ಹೊಂಬಾಳೆ ಫಿಲ್ಮ್ಸ್ ಜೊತೆ ಸೂರ್ಯ..ನ್ಯೂ ಚಾಪ್ಟರ್ ಬಿಗಿನ್ಸ್

ಚೆನ್ನೈನ ಪಾರ್ಕ್ ಹಯಾತ್‌ ಹೋಟೆಲ್‌‌‌‌ನಲ್ಲಿ ಮುಹೂರ್ತ..!!

Untitled design 2026 06 29T123744.951

ಇಷ್ಟು ದಿನ ಕೊಂಚ ಸೈಲೆಂಟ್ ಆಗಿದ್ದ ಹೊಂಬಾಳೆ ಫಿಲಂಸ್, ಇದೀಗ ಮೆಗಾ ಪ್ರಾಜೆಕ್ಟ್‌ವೊಂದರ ಮೂಲಕ ಬಿಗ್ ನ್ಯೂಸ್ ಕೊಟ್ಟಿದೆ. ಯೆಸ್.. ಕರುಪ್ಪು ಸಕ್ಸಸ್ ಅಲೆಯಲ್ಲಿರೋ ಸೂರ್ಯ ಜೊತೆ ಹೊಚ್ಚ ಹೊಸ ಸಿನಿಮಾಗೆ ಚಾಲನೆ ನೀಡಿದೆ. ಡೈರೆಕ್ಟರ್ ಯಾರು..? ಶೂಟಿಂಗ್ ಯಾವಾಗಿಂದ..? ಮುಹೂರ್ತ ಯಾವಾಗ ಅನ್ನೋದ್ರ ಎಕ್ಸ್‌‌ಕ್ಲೂಸಿವ್ ರಿಪೋರ್ಟ್ ಇಲ್ಲಿದೆ ನೋಡಿ..

ಕೆಜಿಎಫ್ ಹಾಗೂ ಕಾಂತಾರ ಸೀರೀಸ್ ಸಿನಿಮಾಗಳಿಂದ ಕನ್ನಡದ ಕೀರ್ತಿ ಪತಾಕೆಯನ್ನ ಜಗದಗಲಕ್ಕೆ ಕೊಂಡೊಯ್ದ ಕನ್ನಡದ ಹೆಮ್ಮೆಯ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್. ಅದ್ಯಾಕೋ ಕಾಂತಾರ ಚಾಪ್ಟರ್-1 ಬಳಿಕ ಸೈಲೆಂಟ್ ಆಗಿದ್ದ ವಿಜಯ್ ಕಿರಗಂದೂರು, ಇದೀಗ ಬಿಗ್ ಸ್ಟಾರ್ ಜೊತೆ ಮೆಗಾ ವೆಂಚರ್‌ವೊಂದಕ್ಕೆ ಚಾಲನೆ ನೀಡೋ ಮೂಲಕ ಬಿಗ್ ನ್ಯೂಸ್ ನೀಡಿದ್ದಾರೆ. ಯೆಸ್.. ತಮಿಳು ನಟ ಸೂರ್ಯ ಜೊತೆ ಹೊಸ ಸಿನಿಮಾ ಕಿಕ್‌ಸ್ಟಾರ್ಟ್ ಮಾಡಿದ್ದಾರೆ.

ಬರೋಬ್ಬರಿ 363 ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್‌‌ನಿಂದ ಕರುಪ್ಪು ಸಕ್ಸಸ್ ಅಲೆಯಲ್ಲಿರೋ ಸಿಂಗಂ ಸೂರ್ಯಗೆ ಈ ಬಾರಿ ಬಂಡವಾಳ ಹೂಡುತ್ತಿದೆ ಹೊಂಬಾಳೆ. ಇಂಟರೆಸ್ಟಿಂಗ್ ಅಂದ್ರೆ 2021ರಲ್ಲಿ ಜೈ ಭೀಮ್ ಅನ್ನೋ ಸೆನ್ಸೇಷನಲ್ ಮೂವಿ ಮಾಡಿದ್ದ ಅದೇ ಡೈರೆಕ್ಟರ್ ಟಿಜೆ ಜ್ಞಾನವೇಲ್ ಹಾಗೂ ಸೂರ್ಯ ಕಾಂಬೋನ ಮತ್ತೆ ರೀ-ಯುನೈಟ್ ಮಾಡ್ತಿದೆ ಹೊಂಬಾಳೆ. ಯೆಸ್.. ಸಾಮಾಜಿಕ ಕಳಕಳಿಯಿದ್ದ ಜೈ ಭೀಮ್ ಸಿನಿಮಾ ಭಾವನಾತ್ಮಕವಾಗಿ ಎಲ್ಲರ ಮನೆ, ಮನ ರೀಚ್ ಆಗಿತ್ತು. ಇದೀಗ ಅದೇ ಜೋಡಿ ಮಗದೊಮ್ಮೆ ಮೋಡಿ ಮಾಡೋಕೆ ಮುನ್ನುಡಿ ಬರೆದಿದೆ.

