ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್
ಗಾಂಧೀನಗರಕ್ಕೆ ಎಂಟ್ರಿ ಕೋಡೋ ಕನಸು ಕಾಣೋರಿಗೆ ಶಿವಣ್ಣನ ಆಶಿರ್ವಾದ ಸಿಕ್ರಂತೂ ಸಿನಿಮಾ ಮಾಡೋ ಎನರ್ಜಿ ಮತ್ತಷ್ಟು ಡಬಲ್ ಆಗುತ್ತೆ. ಅವರ ಜೊತೆ ಒಂದೆರಡು ಸ್ಟೆಪ್ ಹಾಕಿದ್ರೆ ಸ್ಪೂರ್ತಿ ಮಾತ್ರವಲ್ಲ ಅದೊಂದು ಗತವೈಭವ ಸಾರುವ ಅಮೃತ ಘಳಿಗೆ. ಬಿಗ್ ಡ್ಯಾಡಿ ಶಿವಣ್ಣ ಹೊಸ ಪ್ರತಿಭೆಗಳಿಗೆ ಬ್ರಾಂಡ್ ಹಿಂದೆ ಓಡಬೇಡಿ ಅಂತ ಹೇಳಿದ್ಯಾಕೆ ಅನ್ನೋದರ ಝಲಕ್ ಇಲ್ಲಿದೆ ನೋಡಿ.
ಸಿಂಪಲ್ ಸುನಿ ಸಾಮಾನ್ಯವಾಗಿ ತೆರೆಮೇಲೆ ಕಥೆಯನ್ನು ಸಿಂಪಲ್ ಆಗಿ ಹೇಳುತ್ತಾರೆ. ಜನರಿಗೆ ಬೇಗ ಮುಟ್ಟುತ್ತೆ. ಎಲ್ಲಕ್ಕಿಂತ ಹೆಚ್ಚಾಗಿ ಭಾವನಾತ್ಮಕವಾಗಿ ಕಟ್ಟಿ ಹಾಕುತ್ತಾರೆ. ಹೀಗಾಗಿ ಇವರ ಸಿನಿಮಾಗಳನ್ನು ತಪ್ಪದೇ ವೀಕ್ಷಿಸುವ ಒಂದು ದೊಡ್ಡ ವರ್ಗವೇ ಇದೆ. ಈಗ ಮತ್ತೊಂದು ಸಿನಿಮಾ ಇವರ ಬತ್ತಳಿಕೆಯಿಂದ ಬರುತ್ತಿದೆ ಅದುವೇ ಗತವೈಭವ. ಯೆಸ್, ಸ್ಯಾಂಡಲ್ ವುಡ್ ನಲ್ಲಿ ವಿಭಿನ್ನ ಪ್ರಯತ್ನಗಳು ವಿಭಿನ್ನ ಸಿನಿಮಾಗಳು ರೆಡಿಯಾಗ್ತಿರೋದು ಒಂದು ಕಡೆಯಾದ್ರೆ ಮೊದಲ ಸಿನಿಮಾದಲ್ಲಿಯೇ ತಮ್ಮನ್ನ ತಾವ್ ಪ್ರೂವ್ ಮಾಡೋಕೆ ಸಕತ್ ತಯಾರಿ ಮಾಡಿಕೊಂಡು ಗತವೈಭವದ ಮೂಲಕ ಉದಯೋನ್ಮುಖ ನಟ ದುಷ್ಯಂತ ಎಂಟ್ರಿ ಕೊಡೋಕೆ ರೆಡಿಯಾಗಿದ್ದಾರೆ.
‘ಗತವೈಭವ’ಕ್ಕೆ ಸಜ್ಜಾದ ಸಿಂಪಲ್ ಸುನಿ ಅಂಡ್ ಟೀಂ..!
