ರಿಲೀಸ್‌ಗೂ ಮೊದ್ಲೇ ದೊಡ್ಮನ್ಸಗೆ ಮೆಚ್ಚುಗೆಯ ಮಹಾಪೂರ

ಆಟೋ ಡ್ರೈವರ್‌‌‌ ಬದುಕು, ಬವಣೆ, ಕನಸುಗಳ ಅನಾವರಣ

Untitled design 2026 06 18T184206.896

ಈ ವಾರ ಬೆಳ್ಳಿತೆರೆ ಬೆಳಗೋಕೆ ಸಜ್ಜಾಗಿರೋ ದೊಡ್ಮನ್ಸ ಸಿನಿಮಾ, ರಿಲೀಸ್‌ಗೂ ಮೊದಲೇ ಪ್ರೀಮಿಯರ್ ಕಂಡಿದೆ. ಆಟೋ ಡ್ರೈವರ್ಸ್ ಹಾಗೂ ಅವರ ಕುಟುಂಬಸ್ಥರು ಸೇರಿದಂತೆ ಸಾಕಷ್ಟು ಮಂದಿ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

ಯೆಸ್.. ಇದೇ ಜೂನ್ 19ರಂದು ತೆರೆಗೆ ಬರೋಕೆ ಸಜ್ಜಾಗಿರೋ ಸಿನಿಮಾ ದೊಡ್ಮನ್ಸ. ದುಡ್ಡಿರೋನು ಅಲ್ಲ ದೊಡ್ಡ ಮನುಷ್ಯ.. ದೊಡ್ಡ ಮನಸ್ಸಿರೋನು ಅನ್ನೋದು ಈ ಚಿತ್ರದ ಅಡಿಬರಹ. ಹೀರೋ ಆಗಿ ಕನ್ನಡ ಚಿತ್ರರಂಗಕ್ಕೆ ಶರತ್ ಕೃಷ್ಣ ಕಾಲಿಡ್ತಿದ್ದು, ಇಲ್ಲಿ ಲೀಡ್‌‌ನಲ್ಲಿ ನಟಿಸೋದ್ರ ಜೊತೆ ಚಿತ್ರಕ್ಕೆ ಆ್ಯಕ್ಷನ್ ಕಟ್ ಕೂಡ ಅವರೇ ಹೇಳಿದ್ದಾರೆ. ಇಡೀ ಸಿನಿಮಾ ಒಬ್ಬ ಆಟೋ ಡ್ರೈವರ್‌ನ ಬದುಕು, ಬವಣೆ, ಕನಸುಗಳನ್ನ ತೆರೆದಿಡುವ ಕಾರ್ಯ ಮಾಡಿದೆ.

ಸಿನಿಮಾ ಬಿಡುಗಡೆಗೆ ಮೊದಲೇ ಮಾಗಡಿ ರಸ್ತೆಯ ವಿಕ್ಟರಿ ಮೂವೀಸ್‌‌ನಲ್ಲಿ ದೊಡ್ಮನ್ಸ ಚಿತ್ರದ ಸ್ಪೆಷಲ್ ಪ್ರೀಮಿಯರ್ ಶೋ ಆಯೋಜಿಸಿತ್ತು ಚಿತ್ರತಂಡ. ಅಲ್ಲಿ ನೂರಾರು ಮಂದಿ ಆಟೋ ಡ್ರೈವರ್‌‌ಗಳು ಕುಟುಂಬ ಸಮೇತ ಬಂದು ಚಿತ್ರವನ್ನ ಕಣ್ತುಂಬಿಕೊಂಡಿದ್ದು ವಿಶೇಷ. ಕಲೆ ಅನ್ನೋದು ಯಾರಪ್ಪನ ಮನೆಯ ಸ್ವತ್ತೂ ಅಲ್ಲ. ಅದ್ರಲ್ಲೂ ದುಡ್ಡಿದ್ದವ್ರಿಗೆ ಮಾತ್ರ ಅದು ಒಲಿಯುತ್ತೆ ಅನ್ನೋ ತಪ್ಪು ಕಲ್ಪನೆಯನ್ನ ಪ್ರೂವ್ ಮಾಡುವ ಚಿತ್ರ ಇದಾಗಿದೆ. ನಾಯಕನಟಿ ರೇಷ್ಮಾ, ಶಿಲ್ಪಾ ಶಿವಕುಮಾರ್, ಹುಲಿ ಕಾರ್ತಿಕ್, ಬಲ ರಾಜ್ವಾಡಿ ಸೇರಿದಂತೆ ಚಿತ್ರದಲ್ಲಿ ಸಾಕಷ್ಟು ಕಲಾವಿದರಿದ್ದಾರೆ.

ಶಂಕರ್‌ನಾಗ್, ವಿಷ್ಣುವರ್ಧನ್, ದರ್ಶನ್, ಗಣೇಶ್ ರೀತಿ ಯುವ ಸಿನಿಮೋತ್ಸಾಹಿ ಪ್ರತಿಭೆ ಶರತ್ ಕೃಷ್ಣ ಕೂಡ ಆಟೋ ಡ್ರೈವರ್ ಆಗಿ ಗುರ್ತಿಸಿಕೊಂಡಿರೋದು ವಿಶೇಷ. ಅದ್ರಲ್ಲೂ ಅಪ್ಪು ಹಾಗೂ ಡಿಬಾಸ್ ದಚ್ಚು ಆಶೀರ್ವಾದದಿಂದ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿರೋದು ಮತ್ತೊಂದು ಹೈಲೈಟ್. ಒಟ್ಟಾರೆ ದೊಡ್ಮನ್ಸ ಚಿತ್ರವನ್ನ ಕಣ್ತುಂಬಿಕೊಂಡ ಪ್ರೇಕ್ಷಕರು ಹಾಗೂ ಚಿತ್ರಪ್ರೇಮಿಗಳು ಚಿತ್ರದ ನಾಯಕನಟ ಕಮ್ ಡೈರೆಕ್ಟರ್ ಹಾಗೂ ಇಡೀ ತಂಡಕ್ಕೆ ಬಹುಪರಾಕ್ ಎಂದಿದ್ದಾರೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version