ಅಮೋರ ಡ್ಯಾನ್ಸಿಂಗ್ ನಂಬರ್ ನೋಡಿ ಪಾರ್ಟ್ನರ್ ಪಕ್ಕಾ ಯೂತ್‌ಫುಲ್ ಎಂಟರ್‌ಟೈನರ್ ಅಂದುಕೊಂಡಿದ್ದ ಚಿತ್ರಪ್ರೇಮಿಗಳಿಗೆ ಲವಲವಿಕೆ ಸಾಂಗ್ ಮತ್ತೊಂದು ಆಯಾಮ ನೀಡಿದೆ. ಅಜಯ್ ರಾವ್-ಬೃಂದಾ ಡುಯೆಟ್ ನಡುವೆ ರಂಗಾಯಣ ರಘು ದಂಪತಿಯ ಫ್ಯಾಮಿಲಿ ಎಲಿಮೆಂಟ್ಸ್ ಈ ಸಿನಿಮಾ ಹಂಡ್ರೆಡ್ ಪರ್ಸೆಂಟ್ ಕೌಟುಂಬಿಕ ಚಿತ್ರ ಅನಿಸಿದೆ. ಕಲರ್‌ಫುಲ್ ಸಾಂಗ್ ಜೊತೆ ಎಕ್ಸ್‌ಕ್ಲೂಸಿವ್ ಮೇಕಿಂಗ್ ಝಲಕ್ ಇಲ್ಲಿದೆ.
- ಅಜಯ್ ಲವಲವಿಕೆ ಹೆಚ್ಚಿಸಿದ ‘ಪಾರ್ಟ್ನರ್’.. ಫ್ಯಾಮಿಲಿ ಕಿಕ್
- ಕವಿರಾಜ್ ಸಾಲು.. ನಕುಲ್ ಟ್ಯೂನ್.. GenZ ಪ್ರೇಮಕಥೆ..!!
- ಬೆಂಗಳೂರು, ಪಾಂಡಿಯಲ್ಲಿ ಅಜಯ್- ಬೃಂದಾ ಪ್ರೇಮಪರ್ವ
- ರಂಗಾಯಣ ರಘು-ಚಿತ್ಕಲಾ ಸಾಥ್.. 2nd ಸಾಂಗ್ ಸಹ ಹಿಟ್
ಅಮೋರ ಆಯ್ತು.. ಈಗ ಲವಲವಿಕೆ. ಯೆಸ್.. ಇದು ಈ ವರ್ಷದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಮೂವಿ ಪಾರ್ಟ್ನರ್ ಸಿನಿಮಾದ ಸೆಕೆಂಡ್ ಸಾಂಗ್ ಝಲಕ್. ಮೊದಲನೆ ಸಾಂಗ್ ಎಲ್ಲರ ಬಾಯಲ್ಲಿ ಗುನುಗುವಂತೆ ಆಗಿದ್ದು, ಹುಕ್ ಸ್ಟೆಪ್ಸ್‌ನಿಂದ ಡ್ಯಾನ್ಸ್ ಬಾರದವರೂ ಸಹ ಕುಣಿಯುವಂತೆ ಮಾಡಿತ್ತು. ಆದ್ರೆ ಲವಲವಿಕೆ ಬೇರೆಯದ್ದೇ ಫೀಲ್ ಕೊಡ್ತಿದೆ. ಲವ್ ಡುಯೆಟ್ ಜೊತೆ ಫ್ಯಾಮಿಲಿ ಲವ್ ಕೂಡ ಆ್ಯಡ್ ಆನ್ ಆಗಿ ವ್ಹಾವ್ ಫೀಲ್ ತರಿಸಿದೆ.
