ಭಾರತೀಯ ಚಿತ್ರರಂಗದಲ್ಲಿ ಬಾಕ್ಸ್ ಆಫೀಸ್ ಬೀಸ್ಟ್ ಧುರಂಧರ್ ಸಾರ್ವಕಾಲಿಕ ದಾಖಲೆ ಬರೆದಿದೆ. ಧುರಂಧರ್ ಕಲಿ ರಣ್ವೀರ್ ಸಿಂಗ್ ಮಾಡ್ತಿರೋ ಹಂಗಾಮಕ್ಕೆ ಬಾಹುಬಲಿ, ಪುಷ್ಪ ಚಿತ್ರದ ರೆಕಾರ್ಡ್‌ಗಳೆಲ್ಲಾ ಬಲಿಯಾಗಿವೆ. ಹಾಗಾದ್ರೆ ಪ್ರಭಾಸ್, ಅಲ್ಲು ಅರ್ಜುನ್ ಮಾಡಿದ ಆ ದಾಖಲೆ ಏನು..? ಅದನ್ನ ಸರಿಗಟ್ಟಿರೋ ಧುರಂಧರ್ ಖದರ್ ಎಂಥದ್ದು..? ಅನ್ನೋದ್ರ ಫುಲ್ ಡಿಟೇಲ್ಸ್ ಇಲ್ಲಿದೆ…
- ರಣ್ವೀರ್ 3000Cr ಕಲಿ.. ಧುರಂಧರ್‌ಗೆ ಬಾಹುಬಲಿ, ಪುಷ್ಪ ಬಲಿ
- ಸರಣಿ ಚಿತ್ರಗಳಲ್ಲಿ ಪ್ರಭಾಸ್, ಅಲ್ಲು ಅರ್ಜುನ್‌ನ ಹಿಂದಿಕ್ಕಿದ ಸಿಂಗ್
ಧುರಂಧರ್.. ಧುರಂಧರ್.. ಧುರಂಧರ್.. ಎಲ್ಲೆಲ್ಲೂ ಧುರಂಧರ್‌ದೇ ಹವಾ, ಹಾವಳಿ. ಯೆಸ್.. ಸಿನಿಮಾಗಳು ನೋಡುಗರನ್ನ ಎಂಟರ್‌ಟೈನ್ ಮಾಡೋದು ಸರ್ವೇ ಸಾಮಾನ್ಯ. ಆದ್ರೆ ಇದು ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳ ಕಿಂಗ್ ಆಗಿ ಅಗ್ರಸ್ಥಾನಕ್ಕೇರಿದೆ. ಭಾರತೀಯ ಚಿತ್ರರಂಗದಲ್ಲಿ ಯಾರೂ ಮಾಡದಂತಹ ಸಾರ್ವಕಾಲಿಕ ದಾಖಲೆ ಮಾಡುವ ಮೂಲಕ ಖಾನ್, ಕಪೂರ್‌ಗಳ ಹುಬ್ಬೇರಿಸಿದೆ.
ಆದಿತ್ಯ ಧರ್ ನಿರ್ದೇಶಿಸಿ, ನಿರ್ಮಿಸಿರೋ ಧುರಂಧರ್ ಸರಣಿ ಸಿನಿಮಾಗಳಲ್ಲಿ ರಣ್ವೀರ್ ಸಿಂಗ್ ಲೀಡ್‌ನಲ್ಲಿ ನಟಿಸಿದ್ದು, ಅಜಿತ್ ದೋವಲ್ ಸೀಕ್ರೆಟ್ ಮಿಷನ್‌ನ ಸ್ಪೈ ಆಫೀಸರ್ ಪಾತ್ರ ಆಧರಿಸಿ ತಯಾರಾಗಿದೆ. ಒಂದ್ಕಡೆ ದೇಶಪ್ರೇಮದ ಕಿಚ್ಚು. ಮತ್ತೊಂದೆಡೆ ರಾ & ರಗಡ್ ಮೇಕಿಂಗ್. ಮಗದೊಂದು ಕಡೆ ಪಾಕಿಸ್ತಾನ ಹಾಗೂ ಅದ್ರಲ್ಲಿ ಭಯೋತ್ಪಾದನೆಯನ್ನ ಬಿತ್ತೋ ವಿಷ ಜಂತುಗಳ ಮೇಲಿನ ಕೋಪ, ಸಿಟ್ಟು, ಸಿಡುಕು. ಇವೆಲ್ಲವೂ ಧುರಂಧರ್ ಸರಣಿ ಸಿನಿಮಾಗಳು ಸುನಾಮಿ ಸುಂಟರಗಾಳಿ ರೀತಿ ಕಲೆಕ್ಷನ್ ರೆಕಾರ್ಡ್ ಮಾಡೋಕೆ ದಾರಿ ಮಾಡಿಕೊಟ್ಟಿವೆ.
