ಬಾಕ್ಸ್ ಆಫೀಸ್ ತೂಫಾನ್ ಧುರಂಧರ್ ಮತ್ತಷ್ಟು ಡೆಡ್ಲಿ & ಡೇರಿಂಗ್ ಆಗಿ ರಿವೆಂಜ್ ತೀರಿಸಿಕೊಳ್ಳೋಕೆ ಬರ್ತಿದೆ. ಮೊದಲ ಭಾಗ ಜಸ್ಟ್ ಟೀಸರ್.. ಅಸಲಿ ಪಿಕ್ಚರ್ ಅಭಿ ಬಾಕಿ ಹೈ ಅಂತಿದೆ ಚಿತ್ರತಂಡ. ಇಷ್ಟಕ್ಕೂ ಇಂಡಿಯಾ-ಪಾಕ್ ಬಿಗ್ಗೆಸ್ಟ್ ಜಿದ್ದಾಜಿದ್ದಿನ ಕಥೆ ಇದಾಗಿದ್ದು, ಇದಕ್ಕೆ ನಾರ್ಥ್‌ಗಿಂತ ಸೌತ್‌ನಲ್ಲೇ ಕ್ರೇಜ್ ದುಪ್ಪಟ್ಟಾಗಿದೆ.
1356 ಕೋಟಿ ದಾಖಲೆ ಮೊತ್ತದ ಕಲೆಕ್ಷನ್‌ನಿಂದ ಬಾಕ್ಸ್ ಆಫೀಸ್‌ನಲ್ಲಿ ಬಿಗ್ ಸೌಂಡ್ ಮಾಡಿದ್ದ ಸಿನಿಮಾ ಧುರಂಧರ್. ರಣ್ವೀರ್ ಸಿಂಗ್, ಅಕ್ಷಯ್ ಖನ್ನಾ, ಅರ್ಜುನ್ ರಾಂಪಾಲ್, ಸಂಜಯ್ ದತ್, ರಾಕೇಶ್ ಬೇಡಿ, ಸಾರಾ ಅರ್ಜುನ್.. ಹೀಗೆ ಬಹುದೊಡ್ಡ ತಾರಾಗಣವಿದ್ದ ಈ ಸಿನಿಮಾ, ನೈಜ ಘಟನೆಗಳನ್ನ ಆಧರಿಸಿ ತಯಾರಾಗಿತ್ತು. ಇದೀಗ ಅದ್ರ ಸೀಕ್ವೆಲ್ ಸರದಿ.
ಧುರಂಧರ್ 1.1Cr ಸೌತ್ ಬುಕಿಂಗ್.. ನಾರ್ಥ್‌ಗಿಂತ ಡಬಲ್
ಅಬ್ಬಬ್ಬಾ ಕ್ರೇಜ್ ಕಾ ಬಾಪ್ ಆದ್ರು ಕರುನಾಡ ಅಳಿಯ ರಣ್ವೀರ್
ಧುರಂಧರ್ ದಿ ರಿವೆಂಜ್ ಸಿನಿಮಾ ರಿಲೀಸ್‌ಗೆ ಇನ್ನೊಂದೇ ಒಂದು ದಿನ ಬಾಕಿಯಿದೆ. ಈ ಬಾರಿ ಕ್ರೇಜ್ ಒನ್ ಟು ಡಬಲ್ ಆಗಿದ್ದು, ಇದರ ವಿರುದ್ಧ ಬರ್ತಿದ್ದ ಟಾಕ್ಸಿಕ್ ಸಿನಿಮಾ ಕೂಡ ಪೋಸ್ಟ್‌ಪೋನ್ ಆಗಿದೆ. ಅಂದಹಾಗೆ ದಂಗಲ್ ಸಿನಿಮಾ ಇಲ್ಲಿಯ ತನಕ ಅತಿಹೆಚ್ಚು ಗಳಿಸಿದ ಇಂಡಿಯನ್ ಮೂವಿ ಅನಿಸಿಕೊಂಡಿದೆ. ಆದ್ರೆ ಧುರಂಧರ್-2 ಸದ್ಯ ದಂಗಲ್ ಚಿತ್ರದ ದಾಖಲೆಯನ್ನ ಸರಿಗಟ್ಟುವ ಮುನ್ಸೂಚನೆ ನೀಡಿದೆ. 2024ಕ್ಕೂ ಅಧಿಕ ಕೋಟಿ ಗಳಿಸೋದ್ರಲ್ಲಿ ಡೌಟೇ ಇಲ್ಲ.
