ಧ್ರುವ-ನಂದು ಸ್ವಮೇಕ್ ಕಥೆ..ಆದ್ರೆ ಶ್ರೀಮಂತುಡು ಫ್ಲೇವರ್

ಮಹೇಶ್ ಬಾಬು ರೀತಿ ಸೈಕಲ್ ಏರಿ ಬಂದ ಆ್ಯಕ್ಷನ್ ಪ್ರಿನ್ಸ್..!

Your paragraph text (60)

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕಂಪ್ಲೀಟ್ ಬದಲಾಗಿದ್ದಾರೆ. ಅರ್ಥಾತ್ ತಮ್ಮ ಮಾಸ್ ಜಾನರ್‌ಗೆ ಗುಡ್ ಬೈ ಹೇಳಿ ಫ್ಯಾಮಿಲಿ ಆಡಿಯೆನ್ಸ್ ಹಾಗೂ GenZ ಆಡಿಯೆನ್ಸ್‌ನ ಫೋಕಸ್ ಮಾಡ್ತಿದ್ದಾರೆ. ಬರ್ತ್ ಡೇ ವಿಶೇಷ ಅನೌನ್ಸ್ ಆಗಿರೋ ಕೆಮಿಸ್ಟ್ರಿ ಯೂತ್ ಸಬ್ಜೆಕ್ಟ್ ಆದ್ರೆ.. ವಸುದೈವ ಕುಟುಂಬಕಂ ಕೌಟುಂಬಿಕ ಚಿತ್ರವಾಗಿ ಹೊರಹೊಮ್ಮಲಿದೆ. ಪೊಗರು ಕಾಂಬೋ ರಿಪೀಟ್ ಆಗ್ತಿದ್ದು.. ಧ್ರುವ-ನಂದು ಸ್ವಮೇಕ ಅಂತಲೇ ರಿಮೇಕ್ ಥೀಮ್‌‌ ಕಾನ್ಸೆಪ್ಟ್ ಟೀಸರ್ ರಿವೀಲ್ ಮಾಡಿದ್ದಾರೆ.

ವಸುದೈವ ಕುಟುಂಬಕಂ.. ಹ್ಯಾಟ್ರಿಕ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಹೊಚ್ಚ ಹೊಸ ಸಿನಿಮಾ. ಅರೇ ಇದು ಫ್ಯಾಮಿಲಿ ಎಂಟರ್‌ಟೈನರ್ ತರಹ ಇದೆಯಲ್ವಾ..? ಧ್ರುವ ಮಾಸ್ & ಆ್ಯಕ್ಷನ್ ಜಾನರ್ ಸಿನಿಮಾ ಬಿಟ್ಟುಬಿಟ್ರಾ ಅನ್ನೋ ಕ್ಯೂರಿಯಾಸಿಟಿ ನಿಮಗೆ ಹುಟ್ಟಲಿದೆ. ಅಫ್ ಕೋರ್ಸ್.. ಈ ಬಾರಿ ಪಕ್ಕಾ ಫ್ಯಾಮಿಲಿ ಆಡಿಯೆನ್ಸ್ ಮನಸ್ಸು ಗೆಲ್ಲೋಕೆ ಬರ್ತಿದ್ದಾರೆ. ಔಟ್ & ಔಟ್ ಕೌಟುಂಬಿಕ ಸಿನಿಮಾದೊಂದಿಗೆ ಮನರಂಜನೆಯ ರಸದೌತಣ ಉಣಬಡಿಸಲು ಸಜ್ಜಾಗಿದ್ದಾರೆ.

