ಜೆನಿಲಿಯಾ.. ಕನ್ನಡದಲ್ಲಿ ಮಾಡಿರೋದು ಎರಡೇ ಸಿನಿಮಾಗಳಾದ್ರೂ ಕರ್ನಾಟಕ, ಕನ್ನಡಿಗರು ಅಂದ್ರೆ ಅಚ್ಚುಮೆಚ್ಚು. ತಮ್ಮ ಇನ್ಸ್‌ಟಾ ಪೋಸ್ಟ್‌ಗಳಿಗೂ ಕೂಡ ಕನ್ನಡದ ಎವರ್‌ಗ್ರೀನ್ ಸಾಂಗ್ಸ್‌ನ ಹಾಕ್ತಾರೆ. ಮುಂಗಾರು ಮಳೆ ಗೋಲ್ಡನ್ ಗೀತೆಯೊಂದು ಈ ಚೆಂದುಳ್ಳಿ ಚೆಲುವೆ ಫೋಟೋಸ್ ಜೊತೆ ಮಿಂಚ್ತಿರೋ ಕಲರ್‌ಫುಲ್ ಸ್ಟೋರಿನ ನೀವು ಓದಲೇಬೇಕು.
ಜೆನಿಲಿಯಾ ಇನ್ಸ್‌ಟಾದಲ್ಲಿ ಮುಂಗಾರುಮಳೆ ಗೋಲ್ಡನ್ ಗೀತೆ
19 ವರ್ಷಗಳಾದ್ರೂ ಎವರ್‌ಗ್ರೀನ್ ಕನ್ನಡದ ಮುಂಗಾರುಮಳೆ
ಮಾಡಿದ್ದು 2 ಕನ್ನಡ ಪ್ರಾಜೆಕ್ಟ್ಸ್.. ಆದ್ರೆ ಈಕೆ ಅಭಿಮಾನ ನೋಡಿ
ಕೃಷ್ಣಂ ಪ್ರಣಯಸಖಿ ಡೈರೆಕ್ಟರ್- ಗಣಿ ನ್ಯೂ ವೆಂಚರ್ ಶುಭಾರಂಭ
ಮುಂಗಾರು ಮಳೆ.. 2006ರಲ್ಲಿ ತೆರೆಕಂಡ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಪೂಜಾ ಗಾಂಧಿ ಜೋಡಿಯ ಗೋಲ್ಡನ್ ಎಂಟರ್‌ಟೈನರ್. ಈ ಸಿನಿಮಾ ಮಾಡಿದ ಮ್ಯಾಜಿಕ್ ಅಂತಿಂಥದ್ದಲ್ಲ. 70 ಲಕ್ಷದಲ್ಲಿ ತಯಾರಾದ ಈ ಸಿನಿಮಾ ಹೆಚ್ಚೂ ಕಡಿಮೆ 100 ಕೋಟಿ ಬ್ಯುಸಿನೆಸ್ ಮಾಡಿತ್ತು. ಕನ್ನಡ ಚಿತ್ರರಂಗಕ್ಕೆ ಹೊಸ ಮನ್ವಂತರ ತಂದ ಈ ಚಿತ್ರದ ಹಾಡುಗಳು ಇಂದಿಗೂ ಹಚ್ಚ ಹಸಿರು. 19 ವರ್ಷಗಳಾದ್ರೂ ಭಟ್ರ ನಿರ್ದೇಶನದ ಕಾಯ್ಕಿಣಿ ಸಾಹಿತ್ಯದ ಹಾಗೂ ಮನೋಮೂರ್ತಿ ಸಂಗೀತದ ಸಾಂಗ್ಸ್ ಕಣ್ಮನ ತಣಿಸುತ್ತವೆ.