ಆದಿತ್ಯ ಧಾರ್ ನಿರ್ದೇಶನದ ಧುರಂಧರ್-2 ಮೊದಲ ಭಾಗಕ್ಕಿಂತ ಡೆಡ್ಲಿ & ಡೇರಿಂಗ್ ಆಗಿದ್ದು, ರಣ್ವೀರ್ ಸಿಂಗ್ ಪಾಕ್ ಪಾತಕಿಗಳಿಗೆ ಮಣ್ಣು ಮುಕ್ಕಿಸೋ ರೋಚಕತೆ ಇಂಟರೆಸ್ಟಿಂಗ್ ಹಾಗೂ ಇಂಪ್ರೆಸ್ಸೀವ್ ಆಗಿರಲಿದೆ. ರಾ ಮೇಕಿಂಗ್, ರಕ್ತದೋಕುಳಿ, ಗನ್ ಹಾಗೂ ಬಾಂಬ್‌ಗಳ ಮೊರೆತ.. ಹೀಗೆ ಎಲ್ಲವೂ ಸಖತ್ ವೈಬ್ರೆಂಟ್ ಆಗಿವೆ. ಈ ಬಾರಿ ಇಂಡಿಯನ್ ಸ್ಪೈ ಗತ್ತು ಗಮ್ಮತ್ತು ಏನು ಅನ್ನೋದನ್ನ ಪಾಕ್ ಪಾತಕಿಗಳಿಗೆ ತಮ್ಮ ಶಕ್ತಿ ಹಾಗೂ ಯುಕ್ತಿಯಿಂದ ಉತ್ತರ ಕೊಡ್ತಾರೆ ಏಜೆಂಟ್ಸ್. ಅದಕ್ಕೆ ಸಂಜಯ್ ದತ್ ಸಾಥ್ ಕೂಡ ಸಿಗಲಿದೆ.
ಪಾಕ್ ಪಾತಕಿಗಳಿಗೆ ಮಣ್ಣು ಮುಕ್ಕಿಸೋ ಭಾರತದ ಸ್ಪೈ ಏಜೆಂಟ್
3 ಗಂಟೆ 55 ನಿಮಿಷ.. ಪಂಚಭಾಷೆಗಳಲ್ಲಿ ರಣ್ವೀರ್ ದರ್ಬಾರ್..!
ಇಂಟರೆಸ್ಟಿಂಗ್ ಅಂದ್ರೆ ಈ ಬಾರಿ ನಾರ್ಥ್‌ಗಿಂದ ಸೌತ್ ಇಂಡಿಯಾದಲ್ಲೇ ಧುರಂಧರ್ ಸೀಕ್ವೆಲ್‌ಗೆ ಕ್ರೇಜ್ ಹೆಚ್ಚಿದೆ. ಹೌದು.. ಇಲ್ಲಿಯ ತನಕ ಹಿಂದಿ ಅಡ್ವಾನ್ಸ್ ಬುಕ್ಕಿಂಗ್ 60 ಕೋಟಿ ಆಗಿದ್ರೆ, ಸೌತ್‌ನಲ್ಲಿ 1.1Cr ಮುಂಗಡ ಟಿಕೆಟ್ ಬುಕ್ಕಿಂಗ್ ಆಗಿದೆ. ಅದ್ರಲ್ಲೂ ಈ ಸಲ ಹಿಂದಿ ಜೊತೆ ತೆಲುಗು, ತಮಿಳು, ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲೂ ಧುರಂಧರ್-2 ತೆರೆಗಪ್ಪಳಿಸುತ್ತಿದೆ.
ಇನ್ನೂ ಪಾಕಿಸ್ತಾನ ಸೇರಿದಂತೆ ಅರಬ್ ದೇಶಗಳಲ್ಲಿ ಧುರಂಧರ್ ಚಿತ್ರದ ಪ್ರದರ್ಶನ ರದ್ದುಗೊಳಿಸಲಾಗಿತ್ತು. ಅದೇ ಸ್ಟ್ರ್ಯಾಟಜಿ ಈ ಬಾರಿಯೂ ಮುಂದುವರೆಯಲಿದೆ. ಆದ್ರೆ ಪಾಕಿಸ್ತಾನಿಗರೇ ಮಿಲಿಯನ್ ಗಟ್ಟಲೆ ಪೈರಸಿ ಕಾಪಿಗಳನ್ನ ಡೌನ್‌ಲೋಡ್ ಮಾಡಿ ವೀಕ್ಷಿಸಿದ್ದರು. ಈಗಲೂ ಅದೇ ಕಂಟಿನ್ಯೂ ಆಗಲಿದೆ. 3 ಗಂಟೆ 55 ನಿಮಿಷ ರನ್ ಟೈಂ ಇರೋ ಧುರಂಧರ್-2, ದೊಡ್ಡದಾದ್ರೂ ಅಷ್ಟೇ ಕಿಕ್ ಕೊಡಲಿದೆ. ಒಟ್ಟಾರೆ ನಮ್ಮ ಕರ್ನಾಟಕದ ಅಳಿಮಯ್ಯ ರಣ್ವೀರ್ ಸಿಂಗ್ ವರ್ಲ್ಡ್ ಬಾಕ್ಸ್ ಆಫೀಸ್‌ನಲ್ಲಿ ಒನ್ಸ್ ಅಗೈನ್ ಧೂಳೆಬ್ಬಿಸೋದು ಗ್ಯಾರಂಟಿ.
