• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, September 28, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ವಿಶೇಷ

ಗಾನ ಗಂಧರ್ವ ಡಾ.ರಾಜ್ ಹಾಡಿದ ಹಾಡುಗಳಲ್ಲಿ ಶಾಸ್ತ್ರೀಯ ಸಂಗೀತ..!

ಗಾನ ಗಂಧರ್ವ ಡಾ.ರಾಜ್ ಹಾಡಿದ ಹಾಡುಗಳಲ್ಲಿ ಶಾಸ್ತ್ರೀಯ ಸಂಗೀತ..!

ಮಹೇಶ್ ಕುಮಾರ್ ಕೆ. ಎಲ್ by ಮಹೇಶ್ ಕುಮಾರ್ ಕೆ. ಎಲ್
March 1, 2025 - 3:05 pm
in ವಿಶೇಷ, ಸಿನಿಮಾ
0 0
0
Sanjay Nag Comments On Dr Rajkumar Singing 1740623954

ಡಾ.ರಾಜ್ ಕುಮಾರ್. ಅಭಿನಯದ ವಿಷ್ಯದಲ್ಲಿ ಅಣ್ಣಾವ್ರಿಗೆ ಸರಿಸಾಟಿಯೇ ಇಲ್ಲ ಬಿಡಿ. ಭಾರತಕ್ಕೊಬ್ಬರೇ ನಟಸಾರ್ವಭೌಮ. ಗಾಯನದ ವಿಷಯದಲ್ಲಿ ಗಾನಗಂಧರ್ವ. ಗಾನಕೋಗಿಲೆ ಅಂತೆಲ್ಲ ಕರೆಸಿಕೊಳ್ಳೋ ಡಾ.ರಾಜ್ ಕುಮಾರ್, ಹಾಡಿಗಾಗಿಯೇ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿರೋ ಏಕೈಕ ಕಲಾವಿದ. ಅಂತಹ ಗಾನಗಂಧರ್ವನ ಹಾಡು ಕೇಳೋದು ಅಂದ್ರೆ ಕರ್ಣ ಕಠೋರ ಅಂತಾ ಒಬ್ಬ ವ್ಯಕ್ತಿ ಟ್ವೀಟ್ ಮಾಡಿದ್ದಾನೆ. ಹಾಗೆ ಮಾಡಿರೋ ವ್ಯಕ್ತಿಯ ಹೆಸರು ಸಂಜಯ್‌ ನಾಗ್.‌ ಆಮೇಲೆ ಕ್ಷಮೆಯನ್ನೂ ಕೇಳಿದ್ದಾಗಿದೆ.

Images (3)

RelatedPosts

‘ಗತವೈಭವ’ ಚಿತ್ರದ ಟೀಸರ್ ಲಾಂಚ್: ನಾಲ್ಕು ಪಾತ್ರಗಳಲ್ಲಿ ಆಶಿಕಾ ರಂಗನಾಥ್

ಸವದತ್ತಿ ಎಲ್ಲಮ್ಮನಾದ ಬೃಂದಾ.. ‘ಮಾರುತ’ ಮಹಾಗಮನ

ದಚ್ಚುನ ಬಿಟ್ಟು ಸುದೀಪ್ ಕ್ಯಾಂಪ್ ಸೇರಿದ್ರಾ ತರುಣ್ ಸುಧೀರ್..?

