ಭಾರತೀಯ ಚಿತ್ರರಂಗದ ಸಾಕಷ್ಟು ಮಂದಿ ಸ್ಟಾರ್‌ಗಳು ಪೇಟ್ರಿಯಾಟಿಕ್ ಮೂವೀಸ್‌ನಲ್ಲಿ ನಟಿಸಿದ್ದಾರೆ. ಆದ್ರೆ ರಿಯಾಲಿಟಿಯಲ್ಲಿ ಭಾರತ ಪಾಕ್ ಮೇಲೆ ದಾಳಿ ಮಾಡಿ ತಕ್ಕ ಉತ್ತರ ಕೊಟ್ಟಾಗ ಅದನ್ನ ಕೆಲವರಷ್ಟೇ ಬಹಿರಂಗವಾಗಿ ಖುಷಿ ವ್ಯಕ್ತಪಡಿಸ್ತಾರೆ. ಸದ್ಯ ಯಾವ್ಯಾವ ಸ್ಟಾರ್ ಏನಂತ ಪೋಸ್ಟ್ ಮಾಡಿದ್ದಾರೆ ಅನ್ನೋದ್ರ ಗ್ರಾಫಿಕಲ್ ಪ್ರೆಸೆಂಟೇಷನ್ ಇಲ್ಲಿದೆ. ಒಮ್ಮೆ ನೋಡಿ.
ಪಾಕ್ ಮೇಲೆ ಭಾರತ ದಾಳಿ ಬಗ್ಗೆ ಸೂಪರ್ ಸ್ಟಾರ್ ರಜನೀಕಾಂತ್ ಅವರು, ಸೈನಿಕರಿಂದ ಯುದ್ಧ ಶುರುವಾಗಿದೆ.. ಅಂದುಕೊಂಡಿದ್ದು ಆಗೋವರೆಗೂ ನಿಲ್ಲಿಸುವ ಮಾತೇ ಇಲ್ಲ.. ಪ್ರಧಾನಿ ಮೋದಿ, ಗೃಹ ಸಚಿವಾಲಯವೇ.. ಇಡೀ ಭಾರತ ನಿಮ್ಮೊಂದಿಗಿದೆ.. ಜೈ ಹಿಂದ್. ಎಂದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಭಾರತೀಯ ಸೇನೆ ಬಗ್ಗೆ ನಟ ಚಿರಂಜೀವಿ ಸಹ ಜೈ ಹಿಂದ್.. ಆಪರೇಷನ್ ಸಿಂಧೂರ..ಎಂದು ಮೆಚ್ಚುಗೆ ಸೂಚಿಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಪಾಕ್ ಮೇಲೆ ಭಾರತ ದಾಳಿ ಕುರಿತು ನಟ ರಿತೇಶ್ ದೇಶಮುಖ್, ಸೇನೆಗೆ ಜೈ ಹಿಂದ್.. ಭಾರತ್ ಮಾತಾ ಕಿ ಜೈ.. ಆಪರೇಷನ್ ಸಿಂಧೂರ.. ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭಾರತದ ದಾಳಿ ಕುರಿತು ನಟಿ, ಸಂಸದೆ ಕಂಗನಾ ರಣಾವತ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವರು ಹೇಳಿದ್ರು ಮೋದಿಗೆ ಹೋಗಿ ಹೇಳು.. ಮೋದಿ ಅವರಿಗೆ ತಿರುಗಿ ಹೇಳಿದ್ದಾರೆ ಆಪರೇಷನ್ ಸಿಂಧೂರ ಅಂತ.. ನಮಗೆ ರಕ್ಷಣೆ ಮಾಡುವವರು ಸೈನಿಕರು.. ಅವರನ್ನ ಶಿವನೇ ರಕ್ಷಿಸಲಿ.. ನಮ್ಮ ಆರ್ಮಿ ಸುರಕ್ಷಿತವಾಗಿ ಗೆದ್ದು ಬರಲಿ ಎಂದು ಹಾರೈಸುತ್ತೇನೆ ಎಂದು ಹೇಳಿದ್ದಾರೆ.
ಪಾಕಿಸ್ತಾನದ ಮೇಲೆ ಭಾರತ ದಾಳಿ ಬಗ್ಗೆ ನಟ ಅನುಪಮ್ ಖೇರ್ ಅವರು ಭಾರತ್ ಮಾತಾ ಕಿ ಜೈ..ಆಪರೇಷನ್ ಸಿಂಧೂರ.. ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ದಾಳಿ ಕುರಿತು ನಟ ಅಕ್ಷಯ್ ಕುಮಾರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಜೈ ಹಿಂದ್.. ಜೈ ಮಹಾಕಾಲ್..ಆಪರೇಷನ್ ಸಿಂಧೂರ.. ಎಂದು ಬರೆದು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಇನ್ನು ಈ ದಾಳಿ ಬಗ್ಗೆ ನಟ ಅಲ್ಲು ಅರ್ಜುನ್, ನ್ಯಾಯ ದೊರಕಿದೆ.. ಜೈ ಹಿಂದ್.. ಆಪರೇಷನ್ ಸಿಂಧೂರ.. ಎಂದು ಭಾರತೀಯ ಸೇನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಸಿನಿಮಾಗಳ ಮೂಲಕ ಹೀರೋಗಳು ಅನಿಸಿಕೊಂಡವರು ದೇಶದ ಭದ್ರತೆ ವಿಚಾರದಲ್ಲಿ ದೇಶಪ್ರೇಮ ಮೆರೆಯೋ ಮೂಲಕ ನಿಜ ಜೀವನದಲ್ಲೂ ಹೀರೋಗಳಾಗಬೇಕಾಗುತ್ತೆ. ಆಗಲೇ ಭರತ ಮಾತೆಯ ಮಕ್ಕಳಾಗ್ತಾರೆ. ದೇಶಪ್ರೇಮ ಇಲ್ಲದವನಿಗೆ ತಾಯಿ ಪ್ರೇಮ ಇರಲು ಸಾಧ್ಯವೇ ಇಲ್ಲ.
ಚೇತನ್ ನಾಯ್ಕ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್