ವರ್ಷಕ್ಕೊಂದು ಚಿತ್ರ..ಕಷ್ಟ ಅನ್ನೋರಿಗೆ ಶಿವಣ್ಣನೇ ಸ್ಫೂರ್ತಿ

ಅವ್ರ ವಯಸ್ಸು ಮಾತ್ರ 63.. ಆದ್ರೆ ಎನರ್ಜಿ 23ರ ಪ್ರಾಯ

Untitled design 2026 05 20T185054.078

ಕ್ಯಾನ್ಸರ್‌ನೇ ಗೆದ್ದು ಬಂದಿರೋ ಲಿವಿಂಗ್ ಲೆಜೆಂಡ್ ಡಾ. ಶಿವರಾಜ್‌‌‌ಕುಮಾರ್ ಜೀವನೋತ್ಸಾಹ ಹಾಗೂ ಸಿನಿಮೋತ್ಸಾಹ ಈಗ ಡಬಲ್ ಆಗಿದೆ. ಅವರ ಎನರ್ಜಿಗೆ ಇಡೀ ಸ್ಯಾಂಡಲ್‌ವುಡ್ ಸಲಾಂ ಹೊಡೆಯುತ್ತಿದೆ. ಬ್ಯಾಕ್ಟು ಬ್ಯಾಕ್ ಸಿನಿಮಾಗಳನ್ನ ಅನೌನ್ಸ್ ಮಾಡಿರೋ ಸೆಂಚುರಿ ಸ್ಟಾರ್, ಮುಂದಿನ 6 ತಿಂಗಳ ಕಾಲ ಜೋರಾಗಿ ಅಬ್ಬರಿಸಲಿದ್ದಾರೆ. ಬರೋಬ್ಬರಿ 5 ಪ್ರಾಜೆಕ್ಟ್‌‌ಗಳಿಂದ ಬಾಕ್ಸ್ ಆಫೀಸ್ ಸೌಂಡ್ ಮಾಡೋಕೆ ಬರ್ತಿರೋ ಸ್ಪೆಷಲ್ ಸ್ಟೋರಿ ಇಲ್ಲಿದೆ.

ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ ಎನರ್ಜಿಯನ್ನ ಮ್ಯಾಚ್ ಮಾಡೋಕೆ ಈ ಇಂಡಸ್ಟ್ರಿಯಲ್ಲೇ ಯಾರ ಕೈಲೂ ಸಾಧ್ಯವಿಲ್ಲ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಇವತ್ತಿನ ಜನರೇಷನ್‌ನ ಯಂಗ್ ಸ್ಟಾರ್‌ಗಳು ವರ್ಷಕ್ಕೊಂದು ಸಿನಿಮಾ ಮಾಡೋಕೆ ಯೋಚನೆ ಮಾಡ್ತಿರೋವಾಗ, 60 ದಾಟಿದ್ರೂ ಶಿವಣ್ಣ ಮಾತ್ರ ನನಗೂ ವಯಸ್ಸಿಗೂ ಸಂಬಂಧವೇ ಇಲ್ಲ ಅನ್ನೋ ತರ ಶೂಟಿಂಗ್ ಮುಗಿಸಿ ನಿಂತಿದ್ದಾರೆ. ಕಳೆದ ವರ್ಷ ಶಿವಣ್ಣ ಹೆಲ್ತ್ ಅಪ್ಸೆಟ್ ಆಗಿ, ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾರೆ ಅನ್ನೋ ಸುದ್ದಿ ಕೇಳಿ ಇಡೀ ಚಿತ್ರರಂಗವೇ ಕಂಗಾಲಾಗಿತ್ತು. ಆದ್ರೆ, ಅಭಿಮಾನಿಗಳ ಪ್ರಾರ್ಥನೆ ಮತ್ತು ಶಿವಣ್ಣನ ಅದ್ಭುತ ವಿಲ್ ಪವರ್‌ನಿಂದ ಮೃತ್ಯುಂಜಯನಂತೆ ಎದ್ದು ಬಂದಿರೋ ಸೆಂಚುರಿ ಸ್ಟಾರ್, ಈಗ 2026ರ ಸೆಕೆಂಡ್ ಹಾಫ್‌ನಲ್ಲಿ ಗಲ್ಲಾಪೆಟ್ಟಿಗೆ ಧೂಳೀಪಟ ಮಾಡೋಕೆ ಕೌಂಟ್‌ಡೌನ್ ಶುರು ಆಗಿದೆ.

