ಎಕ್ಕ ಜುಲೈ 18ಕ್ಕೆ ಪಕ್ಕಾ..ಯುವಗೆ ಚಿಕ್ಕಮ್ಮನ ‘ಪವರ್’..!

ಟೀಸರ್ & ಸಾಂಗ್ಸ್ ಸೂಪರ್ ಹಿಟ್..ಶಕಲಕ ಚರಣ್

Web 2025 06 20t154826.087

ಅಂದು ಅಪ್ಪು ಆಡಿದ್ರು ಎಕ್ಕ ರಾಜ ರಾಣಿ ಇಂದು ಯುವರಾಜ್ ಆಡಿಸ್ತಾರೆ ಎಕ್ಕದಾಟ. ಯುವ ಬಳಿಕ ಅಪ್ಪು ನೆರಳಾಗಿ ದೊಡ್ಮನೆ ಲೆಗಸಿಯನ್ನ ಮುಂದುವರೆಸ್ತಿರೋ ಯುವರಾಜನಿಗೆ ಚಿಕ್ಕಮ್ಮ ಅಶ್ವಿನಿ ಪುನೀತ್ ರಾಜ್‌ಕುಮಾರ್ ಪವರ್ ಸಿಕ್ಕಿದೆ. ಟೀಸರ್ ಜೊತೆ ಸಾಂಗ್ಸ್ ಕೂಡ ಹಂಗಾಮ ಮಾಡ್ತಿದ್ದು, ಟೀಂ ರಿಲೀಸ್ ಜೋಶ್‌‌ನಲ್ಲಿದೆ.

ಚೊಚ್ಚಲ ಚಿತ್ರದಲ್ಲೇ ಭರವಸೆಯ ನಾಯಕನಟನಾಗಿ ಎಲ್ಲರ ಮೆಚ್ಚುಗೆಗೆ ಪಾತ್ರನಾದ ಯುವರಾಜ್‌ಕುಮಾರ್, ಇದೀಗ ತಮ್ಮ ಎರಡನೇ ಸಿನಿಮಾ ಎಕ್ಕ ಮೂಲಕ ಬೊಂಬಾಟ್ ಆಟ ತೋರಿಸಲು ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಈ ಹಿಂದೆ ರತ್ನನ್ ಪ್ರಪಂಚ ಸಿನಿಮಾ ಮಾಡಿದ್ದ ರೋಹಿತ್ ಪದಕಿ ಎಕ್ಕ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳ್ತಿದ್ದು, ಈಗಾಗ್ಲೇ ಒಂದು ಟೀಸರ್ ಹಾಗೂ ಎರಡು ಸಾಂಗ್ಸ್ ಎಲ್ಲೆಡೆ ಪವರ್‌‌ಫುಲ್ ಆಗಿ ಸದ್ದು ಮಾಡ್ತಿವೆ.

ಎಕ್ಕ ಮಾರ್ ಸಾಂಗ್ ಒಳ್ಳೆಯ ಡ್ಯಾನ್ಸಿಂಗ್ ನಂಬರ್ ಆಗಿ ಎಲ್ಲರ ದಿಲ್ ದೋಚಿತ್ತು. ಇದೀಗ ಬ್ಯಾಂಗಲ್ ಬಂಗಾರಿ ಸಾಂಗ್ ಅದನ್ನ ಮೀರಿಸುವಂತಹ ಬಿಗ್ ಹಿಟ್ ನೀಡಿದೆ. ಸಂಜನಾ ಆನಂದ್ ಹಾಗೂ ಯುವರಾಜ್ ಕೆಮಿಷ್ಟ್ರಿ, ಸ್ಟೆಪ್ಸ್, ಸೆಟ್, ಕಾಸ್ಟ್ಯೂಮ್ಸ್ ಎಲ್ಲವೂ ಕಿಕ್ ಕೊಡ್ತಿವೆ. ಚರಣ್ ರಾಜ್ ಈ ಬಾರಿಯೂ ಕೂಡ ಮತ್ತೊಂದು ಡ್ಯಾನ್ಸಿಂಗ್ ನಂಬರ್ ಕೊಟ್ಟು, ಹುಡುಗರ ಮನಸ್ಸು ಗೆದ್ದಿದ್ದಾರೆ.