ಎಐ ಫೋಟೋ ವಿವಾದ: ನಿಜವಾದ ಚಿತ್ರಣದೊಂದಿಗೆ ಟಾಂಗ್ ಕೊಟ್ಟ ಸಾಯಿಪಲ್ಲವಿ

ADVERTISEMENT
ADVERTISEMENT

ಇಲ್ಲಿ ನಾವು ಹೇಳುತ್ತಿರುವುದು ಡಾ.ರಾಜ್ ಕುಮಾರ್ ಅನ್ನೋ ಗಾನಗಂಧರ್ವ, ಸುಖಾಸುಮ್ಮನೆ ಏಕಾಏಕಿ ಸೃಷ್ಟಿ ಆದವರಲ್ಲ. ಸಂಗೀತ ಸರಸ್ವತಿಯ ಪುತ್ರನ ಗಾಯನ ಪ್ರತಿಭೆಗೆ ಇಡೀ ನಾದಲೋಕವೇ ಕೊಂಡಾಡುತ್ತದೆ. ಅವರು ಹಾಡಿರೋ ಹಾಡುಗಳು, ಆ ಹಾಡುಗಳಿಗೆ ಬಳಸಿರೋ ಶಾಸ್ತ್ರೀಯ ಸಂಗೀತದ ಸ್ವರ, ರಾಗಗಳು, ಆ ಹಾಡುಗಳನ್ನ ಶಾಸ್ತ್ರೀಯ ಸಂಗೀತ ಪ್ರವೀಣರೂ ಮೆಚ್ಚುವಂತೆ ಹಾಡಿದ್ದಾರೆ. ಅಂತಹ ಹಾಡುಗಳ ಒಂದು ಚಿಕ್ಕ ಪಟ್ಟಿ ಇಲ್ಲಿ ಕೊಡ್ತಾ ಇದ್ದೀವಿ. ಸಂಗೀತ ಜ್ಞಾನ ಇರುವವರ ಮಾಹಿತಿ ಅಧರಿಸಿ ನೀಡಿರುವ ಮಾಹಿತಿ ಇದು.

1280x720 De07f371 7ed9 4237 B1d2 F83c24f3d23f

ನೀವು ಆಕಸ್ಮಿಕ ಸಿನಿಮಾ ನೋಡಿರ್ತೀರಲ್ಲ. ಆ ಸಿನಿಮಾದಲ್ಲಿ “ಅನುರಾಗದಾ ಭೋಗಾ.. ಸುಖದಾ..” ಹಾಡು ಇರುವುದು ಶುದ್ಧಸಾವೇರಿ ರಾಗದಲ್ಲಿ. ಇನ್ನು ಶ್ರಾವಣ ಬಂತು ಚಿತ್ರದಲ್ಲಿ ಬರುವ “ಇದೇ ರಾಗದಲ್ಲಿ, ಇದೇ ತಾಳದಲ್ಲಿ” ಹಾಡು ಕೂಡಾ ಶುದ್ಧಸಾವೇರಿ ರಾಗದಲ್ಲಿದ್ದರೆ, ಇದೇ ಚಿತ್ರದ “ಬಾನಿನ ಅಂಚಿಂದ ಬಂದೆ..” ಹಾಡು ಹಿಂದೋಳ ರಾಗದಲ್ಲಿದೆ. “ಹೊಸ ಬಾಳಿನ ಹೊಸಿಲಲಿ ನಿಂತಿರುವ“ ಹಾಡು ಕಲ್ಯಾಣಿ ರಾಗದಲ್ಲಿದೆ.

ಅತ್ತ ಪೌರಾಣಿಕ ಕ್ಲಾಸಿಕ್ ಸಿನಿಮಾ ಬಭ್ರುವಾಹನ ಚಿತ್ರದದಲ್ಲಿರುವ “ಆರಾಧಿಸುವೆ ಮದನಾರಿ.. ” ಹಾಡು ಖರಹರಪ್ರಿಯ ರಾಗದಲ್ಲಿದೆ. ಈ ಹಾಡಿನ ಇನ್ನೂ ಒಂದು ವಿಶೇಷ ಎಂದರೆ ಮದನಾರಿ ಹಾಗೂ ಮದನ ಅರಿ ಎಂಬ ಒಂದೇ ಪದವನ್ನು ಒಡೆಯುವ ತಂತ್ರವೂಇದೆ. ಅದು ಒಂದು ಕಡೆ ಮದನಾರಿಯೂ ಹೌದು ಮತ್ತೊಂದು ಕಡೆ ಮದನ ಅರಿ ಅಂದ್ರೆ ಶಿವ ಎಂಬ ಅರ್ಥವೂ ಹೌದು.

