ಹಲ್ಕಾ ಡಾನ್ ಅಡ್ಡಾದಲ್ಲಿ ಅಮೃತಾ-ಪ್ರಮೋದ್ ಹಂಗಾಮ

ಬಿಗ್ ಬ್ಯಾನರ್.. ಸಕ್ಸಸ್‌‌ಫುಲ್ ಚಿತ್ರಗಳ ಪ್ರೊಡ್ಯೂಸರ್ KPS

Untitled design (93)

ಡಿಫರೆಂಟ್ ಟೈಟಲ್‌‌ನಿಂದಲೇ ಸ್ಯಾಂಡಲ್‌ವುಡ್ ಮಂದಿಯ ಹುಬ್ಬೇರಿಸಿದ್ದ ಹಲ್ಕಾ ಡಾನ್ ಚಿತ್ರದ ಶೂಟಿಂಗ್‌‌ ಕಿಕ್‌ಸ್ಟಾರ್ಟ್‌ ಆಗಿದೆ. ಸಲಾರ್ ಪ್ರಮೋದ್ ಜೊತೆ ಕನ್ನಡದ ಕರೀನಾ ಕಪೂರ್ ಅಮೃತಾ ಅಯ್ಯಂಗಾರ್ ಹಂಗಾಮ ಮಾಡ್ತಿದ್ದು, ಶೂಟಿಂಗ್ ಅಡ್ಡಾದಿಂದ ಬಂದ ನಯಾ ಖಬರ್ ನಿಮಗಾಗಿ ಕಾಯ್ತಿದೆ. ಏನಿದು ಅಂತೀರಾ..! ಜಸ್ಟ್ ಹ್ಯಾವ್ ಎ ಲುಕ್.

ಇದು ಇತ್ತೀಚೆಗೆ ಶಿವರಾಜ್‌‌ಕುಮಾರ್, ಸುದೀಪ್ ಹಾಗೂ ರಚಿತಾ ರಾಮ್‌‌ ಮೂಲಕ ಸೆಟ್ಟೇರಿದಂತಹ ಹಲ್ಕಾ ಡಾನ್ ಚಿತ್ರದ ಮೇಕಿಂಗ್ ಝಲಕ್. ರತ್ನನ್ ಪ್ರಪಂಚ, ಬಾಂಡ್ ರವಿ, ಸಲಾರ್ ಖ್ಯಾತಿಯ ಪ್ರಮೋದ್ ಈ ಚಿತ್ರದ ನಾಯಕನಟನಾಗಿ ಬಣ್ಣ ಹಚ್ಚಿದ್ದು, ಜೋಡಿಯಾಗಿ ನಮ್ಮ ಸ್ಯಾಂಡಲ್‌ವುಡ್ ಕರೀನಾ ಕಪೂರ್ ಅಮೃತಾ ಅಯ್ಯಂಗಾರ್ ಕಾಣಿಸಿಕೊಳ್ತಿದ್ದಾರೆ.