​ಯೆಸ್.. ಕಳೆದ ಐದಾರು ತಿಂಗಳುಗಳಿಂದ ಸೈಲೆಂಟ್ ಆಗಿದ್ದ ಸ್ಯಾಂಡಲ್‌ವುಡ್, ಈಗ ಜೂನ್ ತಿಂಗಳಿಂದ ಡಿಸೆಂಬರ್‌ವರೆಗೂ ಥಿಯೇಟರ್‌ಗಳಲ್ಲಿ ಶಿವಣ್ಣನದ್ದೇ ಹವಾ ಎನ್ನುವಂತಾಗಿದೆ. ಮುಂದಿನ 6 ತಿಂಗಳಲ್ಲಿ ಬರೋಬ್ಬರಿ 5 ಬಿಗ್ ಬಜೆಟ್ ಸಿನಿಮಾಗಳನ್ನ ಉರುಳಿಸೋಕೆ ಕಿಂಗ್ ಸ್ಕೆಚ್ ಹಾಕಿದ್ದಾರೆ. ಗ್ಲೋಬಲ್ ಲೆವೆಲ್ ಸಿನಿಮಾ ‘ಪೆದ್ದಿ’ಯಿಂದ ಹಿಡಿದು ಎಮೋಷನಲ್ ಡ್ರಾಮಾ ‘ಡ್ಯಾಡ್’ ವರೆಗೂ ಶಿವಣ್ಣನ ಲುಕ್, ಗೆಟಪ್ ಮತ್ತು ಮಾಸ್ ಖದರ್ ನೋಡೋಕೆ ಫ್ಯಾನ್ಸ್ ಸಖತ್ ರೋಮಾಂಚನಗೊಂಡು ಕಾಯುತ್ತಿದ್ದಾರೆ. ಹಾಗಾದ್ರೆ ಆ ಐದು ಧಮಾಕಾ ಸಿನಿಮಾಗಳು ಯಾವ್ಯಾವು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.

ಜೂನ್ 4 ಕ್ಕೆ ತೆಲುಗಿನ ಮೆಗಾ ಪವರ್‌ಸ್ಟಾರ್ ರಾಮ್ ಚರಣ್ ಹಾಗು ಶಿವಣ್ಣ ಕಾಂಬಿನೇಶನ್ ‘ಪೆದ್ದಿ’ ವರ್ಲ್ಡ್‌ವೈಡ್ ರಿಲೀಸ್ ಆಗ್ತಿದೆ. ಇದರಲ್ಲಿ ಶಿವಣ್ಣ ಕೇವಲ ಅತಿಥಿ ಪಾತ್ರ ಮಾಡಿಲ್ಲ, ಬದಲಿಗೆ ಕಥೆಯನ್ನೇ ತಿರುಗಿಸುವ ‘ಗೌರ್ ನಾಯ್ಡು’ ಅನ್ನೋ ಪವರ್‌ಫುಲ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇನ್ನು ಜೈಲರ್’ ಪಾರ್ಟ್-1 ನಲ್ಲಿ ಶಿವಣ್ಣನ ಆ 10 ನಿಮಿಷದ ಮಾಸ್ ಎಂಟ್ರಿಗೆ ಸೌತ್ ಇಂಡಿಯಾ ಥಂಡಾ ಹೊಡೆದಿತ್ತು. ತಲೈವಾ ರಜನಿಕಾಂತ್ ಮತ್ತು ಶಿವಣ್ಣನ ಕಾಂಬಿನೇಷನ್ ಕ್ರಿಯೇಟ್ ಮಾಡಿರೋ ಆ ಹೈಪ್ ಬೆನ್ನಲ್ಲೇ ಈಗ ‘ಜೈಲರ್-2’ ಕೂಡ ರಿಲೀಸ್‌‌ಗೆ ರೆಡಿ ಇದೆ. ಆಗಸ್ಟ್‌ಗೆ ಬರಬೇಕಿದ್ದ ಈ ಸಿನಿಮಾ ಸೆಪ್ಟೆಂಬರ್ 4ರಂದು ಬೆಳ್ಳಿಪರದೆ ಮೇಲೆ ಶಿವಣ್ಣನ ಅಸಲಿ ಖದರ್ ತೋರಿಸಲು ರೆಡಿಯಾಗಿದೆ.

