ಕನ್ನಡ ಬಿಗ್‌ಬಾಸ್ ಸೀಸನ್ 10 ರ ರನ್ನರ್-ಅಪ್ ಆಗಿದ್ದ ಡ್ರೋನ್ ಪ್ರತಾಪ್ ತಮ್ಮ ಖ್ಯಾತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಬಿಗ್‌ಬಾಸ್ ಬೆನ್ನಲ್ಲೇ ‘ಭರ್ಜರಿ ಬ್ಯಾಚುಲರ್ಸ್’ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿರುವ ಡ್ರೋನ್ ಪ್ರತಾಪ್, ತಮ್ಮ ಕಾರ್ಯಕ್ಷಮತೆಯಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಈ ಶೋನಲ್ಲಿ ಅವರ ಜೊತೆಗೆ ಮಹಾನಟಿ ಖ್ಯಾತಿಯ ಗಗನಾ ಕಾಣಿಸಿಕೊಂಡಿದ್ದು, ಅಭಿಮಾನಿಗಳಿಗೆ ಖುಷಿಯ ಸಂಗತಿಯಾಗಿದೆ.‘ಭರ್ಜರಿ ಬ್ಯಾಚುಲರ್ಸ್’ ಶೋನಲ್ಲಿ ಈ ವಾರ ಜಡ್ಜ್‌ಗಳು ಎಲ್ಲ ಟಾಪ್ 10 ಬ್ಯಾಚುಲರ್ಸ್‌ಗೆ ಒಂದು ವಿಶೇಷ ಟಾಸ್ಕ್ ನೀಡಿದ್ದರು. ‘ಪ್ರಪೋಸಲ್ ರೌಂಡ್’, ಈ ರೌಂಡ್‌ನಲ್ಲಿ ಒಬ್ಬೊಬ್ಬರು ತಮ್ಮ ಮೆಂಟರ್‌ಗಳಿಗೆ ವಿಭಿನ್ನ ಥೀಮ್‌ಗಳಲ್ಲಿ ಸರ್ಪ್ರೈಸ್ ಪ್ರಪೋಸಲ್ ಮಾಡಿದ್ದಾರೆ. ಡ್ರೋನ್ ಪ್ರತಾಪ್ ಕೂಡ ತಮ್ಮ ಮೆಂಟರ್ ಗಗನಾಗೆ ಅತ್ಯಂತ ಕ್ಯೂಟ್ ಆಗಿ ಪ್ರಪೋಸ್ ಮಾಡಿದ್ದಾರೆ.
ಡ್ರೋನ್ ಪ್ರತಾಪ್ ಗಗನಾಳ ಕಣ್ಣಿಗೆ ಬಟ್ಟೆ ಕಟ್ಟಿ, ವೇದಿಕೆಗೆ ಕರೆತಂದರು. ಕಣ್ಣಿಗೆ ಕಟ್ಟಿದ ಬಟ್ಟೆಯನ್ನು ತೆಗೆದ ತಕ್ಷಣ, ಗಗನಾ ಡ್ರೋನ್‌ನ ಸರ್ಪ್ರೈಸ್ ನೋಡಿ ಖುಷಿಯಿಂದ ಮೂಕವಿಸ್ಮಿತರಾದರು. ಡ್ರೋನ್ ಒಂದು ಪುಟ್ಟ ಮರದ ಮೇಲೆ ಗಗನಾಳ ಕುಟುಂಬದ ಎಲ್ಲ ಸದಸ್ಯರ ಫೋಟೋಗಳನ್ನು ಜೋಡಿಸಿದ್ದರು. ಆದರೆ, “ಇದರಲ್ಲಿ ಯಾರೋ ಒಬ್ಬರು ಮಿಸ್ ಆಗಿದ್ದಾರೆ, ಗೆಸ್ ಮಾಡಿ” ಎಂದು ಡ್ರೋನ್ ಕೇಳಿದಾಗ, ಗಗನಾ “ನನ್ನ ಲೈಫ್ ಪಾರ್ಟನರ್” ಎಂದು ಉತ್ತರಿಸಿದರು. ಆಗ ಡ್ರೋನ್ ತಮ್ಮ ಫೋಟೋವನ್ನು ಗಗನಾಳ ಕೈಗೆ ಕೊಟ್ಟು, “ನನಗೂ ನಿಮ್ಮ ಕುಟುಂಬದೊಂದಿಗೆ ಒಂದು ಚಿಕ್ಕ ಜಾಗ ಕೊಡ್ತೀರಾ?” ಎಂದು ಭಾವನಾತ್ಮಕವಾಗಿ ಕೇಳಿದರು. ಈ ಮಾತು ಕೇಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರೂ ಶಾಕ್ ಆಗಿದ್ದಾರೆ.ಡ್ರೋನ್ ಪ್ರತಾಪ್‌ರ ಈ ಕ್ಯೂಟ್ ಪ್ರಪೋಸಲ್ ಗಗನಾ ಮಾತ್ರವಲ್ಲ, ಕಾರ್ಯಕ್ರಮದ ಜಡ್ಜ್‌ಗಳು ಮತ್ತು ಪ್ರೇಕ್ಷಕರಿಗೂ ಖುಷಿ ಕೊಟ್ಟಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಸಂಚಿಕೆಯ ವಿಡಿಯೋ ಕ್ಲಿಪ್‌ಗಳು ವೈರಲ್ ಆಗುತ್ತಿದ್ದು, ಅಭಿಮಾನಿಗಳು ಡ್ರೋನ್‌ನ ಸೃಜನಶೀಲತೆಯನ್ನು ಶ್ಲಾಘಿಸುತ್ತಿದ್ದಾರೆ. ‘ಭರ್ಜರಿ ಬ್ಯಾಚುಲರ್ಸ್’ ಶೋ ದಿನದಿಂದ ದಿನಕ್ಕೆ ಜನಪ್ರಿಯತೆಯನ್ನು ಗಳಿಸುತ್ತಿದ್ದು, ಡ್ರೋನ್ ಮತ್ತು ಗಗನಾಳ ಜೋಡಿ ಎಲ್ಲರ ಗಮನ ಸೆಳೆಯುತ್ತಿದೆ.