ಹಲ್ಕಾ ಡಾನ್ ಅಡ್ಡಾದಲ್ಲಿ ಅಮೃತಾ- ಪ್ರಮೋದ್ ಹಂಗಾಮ

ಇದು ಮಂಗಳೂರ ಕಥೆ.. ಸಾಯಿಕುಮಾರ್ ಫ್ಯಾನ್ ಕಹಾನಿ

ಶೂಟಿಂಗ್ ಕಿಕ್‌‌ಸ್ಟಾರ್ಟ್‌ ಆಗಿದ್ದು, ಬ್ಯಾಂಕ್, ಕಾರ್ಪೊರೇಟ್ ಸ್ಟೈಲ್‌‌ನ ಆಫೀಸ್‌‌ನಲ್ಲಿ ಶೂಟಿಂಗ್ ನಡೆಸ್ತಿರುವಂತಹ ಮೇಕಿಂಗ್ ಝಲಕ್ ರಿವೀಲ್ ಆಗಿದೆ. ಇಲ್ಲಿ ಸತ್ಯ ಹೆಗ್ಡೆ ಸಿನಿಮಾಟೋಗ್ರಫಿ ಕಾಣಸಿಗಲಿದ್ದು, ಪ್ರಮೋದ್, ಅಮೃತಾ ಜೊತೆ ಕಮೆಡಿಯನ್ ಗಿರಿ ಕೂಡ ತಾರಾಗಣದಲ್ಲಿದ್ದಾರೆ. ಚಲಾ ಅನ್ನೋ ನವ ನಿರ್ದೇಶಕ ಆ್ಯಕ್ಷನ್ ಕಟ್ ಹೇಳ್ತಿರೋ ಈ ಸಿನಿಮಾಗೆ ಫೇಮಸ್ ಪ್ರೊಡ್ಯೂಸರ್ ಕೆ ಪಿ ಶ್ರೀಕಾಂತ್ ಬಂಡವಾಳ ಹೂಡಿದ್ದಾರೆ.

 

ಯೆಸ್.. ವೀನಸ್ ಎಂಟರ್‌ಪ್ರೈಸಸ್ ಬ್ಯಾನರ್‌‌ನಡಿ ಮೈಲಾರಿ, ಸಲಗ, ಟಗರು, ಯುಐ ನಂತಹ ಹಿಟ್ ಸಿನಿಮಾಗಳನ್ನ ನೀಡಿರೋ ನಿರ್ಮಾಪಕ ಕೆಪಿ ಶ್ರೀಕಾಂತ್ ಹಲ್ಕಾ ಡಾನ್ ಚಿತ್ರ ನಿರ್ಮಿಸುತ್ತಿದ್ದಾರೆ. ಇಲ್ಲಿ ನಾಯಕನಟ ಸಾಯಿಕುಮಾರ್ ಫ್ಯಾನ್ ಆಗಿರಲಿದ್ದು, ಮಂಗಳೂರಿನಲ್ಲಿ ನಡೆಯೋ ಕಥೆ ಇದಾಗಿದೆ. ಅದೇ ಕಾರಣದಿಂದ ಮಂಗಳೂರಿನಲ್ಲೇ ಕಾನ್ಸೆಪ್ಟ್ ಟೀಸರ್‌ನ ಚಿತ್ರಿಸಿತ್ತು ಚಿತ್ರತಂಡ.

ಬಿಗ್ ಬ್ಯಾನರ್.. ಸಕ್ಸಸ್‌‌ಫುಲ್ ಚಿತ್ರಗಳ ಪ್ರೊಡ್ಯೂಸರ್ KPS

ಹೈದ್ರಾಬಾದ್‌‌ನಲ್ಲಿ ಲಾಸ್ಟ್ ಶೆಡ್ಯೂಲ್.. ಚಲಾ ಆ್ಯಕ್ಷನ್ ಕಟ್

ಹೈದ್ರಾಬಾದ್‌‌ನಲ್ಲಿ ಕೊನೆಯ ಹಂತದ ಶೂಟಿಂಗ್ ಮಾಡಲು ನಿರ್ಧರಿಸಿರೋ ಚಿತ್ರತಂಡ, ನಾನ್‌ಸ್ಟಾಪ್ ಚಿತ್ರೀಕರಣದ ಮೂಲಕ ಆದಷ್ಟು ಬೇಗ ಚಿತ್ರಪ್ರೇಮಿಗಳ ಮುಂದೆ ಹಲ್ಕಾ ಡಾನ್‌ನ ತಂದು ನಿಲ್ಲಿಸೋ ಯೋಜನೆಯಲ್ಲಿದೆ. ಟೈಟಲ್ ನಂತೆ ಸಿನಿಮಾದ ಕಥೆ, ಪಾತ್ರಗಳು ಕೂಡ ಇಂಪ್ರೆಸ್ಸೀವ್ ಆಗಿ ಇರಲಿವೆ ಅನ್ನೋ ಲಕ್ಷಣ ತೋರಿದೆ ಟೀಂ ಹಲ್ಕಾ ಡಾನ್.

 

 

Exit mobile version