ಇದನ್ನ ನಾವು ಹೀಗ್ಯಾಕೆ ಹೇಳ್ತಿದ್ದೀವಿ ಅಂದ್ರೆ, ಇತ್ತೀಚೆಗೆ ಬಾಲಿವುಡ್ ನಟಿ ಜೆನಿಲಿಯಾ ಡಿಸೋಜಾ ತಮ್ಮ ಇನ್ಸ್‌ಟಾದಲ್ಲಿ ಒಂದಷ್ಟು ಫೋಟೋಸ್ ಹಾಕಿ, ಪೋಸ್ಟ್ ಮಾಡಿದ್ದಾರೆ. ಅದ್ರ ಬ್ಯಾಗ್ರೌಂಡ್ ಸಾಂಗ್ ಇದೇ ಮುಂಗಾರುಮಳೆಯ ಅನಿಸುತಿದೆ ಯಾಕೋ ಇಂದು ಗೀತೆ ಅನ್ನೋದು ಇಂಟರೆಸ್ಟಿಂಗ್. ಹೌದು, ಮೊಮ್ಮರಿಲ್ಲು ಖ್ಯಾತಿಯ ಹಾ ಹಾ ಹಾಸಿನಿ ಭಾರತೀಯ ಚಿತ್ರರಂಗದ ಬಹುಭಾಷಾ ನಟಿಯಾಗಿ, ಕನ್ನಡಿಗರಿಗೂ ಚಿರಪರಿಚಿತಳು. ಹಾಗಾಗಿ ಈಕೆಯ ಕನ್ನಡಾಭಿಮಾನ ಕಂಡು ಎಲ್ಲರೂ ಭೇಷ್ ಅಂತಿದ್ದಾರೆ.
ಅಂದಹಾಗೆ ಜೆನಿಲಿಯಾ ಕನ್ನಡದಲ್ಲಿ ನಟಿಸಿರೋದು ಎರಡೇ ಎರಡು ಸಿನಿಮಾ. ಶಿವರಾಜ್‌ಕುಮಾರ್ ಜೊತೆ ಸತ್ಯ ಇನ್ ಲವ್ ಸಿನಿಮಾ ಮಾಡಿದ್ದ ಜೆನಿಲಿಯಾ, ಮದ್ವೆ ಮಕ್ಕಳು ಸಂಸಾರ ಅಂತ ಬ್ಯುಸಿ ಆಗಿದ್ರು. ಆದ್ರೆ ನಟನೆಯಿಂದ ಆಕೆ ದೂರ ಇರಲಿಲ್ಲ. ಇದೀಗ ಇತ್ತೀಚೆಗೆ ಗಣಿಧಣಿ ಗಾಲಿ ಜನಾರ್ದನ್ ರೆಡ್ಡಿ ಮಗ ಕಿರೀಟಿ ಚೊಚ್ಚಲ ಸಿನಿಮಾ ಜೂನಿಯರ್‌ನಲ್ಲಿ ಬಣ್ಣ ಹಚ್ಚಿದ್ರು. ಕನ್ನಡ ಹಾಗೂ ತೆಲುಗಿನಲ್ಲಿ ತಯಾರಾದ ಈ ಸಿನಿಮಾದಲ್ಲಿ ತಾಯಿ ಪಾತ್ರದಲ್ಲಿ ಕಮಾಲ್ ಮಾಡಿದ್ರು.
ಇನ್ನು ಗೋಲ್ಡನ್ ಸ್ಟಾರ್ ಗಣೇಶ್ ವಿಚಾರಕ್ಕೆ ಬಂದ್ರೆ ಗಣಿ ಸದ್ಯ ಪಿನಾಕ, ಡಿಜಾಂಗೋ ಕೃಷ್ಣಮೂರ್ತಿ ಹಾಗೂ ಯುವರ್ಸ್ ಸಿನ್ಸಿಯರ್ಲಿ ರಾಮ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇದರ ಹೊರತಾಗಿ ಇತ್ತೀಚೆಗೆ ಬಿಗ್ಗೆಸ್ಟ್ ಹಿಟ್ ಆದಂತಹ ಕೃಷ್ಣಂ ಪ್ರಣಯಸಖಿ ಡೈರೆಕ್ಟರ್ ಶ್ರೀನಿವಾಸ್ ರಾಜು ಜೊತೆ ಸೈಲೆಂಟ್ ಆಗಿ ಮತ್ತೊಂದು ಸಿನಿಮಾದ ಶೂಟಿಂಗ್ ಶುರು ಮಾಡಿದ್ದಾರೆ. ಆ ನ್ಯೂ ಪ್ರಾಜೆಕ್ಟ್ ಚಿತ್ರೀಕರಣ ಭರದಿಂದ ಸಾಗ್ತಿದ್ದು, ಈಗಾಗ್ಲೇ ಯಶಸ್ವಿ 30 ದಿನ ಶೂಟಿಂಗ್ ಕೂಡ ಕಂಪ್ಲೀಟ್ ಆಗಿದೆಯಂತೆ.