ತಲೈವಾ ರಜನೀಕಾಂತ್ ಹಾಗೂ ಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್ 4 ದಶಕಗಳ ನಂತ್ರ ಒಟ್ಟಿಗೆ ಒಂದೇ ಸಿನಿಮಾ ಮಾಡ್ತಿರೋದ್ರ ಕ್ಯಾರೆಕ್ಟರ್ ಇಂಟ್ರಡಕ್ಷನ್ ಟೀಸರ್ ಲಾಂಚ್ ಆಗಿತ್ತು. ಇದೀಗ ಅದೇ ಶೈಲಿಯಲ್ಲಿ ಡಾ. ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಎಐ ಟೀಸರ್ ಸೋಶಿಯಲ್ ಮೀಡಿಯಾದಲ್ಲಿ ಟಾಕ್ ಆಫ್ ದಿ ಟೌನ್ ಆಗ್ತಿದೆ. ಅದರ ಫುಲ್ ಡಿಟೈಲ್ಸ್ ಇಲ್ಲಿದೆ..
- ರಜನಿ-ಕಮಲ್ ಟೀಸರ್ ರೀತಿ ರಾಜ- ರಾಜರತ್ನ ಮಿಂಚು..!
- AIನಲ್ಲಿ ಡಾ. ರಾಜ್‌ಕುಮಾರ್- ಪುನೀತ್ ರಾಜ್‌ಕುಮಾರ್
- ದೇವತಾ ಮನುಷ್ಯರನ್ನ ನೋಡೋಕೆ ಎರಡು ಕಣ್ಣು ಸಾಲಲ್ಲ
- AI ಜನರೇಟೆಡ್ ಆದ್ರೂ ಅಭಿಮಾನಿ ದೇವರುಗಳಿಗೆ ಹಬ್ಬ..!
ಜೈಲರ್ ಸಾರಥಿ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದಲ್ಲಿ ಸೂಪರ್ ಸ್ಟಾರ್‌ಗಳಾದ ರಜನೀಕಾಂತ್ ಹಾಗೂ ಕಮಲ್ ಹಾಸನ್ ನಾಲ್ಕು ದಶಕಗಳ ನಂತ್ರ ತೆರೆ ಹಂಚಿಕೊಳ್ತಿದ್ದಾರೆ. ಅವ್ರ ರೀ-ಯೂನಿಯನ್ ಟೀಸರ್ ಇತ್ತೀಚೆಗೆ ರಿಲೀಸ್ ಆಗಿ ಸಂಚಲನ ಮೂಡಿಸಿತ್ತು. ಅನಿರುದ್ದ್ ರವಿಚಂದರ್ ಸಮೇತ ಡೈರೆಕ್ಟರ್ ನೆಲ್ಸನ್ ಅವರಿಬ್ಬರೂ ಲೆಜೆಂಡ್ಸ್‌ನ ಒಟ್ಟೊಟ್ಟಿಗೆ ಒಂದೇ ಫ್ರೇಮ್‌ಗೆ ತಂದು ತೋರಿಸುವ ಪ್ರಯತ್ನ ಮಾಡಿದ್ರು.
ಇದೀಗ ಅದೇ ಶೈಲಿಯಲ್ಲಿ ಡಾ. ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಅವರ ರೀ-ಯೂನಿಯನ್ ಆದ್ರೆ ಹೇಗಿರುತ್ತೆ ಅನ್ನೋದ್ರ ಟೀಸರ್ ಝಲಕ್ ಒಂದು ಸಖತ್ ವೈರಲ್ ಆಗ್ತಿದೆ. ಇದು ರಿಯಲ್ ಅಲ್ಲ. ಟೆಕ್ನಾಲಜಿಯಿಂದ ಸೃಷ್ಟಿಸಲ್ಪಟ್ಟ ಎಐ ಜನರೇಟೆಡ್ DRK-PRK ರೀ ಯೂನಿಯನ್ ಟೀಸರ್ ಝಲಕ್.
