ಯುವ ರಾಜ್ಕುಮಾರ್ ಎರಡನೇ ಆಟ ʼಎಕ್ಕʼ ಬಿಡುಗಡೆ ಹೊಸ್ತಿಲಲ್ಲಿದ್ದು, ಸದ್ಯ ಭರದ ಪ್ರಚಾರ ಸಾಗಿದೆ. ಸ್ಯಾಂಡಲ್‌ವುಡ್ ಪ್ರತಿಷ್ಠಿತ ಚಲನಚಿತ್ರ ನಿರ್ಮಾಣ ಸಂಸ್ಥೆಗಳು ನಿರ್ಮಿಸಿರೋ ಬಹುನಿರೀಕ್ಷಿತ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಎಕ್ಕ ಪಕ್ಕ ಶೋ ರೀತಿ ಇದೆ. ಹಳ್ಳಿ ಬಿಟ್ಟು ಸಿಟಿಗೆ ಬಂದ ಹುಡ್ಗ ಕೆರೆಯಿಂದ ಸಮುದ್ರಕ್ಕೆ ಬದಿದ್ದ ಕಥೆಯನ್ನು ರೋಹಿತ್ ಪದಕಿ ಹೇಳೋದಿಕ್ಕೆ ಹೊರಟಿದ್ದಾರೆ. ಒಬ್ಬ ಸಾಮಾನ್ಯ ಹುಡ್ಗ ಅಂಡರ್ ವರ್ಲ್ಡ್ ಆಗಿ ಬೆಳೆದ ಕಥೆ ಎಕ್ಕ ಸಿನಿಮಾದ ಹೈಲೆಟ್..,ಯುವ ಮಾಸ್ ಆಗಿ ಅಬ್ಬರಿಸಿದ್ದು, ಸಂಜನಾ ಆನಂದ್ ಹಾಗೂ ಸಂಪದಾ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ.
ಎಕ್ಕ ಕಂಪ್ಲೀಟ್ ರಾ. ಈ ಚಿತ್ರದಲ್ಲಿ ಇವರು ಬೇರೆ ರೀತಿಯ ಕಥೆಯನ್ನೆ ಹೇಳುತ್ತಿದ್ದಾರೆ. ಯುವ ಚಿತ್ರದ ನಾಯಕ ನಟ ಯುವರಾಜ್‌ಕುಮಾರ್ ಅವರನ್ನ ಇಲ್ಲಿ ಬೇರೆ ರೀತಿ ತೋರಿಸುತ್ತಿದ್ದಾರೆ. ಎಕ್ಕ ಚಿತ್ರದಲ್ಲಿ ಡೆಡ್ಲಿ ಸೋಮ ಖ್ಯಾತಿಯ ನಟ ಆದಿತ್ಯ ನಟಿಸಿದ್ದಾರೆ. ಬಾಲಿವುಡ್‌ನ ಅತುಲ್ ಕುಲಕರ್ಣಿ ಕೂಡಾ ಅಭಿನಯಿಸಿದ್ದಾರೆ.