ಬರ್ತ್ ಡೇ ಸಂಭ್ರಮದಲ್ಲಿರೋ ಗೋಲ್ಡನ್ ಸ್ಟಾರ್ ಗಣೇಶ್ ಫ್ಯಾನ್ಸ್‌ಗೆ ಅರ್ಧ ಡಜನ್ ಸರ್‌ಪ್ರೈಸ್ ನೀಡಿದ್ದಾರೆ. ಯೆಸ್.. ತರಹೇವಾರಿ ಪಾತ್ರಗಳು ಹಾಗೂ ಕಥೆಗಳಿಂದ ಕನ್ನಡಿಗರನ್ನ ಮತ್ತಷ್ಟು ರಂಜಿಸೋಕೆ ಬರ್ತಿದ್ದಾರೆ ಗಣಿ. ಕೋಟ್ಯಂತರ ಕನ್ನಡಿಗರ ಹೃದಯ ಗೆದ್ದಿರೋ ಪ್ಯೂರ್ ಗೋಲ್ಡು, ಎಂಥದ್ದೇ ಪಾತ್ರಕ್ಕಾದ್ರೂ ಬೋಲ್ಡು ಅಂತಿದ್ದಾರೆ. ಹಾಗಾದ್ರೆ ಗಣಪನ ಖಾತೆಯಲ್ಲಿರೋ ಸಿನಿಮಾಗಳ ಲಿಸ್ಟ್ ಎಷ್ಟು ದೊಡ್ಡದು..? ನೀವೇ ನೋಡಿ.
- ವೀರನಂತೆ ಹನುಮನಂತೆ ‘ಡಿಜಾಂಗೋ ಕೃಷ್ಣ’ನಾದ ಗಣಿ
- ಕೃಷ್ಣಂ ಪ್ರಣಯ ಸಖಿ ಬಳಿಕ ಅರ್ಧ ಡಜನ್ ಚಿತ್ರಗಳಲ್ಲಿ ಬ್ಯುಸಿ
- ಪೋಸ್ಟರ್‌ಗಳಿಂದ ಗೋಲ್ಡನ್ ಹಬ್ಬ.. ಫ್ಯಾನ್ಸ್‌ಗಿಲ್ಲ ದರ್ಶನ
- ಪಿನಾಕ, ರಾಮ್ ಹಾಗೂ ಡಿಜಾಂಗೋ.. ತ್ರಿಬಲ್ ಧಮಾಕ
46 ವರ್ಷಗಳನ್ನ ಪೂರೈಸಿ 47ನೇ ವಸಂತಕ್ಕೆ ಕಾಲಿಟ್ಟಿರೋ ಗೋಲ್ಡನ್ ಸ್ಟಾರ್ ಗಣೇಶ್ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ. ಅದಕ್ಕೆ ಕಾರಣ ಗಾಳಿಪಟ-2 ಹಾಗೂ ಕೃಷ್ಣಂ ಪ್ರಣಯ ಸಖಿ ಚಿತ್ರಗಳ ಬಿಗ್ಗೆಸ್ಟ್ ಸಕ್ಸಸ್. ಹೌದು.. ಟ್ರ್ಯಾಕ್ ತಪ್ಪಿದ್ದ ಗಣಿಯನ್ನ ಇವೆರಡೂ ಚಿತ್ರಗಳು ಮತ್ತೆ ಗೆಲುವಿನ ಟ್ರ್ಯಾಕ್‌ಗೆ ತಂದವು. ಸಿನಿಮಾಗಳು ಗೆಲ್ತಾ ಇದ್ರೇನೇ ಹೀರೋಗಳಿಗೆ ಮತ್ತಷ್ಟು ಒಳ್ಳೆಯ ಸಿನಿಮಾಗಳನ್ನ ಮಾಡೋಕೆ ಸಾಧ್ಯ. ಆ ನಿಟ್ಟಿನಲ್ಲಿ ಗಣಿ ಬಾಳಲ್ಲಿ ಮತ್ತೆ ಹೊಸ ಮನ್ವಂತರ ಶುರುವಾಗಿದೆ.
ಬರ್ತ್ ಡೇ ದಿನ ಫ್ಯಾನ್ಸ್ ಮನೆಯ ಬಳಿ ಬರೋದು ಬೇಡ. ನಾನು ಸಿನಿಮಾಗಳ ಔಟ್‌ಡೋರ್ ಶೂಟಿಂಗ್ ಪ್ರಯುಕ್ತ ಮನೆಯಲ್ಲಿ ಇರಲ್ಲ ಅಂತ ಸೋಶಿಯಲ್ ಮೀಡಿಯಾದಲ್ಲಿ ಸ್ವತಃ ಪೋಸ್ಟ್ ಮಾಡಿದ್ರು ಗೋಲ್ಡನ್ ಸ್ಟಾರ್. ಇದ್ರಿಂದ ರಾಜ್ಯದ ಮೂಲೆ ಮೂಲೆಗಳಿಂದ ಬರುವಂತಹ ಅಭಿಮಾನಿಗಳಿಗೆ ಕೊಂಚ ಬೇಸರವಾದ್ರೂ, ಸಿನಿಮಾಗಾಗಿ ದೂರದೂರಿಗೆ ಹೋಗಿದ್ದಾರೆ ಅಂತ ಸಮಾಧಾನ ಮಾಡಿಕೊಂಡಿದ್ದಾರೆ. ಸದ್ಯ ಒರಿಸ್ಸಾದಲ್ಲಿ ಶೂಟಿಂಗ್ ನಿಮಿತ್ತ ಫ್ಯಾಮಿಲಿ ಸಮೇತ ಬೀಡು ಬಿಟ್ಟಿದ್ದಾರೆ ಗಣಪ.
