ಟಾಕ್ಸಿಕ್ ಡೇಟ್ ಮೇಲೆ ಪೆದ್ದಿ ಕಣ್ಣು..ಚರಣ್ ಕಮಿಂಗ್

ಜೂನ್ 4ಕ್ಕೆ ಪೆದ್ದಿ ತೆರೆಗೆ..ಕುಸ್ತಿ, ಕ್ರಿಕೆಟ್ ಮಸ್ತ್ ಮಜಾ..!

BeFunky collage (28)

ಪೆದ್ದಿ..ಈ ವರ್ಷದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಟಾಲಿವುಡ್ ಮೂವಿ ರಿಲೀಸ್ ಡೇಟ್ ಫೈನಲಿ ಲಾಕ್ ಆಗಿದೆ. ಮೆಗಾಸ್ಟಾರ್ ಪುತ್ರ ರಾಮ್ ಚರಣ್ ಜೊತೆ ನಮ್ಮ ಶಿವರಾಜ್‌ಕುಮಾರ್ ನಟಿಸಿರೋ ಹಳ್ಳಿ ಸೊಗಡು-ಸೊಬಗಿನ ಪೆದ್ದಿ ರಿಲೀಸ್‌ಗೆ ಮುಹೂರ್ತ ಫಿಕ್ಸ್ ಆಗಿದೆ. ಯಾವ ಡೇಟ್‌ಗೆ ಬರ್ತಿದೆ..? ಹೈಲೈಟ್ಸ್ ಏನು ಅಂತೀರಾ..?

ಪೆದ್ದಿ..ಪೆದ್ದಿ..ಪೆದ್ದಿ..ಸೆಟ್ಟೇರಿದ ದಿನದಿಂದ ಇಂದಿನ ತನಕ ಸಖತ್ ಸೌಂಡ್ ಮಾಡ್ತಿರೋ ಸಿನಿಮಾ. ಅದಕ್ಕೆ ಕಾರಣ ರಾಮ್ ಚರಣ್ ನಟನೆ ಹಾಗೂ ಸುಕುಮಾರ್ ಶಿಷ್ಯ ಬುಚ್ಚಿಬಾಬು ಡೈರೆಕ್ಷನ್. ರಂಗಸ್ಥಳಂ ಶೈಲಿಯ ಪಕ್ಕಾ ಹಳ್ಳಿ ಸೊಗಡು, ಸೊಬಗಿನ ಚಿತ್ರ ಇದಾಗಿದ್ದು, ಮತ್ತೊಮ್ಮೆ ಹಳ್ಳಿ ಹೈದನಾಗಿ ಚರಣ್ ಮಿಂಚು ಹರಿಸೋಕೆ ಕಾತರರಾಗಿದ್ದಾರೆ.

ಟಾಕ್ಸಿಕ್ ಡೇಟ್ ಮೇಲೆ ಪೆದ್ದಿ ಕಣ್ಣು.. ಚರಣ್ ಕಮಿಂಗ್

ಜೂನ್ 4ಕ್ಕೆ ಪೆದ್ದಿ ತೆರೆಗೆ.. ಕುಸ್ತಿ, ಕ್ರಿಕೆಟ್ ಮಸ್ತ್ ಮಜಾ..!

ನಮ್ಮ ಶಿವರಾಜ್‌‌ಕುಮಾರ್ ಕೂಡ ಚಿತ್ರದಲ್ಲಿ ಕುಸ್ತಿ ಅಖಾಡದ ಉಸ್ತಾದ್ ಪಾತ್ರ ನಿರ್ವಹಿಸಿದ್ದು, ನಾಯಕನಟಿಯಾಗಿ ಬಾಲಿವುಡ್ ಬ್ಯೂಟಿ ಜಾಹ್ನವಿ ಕಪೂರ್ ಗ್ಲಾಮರ್ ರಂಗು ಜೋರಿರಲಿದೆ. ಚರಣ್ ಈ ಚಿತ್ರದಲ್ಲಿ ಕುಸ್ತಿ ಪಟು ಹಾಗೂ ಕ್ರಿಕೆಟರ್ ಆಗಿ ಕಾಣಸಿಗಲಿದ್ದು, ಇದು ರೂರಲ್ ಸ್ಪೋರ್ಟ್ಸ್ ಆ್ಯಕ್ಷನ್ ಜಾನರ್ ಸಿನಿಮಾ ಎನ್ನಲಾಗಿದೆ.

ವಿಶೇಷ ಸುದ್ದಿಗೋಷ್ಠಿ..ಸುಕುಮಾರ್ ಮುಂದೆ ಡೇಟ್ ಅನೌನ್ಸ್

ರಂಗಸ್ಥಳಂ ಫ್ಲೇವರ್..ಪೆದ್ದನಾಗಿ ಪ್ರೇಕ್ಷಕರ ರಂಜಿಸೋ ಚೆರ್ರಿ..!

ಎಲ್ಲಾ ಅಂದುಕೊಂಡಂತೆ ಆಗಿದ್ದಿದ್ರೆ ಪೆದ್ದಿ ಚಿತ್ರ ಏಪ್ರಿಲ್ 30ಕ್ಕೆ ರಿಲೀಸ್ ಆಗಬೇಕಿತ್ತು. ಆದ್ರೆ ರಿಲೀಸ್ ಪೋಸ್ಟ್‌‌ಪೋನ್ ಆಗಿ, ಜೂನ್‌‌ನಲ್ಲಿ ಬರೋದಾಗಿ ಘೋಷಿಸಿತ್ತು. ಇದೀಗ ನಮ್ಮ ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಬಿಡುಗಡೆ ಮುಂದೂಡಿದ ಹಿನ್ನೆಲೆ, ಅದು ಬರಬೇಕಿದ್ದ ಜೂನ್ 4ನೇ ತಾರೀಖಿಗೆ ಪೆದ್ದಿ ಬರೋದು ಖಚಿತವಾಗಿದೆ. ಅದಕ್ಕೆ ಅಂತ ತಮ್ಮ ಗುರುಗಳಾದ ಸುಕುಮಾರ್‌‌ನ ಕರೆದು ಅನೌನ್ಸ್ ಮಾಡಿದ್ದಾರೆ ಡೈರೆಕ್ಟರ್ ಬುಚ್ಚಿಬಾಬು.

ಒಟ್ಟಾರೆ ಪೆದ್ದಿ ಚಿತ್ರದ ಸ್ಯಾಂಪಲ್ಸ್ ಸದ್ಯ ನೋಡುಗರ ನಾಡಿಮಿಡಿತ ಹೆಚ್ಚಿಸಿದ್ದು, ಜೂನ್ 4ಕ್ಕೆ ಬಿಗ್ ಸ್ಕ್ರೀನ್‌‌ ಮೇಲೆ ಮಸ್ತ್ ಮನರಂಜನೆ ಗ್ಯಾರಂಟಿ.

Exit mobile version