ಸಾಮಾನ್ಯವಾಗಿ ಎಂಟತ್ತು ವರ್ಷಗಳು ಅಂದಾಗ ಬಾಹುಬಲಿ, ಕೆಜಿಎಫ್, ಪುಷ್ಪ, ಕಾಂತಾರ ಅಂತರ ಸೀರೀಸ್ ಸಿನಿಮಾಗಳು ಬರುತ್ವೆ. ಆದ್ರೆ ಇಲ್ಲೊಂದು ಕನ್ನಡ ಸಿನಿಮಾ ರಾಮಾಯಣ ರೀತಿ ಬಹಳ ವರ್ಷಗಳಿಂದ ತಯಾರಾಗಿ ಕೊನೆಗೂ ಬೆಳ್ಳಿತೆರೆ ಬೆಳಗೋಕೆ ಸಜ್ಜಾಗಿದೆ. ಅದೇ ಗ್ರಾಮಾಯಣ. ಇತ್ತೀಚೆಗೆ ದುನಿಯಾ ವಿಜಯ್ ಲಾಂಚ್ ಮಾಡಿದ ವಿನಯ್ ರಾಜ್‌ಕುಮಾರ್ ಗ್ರಾಮಾಯಣ ಟ್ರೈಲರ್ ಹೇಗಿದೆ ಗೊತ್ತಾ?
100% ಲೋಕಲ್ ಫ್ಲೇವರ್.. ಇದು ಗ್ರಾಮಾಯಣ ದುನಿಯಾ
ಟ್ರೈಲರ್‌ನಲ್ಲಿ ಚಿತ್ರದ ಕಲ್ಟ್ & ಕ್ಲಾಸಿಕ್ ಅಂಶಗಳ ಅನಾವರಣ..!
ಮೊದಲು ಗ್ರಾಮ ಆಮೇಲೆ ಸಿಟಿ ಎಂದ ದುನಿಯಾ ವಿಜಯ್..!
ವಿನಯ್ ಫೇವರಿಟ್, ಮೇಘಾಗೆ ಪ್ರಶಂಸೆ.. ಡೈರೆಕ್ಟರ್‌ಗೆ ವಿಜಯ
ಇದು ಇದೇ ಜುಲೈ 3ರಂದು ತೆರೆಗಪ್ಪಳಿಸುತ್ತಿರೋ ಗ್ರಾಮಾಯಣ ಚಿತ್ರದ ಟ್ರೈಲರ್ ಝಲಕ್. ನಟ ದುನಿಯಾ ವಿಜಯ್ ಹಾಗೂ ನಾಗರಾಜ್ ವಸ್ತಾರೆ ಟ್ರೈಲರ್ ಲಾಂಚ್ ಮಾಡಿ, ಟೀಂಗೆ ಶುಭ ಕೋರಿದ್ದು ವಿಶೇಷ. ಹೌದು.. ನಿರೂಪಕಿ ಕಮ್ ನಟಿ ಅಪರ್ಣಾ ಕೂಡ ಈ ಚಿತ್ರದಲ್ಲಿ ನಟಿಸಿದ್ದು, ಆಕೆಯ ಅನುಪಸ್ಥಿತಿಯಲ್ಲಿ ನೆನೆಸಿಕೊಂಡು ಭಾವುಕರಾದ್ರು ಪತಿ ನಾಗರಾಜ್ ವಸ್ತಾರೆ.
ದುನಿಯಾ ವಿಜಯ್ ಮಾತನಾಡಿ, ನನ್ನ ಮನಸ್ಸಿಗೆ ಬಹಳ ಹತ್ತಿರವಾದ ವ್ಯಕ್ತಿ ವಿನಯ್ ಎಂದರು. ನಟಿ ಮೇಘಾ ಶೆಟ್ಟಿ ನಟನೆಗೆ ಶಹಬ್ಬಾಸ್ ಅಂತ ಪ್ರಶಂಸಿಸಿದೆ ವಿಜಯ್, ನಿರ್ದೇಶಕ ದೇವನೂರು ಚಂದ್ರು ಅವರಿಗೆ ಜಾಸ್ತಿ ಒಳ್ಳೆಯದಾಗಲಿ ಅಂತ ಮನಸಾರೆ ಶುಭ ಕೋರಿದ್ರು. ನೋಡೋಕೆ ದುನಿಯಾ ಸೂರಿಯಂತಿರೋ ಚಂದ್ರು ಪ್ರತಿಭೆಗೆ ಸಿನಿಮಾ ಗೆಲ್ಲಬೇಕು ಎಂದರು. ಅಷ್ಟೇ ಅಲ್ಲ, ಅನ್ನದಾತರಾದ ಅಂದ್ರೆ ನಿರ್ಮಾಪಕರುಗಳಾದ ಲಹರಿ ಫಿಲಂಸ್‌ನ ವೇಲು, ಮನೋಹರ್ ನಾಯ್ಡು ಹಾಗೂ ನವೀನ್ ಅವರಿಗೆ ಈ ಚಿತ್ರ ಬಹುದೊಡ್ಡ ಗೆಲುವಾಗಲಿ ಎಂದರು.
