ಸ್ಯಾಂಡಲ್‌ವುಡ್ ಬ್ಲಾಕ್ ಕೋಬ್ರಾ ದುನಿಯಾ ವಿಜಯ್ ಪುತ್ರಿ ರಿತನ್ಯ ಲವ್ ಮೂಡ್‌ನಲ್ಲಿದ್ದಾರಂತೆ. ಅಂದಹಾಗೆ ಸ್ಟಾರ್ ಕಿಡ್ ಅಂತ ಮಾತ್ರ ಅಲ್ಲ… ನಟಿಯಾಗಿ ತಮ್ಮದೇ ಛಾಪು ಮೂಡಿಸೋ ಪ್ರಯತ್ನದಲ್ಲಿರೋ ರಿತನ್ಯ, ಲ್ಯಾಂಡ್ ಲಾರ್ಡ್ ಸಿನಿಮಾದ ಮೂಲಕ ಸಿಲ್ವರ್ ಸ್ಕ್ರೀನ್‌ಗೆ ಸ್ಟ್ರಾಂಗ್ ಎಂಟ್ರಿ ಕೊಟ್ಟಿದ್ದಾರೆ. ಈ ಎಂಟ್ರಿಯಲ್ಲೇ ಅದ್ಯಾರ್ ಜೊತೆ ಡ್ಯುಯೇಟ್ ಹಾಡ್ತಾ ರೋಮಾಂಚನಗೊಂಡಿದ್ದಾರೆ. ಲ್ಯಾಂಡ್ ಲಾರ್ಡ್ ನಲ್ಲಿ ಲವ್ ವೈಬ್ಸ್ ಹೇಗಿದೆ ಅನ್ನೋದರ ಝಲಕ್ ನಿಮ್ಮ ಮುಂದೆ.
- ದುನಿಯಾ ವಿಜಯ್ ಪುತ್ರಿ ರಿತನ್ಯ ಲವ್ ಮೂಡ್
- ಹೃದಯಕ್ಕೆ ಸಾಕ್ಷಿ ಬೇಕಾ? ಅಂತಿರೋ ಶಿಶಿರ್ – ರಿತನ್ಯ
- ಲ್ಯಾಂಡ್ ಲಾರ್ಡ್ ನಲ್ಲಿ ಲವ್ ಲ್ಯಾಂಡ್ ಸೃಷ್ಟಿಸಿದ ಜಡೇಶ್
- ಸ್ಟಾರ್ ಡಾಟರ್ ಅಲ್ಲ..ನಟಿಯಾಗಿ ರಿತನ್ಯ ಎಂಟ್ರಿ..!
ಗಾಂಧಿನಗರದಲ್ಲಿ ಸ್ಟಾರ್ ಕುಟುಂಬದ ಕುಡಿ ಎಂಟ್ರಿ ಕೊಟ್ರೆ ಒಂದಿಷ್ಟು ಕುತೂಹಲ ಮಾತ್ರವಲ್ಲ ನಿರೀಕ್ಷೆಯೂ ಜಾಸ್ತಿಯೇ ಇರುತ್ತೆ. ಅದೇ ರೀತಿ ದುನಿಯಾ ವಿಜಯ್ ಪುತ್ರಿ ರಿತನ್ಯ ಅಪ್ಪನ ಲ್ಯಾಂಡ್ ಲಾರ್ಡ್ ಸಿನಿಮಾದಲ್ಲಿ ನಟಿಸಿದ್ದಾರೆ. ಸ್ಟಾರ್ ಡಾಟರ್ ಆಗಿ ಮಾತ್ರನಾ, ಇಲ್ಲಾ ನಟಿಯಾಗಿ ಹೇಗೆ ಕಾಣಿಸಿಕೊಳ್ಳುತ್ತಾರೆ ಅನ್ನೋ ಪ್ರಶ್ನೆಗೆ ಈಗ ರೊಮ್ಯಾಂಟಿಕ್ ಹಾಡಿನ ಮೂಲಕ ಉತ್ತರ ಸಿಕ್ಕಿದೆ.
ಅಂದಹಾಗೆ ಲ್ಯಾಂಡ್ ಲಾರ್ಡ್ ದಿ ರೂಲರ್ ಅನ್ನೋದು ಮಾಸ್ ಕಥೆ ಮಾತ್ರವಲ್ಲ, ಇಮೋಷನ್ ಹಾಗೂ ಲವ್ ಟ್ರ್ಯಾಕ್‌ಗಳನ್ನೂ ಒಳಗೊಂಡಿರುವ ಸಿನಿಮಾ.