ಪವನ್ ಒಡೆಯರ್ ಹಾಗೂ ಶಿವಣ್ಣ ಕಾಂಬೋನ ಬೇಲ್ ಸಿನಿಮಾ ಕೂಡ ವರಮಹಾಲಕ್ಷ್ಮಿ ಹಬ್ಬಕ್ಕೆ ಬಿಗ್ ಸ್ಕ್ರೀನ್ ಎಂಟ್ರಿ ಕೊಡೋಕೆ ಲೈನಪ್ ಆಗಿದೆ. ಇನ್ನೂ ಕ್ಲಾಸ್ ಡೈರೆಕ್ಟರ್ ಹೇಮಂತ್ ಎಂ ರಾವ್ ಮತ್ತು ಶಿವಣ್ಣ ಮೊದಲ ಬಾರಿ ಕೈ ಜೋಡಿಸಿರೋ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾದ ಮೇಲೂ ಬೆಟ್ಟದಷ್ಟು ನಿರೀಕ್ಷೆ ಇದೆ. ಇದರಲ್ಲಿ ‘ಏಜೆಂಟ್ ಪ್ರಕಾಶ್’ ಆಗಿ ಶಿವಣ್ಣ ಮತ್ತು ‘ಏಜೆಂಟ್ ಶಂಕರ್’ ಆಗಿ ಡಾಲಿ ಧನಂಜಯ್ ನಟಿಸುತ್ತಿದ್ದು, ಇದೊಂದು ರೆಟ್ರೋ-ಡಿಸ್ಕೋ ಶೈಲಿಯ ಸ್ಪೈ ಥ್ರಿಲ್ಲರ್ ಕಥೆ ಆಗಿರಲಿದೆ. ಇದರ ಬೆನ್ನಲ್ಲೇ ಅನಿಲ್ ಕನ್ನೆಗಂಟಿ ನಿರ್ದೇಶನದ ‘ಡ್ಯಾಡ್’ ಸಿನಿಮಾ ಕೂಡ ಇದೇ ವರ್ಷದ ಕೊನೆಯಲ್ಲಿ ರಿಲೀಸ್ ಆಗಲಿದೆ. ಗಮ್ಮಡಿ ನರಸಯ್ಯ ಶೂಟಿಂಗ್ ಹಂತದಲ್ಲಿದೆ. ಒಟ್ಟಿನಲ್ಲಿ ಕ್ಯಾನ್ಸರ್ ಗೆದ್ದು ಬಂದ ಸಿಂಹದ ಬೇಟೆ ಈ ಆರು ತಿಂಗಳು ನೆಕ್ಸ್ಟ್ ಲೆವೆಲ್‌ಗೆ ಇರಲಿದೆ ಅನ್ನೋದು ಮಾತ್ರ ಗ್ಯಾರಂಟಿ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

Exit mobile version