ಧುರಂಧರ್ ದಿ ರಿವೆಂಜ್ ಟ್ರೈಲರ್ ಸಖತ್ ಡೆಡ್ಲಿ & ಟೆರಿಫಿಕ್ ಆಗಿದೆ. ಹೈ ವೋಲ್ಟೇಜ್ ಆ್ಯಕ್ಷನ್ ಸೀಕ್ವೆನ್ಸ್‌ಗಳಿಂದ ಧುರಂಧರ್ ರೆಕಾರ್ಡ್‌ನ ಬ್ರೇಕ್ ಮಾಡೋ ಸೂಚನೆ ನೀಡಿದೆ. ರಣ್ವೀರ್ ಸಿಂಗ್ ಬೀಸ್ಟ್ ಮೋಡ್‌ನಲ್ಲಿ ನೋಡುಗರ ಮೈ ರೋಮಾಂಚನಗೊಳಿಸ್ತಿದ್ದಾರೆ. ಹಾಗಾದ್ರೆ ಹೇಗಿದೆ ಮೋಸ್ಟ್ ಎಕ್ಸ್‌ಪೆಕ್ಟೆಡ್ ಧುರಂಧರ್-2 ಟ್ರೈಲರ್..? ಎಷ್ಟು ಶೇಡ್ಸ್ ಇದೆ..? ಏನು ವಿಶೇಷತೆ ಅಂತೀರಾ..? ಈ ಸ್ಟೋರಿ ನೋಡಿ.
- ಧುರಂಧರ್ ಟ್ರೈಲರ್ ಔಟ್.. ರಣ್ವೀರ್ ಬೀಸ್ಟ್ ಮೋಡ್ ಆನ್
- ಮೊದಲ ಭಾಗ ಜಸ್ಟ್ ಟೀಸರ್.. ರಿವೆಂಜ್ ಪಿಕ್ಚರ್ ಅಭಿ ಬಾಕಿ ಹೈ
- ಮಾ-19ಕ್ಕೆ ರಿಲೀಸ್.. ಒಂದು ದಿನ ಮೊದ್ಲೇ ಸ್ಪೆಷಲ್ ಪ್ರೀಮಿಯರ್
- 3 ಗಂಟೆ 40 ನಿಮಿಷ ರನ್ ಟೈಂ.. ಇಂದಿನಿಂದ ಟಿಕೆಟ್ ಬುಕಿಂಗ್!
ಅಬ್ಬಬ್ಬಾ.. ಮೈಂಡ್ ಬ್ಲೋಯಿಂಗ್ ಆಗಿದೆ ಇಂದು ರಿಲೀಸ್ ಆಗಿರೋ ಧುರಂಧರ್-2 ಚಿತ್ರದ ಟ್ರೈಲರ್ ಝಲಕ್. ಯೆಸ್.. ಇದು ಈ ವರ್ಷದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಮೂವಿ ಧುರಂಧರ್ ಸೀಕ್ವೆಲ್ ದಿ ರಿವೆಂಜ್‌ನ ಮುನ್ನೋಟ. 3 ನಿಮಿಷ 26 ಸೆಕೆಂಡ್‌ನ ಈ ಟ್ರೈಲರ್ ಸಿನಿಮಾದ ಇಂಟೆನ್ಸಿಟಿ, ಆ್ಯಕ್ಷನ್ ಧಮಾಕ ಎಂಥದ್ದು ಅನ್ನೋದ್ರ ಹಿಂಟ್ ನೀಡಿದೆ.
ಯೆಸ್.. ಕಳೆದ ವರ್ಷ 1400ಕ್ಕೂ ಅಧಿಕ ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿ, ಬಾಲಿವುಡ್ ಅಂಗಳದಲ್ಲಿ ಹೊಸ ದಾಖಲೆ ಬರೆದ ಸಿನಿಮಾ ಧುರಂಧರ್. ಆದಿತ್ಯ ಧಾರ್ ನಿರ್ದೇಶನದಲ್ಲಿ ರಣ್ವೀರ್ ಸಿಂಗ್, ಅಕ್ಷಯ್ ಖನ್ನಾ, ಸಂಜಯ್ ದತ್, ಅರ್ಜುನ್ ರಾಂಪಾಲ್.. ಹೀಗೆ ಬಹುದೊಡ್ಡ ತಾರಾಗಣವಿತ್ತು. ಅದ್ರ ಮುಂದುವರೆದ ಭಾಗ ಇದಾಗಿದ್ದು, ಇಲ್ಲಿ ಹಂಜಾ ಅಲಿ ಮಸಾರಿ ಜಸ್ಕಿರತ್ ಸಿಂಗ್ ರಂಗಿಯಾಗಿ ರಿವೆಂಜ್ ತೀರಿಸಿಕೊಳ್ಳೋ ಕಥಾನಕ ಇದಾಗಿದೆ.