ಆಹಾ.. ನೋಡೋಕೆ ಎರಡು ಕಣ್ಣು ಸಾಲಲ್ಲ ಅಲ್ವಾ..? ಯೆಸ್.. ನಟಸಾರ್ವಭೌಮ ಹಾಗೂ ನಾಟ್ಯ ಸಾರ್ವಭೌಮರ ಈ ಮಹಾ ಸಂಗಮದ ಚಿತ್ರ ಈಗ ಬಂದ್ರೆ ಹೇಗಿರುತ್ತೆ ಅನ್ನೋ ಸಣ್ಣ ಕ್ಯೂರಿಯಾಸಿಟಿ ಈ ಟೀಸರ್ ಮೂಡಿಸಿದೆ. ಅಂದಹಾಗೆ ಡಾ. ರಾಜ್ ಹಾಗೂ ರಾಜರತ್ನರ ಸಿನಿಮಾಗಳು ಸಾಲು ಸಾಲು ಬಂದಿವೆ. ಆದ್ರೆ ಆಗ ಪುನೀತ್ ರಾಜ್‌ಕುಮಾರ್ ಬಾಲನಟನಾಗಿದ್ರು. ಅವರಿಬ್ಬರ ಕಾಂಬೋ ಅಂದ್ರೆ ಆ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಎಂದರ್ಥ. ಆದ್ರೆ ಅಪ್ಪು ಚಿತ್ರದ ಮೂಲಕ ಹೀರೋ ಆದ ಪುನೀತ್ ಜೊತೆ ಅಣ್ಣಾವ್ರು ಮತ್ತೆ ನಟಿಸಲೇ ಇಲ್ಲ.
ಆದ್ರೀಗ ಈ ಎಐ ಟೀಸರ್ ಮಾತ್ರ ಸದ್ಯ ದೊಡ್ಮನೆಯ ಅಭಿಮಾನಿ ದೇವರುಗಳ ಜೊತೆ ಇಡೀ ಕರುನಾಡಿನ ಮಂದಿಗೆ ಖುಷಿ ಕೊಟ್ಟಿದೆ. ಬಹುಶಃ ತಂತ್ರಜ್ಞಾನದ ಸಹಾಯದಿಂದ ಮುಂದಿನ ದಿನಗಳಲ್ಲಿ ಇವರಿಬ್ಬರ ಸಿನಿಮಾ ಬಂದ್ರೂ ಅಚ್ಚರಿಯಿಲ್ಲ. ಯಾಕಂದ್ರೆ ಎಐ ಜನರೇಟೆಡ್‌ನಲ್ಲೇ ತಯಾರಾದ ಸೀರೀಸ್‌ಗಳು ಬರಲಾರಂಭಿಸಿವೆ. ಅಣ್ಣಾವ್ರು-ಅಪ್ಪು ಬದುಕಿದ್ದಾಗ ಹೇಗೆ ನೈಜ ಹಾಗೂ ಸ್ವಾಭಾವಿಕವಾಗಿ ನಟಿಸ್ತಿದ್ರೋ, ಅದೇ ರೀತಿ ಟೆಕ್ನಾಲಜಿಯಿಂದಲೂ ಕ್ರಿಯೇಟ್ ಮಾಡಬಹುದು. ಹೀಗಾಗಿ ಅವರಿಬ್ಬರ ಕಾಂಬೋ ಸಿನಿಮಾ ಅಥ್ವಾ ಸೀರೀಸ್ ಬರಲಿ ಅನ್ನೋದು ನಮ್ಮ ಆಶಯ.
ಅಂದಹಾಗೆ ಇದೇ ಮಾರ್ಚ್ 17ಕ್ಕೆ ಅಪ್ಪು ಬರ್ತ್ ಡೇ. 2021ರಲ್ಲಿ ನಮ್ಮನ್ನಗಲಿದೆ ಅಪ್ಪು, ಅದೇ ಅವರು ಸೆಲೆಬ್ರೇಟ್ ಮಾಡಿಕೊಂಡ ಕಟ್ಟ ಕಡೆಯ ಜನುಮ ದಿನ ಕೂಡ. ಅಂದಿನಿಂದ ಪ್ರತೀ ವರ್ಷದ ಬರ್ತ್ ಡೇಗೆ ಒಂದೊಂದು ಸಿನಿಮಾ ರೀ-ರಿಲೀಸ್ ಆಗ್ತಿದ್ದು, ಈ ಬಾರಿ ಆಕಾಶ್ ಸಿನಿಮಾ ಮರು ಬಿಡುಗಡೆ ಆಗುವ ಮೂಲಕ ಬೆಳ್ಳಿತೆರೆ ಬೆಳಗಲಿದೆ. ಮಾರ್ಚ್ 13ರಂದೇ ಸಿನಿಮಾ ರಿಲೀಸ್ ಆಗ್ತಿದ್ದು, ನಿರ್ದೇಶಕ ಮಹೇಶ್ ಬಾಬು ಕೂಡ ನಮ್ಮ ಗ್ಯಾರಂಟಿ ನ್ಯೂಸ್ ಜೊತೆ ಈ ಬಗ್ಗೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ್ದಾರೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