ನಟ ಅಜಯ್ ರಾವ್ ಹಾಗೂ ಬೃಂದಾ ಆಚಾರ್ಯ ಲೀಡ್‌ನಲ್ಲಿ ನಟಿಸಿರೋ ಈ ಚಿತ್ರ.. ಈಗಿನ ಜಂಝಿಗಳ ಲೈಫ್ ಸ್ಟೈಲ್, ಲವ್, ಬ್ರೇಕಪ್, ಲಿವಿಂಗ್ ರಿಲೇಷನ್‌ಶಿಪ್ ಸುತ್ತ ಸಾಗುವ ಕಥೆಯಾಗಿದೆ. ಒಂದೊಳ್ಳೆ ಮೆಸೇಜ್ ನೊಂದಿಗೆ ನಿರ್ದೇಶಕ ಶಿವತೇಜಸ್ ಈ ಸಿನಿಮಾನ ಪ್ರೇಕ್ಷಕರ ಮುಂದೆ ತರ್ತಿದ್ದಾರೆ. ಮಳೆ, ಧೈರ್ಯಂ, ದಿಲ್ ಪಸಂದ್ ಖ್ಯಾತಿಯ ಶಿವತೇಜಸ್ ಮತ್ತೊಂದು ಹೊಸ ಪ್ರಯೋಗ ಇದಾಗಿದ್ದು, ಅವರ ಸಿನಿಮಾ ಪ್ಯಾಷನ್ ಪ್ರತಿ ಫ್ರೇಮ್‌ನಲ್ಲೂ ಎದ್ದು ಕಾಣ್ತಿದೆ.
ಅಂದಹಾಗೆ ಈ ಲವಲವಿಕೆ ಹಾಡಿಗೆ ಕವಿರಾಜ್ ಸಾಹಿತ್ಯ ರಚಿಸಿದ್ದು, ಮುರಳಿ ಮಾಸ್ಟರ್ ಕೊರಿಯೋಗ್ರಫಿ ಮಾಡಿದ್ದಾರೆ. ನಕುಲ್ ಅಭ್ಯಂಕರ್ ಸಂಗೀತ ಸಂಯೋಜನೆಯ ಲವಲವಿಕೆ ಸಾಂಗ್‌ಗೆ ಕಾರ್ತೀಕ್, ರಮ್ಯ ಹಾಗೂ ಅಭ್ಯಂಕರ್ ದನಿಯಾಗಿದ್ದಾರೆ. ಸುಜ್ಞಾನ್ ಕ್ಯಾಮೆರಾದಲ್ಲಿ ಸೆರೆಯಾಗಿರುವ ಈ ಹಾಡನ್ನು ನಿರ್ಮಾಪಕರ ಆಧ್ಯಾತ್ಮಿಕ ಗುರುಗಳಾದ ರಂಗನಾಥ್ ಹಾಗೂ ಮಂಜುನಾಥ್ ಬಿಡುಗಡೆಗೊಳಿಸಿ ಶುಭ ಹಾರೈಸಿದ್ರು. ಬೆಂಗಳೂರು, ಪಾಂಡಿಚೆರಿಯಲ್ಲಿ ಚಿತ್ರಿಸಿರೋ ಈ ಹಾಡಲ್ಲಿ ಅಜಯ್-ಬೃಂದಾ ಕೆಮಿಸ್ಟ್ರಿ ನೆಕ್ಸ್ಟ್ ಲೆವೆಲ್‌ಗಿದೆ.