ಬ್ರಾಂಡ್ ಹಿಂದೆ ಹೋಗ್ಬೇಡಿ.. ಕ್ರಿಯೇಟ್ ಮಾಡಿ– ಶಿವಣ್ಣ
ವಿಶೇಷ ಅಂದ್ರೆ ದುಷ್ಯಂತ ಜೊತೆ ಮಿಲ್ಕಿ ಬ್ಯೂಟಿ ಆಶಿಕಾ ರಂಗನಾಥ್ ಸ್ಕ್ರೀನ್ ಶೇರ್ ಮಾಡಿದ್ದಾರೆ. ಈಗಾಗಲೇ ಆಶಿಕಾ ರಂಗನಾಥ್ ಪರಭಾಷೆಯಲ್ಲೂ ನಟಿಸಿ ಸೈ ಅನ್ನಿಸಿಕೊಂಡ್ರೂ ನಟ ದುಷ್ಯಂತ್ ಗೆ ಇದು ಮೊದಲ ಸಿನಿಮಾ. ಸದ್ಯ ಸಿಂಪಲ್ ಸುನಿ ಆಕ್ಷನ್ ಕಟ್ ಹೇಳಿರೋ ಗತವೈಭವ ಚಿತ್ರದ ಶಿಪ್ ಸಾಂಗ್ ಬಿಡುಗಡೆ ಆಗಿದೆ. ಸಾಂಗ್ ಲಾಂಚ್ ಇವೆಂಟ್ ಗೆ ಆಗಮಿಸಿದ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಹಾಡನ್ನು ಎಂಜಾಯ್ ಮಾಡುತ್ತ ರಿಲೀಸ್ ಮಾಡಿದ್ದಾರೆ.
ದುಷ್ಯಂತ ಇಂಡಸ್ಟ್ರಿಗೆ ಹೊಸಬ ಆದ್ರೆ ಬಾಲ್ಯದಲ್ಲಿ 10 ವರ್ಷ ಇರುವಾಗ್ಲೇ ಶಿವಣ್ಣನ ತೊಡೆ ಮೇಲೆ ಕೂತು ಪೋಟೊ ತಗೆದುಕೊಂಡ ಅನುಭವದ ಜೊತಗೆ ಒಬ್ಬ ಹೊಸ ನಟನಿಗೆ ಅವರ ಸರಳತೆ ಹೇಗೆಲ್ಲ ಸ್ಪೂರ್ತಿಯಾಗುತ್ತೆ ಅನ್ನೋದನ್ನ ವಿವರಿಸಿದ್ರು. ಅಷ್ಟೆ ಅಲ್ಲ ಗತವೈಭವ ಸಿನಿಮಾಗಾಗಿ ಸಂಕಷ್ಟ ಎದುರಿಸಿದ ಸನ್ನಿವೆಶವನ್ನೂ ದುಷ್ಯಂತ್ ಹೇಳಿಕೊಂಡ್ರು.
ಶಿಪ್ ಸಾಂಗ್ ರಿಲೀಸ್.. ಜೂಡಾ ಮ್ಯೂಸಿಕ್ ಮ್ಯಾಜಿಕ್
ದುಷ್ಯಂತ್-ಆಶಿಕಾ ಜೊತೆ ಪವರ್ ಹೌಸ್ ಶಿವಣ್ಣ ಡಾನ್ಸ್
ಸಿಂಪಲ್ ಸುನಿ ಆಕ್ಷನ್ ಕಟ್ ಹೇಳಿರೋ ಗತವೈಭವ ಸಿನಿಮಾ ಸುನಿ ಅವರ ಕನಸಿನ ಪ್ರಾಜೆಕ್ಟ್ ಕೂಡ ಹೌದು. ಹೀಗಾಗಿ ಸಿನಿಮಾ ತುಂಬಾ ಸ್ಪೆಶಲ್ ಆಗಿರುತ್ತೆ ಅನ್ನೋ ಭರವಸೆಯಲ್ಲಿದೆ ಚಿತ್ರತಂಡ. ನಟಿ ಆಶಿಕಾ ರಂಗನಾಥ್ ಈಗಾಗಲೇ ಹಲವು ಸಿನಿಮಾಗಳಲ್ಲಿ ನಟಿಸಿದ್ರೂ ಗತವೈಭವ ಸಿನಿಮಾದಲ್ಲಿನ ಪಾತ್ರ ಆಶಿಕಾ ಕರೀಯರ್ ನಲ್ಲೆ ತುಂಬಾ ಸ್ಪೆಶಲ್ ಆಗಿ ಸೇಳೆಯಲಿದೆ ಅನ್ನೋ ಕುತೂಹಲದಲ್ಲಿದೆ ಚಿತ್ರತಂಡ.
