ರಣಬಾಲಿ ವಿಜಯ್ ದೇವರಕೊಂಡ ಸಿಡಿಸಿದ್ರು ಹೊಸ ಬಾಂಬ್

ಬ್ರಿಟಿಷರು ಫಿಲ್ಟರ್ ಮಾಡಿ ಬಿಟ್ಟು ಹೋದ ‘ಇತಿಹಾಸ’ ನಮ್ಮದು

ರಣಬಾಲಿ ವಿಜಯ್ ದೇವರಕೊಂಡ ಸಿಡಿಸಿದ್ರು ಹೊಸ ಬಾಂಬ್

ರಶ್ಮಿಕಾ-ವಿಜಯ್ ದೇವರಕೊಂಡ ರಣಬಾಲಿ ರಿಲೀಸ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಇತ್ತೀಚೆಗೆ ಆನ್ & ಆಫ್‌‌ ಸ್ಕ್ರೀನ್ ದಂಪತಿ ವಿಶೇಷ ಸಂದರ್ಶನವೊಂದರಲ್ಲಿ ಸಾಕಷ್ಟು ವಿಷಯಗಳನ್ನ ಹಂಚಿಕೊಂಡಿದ್ದು, ಅವರ ಸ್ಟೇಟ್ಮೆಂಟ್ಸ್‌ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿವೆ. ಬ್ರಿಟಿಷರು ಫಿಲ್ಟರ್ ಮಾಡಿ ಕೊಟ್ಟಿ ಹೋದ ಇತಿಹಾಸ ನಮ್ಮದು. ಆದ್ರೆ ಅಸಲಿ ಮ್ಯಾಟರ್ ಬೇರೇನೇ ಇದೆ ಎಂದಿದ್ದಾರೆ. ಅಷ್ಟೇ ಅಲ್ಲ.. ಅವ್ರ ಸ್ನೇಹ, ಪ್ರೀತಿ, ಮದ್ವೆ ಬಗ್ಗೆಯೂ ಮಾತನಾಡಿದ್ದಾರೆ. ಇನ್ನೂ ರಶ್ಮಿಕಾ ಗಂಡನನ್ನ ಇಮಿಟೇಟ್ ಮಾಡಿದ ಪರಿ ವ್ಹಾವ್ ಫೀಲ್ ತರಿಸಿದೆ.

ಯೆಸ್.. ಸ್ವತಂತ್ರಪೂರ್ವ ಭಾರತದ ನೈಜ ಘಟನೆಗಳನ್ನ ಆಧರಿಸಿದ ರಣಬಾಲಿ ಸಿನಿಮಾದ ರಿಲೀಸ್‌ಗೆ ದಿನಗಣನೆ ಶುರುವಾಗಿದೆ. ಅಕ್ಟೋಬರ್ 16ರಂದು ತೆರೆಗೆ ಬರ್ತಿರೋ ದೇಶಪ್ರೇಮದ ಕಿಚ್ಚು ಹತ್ತಿಸೋ ಈ ಸಿನಿಮಾಗೆ ರಾಹುಲ್ ಸಂಕೃತ್ಯನ್ ಆ್ಯಕ್ಷನ್ ಕಟ್ ಹೇಳಿದ್ದು, ಇತ್ತೀಚೆಗೆ ಕನಕಾಲ ಸುಮ ಜೊತೆ ಶೂಟಿಂಗ್ ನಡೆದ ರಣಬಾಲಿಯ ಮನೆಯಲ್ಲೇ ತಾರಾ ಜೋಡಿ ವಿಶೇಷ ಸಂದರ್ಶನದಲ್ಲಿ ಭಾಗಿಯಾಗಿದ್ದರು. ಸುಮಾರು 100 ಕಂಬಗಳಿಂದ ತಯಾರಾದ ವಿಂಟೇಜ್ ಮನೆಯಲ್ಲೇ ಬಹುತೇಕ ಸಿನಿಮಾದ ಶೂಟಿಂಗ್ ನಡೆಸಿದ್ದು, ಅದನ್ನ ಡೈರೆಕ್ಟರ್ ತಮ್ಮ ತಾತನ ಮನೆಯಂತೆ ಡಿಸೈನ್ ಮಾಡಿ, ಸೆಟ್ ಹಾಕಿಸಿದ್ದು ವಿಶೇಷ.

ಮುದ್ದೆ, ನಾಟಿ ಕೋಳಿ ಸಾರು ಸವಿಯುತ್ತಾ ಅದೇ ವಿಂಟೇಜ್ ಲುಕ್ಸ್‌‌ನಲ್ಲಿ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ನೆಲದ ಮೇಲೆ ಕೂತು ಸಂದರ್ಶನ ನೀಡಿದ್ದು ಹೈಲೈಟ್. ಅದರಲ್ಲಿ ಮಾತಾಡುತ್ತಾ ವಿಜಯ್ ದೇವರಕೊಂಡ ಹೊಸ ಬಾಂಬ್ ಸಿಡಿಸಿದ್ದಾರೆ. ಬ್ರಿಟಿಷರು ಅವರಿಗೆ ಹೇಗೆ ಬೇಕೋ ಹಾಗೆ ನಮ್ಮ ಇತಿಹಾಸವನ್ನ ಫಿಲ್ಟರ್ ಮಾಡಿ, ಬರೆಸಿ ಹೋಗಿದ್ದಾರೆ. ನಮಗೆಲ್ಲಾ ಜಲಿಯನ್ ವಾಲಾಬಾಗ್, ಗಾಂಧೀಜಿ ಅವರ ಮೂವ್ಮೆಂಟ್ಸ್, ಅಹಸಕಾರ ಚಳುವಳಿಗಳು ಮಾತ್ರ ಗೊತ್ತಿವೆ. ಆದ್ರೆ ರಣಬಾಲಿ ಅಂತಹ ಸಾಕಷ್ಟು ನೈಜ ಘಟನೆಗಳು ಬೆಳಕಿಗೆ ಬಂದೇ ಇಲ್ಲ. ನಮಗೆ ಗೊತ್ತಿಲ್ಲದೇ ಇರೋ ಇತಿಹಾಸ ಸಾಕಷ್ಟು ಇದೆ ಎಂದಿದ್ದಾರೆ.

ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಸೇರಿದಂತೆ ಸ್ವತಂತ್ರ ಬರೋ ತನಕ ಏನೆಲ್ಲಾ ಆಯ್ತು ಅನ್ನೋದನ್ನ ಸಾಕಷ್ಟು ಸಂಶೋಧನೆ ಮಾಡಿ, ಪಾಡ್‌ಕಾಸ್ಟ್ ಮಾಡಿರೋ ಕೆಲ ಸಂದರ್ಶನಗಳನ್ನ ನಾನು ನೋಡಿ ಅದನ್ನೆಲ್ಲಾ ಅರಿತುಕೊಂಡೆ ಎಂದಿದ್ದಾರೆ.

ರಣಬಾಲಿ ಸಿನಿಮಾ ಹಾಗೂ ಗಂಡ ವಿಜಯ್ ದೇವರಕೊಂಡ ಕುರಿತು ಮಾತನಾಡಿದ ಜಯಮ್ಮ ಪಾತ್ರಧಾರಿ ರಶ್ಮಿಕಾ ಮಂದಣ್ಣ.. ಸಾಕಷ್ಟು ಸೀಕ್ರೆಟ್ಸ್‌ನ ಬಿಚ್ಚಿಟ್ಟರು. ಅದರಲ್ಲೂ ವಿಜಯ್ ಮನೆಯಲ್ಲಿ ಒಂದು ರೀತಿ ಇದ್ರೆ.. ಶೂಟಿಂಗ್ ಸೆಟ್‌‌ನಲ್ಲಿ ಬೇರೆ ತರಹ ಇರ್ತಾರೆ ಎಂದಿದ್ದಾರೆ. ಡಿಯರ್ ಕಾಮ್ರೆಡ್ ವೇಳೆ ನಾವು ಕಮಿಟ್ ಆಗಿರಲಿಲ್ಲ ಎಂದ ರಶ್ಮಿಕಾ.. ಅಲ್ಲಿಂದಲೇ ಒಂದು ಕಂಫರ್ಟ್ ಶುರುವಾಯ್ತು ಅಂತ ತಮ್ಮ ಸ್ನೇಹ, ಪ್ರೀತಿಯ ಗುಟ್ಟು ರಟ್ಟು ಮಾಡಿದ್ದಾರೆ.

ವಿಜಯ್ ಶೂಟಿಂಗ್ ಸೆಟ್‌‌ನಲ್ಲಿ ಇದ್ರೆ ಸಖತ್ ಕಂಫರ್ಟ್ ಎಂದ ರಶ್ಮಿಕಾ, ಮದುವೆ ಬಗ್ಗೆಯೂ ಮಾತನಾಡಿದ್ರು. ಅಲ್ಲದೆ.. ರಣಬಾಲಿ ಪಾತ್ರಧಾರಿ ವಿಜಯ್ ಹಾಗೂ ಮನೆಯಲ್ಲಿ ಹೇಗಿರ್ತಾರೆ ದೇವರಕೊಂಡ ಅನ್ನೋದನ್ನ ಎದ್ದು ನಿಂತು ಇಮಿಟೇಟ್ ಮಾಡಿ ತೋರಿಸಿದ್ದು ಇಂಟರೆಸ್ಟಿಂಗ್.

ಒಟ್ಟಾರೆ.. ಇತಿಹಾಸದ ಪುಟಗಳಲ್ಲಿ ದಾಖಲೆ ಆಗದಂತಹ ಹಿಡಲ್ ಸೀಕ್ರೆಟ್ಸ್‌‌‌ನ ಬೆಳ್ಳಿಪರದೆ ಮೇಲೆ ತೋರಿಸಲು ಹೊರಟಿರೋ ರಣಬಾಲಿ ಸಿನಿಮಾ ನೋಡುಗರಿಗೆ ಎಷ್ಟರ ಮಟ್ಟಿಗೆ ಕಾಡಲಿದೆ ಅನ್ನೋದನ್ನ ನಿರೀಕ್ಷಿಸಬೇಕಿದೆ. ಈ ಜೋಡಿ ಒಟ್ಟಿಗೆ ನಟಿಸಿದಾಗೆಲ್ಲಾ ಅವು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳಾಗಿವೆ. ಈ ಬಾರಿಯೂ ಅಂಥದ್ದೇ ಬಿಗ್ ಹಿಟ್‌ನ ನಿರೀಕ್ಷೆಯಲ್ಲಿದೆ ರಶ್ಮಿಕಾ-ವಿಜಯ್ ರಣಬಾಲಿ ಜೋಡಿ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version