ಪ್ರತಿ ಹಾಡನ್ನೂ ಒಂದೊಂದು ಕಲರ್ ಪ್ಯಾಟ್ರನ್ ನಲ್ಲಿ ಮಾಡಿದ್ದೇವೆ. ಲಕ್ಷ್ಮಿ ಕೃಷ್ಣ ಕಾಸ್ಟೂಮ್ ಡಿಸೈನ್ ಮಾಡಿದ್ದಾರೆ. ಪಾಂಡಿಚೇರಿ, ಬೆಂಗಳೂರಲ್ಲಿ ಶೂಟಿಂಗ್ ಮಾಡಿದ್ದು, ರಂಗಾಯಣ ರಘು, ಚಿತ್ಕಲಾ ಕೂಡಅಭಿನಯಿಸಿದ್ದಾರೆ. ಈಗಾಗಲೇ ಪ್ರೇಮದ ಊರಲಿ ಸಿನಿಮಾ ನಮ್ಮ ಚಿತ್ರರಂಗಕ್ಕೆ ನವಚೇತನ ನೀಡಿದೆ. ನಮ್ಮದೂ ಫ್ಯಾಮಿಲಿ ಸಬ್ಜೆಕ್ಟ್. ಅದೇ ತರಹ ಹಿಟ್ ಆಗುತ್ತೆ ಅನ್ನೋ ನಂಬಿಕೆಯಿದೆ ಅಂದ್ರು ಡೈರೆಕ್ಟರ್ ಶಿವತೇಜಸ್.
ನಿರ್ಮಾಪಕ ಹರೀಶ್ ದೇವಿತಂದ್ರೆ ಮಾತನಾಡುತ್ತ ನಾನು ಸಿನಿಮಾ ವಿತರಣೆ, ಚಾನೆಲ್ ನಲ್ಲಿ ಕೆಲಸ ಮಾಡುತ್ತಿದ್ದೆ, ಯಾವುದೇ ಮುಜುಗರ ಇಲ್ಲದೆ ಇಡೀ ಕುಟುಂಬಸಮೇತ ಕೂತು ನೋಡಬಹುದಾದ ಚಿತ್ರವಿದು. ಬ್ಯುಸಿನೆಸ್ ದೃಷ್ಟಿ ಇಟ್ಟುಕೊಂಡೇ ಈ ಸಿನಿಮಾ ಮಾಡಿದ್ದೇನೆ. ಅದನ್ನು ಯಾವ ರೀತಿ ಜನರಿಗೆ ತಲುಪಿಸಬೇಕೆಂದು ಪ್ಲಾನ್ ಮಾಡುತ್ತಿದ್ದೇವೆ ಎಂದರು.
ಗ್ಯಾರಂಟಿ ನ್ಯೂಸ್‌ಗೆ ಹಾಡಿನ ಎಕ್ಸ್‌ಕ್ಲೂಸಿವ್ ಮೇಕಿಂಗ್ ಕೂಡ ಲಭ್ಯವಾಗಿದ್ದು, ನಿರ್ದೇಶಕ ಶಿವತೇಜಸ್ ಇಷ್ಟೊಂದು ದೊಡ್ಡ ಟೀಂ ಜೊತೆ ಪಾಂಡಿಚೆರಿಗೆ ತೆರಳಿ, ಅಲ್ಲಿ ಬೋಟ್‌ನಲ್ಲೆಲ್ಲಾ ಹೇಗೆಲ್ಲಾ ಕಷ್ಟಪಟ್ಟು ಚಿತ್ರಿಸಿದ್ದಾರೆ ಅನ್ನೋದು ಇದ್ರಿಂದ ಅರಿವಾಗ್ತಿದೆ. ಹೊಡಿ ಬಡಿ ಕಡಿ ಸಿನಿಮಾಗಳ ನಡುವೆ ಹೀಗೆ ಫೀಲ್‌ಗುಡ್ ಫ್ಯಾಮಿಲಿ ಎಂಟರ್‌ಟೈನರ್ ಚಿತ್ರಗಳು ಬ್ಯಾಕ್ ಟು ಬ್ಯಾಕ್ ಬರ್ತಿರೋದು ಖುಷಿಯ ವಿಚಾರ. ಅಲ್ಲದೆ ರಂಗಾಯಣ ರಘು ಒಂಥರಾ ಲಕ್ಕಿ ಚಾರ್ಮ್ ಆಗಿದ್ದು, ಅವರಿದ್ರೆ ಸಿನಿಮಾ ಹಿಟ್ ಆಗೋದು ಗ್ಯಾರಂಟಿ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
