ಗೌರಿ-ಗಣೇಶ ಹಬ್ಬದ ವಿಶೇಷ ನಾವೆಲ್ಲಾ ಜೈ ಗಣೇಶ ಅಂತ ಸಂಭ್ರಮಿಸ್ತಿದ್ದೀವಿ. ಸದ್ಯ ಅದೇ ಟೈಟಲ್‌ನಲ್ಲೀಗ ಟೀಸರ್‌ವೊಂದು ರಿಲೀಸ್ ಆಗಿದ್ದು ಸಖತ್ ಇಂಪ್ರೆಸ್ಸೀವ್ ಆಗಿದೆ. ಹೌದು, ರೂಪೇಶ್ ಶೆಟ್ಟಿ ಡೈರೆಕ್ಟರ್ ಆಗಿರೋ ಜೈ ಟೀಸರ್ ಗಮನ ಸೆಳೆದಿದೆ. ಇಂಟರೆಸ್ಟಿಂಗ್ ಅಂದ್ರೆ ಬಾಲಿವುಡ್ ಹ್ಯಾಂಡ್ಸಮ್ ಹಂಕ್ ಸುನೀಲ್ ಶೆಟ್ಟಿ ಕನ್ನಡಕ್ಕೆ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ.
- ರೂಪೇಶ್ ಶೆಟ್ಟಿ ಡೈರೆಕ್ಟರ್.. ಕನ್ನಡಕ್ಕೆ ಸುನೀಲ್ ಶೆಟ್ಟಿ ಕಂಬ್ಯಾಕ್
- ತುಳುನಾಡು ಅಂದ್ರೆ ಬಿಟೌನ್ ಸ್ಟಾರ್‌ಗೆ ಎಲ್ಲಿಲ್ಲದ ಪ್ರೀತಿ, ಗೌರವ
- ಪೊಲಿಟಿಕಲ್ ಗೇಮ್ ಥ್ರಿಲ್ಲರ್.. ರೂಪೇಶ್ಗೆ ಸುನೀಲ್ ಸಾಥ್
- ಕ್ರಾಂತಿಯ ಕಿಡಿಗೆ ರೋರಿಂಗ್ ಸ್ಟಾರ್ ಶ್ರೀಮುರಳಿ ಹೇಳಿದ್ದೇನು..?
ಬಿಗ್‌ಬಾಸ್ ಸೀಸನ್-9 ವಿನ್ನರ್ ರೂಪೇಶ್ ಶೆಟ್ಟಿ ಕರಾವಳಿಯ ಮತ್ತೊಬ್ಬ ಪ್ರತಿಭಾವಂತ ಕಲಾವಿದ. ಕಿರುತೆರೆ ಹಾಗು ಬೆಳ್ಳಿತೆರೆಯಲ್ಲಿ ಬಣ್ಣ ಹಚ್ಚಿ ಮಿಂಚೋದ್ರ ಜೊತೆಗೆ ಮತ್ತೊಂದು ಸಾಹಸಕ್ಕೆ ಸಜ್ಜಾಗಿದ್ದಾರೆ. ಹೌದು, ನಿರ್ದೇಶನಕ್ಕೂ ಕೈ ಹಾಕಿರೋ ರೂಪೇಶ್ ಶೆಟ್ಟಿ ಕನ್ನಡ ಹಾಗೂ ತುಳು ಎರಡು ಭಾಷೆಯಲ್ಲಿ ಜೈ ಅನ್ನೋ ಸಿನಿಮಾನ ಕಟ್ಟಿಕೊಡ್ತಿದ್ದಾರೆ. ಅವರೇ ಲೀಡ್‌ನಲ್ಲಿ ನಟಿಸೋದ್ರ ಜೊತೆ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದು, ಟೈಟಲ್‌ನಂತೆ ಕಂಟೆಂಟ್ ಕೂಡ ವ್ಹಾವ್ ಫೀಲ್ ತರಿಸಲಿದೆ.
ಇದು ಗೌರಿ- ಗಣೇಶ ಹಬ್ಬದ ವಿಶೇಷ ರಿಲೀಸ್ ಆಗಿರೋ ಜೈ ಚಿತ್ರದ ಲೇಟೆಸ್ಟ್ ಟೀಸರ್ ಝಲಕ್. ಪೊಲಿಟಿಕಲ್ ಥ್ರಿಲ್ಲರ್ ಜಾನರ್‌ನ ಈ ಸಿನಿಮಾದಲ್ಲಿ ಕ್ರಾಂತಿಯ ಕಿಡಿಯಿದೆ. ಯೆಸ್.. ರೈತರು ಹಾಗೂ ರಾಜಕಾರಣಿಗಳ ನಡುವಿನ ಸಮರ, ಪೊಲೀಸ್ ವ್ಯವಸ್ಥೆ ಹೀಗೆ ಸಾಕಷ್ಟು ವಿಷಯಗಳ ಮೇಲೆ ಈ ಚಿತ್ರ ಬೆಳಕು ಚೆಲ್ಲಲಿದೆ. ಬರವಣಿಗೆ ಮೆಚ್ಚುವಂತಿದ್ದು, ಟೀಸರ್‌ನಲ್ಲಿನ ಡೈಲಾಗ್ಸ್ ಅರ್ಥಪೂರ್ಣವಾಗಿವೆ.