ಪಾಕ್‌‌ನಲ್ಲಿ ಧುರಂಧರ್ 18 ಲಕ್ಷ ಪೈರಸಿ ಕಾಪಿ ಡೌನ್‌‌‌ಲೋಡ್ಸ್‌‌

ದೇಶಪ್ರೇಮದ ಕಿಚ್ಚು.. ಭಾರತ-ಪಾಕ್‌ ಅತಿ ದೊಡ್ಡ ಜಿದ್ದಿನ ಕಥೆ

Untitled design (25)

ಧುರಂಧರ್.. ಭಾರತೀಯ ಚಿತ್ರರಂಗದ ಮೈಲ್‌‌ಸ್ಟೋನ್ ಸಿನಿಮಾಗಳಲ್ಲೊಂದು. ಯಾಕಂದ್ರೆ ಇದು ಭಾರತ-ಪಾಕ್ ಬಹುದೊಡ್ಡ ಜಿದ್ದಿನ ನೈಜ ಘಟನೆ ಆಧಾರಿತ ಚಿತ್ರ. ಈ ಸಿನಿಮಾ ಬರೀ ಬಾಕ್ಸ್ ಆಫೀಸ್‌‌ನಲ್ಲಷ್ಟೇ ಅಲ್ಲ, ಪೈರಸಿಯಲ್ಲಿ ಕೂಡ ಸಾರ್ವಕಾಲಿಕ ದಾಖಲೆ ಬರೆದಿದೆ. ಅದೂ ಪಾಪಿಗಳ ನಾಡು ಪಾಕಿಸ್ತಾನ್‌‌‌ನಲ್ಲಿ ಅನ್ನೋದು ಅಚ್ಚರಿ.

ಧುರಂಧರ್.. ಇತ್ತೀಚೆಗೆ ತೆರೆಕಂಡ ಬಾಲಿವುಡ್‌ನ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ. ಚಿತ್ರ ತೆರೆಕಂಡ ಎರಡೇ ವಾರಕ್ಕೆ ವರ್ಲ್ಡ್‌ವೈಡ್ ಬರೋಬ್ಬರಿ 752 ಕೋಟಿ ಪೈಸಾ ವಸೂಲ್ ಮಾಡಿದೆ. ನಮ್ಮ ಕರುನಾಡಿನ ಅಳಿಯ, ದೀಪಿಕಾ ಪಡುಕೋಣೆ ಪತಿ ರಣ್‌ವೀರ್ ಸಿಂಗ್ ಲೀಡ್‌‌ನಲ್ಲಿ ನಟಿಸಿರೋ ಧುರಂಧರ್ ಚಿತ್ರ, ಪಾಕಿಸ್ತಾನದಲ್ಲಿ ಗೂಢಚರ್ಯೆ ನಡೆಸೋ ನಮ್ಮ ಇಂಡಿಯನ್ ಸ್ಪೈ ಏಜೆಂಟ್‌‌ ಕಥೆಯಾಗಿದೆ.

ರಜನಿ, SRK ರೆಕಾರ್ಡ್‌ ಬ್ರೇಕ್.. ಧುರಂಧರ್ ಪೈರಸಿ ಸ್ಟಾರ್..!

ಪಾಕ್‌‌ನಲ್ಲಿ ಧುರಂಧರ್ 18 ಲಕ್ಷ ಪೈರಸಿ ಕಾಪಿ ಡೌನ್‌‌‌ಲೋಡ್ಸ್‌‌

ಇದು ದೇಶಪ್ರೇಮದ ಕಿಚ್ಚು ಹೆಚ್ಚಿಸೋ ಚಿತ್ರವಾಗಿದ್ದು, ಭಾರತ-ಪಾಕಿಸ್ತಾನ್‌ನ ಬಹುದೊಡ್ಡ ಜಿದ್ದಿನ ಕಥೆ ಕೂಡ ಆಗಿದೆ. ಉರಿ-ದಿ ಸರ್ಜಿಕಲ್ ಸ್ಟ್ರೈಕ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ಆಧಿತ್ಯ ಧಾರ್ ಧುರಂಧರ್ ಚಿತ್ರವನ್ನ ನಿರ್ದೇಶನ ಮಾಡಿದ್ದು, ಮಾಧವನ್, ಅರ್ಜುನ್ ರಾಮ್‌ಪಾಲ್, ಅಕ್ಷಯ್ ಖನ್ನಾ, ಸಂಜಯ್ ದತ್, ಸಾರಾ ಅರ್ಜುನ್, ರಾಕೇಶ್ ಬೇಡಿ ಕೂಡ ಮುಖ್ಯ ತಾರಾಗಣದಲ್ಲಿದ್ದಾರೆ.

