕಾರ ಎಂದು ಆರತಿ ಟೀಕಿಸಿದ್ದಾರೆ.

ಜಯಂ ರವಿ ಈಗಾಗಲೇ ಆರತಿಯ ಮೇಲೆ ಹಲವು ಆರೋಪಗಳನ್ನು ಮಾಡಿದ್ದಾರೆ, ಇದಕ್ಕೆ ಆರತಿ ತಿರುಗೇಟು ನೀಡಿದ್ದರು. ಆದರೆ, ಕೆನಿಶಾ ಜೊತೆಗಿನ ಸಂಬಂಧವು ಈ ವಿವಾದಕ್ಕೆ ಹೊಸ ಆಯಾಮವನ್ನು ನೀಡಿದೆ. ಆರತಿಯ ಈ ಭಾವನಾತ್ಮಕ ಪೋಸ್ಟ್ ಅಭಿಮಾನಿಗಳನ್ನು ಬೆಚ್ಚಿಬೀಳಿಸಿದೆ. “ನನ್ನ ಪರಿಸ್ಥಿತಿಯನ್ನು ಊಹಿಸಿ. 18 ವರ್ಷಗಳ ಸಂಸಾರದ ಬಳಿಕ ಇಂತಹ ಸ್ಥಿತಿಯನ್ನು ಎದುರಿಸುವುದು ಎಷ್ಟು ಕಷ್ಟಕರ?” ಎಂದು ಆರತಿ ಪ್ರಶ್ನಿಸಿದ್ದಾರೆ.

ಆರತಿಯ ಪೋಸ್ಟ್‌ನಲ್ಲಿ ವ್ಯಕ್ತವಾದ ನೋವು ಮತ್ತು ಹತಾಶೆಯು ಅವರ ಮಕ್ಕಳ ಕಡೆಗಿನ ಕಾಳಜಿಯನ್ನು ಪ್ರತಿಬಿಂಬಿಸುತ್ತದೆ. “ನಾನು ಯಾವಾಗಲೂ ಆರತಿ ರವಿಯಾಗಿಯೇ ಇರುತ್ತೇನೆ,” ಎಂದು ಆರತಿ ತಮ್ಮ ಗಟ್ಟಿತನವನ್ನು ತೋರಿಸಿದ್ದಾರೆ.

Exit mobile version