ಯುವ ಎರಡನೇ ಕನಸಿಗೆ ಚಿಕ್ಕಮ್ಮ ಅಶ್ವಿನಿ ಪುನೀತ್ ರಾಜ್‌ಕುಮಾರ್ ಸಾಥ್ ನೀಡಿದ್ದು, ಪಿಆರ್‌ಕೆ ಪ್ರೊಡಕ್ಷನ್ಸ್ ಜೊತೆ ಜಯಣ್ಣ ಫಿಲಂಸ್‌ನ ಜಯಣ್ಣ- ಭೋಗೇಂದ್ರ ಹಾಗೂ ಕೆಆರ್‌ಜಿಯ ಕಾರ್ತಿಕ್ ಗೌಡ- ಯೋಗಿ ಜಿ ರಾಜ್ ಕೂಡ ಕೈ ಜೋಡಿಸಿದ್ದಾರೆ. ಈ ಐದೂ ಮಂದಿ ನಿರ್ಮಾಪಕರುಗಳು ಸೇರಿ ಯೂತ್‌ಫುಲ್ ಎಂಟರ್‌ಟೈನರ್ ಎಕ್ಕ ನೀಡ್ತಿದ್ದು, ಯುವರಾಜ್‌ಗೆ ಸಂಜನಾ ಆನಂದ್ ಜೊತೆ ಸಂಪದ ಕೂಡ ನಾಯಕಿಯಾಗಿ ಗ್ಲಾಮರ್ ಹೆಚ್ಚಿಸಿದ್ದಾರೆ.

ಇನ್ನು ಸಿನಿಮಾ ಇದೇ ಜುಲೈ 18ಕ್ಕೆ ಪ್ರೇಕ್ಷಕರನ್ನ ರಂಜಿಸೋಕೆ ಬರ್ತಿದ್ದು, ತುಮಕೂರು ಸೇರಿದಂತೆ ಭರ್ಜರಿ ಪ್ರಮೋಷನ್ಸ್ ಶುರು ಮಾಡಿದೆ ಟೀಂ. ಮೊನ್ನೆ ತುಮಕೂರಿಗೆ ತೆರಳಿದ್ದಾಗ ಯುವರಾಜ್‌‌ ಬೌನ್ಸರ್ಸ್‌ ಇದ್ದ ಕಾರು ಒಬ್ಬರಿಗೆ ಗುದ್ದಿದ ಹಿನ್ನೆಲೆ ಆಕೆ ಆಸ್ಪತ್ರೆ ಪಾಲಾಗಿದ್ದರಂತೆ. ಅದು ನಮ್ಮ ಗಮನಕ್ಕೆ ಬಹಳ ತಡವಾಗಿ ಬಂತು, ಅದಕ್ಕೆ ವಿಷಾದ ವ್ಯಕ್ತಪಡಿಸುತ್ತೇವೆ. ನಮಗೆ ಸಿನಿಮಾ ಹೊರತಾಗಿ ಬೇರೇನು ಗೊತ್ತಿಲ್ಲ ಅಂದ್ರು ಯುವರಾಜ್ ಹಾಗೂ ನಿರ್ಮಾಪಕ ಕಾರ್ತಿಕ್ ಗೌಡ.

ಒಟ್ಟಾರೆ ಕನ್ನಡ ಸಿನಿಮಾಗಳ ಬ್ಯುಸಿನೆಸ್ ಡ್ರಾಪ್ ಆಗಿದೆ. ಈ ವರ್ಷದಲ್ಲಿ ಆರು ತಿಂಗಳು ಕಳೆದಿದೆ. ಇಲ್ಲಿಯವರೆಗೆ ಹಿಟ್ ಸಿನಿಮಾಗಳ ಪಟ್ಟಿಯೇ ಕ್ರಿಯೇಟ್ ಆಗಿಲ್ಲ. ಅದು ಎಕ್ಕ ಚಿತ್ರದ ಮೂಲಕ ಆಗುತ್ತಾ ಅನ್ನೋದನ್ನ ನಿರೀಕ್ಷಿಸಬೇಕಿದೆ. ಇನ್ನು ಅಪ್ಪು ಜಾಕಿ ಚಿತ್ರದ ಗೆಟಪ್‌ನಲ್ಲಿ ಯುವ ಮಿಂಚ್ತಿದ್ದು, ಒಣ ಕಸ- ಹಸಿ ಕಸ ಕಾನ್ಸೆಪ್ಟ್ ಪ್ರೇಕ್ಷಕರ ಕಾತರವನ್ನು ಹೆಚ್ಚಿಸಿದೆ. ಜುಲೈ 18ಕ್ಕೆ ಎಕ್ಕ ಅಸಲಿ ಆಟ ಶುರುವಾಗಲಿದ್ದು, ಅಂದೇ ಚಿತ್ರದ ಕಥೆ ರಿವೀಲ್ ಆಗಲಿದೆ.

Exit mobile version