ಕಾಕ್ಸ್ ಟೌನ್‌ನ ಭಾರತಿನಗರ ನಿವಾಸಿಗಳ ವೇದಿಕೆ ವತಿಯಿಂದ ಸಂಕ್ರಾಂತಿ ಹಬ್ಬವನ್ನು ಅತ್ಯಂತ ಅರ್ಥಪೂರ್ಣ ಹಾಗೂ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು. ಬೆಳೆ ಹಬ್ಬವೆಂದು ಕರೆಸಿಕೊಳ್ಳುವ ಸಂಕ್ರಾಂತಿ ಹಬ್ಬವು ಕೇವಲ ಸಂಭ್ರಮಕ್ಕೆ ಸೀಮಿತವಾಗದೇ, ಸಮಾಜಕ್ಕೆ ಸೇವೆ ಸಲ್ಲಿಸುವವರನ್ನು ಗೌರವಿಸುವ ಹಬ್ಬವಾಗಬೇಕು ಎಂಬ ಸಂದೇಶವನ್ನು ಈ ಕಾರ್ಯಕ್ರಮ ಸಾರಿತು. ನಗರ ಸ್ವಚ್ಛತೆಗೆ ಅವಿರತವಾಗಿ ಶ್ರಮಿಸುವ ಜಿಬಿಎ ಪೌರ ಕಾರ್ಮಿಕರಿಗೆ ಉಚಿತವಾಗಿ ಸೀರೆ, ಬಟ್ಟೆ, ಸಂಪ್ರದಾಯಬದ್ಧ ಪೊಂಗಲ್ ಹಾಗೂ ಕಬ್ಬು ವಿತರಿಸುವ ಮೂಲಕ ಮಾನವೀಯ ಮೌಲ್ಯಗಳಿಗೆ ಒತ್ತು ನೀಡಲಾಯಿತು.
ಈ ವಿಶೇಷ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ನಟಿ ಹಾಗೂ ನ್ಯಾಷನಲ್ ಅವಾರ್ಡ್ ವಿಜೇತೆ ತಾರಾ ಅನುರಾಧ ಮತ್ತು ಖ್ಯಾತ ನಟಿ ಅನು ಪ್ರಭಾಕರ್ ಅವರು ಸಂಕ್ರಾಂತಿ ಸಂಭ್ರಮಕ್ಕೆ ವಿಶೇಷ ಕಳೆ ತಂದರು. ಜನಪ್ರಿಯತೆ ಮತ್ತು ಗೌರವ ಹೊಂದಿರುವ ಈ ಕಲಾವಿದರು ಪೌರ ಕಾರ್ಮಿಕರೊಂದಿಗೆ ಕುಟುಂಬದ ಸದಸ್ಯರಂತೆ ಬೆರೆತು ಹಬ್ಬವನ್ನು ಆಚರಿಸಿದ ದೃಶ್ಯಗಳು ಎಲ್ಲರ ಮನ ಸೆಳೆದವು. ಸೀರೆ ಹಾಗೂ ಬಟ್ಟೆ ವಿತರಿಸುವಾಗ ಕಾರ್ಮಿಕರೊಂದಿಗೆ ಆತ್ಮೀಯವಾಗಿ ಮಾತುಕತೆ ನಡೆಸಿ, ಅವರ ಶ್ರಮಕ್ಕೆ ಅಭಿನಂದನೆ ಸಲ್ಲಿಸಿದರು.