ಹೊಂಬಾಳೆ ಫಿಲಂಸ್ ನಿರ್ಮಾಣದ, ಸ್ಯಾಂಡಲ್‌ವುಡ್‌ನ ಅತಿ ದೊಡ್ಡ ಬಜೆಟ್ ಚಿತ್ರಗಳಲ್ಲೊಂದಾದ ‘ಕಾಂತಾರ ಚಾಪ್ಟರ್-1’ನ ಅತ್ಯಂತ ನಿರೀಕ್ಷಿತ ಟ್ರೈಲರ್ ಇಂದು (ಸೆಪ್ಟೆಂಬರ್ 27) ಅದ್ಧೂರಿಯಾಗಿ ಬಿಡುಗಡೆಯಾಗಿದೆ. 2022ರಲ್ಲಿ ಬಿಡುಗಡೆಯಾದ ಕಾಂತಾರ ಸಿನಿಮಾ ದೇಶಾದ್ಯಂತ ದೊಡ್ಡ ಯಶಸ್ಸು ಕಂಡು, ರಿಷಬ್ ಶೆಟ್ಟಿಯನ್ನು ಪ್ಯಾನ್ ಇಂಡಿಯಾ ಸ್ಟಾರ್ ಮಾಡಿತ್ತು. ಈಗ ಅದರ ಪ್ರೀಕ್ವೆಲ್ ಆಗಿ ಬರುತ್ತಿರುವ ಚಾಪ್ಟರ್ ೧, ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ‘ಕಾಂತಾರ ಚಾಪ್ಟರ್-1’ ಟ್ರೈಲರ್ ಅನ್ನು ವಿವಿಧ ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿದ್ದು, ಪ್ರತಿ ಭಾಷೆಗೆ ಒಂದೊಂದು ಸ್ಟಾರ್ ನಟರು ರಿಲೀಸ್ ಮಾಡಿದ್ದಾರೆ.
ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ಅವರು ನಿರ್ದೇಶಿಸಿ, ನಟಿಸಿರುವ ಈ ಚಿತ್ರವನ್ನು ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡಿದೆ. ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಟ್ರೇಲರ್ ಬಿಡುಗಡೆಯಾಗಿದ್ದು, ದೇಶದ ಪ್ರಮುಖ ನಟರು ಇದನ್ನು ಅನಾವರಣಗೊಳಿಸಿದ್ದಾರೆ. ಹಿಂದಿಯಲ್ಲಿ ಹೃತಿಕ್ ರೋಶನ್, ತಮಿಳಿನಲ್ಲಿ ಶಿವಕಾರ್ತಿಕೇಯನ್, ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್ ಮತ್ತು ತೆಲುಗಿನಲ್ಲಿ ಪ್ರಭಾಸ್ ಅವರು ಟ್ರೇಲರ್ ಬಿಡುಗಡೆ ಮಾಡಿದ್ದಾರೆ. ಕನ್ನಡದ ಟ್ರೇಲರ್ ಅನ್ನು ಕನ್ನಡದ ಅಭಿಮಾನಿಗಳಿಗಾಗಿ ವಿಶೇಷವಾಗಿ ಬಿಡುಗಡೆ ಮಾಡಲಾಗಿದೆ.
ಚಿತ್ರದ ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಅಕ್ಟೋಬರ್ 2, 2025ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಬಿಡುಗಡೆಯಾಗಿರುವ ಮೇಕಿಂಗ್ ವಿಡಿಯೋಗಳು, ಪೋಸ್ಟರ್‌ಗಳು ಮತ್ತು ಟೀಸರ್‌ಗಳು ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿವೆ.
