ಓಂಪ್ರಕಾಶ್ ರಾವ್ ನಿರ್ದೇಶನದ 49 ಹಾಗೂ 50 ನೇ ಚಿತ್ರಗಳಿಗೆ ಹಂಸಲೇಖ ಸಂಗೀತ ಸಂಯೋಜನೆ

Untitled design 2025 07 02t204408.433

ಕನ್ನಡ ಚಿತ್ರರಂಗದ ಲೆಜೆಂಡ್ ಸಂಗೀತ ನಿರ್ದೇಶಕ ಹಂಸಲೇಖ ಅವರು ಓಂಪ್ರಕಾಶ್ ರಾವ್ ನಿರ್ದೇಶನದ “ಫೀನಿಕ್ಸ್” ಹಾಗೂ “ಗೆರಿಲ್ಲಾ ವಾರ್” ಚಿತ್ರಗಳಿಗೆ ಸಂಗೀತ ನೀಡಲಿದ್ದಾರೆ. ಇದು ಓಂಪ್ರಕಾಶ್ ರಾವ್ ನಿರ್ದೇಶನದ 49 ಹಾಗೂ 50 ನೇ ಚಿತ್ರಗಳಾಗಿದೆ.

ಕನ್ನಡ ಚಿತ್ರರಂಗದ ಸಂಗೀತ ಕ್ಷೇತ್ರಕ್ಕೆ ಹಂಸಲೇಖ ಅವರ ಕೊಡುಗೆ ಅಪಾರ. ಅವರಿಗೆ ಅವರೆ ಸಾಟಿ. ನನ್ನ ನಿರ್ದೇಶನದ “ಲಾಕಪ್ ಡೆತ್”, ” ಸಿಂಹದ ಮರಿ”, “AK 47”, “ಪಾಳೆಗಾರ” ಹೀಗೆ ಒಂದಕ್ಕಿಂತ ಒಂದು ಸೂಪರ್ ಹಿಟ್ ಚಿತ್ರಗಳಿಗೆ ಸೂಪರ್ ಹಿಟ್ ಹಾಡುಗಳನ್ನು ಕೊಟ್ಟವರು ಗುರುಗಳಾದ ಹಂಸಲೇಖ ಅವರು. ಈಗ ನನ್ನ ನಿರ್ದೇಶನದ “ಫೀನಿಕ್ಸ್” ಹಾಗೂ “ಗೆರಿಲ್ಲಾ ವಾರ್” ಚಿತ್ರಗಳಿಗೂ ಹಂಸಲೇಖ ಅವರು ಸಂಗೀತ ಸಂಯೋಜಿಸಲು ಒಪ್ಪಿಕೊಂಡಿರುವುದು ನನಗೆ ಬಹಳ ಸಂತೋಷವಾಗಿದೆ ಎಂದು ನಿರ್ದೇಶಕ ಓಂಪ್ರಕಾಶ್ ರಾವ್ ತಿಳಿಸಿದ್ದಾರೆ.

ಈ ಪೈಕಿ ಚಿತ್ರೀಕರಣ ಮುಕ್ತಾಯ ಹಂತದಲ್ಲಿರುವ “ಫೀನಿಕ್ಸ್” ಚಿತ್ರವನ್ನು ಗುರು ಚಿತ್ರಾಲಯ ಲಾಂಛನದಲ್ಲಿ ತ್ರಿಶಾ ಪ್ರಕಾಶ್ ನಿರ್ಮಿಸುತ್ತಿದ್ದಾರೆ. ನಿಮಿಕಾ ರತ್ನಾಕರ್, ಭಾಸ್ಕರ್ ಶೆಟ್ಟಿ ಮುಂತಾದವರು ತಾರಾಬಳಗದಲ್ಲಿದ್ದಾರೆ.
“ಗೆರಿಲ್ಲಾ ವಾರ್” ಚಿತ್ರವನ್ನು ಎಂ.ಆರ್ ಟಾಕೀಸ್ ಲಾಂಛನದಲ್ಲಿ ನಯನ ಗೌಡ ಅವರು ನಿರ್ಮಿಸುತ್ತಿದ್ದು, ಮಂಡ್ಯ ಲೋಕಿ ನಾಯಕನಾಗಿ ಹಾಗೂ ನಿಮಿಕ ರತ್ನಾಕರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದು ಓಂಪ್ರಕಾಶ್ ರಾವ್ ನಿರ್ದೇಶನದ 50 ನೇ ಚಿತ್ರವಾಗಿದ್ದು, ಆಗಸ್ಟ್ ನಲ್ಲಿ ಆರಂಭವಾಗಲಿದೆ.

Exit mobile version