1000x1500 9d87b60a 20cf 4a30 B3e8 985fc5d16f75

“ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ” ಹಾಡು ಕೇದಾರಗೌಳ ರಾಗದಲ್ಲಿದ್ದರೆ, “ಈ ಸಮಯ ಶೃಂಗಾರಮಯ.. ” ಹಾಡುಗಳಲ್ಲಿ ಮೂರು ರಾಗಗಳಿವೆ. ಇದನ್ನ ರಾಗಮಾಲಿಕೆ ಪ್ರಕಾರ ಎಂದು ಕರೆಯುತ್ತಾರಂತೆ. ಅಂದ್ರೆ, ಒಂದೇ ಹಾಡಲ್ಲಿ ಮೂರು ರಾಗಗಳನ್ನ ಸಂಯೋಜನೆ ಮಾಡಿರೋ ಹಾಡು. ಈ ಒಂದೇ ಹಾಡಿನಲ್ಲಿ ಕಲ್ಯಾಣಿ, ಬಹಾರ್ ಮತ್ತು ಬಾಗೇಶ್ರೀ ರಾಗಗಳಿವೆಯಂತೆ.

1920x1080 7cbfa626 Ba94 4b9c A3fa 41768e396860

ಇನ್ನು ಅಣ್ಣಾವ್ರನ್ನ ಇಷ್ಟ ಪಡೋವ್ರು ಯಾರೂ ಕೂಡಾ ಕವಿರತ್ನ ಕಾಳಿದಾಸ ಚಿತ್ರವನ್ನ ಮರೆಯೋದೇ ಇಲ್ಲ. ಶತಪೆದ್ಧನಂತಿದ್ದ ಕುರಿ ಕಾಯುವ ಹುಡುಗ, ದೇವಿ ತ್ರಿಶೂಲದಲ್ಲಿ ಓಂ ಎಂದು ಬರೆದ ತಕ್ಷಣ ಬರುವ ಮುಖಭಾದಲ್ಲಿ ಪೆದ್ದನಾಗಿದ್ದವನು, ಪಂಡಿತನಾಗುವ ಪರಿಯನ್ನು ಕಣ್ಣಿನಲ್ಲೇ ಸಾಕ್ಷಾತ್ಕಾರ ಮಾಡಿಸಿ ಬಿಡುತ್ತಾರೆ ಡಾ.ರಾಜ್.

ಆ ಚಿತ್ರದಲ್ಲಿ “ಮಾಣಿಕ್ಯ ವೀಣಾ ಉಪಲಾಲಯಂತೀಂ .. ”ಶ್ಲೋಕದ ಹಾಡು ಇದ್ಯಲ್ಲ. ಇದೂ ಕೂಡಾ ರಾಗಮಾಲಿಕೆಯಂತೆ. ಕಲ್ಯಾಣಿ, ಹಂಸಧ್ವನಿ, ಹಿಂದೋಳ ರಾಗಗಳ ಸಂಯೋಜನೆ ಇದೆ. ಒಂದು ಹಾಡಲ್ಲಿ ಮೂರು ಶಾಸ್ತ್ರೀಯ ಪದ್ಧತಿಯ ಸ್ವರ ಸಂಯೋಜನೆ ಇದ್ಧಾಗ ಹಾಡೋದು ಅಷ್ಟು ಸುಲಭ ಅಲ್ಲ ಎನ್ನುವುದು ಶಾಸ್ತ್ರೀಯ ಸಂಗೀತದ ಜ್ಞಾನ ಇದ್ದವರ ಮಾತು.
ಇನ್ನೊಂದು ಸಿನಿಮಾ ಶ್ರೀನಿವಾಸ ಕಲ್ಯಾಣದಲ್ಲಿ. ಆ ಚಿತ್ರದಲ್ಲಿ ಬರುವ “ನಾನೇ ಭಾಗ್ಯವತಿ” ಹಾಡು ಕಾನಡ ರಾಗದದಲ್ಲಿದ್ದರೆ, ಚಲಿಸುವ ಮೋಡಗಳು ಚಿತ್ರದ “ಜೇನಿನ ಹೊಳೆಯೋ” ಹಾಡು ಮೋಹನ ರಾಗದಲ್ಲಿದೆ.

