ಹೃತಿಕ್-ಹೊಂಬಾಳೆ ಜೋಡಿ..ಹೊಸ ವರ್ಷಕ್ಕೆ ಮಾಡತ್ತೆ ಮೋಡಿ

ನೆಲ್ಸನ್ or ನೀಲ್? ಯಾರು ಹೇಳ್ತಾರೆ ಹೃತಿಕ್‌‌ಗೆ ಆ್ಯಕ್ಷನ್ ಕಟ್..?

Untitled Design 2026 11 27T153107.504

ಸುನಾಮಿ ಬರೋಕೆ ಮುನ್ನ ಕಡಲು ತುಂಬಾ ಪ್ರಶಾಂತವಾಗಿರುತ್ತಂತೆ. ಅದೇ ರೀತಿ.. ಬಿಗ್ಗೆಸ್ಟ್ ಬ್ಲಾಕ್‌‌ಬಸ್ಟರ್‌‌ ಸಿನಿಮಾಗಳ ಬಳಿಕ ಹೊಂಬಾಳೆ ಫಿಲಂಸ್ ಸೈಲೆಂಟ್ ಆಗಿತ್ತು. ಆದ್ರೀಗ ಇಡೀ ಭಾರತೀಯ ಚಿತ್ರರಂಗ ತಿರುಗಿ ನೋಡುವಂತಹ ಎರಡೆರಡು ಪ್ರಾಜೆಕ್ಟ್‌‌ಗಳಿಗೆ ಚಾಲನೆ ನೀಡ್ತಿದೆ. ಒಂದು ಸೂರ್ಯ 48.. ಮತ್ತೊಂದು ಗ್ರೀಕ್ ಗಾಡ್ ಹೃತಿಕ್ ರೋಷನ್ ಜೊತೆಗಿನ ಪ್ರಾಜೆಕ್ಟ್. ನ್ಯೂ ಇಯರ್‌ಗೆ ಸಿಗಲಿರೋ ನ್ಯೂ ಅಪ್ಡೇಟ್ ಇಲ್ಲಿದೆ..

ನಿನ್ನಿಂದಲೇ, ಮಾಸ್ಟರ್‌ಪೀಸ್, ರಾಜಕುಮಾರ ಸಿನಿಮಾಗಳ ಬಳಿಕ ಕೆಜಿಎಫ್ ಹಾಗೂ ಕಾಂತಾರ ಸೀರೀಸ್ ಸಿನಿಮಾಗಳಿಂದ ಬಾಲಿವುಡ್‌ನ ಬಿಗ್ ಬ್ಯಾನರ್‌‌ಗಳೇ ಬೆರಗಾಗುವಂತಹ ಸಿನಿಮಾಗಳನ್ನ ನಿರ್ಮಿಸಿದ ಗರಿಮೆ ಹೊಂಬಾಳೆ ಫಿಲಂಸ್‌ಗಿದೆ. ಕನ್ನಡ ಸಿನಿಮಾಗಳು ಕೂಡ ಸಾವಿರಾರು ಕೋಟಿ ಗಳಿಸಬಲ್ಲವು.. ಬಾಲಿವುಡ್, ಹಾಲಿವುಡ್ ಚಿತ್ರಗಳಿಗೆ ಸ್ಪರ್ಧೆ ಒಡ್ಡಬಲ್ಲವು ಅನ್ನೋದನ್ನ ತೋರಿಸಿಕೊಟ್ಟಂತಹ ಬ್ಯಾನರ್ ಹೊಂಬಾಳೆ. ಅದರಲ್ಲೂ ನಮ್ಮ ನೆಲದ ಕಥೆ, ಆಚಾರ ವಿಚಾರ, ಸಂಸ್ಕೃತಿಯನ್ನ ಜಗದಗಲಕ್ಕೆ ಪರಿಚಯಿಸಿದ ಸಾರ್ಥಕ ಭಾವ ಹೊಂಬಾಳೆ ಸಂಸ್ಥೆಗಿದೆ.

