ತಲೈವಾ ರಜನೀಕಾಂತ್ ಜೊತೆ ನಮ್ಮ ಕರುನಾಡ ಚಕ್ರವರ್ತಿ ಡಾ ಶಿವರಾಜ್‌ಕುಮಾರ್ ನಟಿಸ್ತಿರೋ ಜೈಲರ್-2 ಸಿನಿಮಾದ ಶೂಟಿಂಗ್ ಕಿಕ್‌ಸ್ಟಾರ್ಟ್ ಆಗಿದೆ. ಸದ್ದಿಲ್ಲದೆ ಸೈಲೆಂಟ್ ಆಗಿ ಚೆನ್ನೈಗೆ ತೆರಳಿದ್ದ ಶಿವಣ್ಣ, ಒಂದು ದಿನದ ಶೂಟಿಂಗ್ ಕೂಡ ಮುಗಿಸಿ ಬಂದಿದ್ದಾರೆ. ಈ ಕುರಿತ ಎಕ್ಸ್‌ಕ್ಲೂಸಿವ್ ಖಬರ್ ನಿಮಗಾಗಿ ಕಾಯ್ತಿದೆ. ಜಸ್ಟ್ ವಾಚ್.
- ತಲೈವಾ ಜೈಲರ್ ಅಡ್ಡಾಗೆ ಶಿವಣ್ಣ.. ಈ ಬಾರಿ ಉಗ್ರ ನರಸಿಂಹ
- ಇದು 650 ಕೋಟಿ ಗಳಿಸಿದ್ದ ಮಲ್ಟಿಸ್ಟಾರ್ ಜೈಲರ್ ಸೀಕ್ವೆಲ್
- ನೆಲ್ಸನ್ ರಕ್ತಸಿಕ್ತ ಹೊಸ ಅಧ್ಯಾಯದಲ್ಲಿ ಕರುನಾಡ ಚಕ್ರವರ್ತಿ
- ಸಂಡೇ ಶೂಟಿಂಗ್ ಮುಗಿಸಿ ಬೆಂಗಳೂರಿಗೆ ಶಿವಣ್ಣ ವಾಪಸ್..!
ಸೂಪರ್ ಸ್ಟಾರ್ ರಜನೀಕಾಂತ್ ಸೂಪರ್ ಹೀರೋ ಅಲ್ಲ. ಆದ್ರೆ ಅವರ ಸಿನಿಮಾಗಳು ಸೂಪರ್ ಹೀರೋ ರೇಂಜ್‌ಗೆ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡುತ್ತವೆ. ಇತ್ತೀಚೆಗೆ ತೆರೆಕಂಡ ಕೂಲಿ ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ ಇಂದಿನ ಸ್ಟಾರ್‌ಗಳು ಹುಬ್ಬೇರಿಸೋ ರೀತಿ ನೂರಾರು ಕೋಟಿ ಬ್ಯುಸಿನೆಸ್ ಮಾಡಿತು. ಕೂಲಿ ಸಕ್ಸಸ್ ಖುಷಿಯಲ್ಲಿರೋ ತಲೈವಾ, ಅದ್ರಿಂದ ಹೊರಬಂದು ಮತ್ತೊಂದು ಮೆಗಾ ಪ್ರಾಜೆಕ್ಟ್‌ಗೆ ಕೈ ಹಾಕಿದ್ದಾರೆ. ಅದೇ ಜೈಲರ್-2.
ಕಾನ್ಸೆಪ್ಟ್ ಟೀಸರ್‌ನಿಂದಲೇ ನೋಡುಗರ ನಾಡಿಮಿಡಿತ ಹೆಚ್ಚಿಸಿತ್ತು ಜೈಲರ್-2 ರಕ್ತಸಿಕ್ತ ಅಧ್ಯಾಯ. ಮೊದಲ ಭಾಗದ ಜೈಲರ್‌ನಲ್ಲಿ ರಜನೀಕಾಂತ್‌ಗೆ ನಮ್ಮ ಶಿವಣ್ಣ, ಮೋಹನ್‌ಲಾಲ್ ಹಾಗೂ ಜಾಕಿಶ್ರಾಫ್ ಸಾಥ್ ನೀಡಿದ್ರು. ಈ ಬಾರಿಯೂ ಕೂಡ ಶಿವಣ್ಣ ಜೈಲರ್ ಜೊತೆ ಸಂಚಲನ ಮೂಡಿಸಲಿದ್ದಾರೆ. ಈಗಾಗ್ಲೇ ಚೆನ್ನೈಗೆ ತೆರಳಿ, ಕಳೆದ ಭಾನುವಾರ ಸೈಲೆಂಟ್ ಆಗಿ ಒಂದು ದಿನದ ಶೂಟಿಂಗ್ ಮುಗಿಸಿ, ಬೆಂಗಳೂರಿಗೆ ವಾಪಸ್ ಆಗಿದ್ದಾರೆ ಲಿವಿಂಗ್ ಲೆಜೆಂಡ್ ಶಿವಣ್ಣ.
ಅಂದಹಾಗೆ ಜೈಲರ್-2ನಲ್ಲಿ ಶಿವಣ್ಣನವರ ಪಾತ್ರದ ಚಿತ್ರೀಕರಣ ಒಂದೇ ದಿನಕ್ಕೆ ಸೀಮಿತ ಆಯ್ತಾ ಅಂತ ಹುಬ್ಬೇರಿಸಬೇಡಿ. ಯಾಕಂದ್ರೆ ಇನ್ನೂ 10 ದಿನಗಳ ಶೂಟಿಂಗ್ ಬಾಕಿಯಿದೆ. ನೆಕ್ಸ್ಟ್ ಶೆಡ್ಯೂಲ್‌ಗೆ ಶಿವಣ್ಣ ಸೇರಿಕೊಳ್ಳಲಿದ್ದು, ಇಲ್ಲಿ ಶಿವಣ್ಣ 131 ಹಾಗೂ ಡ್ಯಾಡ್ ಚಿತ್ರಗಳ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಅಲ್ಲದೆ, ರಾಮ್ ಚರಣ್ ತೇಜಾ ಜೊತೆಗಿನ ಪೆದ್ದಿ ಸಿನಿಮಾದಲ್ಲಿ ಶಿವಣ್ಣ ನಟಿಸ್ತಿದ್ದು, ಅದರಲ್ಲಿಯೂ ತೊಡಗಿಸಿಕೊಳ್ಳಲಿದ್ದಾರೆ.