ನಟ ಶಿವರಾಜ್‌ಕುಮಾರ್ ಸಿನಿಯಾನಕ್ಕೆ 40 ವರ್ಷ..ಕನ್ನಡಿಗರಲ್ಲಿ ಹರುಷ

ಸಾವನ್ನೇ ಗೆದ್ದು ಬಂದ ದೊಡ್ಮನೆಯ ಕುಲ ತಿಲಕ ಶಿವಣ್ಣ..!

Untitled design 2026 02 20T173732.575

ಕರುನಾಡ ಚಕ್ರವರ್ತಿ ಡಾ. ಶಿವರಾಜ್ಕುಮಾರ್‌‌ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಬರೋಬ್ಬರಿ 40 ವರ್ಷಗಳಾಗಿದೆ. ಸಾವನ್ನೇ ಗೆದ್ದು ಬಂದು ಚಿರಂಜೀವಿ ಅನಿಸಿಕೊಂಡಿರೋ ಮಿಸ್ಟರ್ ಮೃತ್ಯುಂಜಯ ಒಂಥರಾ ಕಸ್ತೂರಿ ನಿವಾಸದ ಕುಲ ತಿಲಕ. ಲಿವಿಂಗ್ ಲೆಜೆಂಡ್ ಶಿವಣ್ಣನಿಗಾಗಿ ಫ್ಯಾನ್ಸ್ ಮಾಡಿದ್ದೇನು ಅನ್ನೋದಕ್ಕೆ ಉತ್ತರ ಇಲ್ಲಿದೆ ನೋಡಿ.

1986ರಲ್ಲಿ ಆನಂದ್ ಸಿನಿಮಾದಿಂದ ಶುರುವಾದ ಶಿವರಾಜ್ಕುಮಾರ್ ಅವ್ರ ಸಿನಿ ಜರ್ನಿ, ಸದ್ಯ ರಾಮ್ ಚರಣ್ ಜೊತೆಗಿನ ಪೆದ್ದಿ, ರಜನೀಕಾಂತ್ ಜೊತೆಗಿನ ಜೈಲರ್-2, ಡ್ಯಾಡ್, 666 ಆಪರೇಷನ್ ಡ್ರೀಮ್ ಥಿಯೇಟರ್‌‌ವರೆಗೂ ಬಂದು ನಿಂತಿದೆ. 64ರ ಹರೆಯದಲ್ಲೂ ಶಿವಣ್ಣನ ಸಿನಿಮೋತ್ಸಾಹ ಹಾಗೂ ಜೀವನೋತ್ಸಾಹ ಮಾತ್ರ 24ರ ಚಿರ ಯುವಕನಂಥದ್ದು. ಯೆಸ್.. ಸದಾ ಲವಲವಿಕೆಯಿಂದ ಇರೋ ಶಿವಣ್ಣ, ತಾನು 140 ಸಿನಿಮಾ ಮಾಡಿರೋ ಸೂಪರ್ ಸ್ಟಾರ್ ಅನ್ನೋ ಯಾವುದೇ ಅಹಂ, ಸ್ಟಾರ್ಡಮ್ ಇಲ್ಲದೆ, ಮಗುವಿನಷ್ಟೇ ನಿಷ್ಕಲ್ಮಶವಾಗಿ ಇದ್ದಾರೆ.

ಇತ್ತೀಚೆಗೆ ಕ್ಯಾನ್ಸರ್‌‌ಗೆ ತುತ್ತಾಗಿದ್ದ ಶಿವಣ್ಣ ಫಾರಿನ್ಗೆ ಹೋಗಿ ಸರ್ಜರಿ ಮಾಡಿಸಿಕೊಂಡು, ಸಕಾಲಕ್ಕೆ ಟ್ರೀಟ್ಮೆಂಟ್ ಪಡೆದ ಕಾರಣ ಸಾವನ್ನೇ ಗೆದ್ದು ಬಂದಿದ್ದಾರೆ. ಶಿವಣ್ಣ ನಿಜಕ್ಕೂ ಮಿಸ್ಟರ್ ಮೃತ್ಯುಂಜಯ. ಒಂಥರಾ ಚಿರಂಜೀವಿ. ಅವ್ರನ್ನ ಆರಾಧಿಸೋ ಇಡೀ ಕರುನಾಡೇ ಶಿವಣ್ಣ ಮತ್ತೆ ಎಂದಿನಂತೆ ಆ್ಯಕ್ಟೀವ್ ಆಗಿದ್ದು ಕಂಡು ಸಂಭ್ರಮಿಸಿದೆ. ಅದ್ರಲ್ಲೂ ದೊಡ್ಮನೆಯ ಅಭಿಮಾನಿಗಳು, ಈ ದೊಡ್ಮನೆ ದೊರೆಯ 40 ವರ್ಷಗಳ ಸಾರ್ಥಕ ಜರ್ನಿಗೆ ಮನೆಗೇ ತೆರಳಿ ಕೇಕ್ ಕಟ್ ಮಾಡಿಸಿ, ತಮ್ಮ ಅಭಿಮಾನ ವ್ಯಕ್ತಪಡಿಸಿದ್ದಾರೆ.

ಸದಾ ಬೆನ್ನೆಲುಬಾಗಿರೋ ಗೀತಾ ಶಿವರಾಜ್‌ಕುಮಾರ್ ಸೇರಿದಂತೆ ನೂರಾರು ಮಂದಿ ಅಭಿಮಾನಿ ದೇವರುಗಳ ಜೊತೆ ಕೇಕ್ ಕಟ್ ಮಾಡಿ, ಆ ಖುಷಿ ಹಂಚಿಕೊಂಡ ಶಿವಣ್ಣ, ನಾನು ಧನ್ಯ ಅಂತ ಸಾರ್ಥಕಭಾವ ವ್ಯಕ್ತಪಡಿಸಿದ್ದಾರೆ. ಇದು ನಿಜಕ್ಕೂ ಅಣ್ಣಾವ್ರಿಂದಲೇ ಬಂದಂತಹ ಗುಣಗಳಾಗಿದ್ದು, ಶಿವಣ್ಣ ಮತ್ತಷ್ಟು ಕಾಲ ನಮ್ಮನ್ನ ರಂಜಿಸುತ್ತಲೇ ಇರಲಿ ಅನ್ನೋದು ಏಳು ಕೋಟಿ ಕನ್ನಡಿಗರ ಆಶಯವಾಗಿದೆ. ನಿಮ್ಮೀ 4 ದಶಕಗಳ ಸಿನಿಯಾನಕ್ಕೆ ಪ್ರೀತಿಪೂರ್ವಕ ಅಭಿನಂದನೆಗಳು ಶಿವಣ್ಣ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version