ಜೈಲರ್-2 ರಿಲೀಸ್‌ಗೆ ಇನ್ನೂ ನಾಲ್ಕೇ ದಿನ ಬಾಕಿ. ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಮೆಗಾ ಮಲ್ಟಿಸ್ಟಾರರ್ ಕಾಂಬೋನ ಈ ಸಿನಿಮಾ 350 ಕೋಟಿ ಬಿಗ್ ಬಜೆಟ್‌ನಲ್ಲಿ ತಯಾರಾಗಿದೆ. ಅಂದಹಾಗೆ ಸ್ಟಾರ್‌ಗಳ ರೆಮ್ಯುನರೇಷನ್‌ಗೇನೇ 161 ಕೋಟಿಗೂ ಅಧಿಕ ಮೊತ್ತ ವ್ಯಯಿಸಿರೋ ಪ್ರೊಡಕ್ಷನ್ ಹೌಸ್.. ಯಾಱರಿಗೆ ಎಷ್ಟೆಷ್ಟು ಕೋಟಿ ನೀಡಿದೆ ಅನ್ನೋದ್ರ ಲಿಸ್ಟ್ ಇಲ್ಲಿದೆ.
- ಜೈಲರ್-2 ಸ್ಟಾರ್ಸ್ ರೆಮ್ಯುನರೇಷನ್ ಲೀಕ್.. 161 ಕೋಟಿ?
- ಫಿಲ್ಮ್ ಮೇಕಿಂಗ್‌ಗಿಂತ ಜಾಸ್ತಿ ಕಲಾವಿದರ ಸಂಭಾವನೆ ಮೊತ್ತ
- ವಿದ್ಯಾಬಾಲನ್, ಹೃತಿಕ್, ಮಿಥುನ್, ಸೇತುಪತಿ ನ್ಯೂ ಎಂಟ್ರಿ
- 110 ಕೋಟಿ ಚಾರ್ಜ್ ಮಾಡಿರೋ ಸೂಪರ್ ಸ್ಟಾರ್ ರಜನಿ..!
ಜೈಲರ್-2.. ಈ ವರ್ಷದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಪ್ಯಾನ್ ಇಂಡಿಯಾ ಮೂವಿ. ತಲೈವಾ ರಜನಿಕಾಂತ್ ನಟನೆಯ ಬ್ಲಾಕ್‌ಬಸ್ಟರ್ ಜೈಲರ್ ಸಿನಿಮಾದ ಸೀಕ್ವೆಲ್ ಚಿತ್ರ ಇದಾಗಿದ್ದು, ಸಹಜವಾಗಿಯೇ ನೋಡುಗರ ಹೃದಯ ಬಡಿತ ಹೆಚ್ಚಿಸಿದೆ. ಇಂಟರೆಸ್ಟಿಂಗ್ ಅಂದ್ರೆ ಇಲ್ಲಿ ಸೆಂಟರ್ ಆಫ್ ಅಟ್ರ್ಯಾಕ್ಷನ್ ರಜನಿಕಾಂತ್ ಆದ್ರೂ.. ಸುತ್ತಲೂ ನಕ್ಷತ್ರಗಳಂತೆ ಸಾಕಷ್ಟು ಮಂದಿ ಬಹುಭಾಷಾ ಸ್ಟಾರ್‌ಗಳು ಮಿಂಚು ಹರಿಸಲಿದ್ದಾರೆ. ಡೈರೆಕ್ಟರ್ ನೆಲ್ಸನ್ ದಿಲೀಪ್ ಕುಮಾರ್ ಅಂಥದ್ದೊಂದು ಮೆಗಾ ಮಲ್ಟಿಸ್ಟಾರ್‌ಕಾಸ್ಟ್‌ನ ಡಿಸೈನ್ ಮಾಡಿ, ಈ ಚಿತ್ರ ಕಟ್ಟಿಕೊಟ್ಟಿದ್ದಾರೆ.