Hosabelaku Movie Image2

ಹೊಸಬೆಳಕು ಚಿತ್ರದಿಂದ “ಚೆಲುವೆಯೇ ನಿನ್ನ ನೋಡಲು.. ” ಹಾಡು ಅಭೇರಿ/ಭೀಮ್‍ಪಲಾಸ್ ರಾಗದಲ್ಲಿದ್ದರೆ, “ಕಣ್ಣೀರ ಧಾರೆ ಇದೇಕೆ ಇದೇಕೆ..” ಹಾಡು ಶುಭ ಪಂತುವರಾಳಿಲಲಿತ್ ರಾಗದಲ್ಲಿದೆ. ಇಲ್ಲಿ ಎರಡು ರಾಗಗಳನ್ನ ಸಂಯೋಜಿಸಿ ಹಾಡು ಬರಲಾಗಿದೆ.

Jwalamukhi Kannada Film Ep Vinyl Record By M Ranga Rao.jpg1

ಜ್ವಾಲಾಮುಖಿ ಚಿತ್ರದಲ್ಲಿರೋ “ಹೇಳುವುದು ಒಂದು ಮಾಡುವುದು ಇನ್ನೊಂದು.. ” ಹಾಡು ಕೂಡಾ ಮುರು ರಾಗಗಳಲ್ಲಿದೆಯಂತೆ. ರಾಗಗಳ ಹೆಸರು (ಚಕ್ರವಾಕ/ಅಹಿರ್ ಭೈರವ್ ರಾಗಗಳು. ಶ್ರುತಿ ಸೇರಿದಾಗ ಚಿತ್ರದಲ್ಲಿನ “ಬೊಂಬೆಯಾಟವಯ್ಯಾ.. ” ಹಾಡು ಚಾರುಕೇಶಿ ರಾಗದಲ್ಲಿದ್ರೆ, “ಶ್ರುತಿ ಸೇರಿದೇ ಹಿತವಾಗಿದೆ.. ” ಹಾಡು ಬೇಹಾಗ್ ರಾಗದಲ್ಲಿದೆ.

Rajkumar Movie Anuraga Aralithu Cutout Fell 111 1710150394

ಅನುರಾಗ ಅರಳಿತು ಚಿತ್ರದ “ಶೀಕಂಠಾ ವಿಷಕಂಠ .. ”ಹಾಡು ಸಿಂಹೇಂದ್ರ ಮಧ್ಯಮ ರಾಗದಲ್ಲಿದ್ರೆ, ಕವಿರತ್ನ ಕಾಳಿದಾಸದ “ಸದಾ ಕಣ್ಣಲಿ ಪ್ರಣಯದ ಕವಿತೆ ಹಾಡುವೆ..” ಹಾಡಿದ್ಯಲ್ಲ, ಅದು ಬೃಂದಾವನ ಸಾರಂಗ ರಾಗದಲ್ಲಿದೆ.

