ದುನಿಯಾ to ಸಿಟಿಲೈಟ್ಸ್.. ಕಟೌಟ್ ದುನಿಯಾದಲ್ಲಿ ವಿಜಯ್

Untitled design (68)

ದುನಿಯಾ ವಿಜಯ್ ತಮ್ಮ ಸಿನಿಮಾಗಳನ್ನ ಎಷ್ಟು ವಿಭಿನ್ನವಾಗಿ ಕಟ್ಟುತ್ತಾರೋ ಅದಕ್ಕಿಂತ ವಿಶಿಷ್ಠವಾಗಿ ಪ್ರಮೋಷನ್ಸ್ ಮಾಡ್ತಾರೆ. ಯೆಸ್.. ಮತ್ತೊಬ್ಬ ಮಗಳನ್ನ ಲಾಂಚ್ ಮಾಡ್ತಿರೋ ಸಿಟಿಲೈಟ್ಸ್ ಸಿನಿಮಾಗಾಗಿ ವಿನೂತನವಾಗಿ ಪ್ರಚಾರ ಕಾರ್ಯಗಳನ್ನ ಮಾಡ್ತಿದ್ದಾರೆ. ಒಂದ್ಕಡೆ ಬಾಡೂಟ ಬೇಯಿಸ್ತಾರೆ. ಮತ್ತೊಂದ್ಕಡೆ ಕಟೌಟ್ ಮೇಕರ್ ಹತ್ರ ಮಾತಾಡ್ತಾರೆ. ಮಗದೊಮ್ಮೆ ಮೆಜೆಸ್ಟಿಕ್ ರೌಂಡ್ಸ್ ಹಾಕ್ತಾರೆ.

ನಟ, ನಿರ್ದೇಶಕ, ನಿರ್ಮಾಪಕ, ಬರಹಗಾರ ದುನಿಯಾ ವಿಜಯ್.. ದುನಿಯಾ ಸಿನಿಮಾದ ಮೂಲಕ ಹೀರೋ ಆಗಿ ಬರೋಬ್ಬರಿ ಎರಡು ದಶಕ ಆಗ್ತಿದೆ. ಅಂದಿನಿಂದ ಇಂದಿನ ತನಕ ಸಾಕಷ್ಟು ಪಳಗಿದ್ದಾರೆ.. ಮಾಗಿದ್ದಾರೆ.. ಚಿತ್ರರಂಗದ ಆಳ, ಅಗಲ ಅರಿತಿದ್ದಾರೆ. ಹಂತ ಹಂತವಾಗಿ ಅವರು ಬೆಳೆದು ಬಂದ ಪರಿ ನಿಜಕ್ಕೂ ಇನ್ಸ್‌ಪಿರೇಷನಲ್. ಅದೆಷ್ಟೋ ಮಂದಿ ಸಿನಿಮೋತ್ಸಾಹಿಗಳಿಗೆ ವಿಜಯ್ ರೋಲ್ ಮಾಡೆಲ್ ಕೂಡ ಹೌದು.

ಹೀರೋ ಆಗಿ ಸದ್ಯ ಎಷ್ಟು ಬ್ಯುಸಿ ಇದ್ದಾರೋ.. ಡೈರೆಕ್ಟರ್ ಆಗಿಯೂ ಕೂಡ ಅಷ್ಟೇ ಬ್ಯುಸಿ ಆಗಿದ್ದಾರೆ ದುನಿಯಾ ವಿಜಯ್. ಹಿರಿಯ ಮಗಳು ರಿತನ್ಯಾನ ಚಿತ್ರರಂಗಕ್ಕೆ ಪರಿಚಯಿಸಿದ ಬಳಿಕ ಸದ್ಯ ತಮ್ಮದೇ ನಿರ್ದೇಶನದ ಸಿಟಿಲೈಟ್ಸ್ ಚಿತ್ರದ ಮೂಲಕ ಕಿರಿ ಮಗಳು ಮೋನಿಷಾ ವಿಜಯ್‌ಕುಮಾರ್‌ನ ಕೂಡ ಇಂಟ್ರಡ್ಯೂಸ್ ಮಾಡ್ತಿದ್ದಾರೆ. ಈಗಾಗ್ಲೇ ಟೀಸರ್ ಜೊತೆ ಸಾಂಗ್ಸ್ ಸಂಚಲನ ಮೂಡಿಸಿದ್ದು, ಸಿನಿಮಾದ ಪ್ರಮೋಷನ್ಸ್ ಸಖತ್ ಡಿಫರೆಂಟ್ ಆಗಿ ಮಾಡ್ತಿದ್ದಾರೆ ವಿಜಯ್.