ಈ ವಿಭಿನ್ನ ಕಥೆಗೆ ನಿರ್ದೇಶಕ ಜಡೇಶ್ ಹಂಪಿ ಆಕ್ಷನ್ ಕಟ್ ಹೇಳಿದ್ದಾರೆ. ದುನಿಯಾ ವಿಜಯ್, ರಚಿತಾ ರಾಮ್, ರಾಜ್ ಬಿ ಶೆಟ್ಟಿ ಸೇರಿದಂತೆ ಹಲವು ಸ್ಟ್ರಾಂಗ್ ಪಾತ್ರಗಳ ಕಲಾವಿದರ ದಂಡು ಈ ಸಿನಿಮಾದಲ್ಲಿದೆ.
ಈಗಾಗಲೇ ‘ನಿಂಗವ್ವ’ ಹಾಡಿನ ಮೂಲಕ ದುನಿಯಾ ವಿಜಯ್ ರಚಿತಾ ರಾಮ್ ಜೋಡಿ ಪ್ರೇಕ್ಷಕರ ಮನಸ್ಸು ಗೆದ್ದಿದೆ. ಅದೇ ಸಿನಿಮಾದಲ್ಲಿ ಈಗ ದುನಿಯಾ ವಿಜಯ್ ಪುತ್ರಿ ರಿತನ್ಯ, ಶಿಶಿರ್ ಜೊತೆ ಪ್ರೀತಿಯಲ್ಲಿ ಬಿದ್ದ ರೋಮಾಂಚನವನ್ನು ಹಾಡಿನ ಮೂಲಕ ಹೇಳ್ತಿದ್ದಾರೆ. ಅಪ್ಪನ ಮಾಸ್ ಟ್ರ್ಯಾಕ್ ನಡುವೆ ಮಗಳ ಲವ್ ಟ್ರ್ಯಾಕ್ ಈ ಸಿನಿಮಾದ ಹೈಲೈಟ್.
ರೋಮಾಂಚನಗೊಂಡ ಹೃದಯಕ್ಕೆ ಸಾಕ್ಷಿ ಬೇಕಾ ಅಂತ ಸಕತ್ ಥ್ರಿಲ್ ಕೊಡುವ ಈ ಡ್ಯುಯೇಟ್ ಸಾಂಗ್ ಪ್ರಮೋಷನ್ ಬಿಡುಗಡೆ ಆಗಿದೆ.. ಇನ್ನು ಪೂರ್ತಿ ಹಾಡು ನಾಳೆ ಬೆಳಗ್ಗೆ ರಿಲೀಸ್ ಆಗ್ತಿದೆ. ಸದ್ಯ ಪ್ರೊಮೊ ಝಲಕ್ ರಿಲೀಸ್ ಆಗ್ತಿದ್ದಂತೆ ಯೂತ್ ಸರ್ಕಲ್‌ನಲ್ಲಿ ಟ್ರೆಂಡಿಂಗ್ ಆಗೋ ಎಲ್ಲಾ ಲಕ್ಷಣಗಳು ಕಾಣ್ತಿದೆ. ಸಂಚಿತ್ ಹೆಗಡೆ ಕಂಠದಲ್ಲಿ ಮೂಡಿ ಬಂದಿರೋದು ಈ ಹಾಡಿಗೆ ಎಮೋಷನಲ್ ಡೆಪ್ತ್ ಅಜನೀಶ್ ಲೋಕನಾಥ್ ಸಂಗೀತ ಪ್ರೀತಿಯ ಫೀಲ್‌ನನ್ನ ಹೃದಯಕ್ಕೆ ತಲುಪಿಸುವಂತೆ ಮಾಡಿದೆ.
ಲ್ಯಾಂಡ್ ಲಾರ್ಡ್ ಸಿನಿಮಾ ಈಗಾಗಲೇ ಹಲವು ಕಾರಣಗಳಿಂದ ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಇದು ಕೇವಲ ರೂಲರ್ ಕಥೆ ಅಲ್ಲ ಮಾಸ್ ಆಕ್ಷನ್, ಸ್ಟ್ರಾಂಗ್ ಎಮೋಷನ್ ಜೊತೆಗೆ ಯೂತ್‌ಫುಲ್ ರೊಮ್ಯಾಂಟಿಕ್ ಲವ್ ಸ್ಟೋರಿಯೂ ಸಿನಿಮಾದ ಪ್ಲಸ್ ಪಾಯಿಂಟ್ ಆಗಿದೆ. ಇದೆ ಜನವರಿ 23ರಂದು ಲ್ಯಾಂಡ್ ಲಾರ್ಡ್ ರಿಲೀಸ್ ಆಗ್ತಿದ್ದು ಸತ್ಯಪ್ರಕಾಶ್ ಹಾಗು ಹೇಮಂತ್ ನಿರ್ಮಾಣ ಮಾಡಿದ್ದಾರೆ..
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
| Reported by: ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್