ಇಂದು ಚೆನ್ನೈನ ಪಂಚತಾರಾ ಹೋಟೆಲ್ ಪಾರ್ಕ್ ಹಯಾತ್‌‌ನಲ್ಲಿ ಸೂರ್ಯ-ಹೊಂಬಾಳೆ ಫಿಲಂಸ್ ನೂತನ ಸಿನಿಮಾದ ಮುಹೂರ್ತ ಕಾರ್ಯಕ್ರಮ ನೆರವೇರಿದ್ದು, ಶೂಟಿಂಗ್ ಕೂಡ ನಾಳೆಯಿಂದಲೇ ಆರಂಭ ಆಗ್ತಿರೋದು ಇಂಟರೆಸ್ಟಿಂಗ್. ನಟ ಸೂರ್ಯಗೆ ಬಹುದೊಡ್ಡ ಅಭಿಮಾನಿ ಬಳಗವಿದೆ. ಇತ್ತ ಹೊಂಬಾಳೆ ಫಿಲಂಸ್ ಕೂಡ ವಿಶ್ವದ ಮೂಲೆ ಮೂಲೆಗೆ ಸಿನಿಮಾಗಳನ್ನ ತಲುಪಿಸುವಲ್ಲಿ ಬಹುದೊಡ್ಡ ಹೆಸರು ಮಾಡಿದೆ. ಇವರಿಬ್ಬರ ಕಾಂಬೋನಲ್ಲಿ ಸಿನಿಮಾ ಬರ್ತಿರೋದು ಚಿತ್ರಪ್ರೇಮಿಗಳಲ್ಲಿ ಕುತೂಹಲ ಹೆಚ್ಚಿಸಿದೆ.

ಪ್ರಭಾಸ್ ಜೊತೆ ಸಲಾರ್ ಸಿನಿಮಾ ಮಾಡಿದ ಬಳಿಕ ಬಾಲಿವುಡ್‌‌ನಲ್ಲಿ ಹೃತಿಕ್ ರೋಷನ್ ಜೊತೆ ಸಿನಿಮಾ ಅನೌನ್ಸ್ ಮಾಡಿತ್ತು ಹೊಂಬಾಳೆ ಫಿಲಂಸ್. ಇದೀಗ ಸೂರ್ಯ ಜೊತೆ ಕೈ ಜೋಡಿಸೋ ಮೂಲಕ ಎಲ್ಲರ ಹುಬ್ಬೇರಿಸಿದೆ. ಸಲಾರ್ ಪಾರ್ಟ್-2 ಸದ್ಯದಲ್ಲೇ ಸೆಟ್ಟೇರಲಿದ್ದು, ಇತ್ತೀಚೆಗೆ ಮರಾಠಿ ಚಿತ್ರವೊಂದನ್ನ ಅನೌನ್ಸ್ ಮಾಡಿದ್ರು ವಿಜಯ್ ಕಿರಗಂದೂರು & ಚೆಲುವೆ ಗೌಡ್ರು. ಅದ್ರ ಬೆನ್ನಲ್ಲೀಗ ಸೂರ್ಯ ಸಿನಿಮಾ ಮಾಡ್ತಿರೋದು ಅಚ್ಚರಿ ತಂದಿದೆ.

ಜ್ಞಾನವೇಲ್ ಸಿನಿಮಾಗಳಲ್ಲಿ ಮನರಂಜನೆ ಜೊತೆ ಮನೋವಿಕಾಸದ ಕಥಾನಕ ಇರಲಿದೆ ಅನ್ನೋದ್ರಲ್ಲಿ ಯಾವುದೇ ಸಂದೇಹವಿಲ್ಲ. ಕಮರ್ಷಿಯಲ್ ಅಂಶಗಳ ಮೂಲಕ ಒಂದು ಬಲವಾದ ಸಾಮಾಜಿಕ ಕಳಕಳಿಯ ಕಥೆಯನ್ನ ಬ್ಲೆಂಡ್ ಮಾಡಿ ಬೆಳ್ಳಿತೆರೆಗೆ ತರೋದ್ರಲ್ಲಿ ಜೈ ಭೀಮ್ ಡೈರೆಕ್ಟರ್ ಎತ್ತಿದ ಕೈ. ಇತ್ತ ಸೂರ್ಯ ಕೂಡ ಸಾಮಾಜಿಕ ಕಾರ್ಯಗಳಿಂದ ಸಮಾಜಕ್ಕೆ ಸದಾ ತನ್ನಿಂದ ಏನಾದ್ರೂ ಒಂದು ಕೊಡುಗೆ ನೀಡಬೇಕು ಅಂತ ಪರಿತಪಿಸುತ್ತಿರುತ್ತಾರೆ. ಹೀಗಾಗಿ ಸೂರ್ಯ ಅವ್ರ ಆ ಸಾಮಾಜಿಕ ಬದ್ಧತೆಗೆ ಪೂರಕವಾಗಿ ಹೊಂಬಾಳೆ ಫಿಲಂಸ್ ಅಂಥದ್ದೊಂದು ಚಿತ್ರ ನಿರ್ಮಾಣ ಮಾಡೋಕೆ ಮುಂದಾಗಿರೋದು ಟಾಕ್ ಆಫ್ ದಿ ಟೌನ್ ಆಗಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version