ಕಾಂತಾರ ಚಾಪ್ಟರ್-1 ಬಿಗ್ ಸಕ್ಸಸ್ ಬಳಿಕ ಸೈಲೆಂಟ್ ಆಗಿದ್ದ ಹೊಂಬಾಳೆ ಫಿಲಂಸ್.. ಇದೀಗ 2027ಕ್ಕೆ ಬ್ಯಾಕ್ ಟು ಬ್ಯಾಕ್ ಎರಡೆರಡು ಮೆಗಾ ಪ್ರಾಜೆಕ್ಟ್‌‌ಗಳಿಂದ ಸೌಂಡ್ ಮಾಡಲಿದೆ. ಆ ಪೈಕಿ ಇತ್ತೀಚೆಗೆ ಸೆಟ್ಟೇರಿದ ಸೂರ್ಯ ನಟನೆಯ 48 ಸಿನಿಮಾ. ಹೌದು.. ಚೆನ್ನೈನಲ್ಲಿ ಹ್ಯಾಟ್ರಿಕ್ ಹಿಟ್ ಸಿನಿಮಾಗಳನ್ನ ನೀಡಿ, ಹಿಟ್ ಮಷಿನ್ ಅನಿಸಿಕೊಂಡ ಸೂರ್ಯಗೆ ಬಂಡವಾಳ ಹೂಡಿ, ಅವ್ರ ನೆಕ್ಸ್ಟ್ ಮೂವಿಯನ್ನ ಅದ್ಧೂರಿಯಾಗಿ ನಿರ್ಮಾಣ ಮಾಡ್ತಿದ್ದಾರೆ.

ಮತ್ತೊಂದು ಮೆಗಾ ಪ್ರಾಜೆಕ್ಟ್‌ಗೆ ಕೂಡ 2027ರ ಆರಂಭದಲ್ಲಿ ಚಾಲನೆ ನೀಡಲಿದ್ದಾರಂತೆ ವಿಜಯ್ ಕಿರಗಂದೂರು. ಯೆಸ್.. ಈಗಾಗ್ಲೇ ಅನೌನ್ಸ್ ಆಗಿರುವಂತೆ ಬಾಲಿವುಡ್‌ನ ಗ್ರೀಕ್‌ಗಾಡ್ ಹೃತಿಕ್ ರೋಷನ್‌ ಜೊತೆ ಹೊಂಬಾಳೆ ಕೈ ಜೋಡಿಸ್ತಿದೆ. ಅದೊಂದು ಮೆಗಾ ಪ್ಯಾನ್ ಇಂಡಿಯಾ ಚಿತ್ರ ಆಗಿರಲಿದ್ದು.. ಯಾರ ಕೈಯಲ್ಲಿ ಡೈರೆಕ್ಷನ್ ಮಾಡಿಸಬೇಕು..? ಯಾವ ಜಾನರ್ ಸಿನಿಮಾ ಆದ್ರೆ ಸೂಕ್ತ ಅನ್ನೋದನ್ನ ಫೈನಲ್ ಮಾಡುವಲ್ಲಿ ಬ್ಯುಸಿ ಆಗಿದ್ದಾರೆ ವಿಜಯ್ ಕಿರಗಂದೂರು ಹಾಗೂ ಚೆಲುವೇ ಗೌಡರು.