ಬರ್ತ್ ಡೇ ವಿಶೇಷ ಸಿನಿಮಾದ ಟೈಟಲ್ ಜೊತೆ ಕಾನ್ಸೆಪ್ಟ್ ಟೀಸರ್ ಕೂಡ ರಿಲೀಸ್ ಆಗಿದ್ದು.. ಸಖತ್ ಇಂಪ್ರೆಸ್ಸೀವ್ ಆಗಿದೆ. ಹಚ್ಚ ಹಸಿರಾಗಿರೋ ಗದ್ದೆಗಳ ನಡುವೆ ಮಡ್ ರೋಡ್‌‌ನಲ್ಲಿ ಸೈಕಲ್ ತುಳಿಯುತ್ತಾ ಬರುವ ನಾಯಕನಟ ಧ್ರುವ ಸರ್ಜಾ.. ಮಧ್ಯೆ ಹನುಮನ ಮುಂದೆ ಗರಡಿಯಲ್ಲಿ ಕುಸ್ತಿಪಟುಗಳು ಕೈ ಮಿಲಾಯಿಸುತ್ತಾ.. ಹೇಯ್ ಹೀರೋ.. ನೋಡೋಕೆ ಖಡಕ್ ಆಗಿದ್ದೀಯ.. ಒಂದು ಕೈ ಮಿಲಾಯಿಸ್ತೀಯಾ ಅಂತಾರೆ. ಅದಕ್ಕೆ ಉತ್ತರಿಸೋ ಧ್ರುವ.. ಫ್ಯಾಮಿಲಿಯನ್ನ ಗೆಲ್ಲಬೇಕು ಅಂತ ಬಂದಿದ್ದೀನಿ.. ಗಲಾಟೆ ಎಲ್ಲಾ ಬೇಡ ಬ್ರೋ ಅನ್ನೋ ಡೈಲಾಗ್ ಮಸ್ತ್ ಮಜಬೂತಾಗಿದೆ.

ಇಂಟರೆಸ್ಟಿಂಗ್ ಅಂದ್ರೆ.. ಬ್ಯಾಗ್ರೌಂಡ್‌‌ನಲ್ಲಿ ಬರೋ ಮ್ಯೂಸಿಕ್ ಹಾಗೂ ಸಾಂಗ್‌ನ ಸಾಲುಗುಳು ಕಾಡುವಂತಿವೆ. ಇರಲು ಹಲವು ಗಡಿ.. ಭೂಮಿ ಒಂದೇ ಗುಡಿ.. ಪ್ರೀತಿಮಯವು ಜಗವೇ.. ಬಂಧುತ್ವದ ಬ್ರಹ್ಮೋತ್ಸವ.. ಸಂಬಂಧವೇ ರಂಗಾವಲಿ. ಪರರ ಗೆಲುವಿನಲಿ.. ಹೃದಯ ನಲಿತಿರಲಿ.. ಖುಷಿಯ ಮಯವು ಜಗವೇ.. ಎಲ್ಲೇ ನೋಡು ಪ್ರೇಮೋತ್ಸವ.. ಕಣ್ಣುಗಳಿಗೆ ದೀಪಾವಳಿ.. ಅನ್ನೋ ಈ ಹಾಡಿಂದ ಆ ಟೀಸರ್‌‌ನ ಅಂದ ಚೆಂದ ಮತ್ತಷ್ಟು ಹೆಚ್ಚಿದೆ.

ಲಾಂಗ್ ಹೇರ್.. ಇದ್ದನೆಯ ಗಡ್ಡ ಬಿಟ್ಕೊಂಡು ಸದಾ ರೌಡಿ ರೀತಿ ಇರ್ತಿದ್ದ ಧ್ರುವ ಇದೀಗ ಸಖತ್ ಹ್ಯಾಂಡ್ಸಮ್ ಆಗಿಬಿಟ್ಟಿದ್ದಾರೆ. ಪಕ್ಕಾ ಫ್ಯಾಮಿಲಿ ಹೀರೋ ಕ್ಯಾರೆಕ್ಟರ್‌‌ಗೆ ಇಳಿದುಬಿಟ್ಟಿದ್ದಾರೆ. ಇಂಟರೆಸ್ಟಿಂಗ್ ಅಂದ್ರೆ ಈ ಸಿನಿಮಾನ ನಂದ ಸುಧೀರ್ ನಿರ್ದೇಶನ ಮಾಡ್ತಿದ್ದಾರೆ. ಅರೇ ಇದ್ಯಾರಪ್ಪಾ ಹೊಸ ಡೈರೆಕ್ಟರ್ ಅಂತ ಕನ್ಫ್ಯೂಸ್ ಆಗ್ಬೇಡಿ. ಯಾಕಂದ್ರೆ ಪೊಗರು ಡೈರೆಕ್ಟರ್ ನಂದಕಿಶೋರ್ ಹೆಸರು ಬದಲಿಸಿಕೊಂಡಿದ್ದಾರೆ. ಪೊಗರು ಬಳಿಕ ಧ್ರುವ ಜೊತೆ ಸೆಕೆಂಡ್ ಕಾಂಬಿನೇಷನ್‌‌ ವರ್ಕೌಟ್ ಮಾಡೋಕೆ ತುದಿಗಾಲಲ್ಲಿ ನಿಂತಿದ್ದಾರೆ.