ರಾಘವೇಂದ್ರ ರಾಜಕುಮಾರ್, ಮಂಗಳ ರಾಘವೇಂದ್ರ ರಾಜಕುಮಾರ್, ನಟ ಯುವ ರಾಜ್‌ಕುಮಾರ್, ಸಂಗೀತ ನಿರ್ದೇಶಕ ಹಂಸಲೇಖ, ನಟ ನವೀನ್ ಶಂಕರ್, ನಿರ್ದೇಶಕ ಸಿಂಪಲ್ ಸುನಿ ಸೇರಿದಂತೆ ಅನೇಕ ಗಣ್ಯರು ಸಮಾರಂಭಕ್ಕೆ ಆಗಮಿಸಿ, ಗ್ರಾಮಾಯಣಕ್ಕೆ ಶುಭ ಕೋರಿದ್ದು ವಿಶೇಷ. ಸಿಂಪಲ್ ಸುನಿ ಫಸ್ಟ್ ಡೇ ಒಂದು ಕಂಪ್ಲೀಟ್ ಶೋನ ಬುಕ್ ಮಾಡೋ ಮೂಲಕ ಚಿತ್ರ ವೀಕ್ಷಿಸ್ತಾರಂತೆ.
ಅಣ್ಣ ವಿನಯ್ ರಾಜ್ ಹಾಗೂ ನಿರ್ದೇಶಕರು ಈ ಸಿನಿಮಾಗಾಗಿ 8 ವರ್ಷಗಳ ಎಫರ್ಟ್ ನೆನೆದ ಯುವರಾಜ್‌ಕುಮಾರ್, ಗ್ರಾಮೀಣ ಸೊಗಡಿದ ಈ ಚಿತ್ರ ಜನಕ್ಕೆ ರುಚಿಸಲಿದೆ ಅಂತ ಮನಸಾರೆ ಹರಿಸಿದ್ರು.
ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ, ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ, ನೃತ್ಯ ನಿರ್ದೇಶಕ ಮುರಳಿ ಮಾಸ್ಟರ್, ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ ಹಾಗೂ ಗೀತರಚನೆಕಾರ ಪ್ರಮೋದ್ ಮರವಂತೆ ಸೇರಿದಂತೆ ಎಲ್ಲಾ ತಂತ್ರಜ್ಞರು ಈ ಗ್ರಾಮಾಯಣ ಕುರಿತು ಮಾತನಾಡಿದರು.
ವಿನಯ್ ರಾಜಕುಮಾರ್, ಮೇಘಾ ಶೆಟ್ಟಿ ಜೊತೆ ನಟ ಲೂಸ್ ಮಾದ ಯೋಗೀಶ್ ಕೂಡ ನೆಗೆಟಿವ್ ಶೇಡ್‌ನಲ್ಲಿ ಬಣ್ಣ ಹಚ್ಚಿರೋದು ವಿಶೇಷ. ಅಚ್ಯುತ್ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಅರುಣ್ ಸಾಗರ್, ಬಲ ರಾಜವಾಡಿ, ಅಪರ್ಣಾ ವಸ್ತಾರೆ, ಸೀತಾ ಕೋಟೆ, ಪ್ರಶಾಂತ್ ಹೊನ್ನಾಳಿ, ಅವಿನಾಶ್ ರೈ ಮುಂತಾದವರು ಮುಖ್ಯಭೂಮಿಕೆಯಲ್ಲಿದ್ದು, ಈ ವಾರ ಪ್ರೇಕ್ಷಕರನ್ನ ರಂಜಿಸೋಕೆ ಥಿಯೇಟರ್‌ಗೆ ಎಂಟ್ರಿ ಕೊಡ್ತಿದೆ ಹಳ್ಳಿ ಸೊಗಡಿನ ಗ್ರಾಮಾಯಣ.