ಮೂಲಗಳ ಪ್ರಕಾರ ಜೈಲರ್ ಹಾಗೂ ಜೈಲರ್-2 ಸಿನಿಮಾಗಳ ಮಾಸ್ಟರ್‌ಮೈಂಡ್ ನೆಲ್ಸನ್ ದಿಲೀಪ್ ಕುಮಾರ್ ಹೊಂಬಾಳೆ ಫಿಲಂಸ್ ನಿರ್ಮಿಸಲಿರೋ ಹೃತಿಕ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎನ್ನಲಾಗ್ತಿದೆ. ಅವರು ನಿರ್ದೇಶನ ಮಾಡಿದ್ರೂ ಅಚ್ಚರಿಯಿಲ್ಲ. ಯಾಕಂದ್ರೆ ತಲೈವಾ ರಜನಿಕಾಂತ್‌ರ ಜೈಲರ್-2ನಲ್ಲಿ ಸ್ಪೆಷಲ್ ಅಪಿಯರೆನ್ಸ್ ಮಾಡಿದ ಹೃತಿಕ್‌‌ನ ಅದ್ಭುತವಾಗಿ ತೆರೆಮೇಲೆ ತೋರಿಸಿದ್ರು ನೆಲ್ಸನ್. ಅದಕ್ಕೆ ಹೃತಿಕ್ ಕೂಡ ಫಿದಾ ಆಗಿದ್ದಾರೆ. ಸೋ.. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿರೋ ಸುದ್ದಿಗಳ ಪ್ರಕಾರ ಹೃತಿಕ್-ನೆಲ್ಸನ್ ಕಾಂಬೋನಲ್ಲಿ ಸಿನಿಮಾ ಸೆಟ್ಟೇರಲಿದೆ ಅನ್ನೋದು ಸದ್ಯದ ಸುದ್ದಿ.

ಮಗದೊಂದು ಕಡೆ ಮಾನ್‌ಸ್ಟರ್ ಡೈರೆಕ್ಟರ್ ಪ್ರಶಾಂತ್ ನೀಲ್ ಡೈರೆಕ್ಟ್ ಮಾಡಲಿದ್ದಾರೆ ಎನ್ನಲಾಗ್ತಿದೆ. ನೀಲ್ ಆ್ಯಕ್ಷನ್ ಕಟ್ ಹೇಳೋದ್ರಲ್ಲೂ ತಪ್ಪಿಲ್ಲ. ಯಾಕಂದ್ರೆ ಹೊಂಬಾಳೆ ಫಿಲಂಸ್ ಜೊತೆ ಪ್ರಶಾಂತ್ ನೀಲ್‌‌‌‌‌‌ಗೆ ಒಂದೊಳ್ಳೆ ಬಾಂಡಿಂಗ್ ಇದೆ. ಮಾಸ್ ಸಿನಿಮಾಗಳನ್ನ ಕಟ್ಟೋದ್ರಲ್ಲಿ ನೀಲ್ ಮಾಂತ್ರಿಕ. ಹಾಗಾಗಿ ಹೃತಿಕ್-ನೀಲ್ ಕಾಂಬಿನೇಷನ್‌‌ನಲ್ಲಿ ಸಿನಿಮಾ ಶೂಟಿಂಗ್ ಶುಭಾರಂಭ ಮಾಡಿದ್ರೂ ಅಚ್ಚರಿಯಿಲ್ಲ. ಒಟ್ಟಾರೆಯಾಗಿ ಸದ್ಯಕ್ಕಂತೂ ಹೊಂಬಾಳೆಯಿಂದ ಡೈರೆಕ್ಟರ್ ಯಾರು..? ಯಾವಾಗಿಂದ ಶೂಟಿಂಗ್ ಅನ್ನೋ ಅಪ್ಡೇಟ್ಸ್ ಅಧಿಕೃತವಾಗಿ ಹೊರಬಿದ್ದಿಲ್ಲ. ಆದ್ರೆ ಹೃತಿಕ್ 2027ನಲ್ಲಿ ಡೇಟ್ಸ್ ನೀಡಿದ್ದು.. ಹೊಸ ವರ್ಷಕ್ಕೆ ಹೊಸ ಸುದ್ದು ಹೊರಬೀಳೋದು ಪಕ್ಕಾ ಎನ್ನಲಾಗ್ತಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version