ಅಂದಹಾಗೆ ವಸುದೈವ ಕುಟುಂಬಕಂ ಪಕ್ಕಾ ಸ್ವಮೇಕ್ ಸಿನಿಮಾ ಅನ್ನೋದನ್ನ ಟೀಂ ಕನ್ಫರ್ಮ್ ಮಾಡಿದೆ. ಆದ್ರೆ ಈ ಕಾನ್ಸೆಪ್ಟ್ ಟೀಸರ್ ನೋಡಿದ್ರೆ ಪ್ರಿನ್ಸ್ ಮಹೇಶ್ ಬಾಬು ಅವರ ಶ್ರೀಮಂತುಡು ಫ್ಲೇವರ್‌‌ನಂತಿದೆ. ಹೌದು.. ಅಲ್ಲಿ ಮಹೇಶ್ ಹೇಗೆ ಸೈಕಲ್ ತುಳಿದುಕೊಂಡು ಬರೋ ಸ್ಟೈಲ್‌‌ನಲ್ಲೇ ಇಲ್ಲಿ ಧ್ರುವ ಸೈಕಲ್ ಮೇಲೆ ಬರುವ ದೃಶ್ಯಗಳು ಹಂಡ್ರೆಡ್ ಪರ್ಸೆಂಟ್ ಶ್ರೀಮಂತುಡು ಚಿತ್ರವನ್ನ ನೆನಪಿಸ್ತಿದೆ. ಕೆಟ್ಟು ಬದುಕಬೇಕು ಅಂತಾರೆ.. ಅದೇ ರೀತಿ ನಂದ ಸುಧೀರ್‌‌ ಅವರಿಗೂ ಬ್ಯಾಕ್ ಟು ಬ್ಯಾಕ್ ಫ್ಲಾಪ್ಸ್.. ಇತ್ತ ಧ್ರುವಗೂ ಅದೇ ಕಹಿ ಅನುಭವ. ಹಾಗಾಗಿ ಈ ಬಾರಿ ಇವರಿಬ್ಬರ ನಿಲುವುಗಳು, ನಿರ್ಧಾರಗಳು ಪ್ರೇಕ್ಷಕರ ಅಭಿರುಚಿಗೆ ತಕ್ಕನ್ನಾಗಿ ಇರಲಿವೆ ಅನ್ನೋದು ಮಾತ್ರ ಖಚಿತ.

ಹಾಗಾದ್ರೆ ಫೈಟ್ಸ್ ಅನ್ನೋದು ಇರೋದೇ ಇಲ್ವಾ ಅಂತ ಹುಬ್ಬೇರಿಸಬೇಡಿ. ಇದ್ದೇ ಇರುತ್ತೆ. ಆದ್ರೆ ಮಾಸ್ ಅಂಶಗಳಿಗಿಂತ ಫ್ಯಾಮಿಲಿ ವ್ಯಾಲ್ಯೂಸ್ ಹಾಗೂ ಎಮೋಷನ್ಸ್ ಹೆಚ್ಚಾಗಿ ಇರಲಿದೆಯಂತೆ. ನೋಡುಗರ ಮುಖದ ಮೇಲೆ ಮಂದಹಾಸ ಬೀರಿಸುವ ಕಾಮಿಡಿ ಕಚಗುಳಿ ಕೂಡ ಇರಲಿದೆಯಂತೆ. ಆಂಧ್ರದ ಪ್ರೊಡ್ಯೂಸರ್ ಹರೀಶ್ ಹಾಗೂ ಕನ್ನಡದ ಕಿಲ್ಲಿಂಗ್ ವೀರಪ್ಪನ ಫೇಮ್ ಸುಧಿ ಅವರು ಈ ಚಿತ್ರವನ್ನ ನಿರ್ಮಾಣ ಮಾಡ್ತಿದ್ದು, ಮತ್ತೊಂದು ಕೆಮಿಸ್ಟ್ರಿ ಅನ್ನೋ GenZ ಲವ್ ಸ್ಟೋರಿಗೂ ಕೈ ಹಾಕಿದ್ದಾರೆ ಧ್ರುವ. ಶುಭವಾಗಲಿ.. ಗೆಲುವಾಗಲಿ ಅಂತ ಹಾರೈಸೋಣ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version