500x750 Ac639609 F59e 4245 Ba4e 8d751c504b93

ಧ್ರುವತಾರೆ ಚಿತ್ರದ “ಆ ರತಿಯೇ ಧರೆಗಿಳಿದಂತೆ.. ” ಶಿವರಂಜನಿ ರಾಗದಲ್ಲಿದ್ದರೆ, ಜೀವನ ಚೈತ್ರದ “ಲಕ್ಷ್ಮೀ ಬಾರಮ್ಮ ಭಾಗ್ಯ ಲಕ್ಷ್ಮಿ ಬಾರಮ್ಮ.. ” ಮೋಹನ ಕಲ್ಯಾಣಿರಾಗದಲ್ಲಿದೆ. ತಾಯಿಗೆ ತಕ್ಕ ಮಗದ “ವಿಶ್ವನಾಥನು ತಂದೆಯಾದರೆ.. ” ಹಿಂದೂಸ್ತಾನಯಲ್ಲಿದ್ರೆ, ಡಾ.ರಾಜ್ ಅವರಿಗೆ ರಾಷ್ಟ್ರಪ್ರಶಸ್ತಿ ತಂದುಕೊಟ್ಟ “ನಾದಮಯ.. ” ಹಾಡು.. ತೋಡಿರಾಗದಲ್ಲಿದೆಯಂತೆ. ಈ ಹಾಡಿಗೆ ಸ್ವರ ಪ್ರಸ್ತಾರ ಮಾಡಿರೋದು ಸ್ವತಃ ಅಣ್ಣಾವ್ರು ಅನ್ನೋ ಒಂದು ಮಾತೂ ಇದೆ.
ಸಂಗೀತದಲ್ಲಿ ಇಷ್ಟೆಲ್ಲ ಪ್ರೌಢಿಮೆ ಇದ್ದ ಡಾ.ರಾಜ್ ಕುಮಾರ್, ತಮ್ಮ ವ್ಯಕ್ತಿತ್ವವನ್ನ ಮಾತ್ರ ಸರಳವಾಗಿಟ್ಟುಕೊಂಡಿದ್ರು.

ಇಷ್ಟೆಲ್ಲ ಆಗಿ ಅವರು ಎಂದೂ ಶಾಸ್ತ್ರೀಯ ಸಂಗೀತವನ್ನ, ಗುರುಗಳ ಹತ್ತಿರ ಹೋಗಿ ಕಲಿತವರಲ್ಲ ಅನ್ನೋದಿದ್ಯಲ್ಲ. ಅದಕ್ಕೇ ಅವರನ್ನ ವರನಟ ಅನ್ನೋದು. ಡಾ.ರಾಜ್ ಕುಮಾರ್ ಅವರ ಕಂಠದಲ್ಲಿ ಹಾಡು ಕೇಳೋದು ಕರ್ಣಕಠೋರ ಅನ್ನೋ ವಿಕೃತಿಗಳಿಗೆ ಇದೊಂದು ಪುಟ್ಟ ಸಾಧನೆಯ ಪಟ್ಟಿ. ಅಷ್ಟೇ.

ಹಾಡುಗಳಿಗೆ ನಿಮಗೆ ಗೊತ್ತಿರುವ ರಾಗ ಮಾಲಿಕೆಯ ಹಾಡುಗಳನ್ನೂ ಸೇರಿಸಿ. ಡಾ.ರಾಜ್ ಕುಮಾರ್ ಅನ್ನೋ ಪ್ರತಿಭೆ ಅಷ್ಟು ಸುಲಭಕ್ಕೆ ದಕ್ಕುವಂಥದ್ದಲ್ಲ. ಅದೊಂದು ಸಮುದ್ರ ಅಂತಾ ಹೇಳ್ಬಹುದು. ಡಾ.ರಾಜ್ ಅವರಿಗೆ ಕಲಾ ಸರಸ್ವತಿ ಸಂಪೂರ್ಣವಾಗಿ ಒಲಿದಿದ್ದಳು ಎನ್ನುವುದು ಸತ್ಯ.

ShareSendShareTweetShare
ಮಹೇಶ್ ಕುಮಾರ್ ಕೆ. ಎಲ್

ಮಹೇಶ್ ಕುಮಾರ್ ಕೆ. ಎಲ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಕಂಟೆಂಟ್ ಎಡಿಟರ್ ಆಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಟಿವಿ ಸುದ್ದಿ ವಾಹಿನಿಯ ವಿವಿಧ ಹುದ್ದೆಗಳಲ್ಲಿ 20 ವರ್ಷ ಕಾರ್ಯ ನಿರ್ವಹಿಸಿದ ಅನುಭವ ಇದೆ. ರಾಜಕೀಯ, ಕ್ರೀಡೆ, ಸಿನಿಮಾ, ವಿಜ್ಞಾನ, ಅಂತಾರಾಷ್ಟ್ರೀಯ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ವಿಶ್ಲೇಷಣಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕನ್ನಡ ಪುಸ್ತಕಗಳ ಅಧ್ಯಯನ ಇವರ ಆಸಕ್ತಿಯ ವಿಷಯ.