ಇನ್ನು ಗತವೈಭವ ಸಿನಿಮಾ ತಂಡಕ್ಕೆ ಸಾಥ್ ನೀಡಿದ್ದು ಸೆಂಚುರಿ ಸ್ಟಾರ್ ಶಿವರಾಜಕುಮಾರ್. ಈಗಾಗಲೇ ಬ್ರಾಂಡ್ ಕ್ರಿಯೇಟ್ ಮಾಡಿರೋರ ಜೊತೆಗೆ ಹೋಗೋದ್ರ ಬದಲು ನೀವು ನಿಮ್ಮದೇ ಶೈಲಿಯಲ್ಲಿ ಕೆಲಸ ಮಾಡಿ ಬ್ರಾಂಡ್ ಕ್ರಿಯೇಟ್ ಮಾಡಿ ಅಂತ ಶಿವಣ್ಣ ನವನಟ ದುಷ್ಯಂತ್ ಹಾಗೆ ಚಿತ್ರತಂಡಕ್ಕೆ ಕಿವಿ ಮಾತು ಹೇಳಿದ್ರು. ಶಿವಣ್ಣ ಅಂದ್ರೆನೆ ಎನರ್ಜಿ ಬಂಡಲ್ ಹೀಗಿರುವಾಗ ವೇದಿಕೆ ಮೇಲೆನೇ ಶಿವಣ್ಣ ಗತವೈಭವ ಸಿನಿಮಾದ ಶಿಪ್ ಹಾಡಿಗೆ ಕೋರಿಯೋಗ್ರಫರ್ ಭೂಷಣ್ ಮಾಸ್ಟರ್ ಜೊತೆ ಕೋರಿಯೋಗ್ರಫಿ ಮಾಡಿಸಿಕೊಂಡು ಸಿನಿಮಾ ತಂಡದ ಜೊತೆ ಸಕತ್ ಸ್ಟೆಪ್ಸ್ ಹಾಕಿ ಹಲ್ ಚಲ್ ಎಬ್ಬಿಸಿದ್ರು.
ಸಿಂಪಲ್ ಸುನಿ ಡೈರೆಕ್ಷನ್ ಗೆ ಬಂಡವಾಳ ಹೂಡೊ ಮೂಲಕ ಸಾಥ್ ನೀಡಿದ್ದಾರೆ ದೀಪಕ್ ತಿಮ್ಮಪ್ಪ. ಇನ್ನು ಬಿಡುಗಡೆ ಆಗಿರೋ ಶಿಪ್ ಹಾಡಿಗೆ ಜೂಡ ಸ್ಯಾಂಡಿ ಮ್ಯೂಸಿಕ್.. ಭೂಷಣ್ ಮಾಸ್ಟರ್ ಕೊರಿಯೋಗ್ರಾಫಿ.. ಸಿಂಪಲ್ ಸುನಿ ಸಾಹಿತ್ಯ ಕೈಲಾಶ್ ಕೇರ್, ಚೇತನ್ ನಾಯ್ಕ್ ಹಾಗೂ ಚಿನ್ಮಯ್ ಕಂಠದಲ್ಲಿ ಹಾಡು ಮೂಡಿಬಂದಿದೆ. ಒಟ್ಟಿನಲ್ಲಿ ಗತವೈಭವ ಸಿನಿಮಾ ನವೆಂಬರ್ 14 ರಂದು ರಾಜ್ಯಾದ್ಯಂತ ರಿಲೀಸ್ ಆಗ್ತಿದೆ. ಹಾಗಾದ್ರೆ ಗಾಂಧೀನಗರದಲ್ಲಿ ಗತವೈಭವ ದೊಡ್ಡ ಸಕ್ಸಸ್ ಕಂಡು ಹೆಗೆಲ್ಲ ದಾಖಲೆ ಬರೆಯುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.