ಇಲ್ಲಿಯ ತನಕ ಭಾರತೀಯ ಚಿತ್ರರಂಗದ ಸರಣಿ ಚಿತ್ರಗಳ ಪೈಕಿ ರಾಜಮೌಳಿ ನಿರ್ದೇಶನದ, ಪ್ರಭಾಸ್-ರಾಣಾ ನಟನೆಯ ಬಾಹುಬಲಿ ಸಿನಿಮಾಗಳು 2461 ಕೋಟಿ ಗಳಿಸಿ ನಂಬರ್ ಒನ್ ಸ್ಥಾನ ಅಲಂಕರಿಸಿದ್ದವು. ಇತ್ತೀಚೆಗೆ ಬಂದಂತಹ ಸುಕುಮಾರ್ ನಿರ್ದೇಶನದ ಅಲ್ಲು ಅರ್ಜುನ್ ನಟನೆಯ ಪುಷ್ಪ ಸರಣಿ ಸಿನಿಮಾಗಳು 2190 ಕೋಟಿ ಪೈಸಾ ವಸೂಲ್ ಮಾಡಿದ್ದವು. ಆದ್ರೀಗ ಅವೆರಡರ ದಾಖಲೆಯನ್ನ ಸರಿಗಟ್ಟಿದೆ ಧುರಂಧರ್ ಸರಣಿ ಸಿನಿಮಾಗಳು. ಯೆಸ್.. ಇದೇ ಮೊದಲ ಬಾರಿಗೆ ಭಾರತೀಯ ಚಿತ್ರ 3000 ಕೋಟಿ ಕ್ಲಬ್ ಸೇರಿದೆ. ಆ ಕುರಿತ ಗ್ರಾಫಿಕಲ್ ರಿಪೋರ್ಟ್ ನಿಮ್ಮ ಮುಂದೆ.
ಅಟೆನ್ಷನ್ ಪ್ಲೀಸ್.. ಎಲ್ಲಾ ಪೀಸ್ ಪೀಸ್
| ಸಿನಿಮಾ | ರಿಲೀಸ್ ಆದ ವರ್ಷ | ಬಾಕ್ಸ್ ಆಫೀಸ್ ಕಲೆಕ್ಷನ್ |
|---|---|---|
| ಪುಷ್ಪ-1 | 2021 ಡಿಸೆಂಬರ್ 17 | 390 ಕೋಟಿ |
| ಪುಷ್ಪ-2 | 2024 ಡಿಸೆಂಬರ್ 5 | 1800 ಕೋಟಿ |
| ಬಾಹುಬಲಿ-1 | 2015 ಜುಲೈ 10 | 650 ಕೋಟಿ |
| ಬಾಹುಬಲಿ-2 | 2017 ಏಪ್ರಿಲ್ 28 | 1811 ಕೋಟಿ |
| ಧುರಂಧರ್-1 | 2025 ಡಿಸೆಂಬರ್ 5 | 1428 ಕೋಟಿ |
| ಧುರಂಧರ್-2* | 2026 ಮಾರ್ಚ್ 19 | 1739 ಕೋಟಿ |
ನೋಡಿದ್ರಲ್ಲಾ ಬಾಹುಬಲಿ ಸಿನಿಮಾಗಳು ಎರಡರಿಂದ 2461 ಕೋಟಿ ಗಳಿಸಿದ್ರೆ, ಪುಷ್ಪ ಸರಣಿ ಚಿತ್ರಗಳು 2190 ಕೋಟಿ ಗಳಿಸಿವೆ. ಆದ್ರೆ ಧುರಂಧರ್ ಇಂದಿಗೂ ವೀಕೆಂಡ್‌ನಲ್ಲಿ 8 ರಿಂದ 10 ಕೋಟಿ ಗಳಿಸ್ತಿದ್ದು, 3167 ಕೋಟಿ ನಾಟ್ ಔಟ್ ಅಂದ್ರೆ ನೀವು ನಂಬಲೇಬೇಕು. ಅಫ್ ಕೋರ್ಸ್ ಸಿಂಗಲ್ ಮೂವಿ ಲೆಕ್ಕ ತೆಗೆದುಕೊಂಡಾಗ ಆಮೀರ್ ಖಾನ್ ದಂಗಲ್ ಚಿತ್ರ ಅಗ್ತಸ್ಥಾನದಲ್ಲಿದೆ. 2024 ಕೋಟಿ ಗಳಿಸಿರೋ ಅದೇ ಭಾರತದ ಅತಿ ಹೆಚ್ಚು ಗಳಿಸಿದ ಸಿನಿಮಾ. ಆ ರೆಕಾರ್ಡ್ ಕೂಡ ಬ್ರೇಕ್ ಆಗೋದ್ರಲ್ಲಿ ಯಾವುದೇ ಅಚ್ಚರಿ ಇಲ್ಲ ಅನ್ನೋದು ಸಿನಿ ಪಂಡಿತರ ಲೆಕ್ಕಾಚಾರ ಆಗಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