ವಿಜಯ್ ಅವರ ಸಿನಿಮಾದ ಕಥೆ, ನಿರ್ದೇಶನ ಹಾಗೂ ನಿರೂಪಣೆ ಡಿಫರೆಂಟ್ ಆಗಿ ಇರಲಿದೆ. ಪ್ರಮೋಷನ್ಸ್ ಅದಕ್ಕಿಂತ ಡಿಫರೆಂಟ್. ಸದ್ಯ ವಿನಯ್ ರಾಜ್‌ಕುಮಾರ್-ಮೋನಿಷಾ ಜೋಡಿಯ ಸಿಟಿಲೈಟ್ಸ್‌ ಚಿತ್ರದ ಪ್ರಮೋಷನ್ಸ್ ಅದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ. ಇತ್ತೀಚೆಗೆ ಮೆಜೆಸ್ಟಿಕ್‌‌ನಲ್ಲಿ ಸಿಟಿಲೈಟ್ಸ್ ಕಟೌಟ್ ಮಾಡ್ತಿರೋ ಆರ್ಟ್ ಡೈರೆಕ್ಟರ್‌ನ ಮೀಟ್ ಮಾಡಿದ್ದಾರೆ ದುನಿಯಾ ವಿಜಯ್. ಇಂಟರೆಸ್ಟಿಂಗ್ ಅಂದ್ರೆ 19 ವರ್ಷಗಳ ಹಿಂದೆ ವಿಜಯ್ ದುನಿಯಾ ಚಿತ್ರದಿಂದ ಹೀರೋ ಆದಾಗ ಅವ್ರ ಮೊಟ್ಟ ಮೊದಲ ಕಟೌಟ್ ಮಾಡಿದ್ದು ಇದೇ ಆರ್ಟಿಸ್ಟ್.

ಆ ಕಟೌಟ್ ಮೇಕರ್‌ನ ಕಂಡು ತುಂಬಾ ಖುಷಿ ವ್ಯಕ್ತಪಡಿಸಿದ ವಿಜಯ್ ಕುಮಾರ್, ಅದೇ ಪ್ರೀತಿ, ಗೌರವ ಹಾಗೂ ಅಭಿಮಾನ ವ್ಯಕ್ತಪಡಿಸಿದ್ರು. ಇದಲ್ಲವೇ ಒಬ್ಬ ಸ್ಟಾರ್‌ಗಿರೋ ಹೃದಯ ವೈಶಾಲ್ಯತೆ..?

ಇನ್ನೂ ಕಾಶಿಯಲ್ಲಿ ಸುತ್ತಾಡಿದ ವಿಜಯ್ ಅವರ ಒಂದು ವಿಡಿಯೋ ಕೂಡ ಎಲ್ಲೆಡೆ ವೈರಲ್ ಆಗ್ತಿದೆ. ಅವರು ಎಷ್ಟು ಸರಳ ಹಾಗೂ ವಿರಳ ಸ್ವಭಾವದವರು ಅನ್ನೋದಕ್ಕೆ ಇದು ಕನ್ನಡಿಯಂತಿದೆ.

ಯೆಸ್.. ಇತ್ತೀಚೆಗೆ ಸ್ಯಾಂಡಲ್‌ವುಡ್ ಸಲಗ ವಿಜಯ್ ಕುಮಾರ್ ತಮ್ಮ ತೋಟದಲ್ಲಿ ಮಟನ್ ಬಿರಿಯಾನಿಯನ್ನ ತಮ್ಮ ಕೈಯ್ಯಾರೆ ತಾವೇ ತಯಾರಿಸಿ, ತಮ್ಮ ಆಪ್ತರು ಹಾಗೂ ಊರಿನ ಮಂದಿಗೆ ಉಣಬಡಿಸಿದ್ದಾರೆ. ಅದನ್ನ ಪ್ರಿಪೇರ್ ಮಾಡುವಾಗ ನಟ ವಿನಯ್ ರಾಜ್‌ಕುಮಾರ್ ಹಾಗೂ ಮಗಳು ಮೋನಿಷಾ ಕೂಡ ತುಪ್ಪ ಸುರಿದು ತಂದೆಗೆ ಸಾಥ್ ನೀಡಿರೋದು ವಿಶೇಷ.

ಒಟ್ಟಾರೆ ಸಿಟಿಲೈಟ್ಸ್ ಸಿನಿಮಾ ಇದೇ ಸೆಪ್ಟೆಂಬರ್ 18ರಂದು ಪ್ರೇಕ್ಷಕರ ಮುಂದೆ ಬರ್ತಿದ್ದು, ದುನಿಯಾ ವಿಜಯ್ ಈ ಬಾರಿ ಯಾವ ರೀತಿಯ ಸಂದೇಶ ನೀಡ್ತಾರೆ ಅನ್ನೋ ಕ್ಯೂರಿಯಾಸಿಟಿ ಹೆಚ್ಚಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version