Please login to join discussion

ತಾಜಾ ಸುದ್ದಿ

Untitled design 2025 09 28t112952.536

ನವರಾತ್ರಿ 8ನೇ ದಿನದ ವಿಶೇಷತೆ: ಮಹಾಗೌರೀ ಆರಾಧನೆ, ಪಠಿಸಬೇಕಾದ ಮಂತ್ರ, ಮಹತ್ವ ಇಲ್ಲಿದೆ

by ಶಾಲಿನಿ ಕೆ. ಡಿ
September 28, 2025 - 11:40 am
0

Untitled design 2025 09 28t111628.132

ಒಸಾಮಾ ಪೋಷಕರ ಬೂಟಾಟಿಕೆ ಬಯಲು: ವಿಶ್ವಸಂಸ್ಥೆಯಲ್ಲೇ ಪಾಕಿಸ್ತಾನದ ಮುಖವಾಡ ಕಳಚಿದ ಭಾರತ

by ಶಾಲಿನಿ ಕೆ. ಡಿ
September 28, 2025 - 11:17 am
0

Untitled design 2025 09 28t102027.435

ಕರೂರು ಕಾಲ್ತುಳಿತ ಸ್ಟಾಲಿನ್ ಸರ್ಕಾರದ ಷಡ್ಯಂತ್ರ? ವಿಜಯ್ ಆರೋಪದ ಒಳಸುಳಿ ಏನು?

by ಶಾಲಿನಿ ಕೆ. ಡಿ
September 28, 2025 - 10:21 am
0

Untitled design 2025 09 28t095817.522

Karur Stampede-2025: ದೇಶಾದ್ಯಂತ ಕಾಲ್ತುಳಿತ ದುರಂತಗಳ ಸರಮಾಲೆ.. ಆ ಕರಾಳ ನೆನಪುಗಳು..

by ಶಾಲಿನಿ ಕೆ. ಡಿ
September 28, 2025 - 10:00 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (96)
    ನೈಋತ್ಯ ರೈಲ್ವೆಯಿಂದ ಅಯ್ಯಪ್ಪ ಸ್ವಾಮಿಯ ಭಕ್ತರಿಗೆ ಸಿಹಿ ಸುದ್ದಿ
    September 23, 2025 | 0
  • Your paragraph text (10)
    ರೋಗಿ ಜೊತೆ ಲೈಂಗಿಕ ಸಂಪರ್ಕ: ಕೆನಡಾದಲ್ಲಿ ಭಾರತೀಯ ಮೂಲದ ವೈದ್ಯೆಯ ಮೆಡಿಕಲ್ ಲೈಸೆನ್ಸ್ ಅಮಾನತು
    September 11, 2025 | 0
  • Untitled design 2025 08 29t085144.101
    ರಾಷ್ಟ್ರೀಯ ಕ್ರೀಡಾ ದಿನದ ಮಹತ್ವ ತಿಳಿಯಿರಿ..ಏಕೆ ಆಚರಿಸುತ್ತೇವೆ?
    August 29, 2025 | 0
  • Untitled design 2025 08 27t080521.715
    ಗಣೇಶ ಚತುರ್ಥಿಯಲ್ಲಿ ಮಾಡಬೇಕಾದ 5 ಅದ್ಭುತ ಸಿಹಿ ತಿನಿಸುಗಳು!
    August 27, 2025 | 0
  • Untitled design 2025 08 27t072452.631
    ಗಣೇಶ ಚತುರ್ಥಿಯ ಇತಿಹಾಸ ಮತ್ತು ಮಹತ್ವ: ಏಕೆ ಈ ಹಬ್ಬ ಆಚರಿಸುತ್ತೇವೆ..?
    August 27, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version