ಅಂದಹಾಗೆ ವರ್ಷದಿಂದ ವರ್ಷಕ್ಕೆ ಗೋಲ್ಡನ್ ಬಾಯ್ ಯಂಗ್ ಆಗ್ತಾ ಬರ್ತಿದ್ದಾರೆ. ಸಖತ್ ಚಾರ್ಮಿಂಗ್ ಆಗಿ, ಎವರ್ ಗ್ರೀನ್ ಆಗಿ ಕಾಣಸಿಗ್ತಾರೆ. ಸಖತ್ ಫಿಟ್ ಅಂಡ್ ಫೈನ್ ಆಗಿರೋ ಗಣಪ ಕೈಯಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ ಅರ್ಧ ಡಜನ್ ಸಿನಿಮಾಗಳಿವೆ. ಯೆಸ್.. ಸದ್ಯ ಧನು ಮಾಸ್ಟರ್ ಆ್ಯಕ್ಷನ್ ಕಟ್ ಹೇಳ್ತಿರೋ ಪಿನಾಕ ಸಿನಿಮಾ ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್‌ನಡಿ ತಯಾರಾಗ್ತಿದ್ದು, ಟೀಸರ್‌ನಲ್ಲಿ ಎರಡು ಶೇಡ್‌ಗಳಲ್ಲಿ ಮಿಂಚಿದ್ದ ಗಣಿ, ಇದೀಗ ಕುದುರೆ ಏರಿ ಯುದ್ಧಭೂಮಿಯಲ್ಲಿ ಸಮರಕ್ಕೆ ನಿಂತ ವೀರ, ಧೀರ, ಶೂರನ ಗೆಟಪ್‌ನಲ್ಲಿ ಮಿಂಚ್ತಿದ್ದಾರೆ.
ಮಿಸ್ಟರ್ ಪರ್ಫೆಕ್ಟ್ ರಮೇಶ್ ಅರವಿಂದ್ ಜೊತೆ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಯುವರ್ಸ್ ಸಿನ್ಸಿಯರ್ಲಿ ರಾಮ್ ಸಿನಿಮಾ ಕೂಡ ಟೀಸರ್‌ನಿಂದ ಅತೀವ ನಿರೀಕ್ಷೆ ಮೂಡಿಸಿದೆ. ಸಿನಿಮಾಗಳನ್ನ ಪೇಂಟಿಂಗ್‌ನಂತೆ ಕಟ್ಟಿಕೊಡುವ ವಿಖ್ಯಾತ್ ನಿರ್ದೇಶನದ ಈ ಸಿನಿಮಾ ಕೂಡ ಭರದಿಂದ ಶೂಟಿಂಗ್ ನಡೆಸ್ತಿದ್ದು, ಸದ್ಯ ಗಣಿ ಹನುಮನ ಗೆಟಪ್‌ನಲ್ಲಿರೋ ಪೋಸ್ಟರ್ ಇಂದು ಸಖತ್ ಸಂಚಲನ ಮೂಡಿಸುತ್ತಿದೆ.
ಇವಲ್ಲದೆ, ಅರಸು ಅಂತಾರೆ ನಿರ್ದೇಶನದ ಸಿನಿಮಾಗೆ ಟೈಟಲ್ ಫೈನಲ್ ಆಗಿದೆ. ಡಿಜಾಂಗೋ ಕೃಷ್ಣಮೂರ್ತಿ ಅಂತ ಟೈಟಲ್ ಇಟ್ಟಿರೋ ಟೀಂ, ಕೃಷ್ಣಂ ಪ್ರಣಯ ಸಖಿ ಚಿತ್ರದ ಬಳಿಕ ಮತ್ತೊಮ್ಮೆ ಗಣಪನನ್ನ ಕೃಷ್ಣನಾಗಿಸ್ತಿದ್ದಾರೆ. ಟೈಟಲ್ ಸಂಥಿಂಗ್ ಡಿಫರೆಂಟ್ ಆಗಿದ್ದು, ಸಿನಿಮಾ ಅದಕ್ಕಿಂತ ವಿಭಿನ್ನವಾಗಿರಲಿದೆ ಅಂತಿವೆ ಮೂಲಗಳು. ಇವಲ್ಲದೆ, ಅಯೋಗ್ಯ-2 ನಿರ್ಮಾಪಕ ಮುನೇಗೌಡ ನಿರ್ಮಾಣದಲ್ಲಿ ಬಹದ್ದೂರ್ ಚೇತನ್ ಕುಮಾರ್ ನಿರ್ದೇಶನದ ಸಿನಿಮಾಗೆ ಗಣಿ ಡೇಟ್ಸ್ ನೀಡಿದ್ದಾರೆ. ಕೃಷ್ಣಂ ಪ್ರಣಯ ಸಖಿ ಚಿತ್ರದ ಡೈರೆಕ್ಟರ್ ಶ್ರೀನಿವಾಸ್ ರಾಜು ಮತ್ತೊಂದು ಸಿನಿಮಾನ ಗಣಿ ಜೊತೆ ಮಾಡೋದಾಗಿ ಅನೌನ್ಸ್ ಮಾಡಿದ್ದಾರೆ. ಅಲ್ಲದೆ, ಸೂರಪ್ಪ ಬಾಬು ನಿರ್ಮಾಣದಲ್ಲಿ ಶಿವಣ್ಣ-ಗಣೇಶ್ ಜೋಡಿಯ ಶಿವಗಣ ಸಿನಿಮಾ ಕೂಡ ಪಟ್ಟಿಯಲ್ಲಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್