ಧುರಂಧರ್ ನೈಜ ಘಟನೆ ಆಧಾರಿತ ಸಿನಿಮಾ ಆಗಿರೋದ್ರಿಂದ ಸಹಜವಾಗಿಯೇ ಪಾಕಿಸ್ತಾನದಲ್ಲಿ ಈ ಸಿನಿಮಾದ ಪ್ರದರ್ಶನಕ್ಕೆ ನಿರ್ಬಂಧವಿದೆ. ಅಲ್ಲಿ ಅಕ್ಷರಶಃ ಬ್ಯಾನ್ ಆಗಿದೆ. ಹಾಗಂತ ಪಾಪಿ ಪಾಕಿಗಳು ಸುಮ್ಮನೆ ಕೈ ಕಟ್ಟಿ ಕೂತಿಲ್ಲ. ಈ ಚಿತ್ರದಲ್ಲಿ ಏನೇನಿದೆಯೋ ಅನ್ನೋ ಕ್ಯೂರಿಯಾಸಿಟಿಯಿಂದ ಪೈರಸಿ ಮಾಡುವ ಮೂಲಕ ಪೈರೇಟೆಡ್ ಕಾಪಿಯನ್ನ ಡೌನ್‌‌ಲೋಡ್ ಮಾಡಿ ವೀಕ್ಷಿಸಿದ್ದಾರೆ. ಅದೂ ಬರೋಬ್ಬರಿ 1.8 ಮಿಲಿಯನ್ ಅಂದ್ರೆ 18 ಲಕ್ಷ ಮಂದಿ ಈ ಚಿತ್ರವನ್ನ ಪೈರಸಿ ಮೂಲಕ ಡೌನ್‌ಲೋಡ್ ಮಾಡಿ ನೋಡಿದ್ದಾರೆ ಅನ್ನೋದೇ ಅಚ್ಚರಿ.

20 ವರ್ಷದಲ್ಲಿ ಆಗದ ದಾಖಲೆ.. ರಣ್‌‌ವೀರ್ ಸಿಂಗ್ ರಾಕ್ಸ್..!

ದೇಶಪ್ರೇಮದ ಕಿಚ್ಚು.. ಭಾರತ-ಪಾಕ್‌ ಅತಿ ದೊಡ್ಡ ಜಿದ್ದಿನ ಕಥೆ

ಈ ಸಿನಿಮಾ ಬರೀ ಬಾಕ್ಸ್ ಆಫೀಸ್‌‌ನಲ್ಲಷ್ಟೇ ಅಲ್ಲ, ಪೈರಸಿ ವಿಚಾರದಲ್ಲಿ ಕೂಡ ಸಾರ್ವಕಾಲಿಕ ದಾಖಲೆ ಬರೆದಿರೋದು ಇಂಟರೆಸ್ಟಿಂಗ್. ಹೌದು.. ಕಳೆದ 20 ವರ್ಷಗಳಲ್ಲಿ ಬಾಲಿವುಡ್‌‌ನಲ್ಲಿ ಅತಿಹೆಚ್ಚು ಪೈರಸಿ ಆದ ಸಿನಿಮಾ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ ಧುರಂಧರ್. ಅಂದಹಾಗೆ ಇದು ಇಲ್ಲಿಯವರೆಗೆ ಇದ್ದ ರೆಕಾರ್ಡ್‌ಗಳನ್ನ ಕೂಡ ಬ್ರೇಕ್ ಮಾಡಿ ಅಗ್ರಸ್ಥಾನಕ್ಕೇರಿದೆ. ತಲೈವಾ ರಜನೀಕಾಂತ್‌ರ 2.ಓ ಹಾಗೂ ಶಾರೂಖ್ ಖಾನ್ ನಟನೆಯ ರಾಯೀಸ್ ಸಿನಿಮಾಗಳು ಅತಿಹೆಚ್ಚು ಪೈರಸಿ ಆಗಿದ್ದವು. ಇದೀಗ ಅವೆರಡನ್ನ ಮೀರಿಸಿ ಹುಬ್ಬೇರಿಸಿದೆ ಧುರಂಧರ್.

ಇಂತಹ ದಾಖಲೆಗಳ ನಡುವೆ ತುಂಬಾ ಬೇಸರದ ಸಂಗತಿ ಕೂಡ ಇದೆ. ನಮ್ಮ ಸ್ಪೈ ಏಜೆಂಟ್ಸ್ ಪಾಕ್‌‌ನಲ್ಲಿ ಸಿಕ್ಕಿಬಿದ್ದಾಗ ನಡೆಯೋ ಇನ್ಸಿಡೆಂಟ್‌‌ಗಳನ್ನ ಇಂಡಿಯನ್ ಟ್ರೋಲರ್ಸ್‌ ವೀವ್ಸ್‌‌ಗೋಸ್ಕರ ನಮ್ಮ ಸೈನಿಕರನ್ನೇ ಟ್ರೋಲ್ ಮಾಡ್ತಿರೋದು ವಿಪರ್ಯಾಸ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕಿದೆ. ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ. ದೇಶ ರಕ್ಷಣೆಗಾಗಿ ಪ್ರಾಣ ಪಣಕ್ಕಿಟ್ಟು, ಪಾಪಿಗಳ ನಾಡಿಗೇ ಹೋಗಿ ಅಲ್ಲೇ ಅವ್ರನ್ನ ಮುಗಿಸೋ ಸಾಹಸ ಮಾಡುವ ನಮ್ಮ ವೀರರನ್ನ ಟ್ರೋಲ್ ಮಾಡುವ ವಿಕೃತ ಸಂಸ್ಕೃತಿ ಬದಲಾಗಬೇಕಿದೆ. ಟ್ರೋಲರ್ಸ್‌ ಕೂಡ ದೇಶಪ್ರೇಮ ಅನ್ನೋದು ಇದ್ರೆ ಮಾಡಿರೋ ಟ್ರೋಲ್ಸ್‌‌ನ ಡಿಲೀಟ್ ಮಾಡಲಿ.

 

Exit mobile version