ಯೆಸ್.. ತಲೈವಾ ರಜನಿ ಜೊತೆ ಮೋಹನ್‌ಲಾಲ್, ಶಿವರಾಜ್‌ಕುಮಾರ್, ಹೃತಿಕ್ ರೋಷನ್, ಜಾಕಿಶ್ರಾಫ್, ವಿಜಯ್ ಸೇತುಪತಿ, ಮಿಥುನ್ ಚಕ್ರವರ್ತಿ, ವಿದ್ಯಾ ಬಾಲನ್, ರಮ್ಯಾಕೃಷ್ಣ, ಯೋಗಿಬಾಬು, ಎಸ್ ಜೆ ಸೂರ್ಯ.. ಹೀಗೆ ಬಹುದೊಡ್ಡ ತಾರಾಗಣವಿದೆ. ಅಲ್ಲದೆ ಗ್ಲಾಮರ್ ಹೆಚ್ಚಿಸೋಕೆ ನೋರಾ ಫತೇಹಿ ಹಾಗೂ ಶಾಮ್ನಾ ಕಾಸಿಂ ಸೊಂಟ ಬಳುಕಿಸಿ, ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಾರೆ.
ಅನಿರುದ್ದ್ ರವಿಚಂದರ್ ಮ್ಯೂಸಿಕ್ ಕೂಡ ಸಖತ್ ಕಿಕ್ ಕೊಡ್ತಿದ್ದು, ಸಾಂಗ್ಸ್, ಟೀಸರ್, ಟ್ರೈಲರ್ ಹಾಗೂ ಇತ್ತೀಚೆಗೆ ನಡೆದ ಇವೆಂಟ್ ಈ ಸಿನಿಮಾ ಬಾಕ್ಸ್ ಆಫೀಸ್ ಬ್ಯಾಂಗ್ ಮಾಡೋ ಮುನ್ಸೂಚನೆ ನೀಡಿದೆ. ಅಂದಹಾಗೆ ಕಲಾವಿದರುಗಳ ರೆಮ್ಯುನರೇಷನ್ ಎಷ್ಟೆಷ್ಟು ಅನ್ನೋದು ಲೀಕ್ ಆಗಿದ್ದು, ಸಿನಿಮಾ ಮೇಕಿಂಗ್‌ಗಿಂತ ಆರ್ಟಿಸ್ಟ್ ಸಂಭಾವನೆ ಜಾಸ್ತಿ ಇರೋದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
ರಜನೀಕಾಂತ್ ಇಬ್ಬರೇ ಬರೋಬ್ಬರಿ 110 ಕೋಟಿ ಬೃಹತ್ ಮೊತ್ತದ ಸಂಭಾವನೆ ಪಡೆದಿದ್ದು, ಶಿವರಾಜ್‌ಕುಮಾರ್ 7 ಕೋಟಿ, ರಮ್ಯಾ ಕೃಷ್ಣ 3 ಕೋಟಿ, ಮೋಹನ್‌ಲಾಲ್ 11 ಕೋಟಿ, ವಿಜಯ್ ಸೇತುಪತಿ 11 ಕೋಟಿ, ಜಾಕಿಶ್ರಾಫ್ 10 ಕೋಟಿ, ಮಿಥುನ್ ಚಕ್ರವರ್ತಿ 5 ಕೋಟಿ, ವಿದ್ಯಾ ಬಾಲನ್ 4 ಕೋಟಿ, ಹೃತಿಕ್ ರೋಷನ್ 15 ಕೋಟಿ ರೆಮ್ಯುನರೇಷನ್ ಪಡೆದಿದ್ದಾರೆ ಎನ್ನಲಾಗ್ತಿದೆ. ಅಲ್ಲಿಗೆ ಇವರೆಲ್ಲರ ಸಂಭಾವನೆ ಮೊತ್ತವೇ 161 ಕೋಟಿಗೂ ಅಧಿಕ. ಸೋ.. ಇಲ್ಲಿ ಫಿಲ್ಮ್ ಮೇಕಿಂಗ್‌ಗಿಂತ ಚಿತ್ರದಲ್ಲಿರೋ ತಾರಾಗಣಕ್ಕೆ ಹೆಚ್ಚಿನ ಹಣ ವ್ಯಯಿಸಿದೆ ಚಿತ್ರತಂಡ.
ಜೈಲರ್-2 ಇದೇ ಅಕ್ಟೋಬರ್ 15ಕ್ಕೆ ದಸರಾ ಧಮಾಕ ಮಾಡೋಕೆ ಬರ್ತಿದ್ದು, ರಿಟೈರ್ಡ್ ಜೈಲರ್ ಕಮ್ IPS ಟೈಗರ್ ಮುತ್ತುವೇಲ್ ಪಾಂಡಿಯನ್ ಬೇಟೆ ಬೆಳ್ಳಿತೆರೆಯಲ್ಲಿ ಮುಂದುವರೆಯಲಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