ಮೈ ಜುಮ್ಮೆನಿಸೋ ಆ್ಯಕ್ಷನ್ ಸೀಕ್ವೆನ್ಸ್ ಸಾಹಸಪ್ರಿಯರಿಗೆ ಮಸ್ತ್ ಮಜಾ ಕೊಡಲಿವೆ. ಇಲ್ಲಿ ರಣ್ವೀರ್ ಸಿಂಗ್ ಎರಡು ಶೇಡ್‌ಗಳಲ್ಲಿ ರಕ್ತದೋಕುಳಿ ಹರಿಸಲಿದ್ದು, ಸ್ಪೆಷಲ್ ಟಾಸ್ಕ್ ಪೋರ್ಸ್ ಹೆಡ್ ಸಂಜಯ್ ದತ್ ಜೊತೆಗೂಡಿ ವಿಧ್ವಂಸ ಸೃಷ್ಟಿಸಲಿದ್ದಾರೆ. ಐಎಸ್‌ಐ ಮೇಜರ್ ಇಕ್ಬಾಲ್ ಪಾತ್ರಧಾರಿ ಅರ್ಜುನ್ ರಾಂಪಾಲ್ ಹಾಗೂ ಸೀಕ್ರೆಟ್ ಸ್ಪೈ ನಡುವಿನ ಜಿದ್ದಾಜಿದ್ದು ಸಖತ್ ಜೋರಿರಲಿದೆ. ಅದಕ್ಕೆ ಈ ಟ್ರೈಲರ್ ಪ್ರತ್ಯಕ್ಷ ಸಾಕ್ಷಿ.
ಮಾರ್ಚ್ 19ರಂದೇ ಸಿನಿಮಾ ತೆರೆಗೆ ಬರ್ತಿದ್ದು, ಬಿಡುಗಡೆ ದಿನಾಂಕದಲ್ಲಿ ಯಾವುದೇ ಬಂದಲಾವಣೆ ಇಲ್ಲ ಅಂದಿದೆ ಚಿತ್ರತಂಡ. ಅಂದಹಾಗೆ ಒಂದು ದಿನ ಮೊದಲೇ.. ಅಂದ್ರೆ ಮಾರ್ಚ್ 18ರ ಸಂಜೆ ಸಾಕಷ್ಟು ಕಡೆ ಪೇಯ್ಡ್ ಪ್ರೀಯಿಯರ್ ಶೋಗಳ ಮೂಲಕ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಮಾಡಿಕೊಂಡವರಿಗೆ ಧುರಂಧರ್ ದಿ ರಿವೆಂಜ್ ದರ್ಶನ ಸಿಗಲಿದೆ. ಇಂದಿನಿಂದಲೇ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ಸ್ ಓಪನ್ ಆಗಿದ್ದು, ಎಲ್ಲೆಡೆ ಚಿತ್ರಪ್ರೇಮಿಗಳು ಮುಗಿಬಿದ್ದು ಮುಂಗಡ ಬುಕ್ಕಿಂಗ್ ಮಾಡ್ತಿರೋದು ಇಂಟರೆಸ್ಟಿಂಗ್.
3 ಗಂಟೆ 40 ನಿಮಿಷ ರನ್ ಟೈಂ ಇರೋ ಧುರಂಧರ್-2 ಈ ಹಿಂದಿನ ಧುರಂಧರ್‌ಗಿಂತ ದೊಡ್ಡ ಸಿನಿಮಾ ಅನಿಸಿಕೊಳ್ತಿದೆ. ಈಗಾಗ್ಲೇ ಮೊದಲ ಭಾಗಕ್ಕೆ ಅರಬ್ ರಾಷ್ಟ್ರಗಳಲ್ಲಿ ನಿಷೇಧ ಇತ್ತು. ಆ ನಿಷೇಧ ಈ ಭಾಗಕ್ಕೂ ಮುಂದುವರೆಯಲಿದೆ. ಮಿಡಲ್ ಈಸ್ಟ್ ಕಂಟ್ರಿಗಳಲ್ಲಿ ಇರಾನ್-ಇಸ್ರೇಲ್ ವಾರ್ ನಡೆಯುತ್ತಿರೋದು ಕೂಡ ಧುರಂಧರ್-2ಗೆ ಸಣ್ಣದೊಂದು ಹೊಡೆತ ಬಿದ್ದೇ ಬೀಳುತ್ತೆ. ಅವೆಲ್ಲದರ ನಡುವೆಯೂ ಧುರಂಧರ್-2 ಥಿಯೇಟರ್‌ಗೆ ಬರೋಕೆ ಡೆಡ್‌ಲೈನ್ ಫಿಕ್ಸ್ ಮಾಡಿರೋದು ಗ್ರೇಟ್. ಇದು ದೇಶಪ್ರೇಮದ ಕಿಚ್ಚನ್ನ ಮತ್ತಷ್ಟು ಹೆಚ್ಚಿಸಲಿದ್ದು, ಮಾಧವನ್ ಮಾಸ್ಟರ್‌ಪ್ಲ್ಯಾನ್ಸ್ ಈ ಬಾರಿ ಹೇಗೆಲ್ಲಾ ಇರಲಿದೆ ಅನ್ನೋದನ್ನ ಕಾದು ನೋಡಬೇಕಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
