ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನೆಕ್ಸ್ಟ್ ವೆಂಚರ್‌ನಲ್ಲಿ ಮಹಾನಟಿ ಕೀರ್ತಿ ಸುರೇಶ್ ನಟಿಸ್ತಿದ್ದಾರೆ ಅನ್ನೋ ಸುದ್ದಿ ಹರಿದಾಡ್ತಿದೆ. ಸದ್ಯದಲ್ಲೇ ಸೆಟ್ಟೇರುತ್ತಿರೋ ಡಿಎಸ್-07 ಚಿತ್ರಕ್ಕಾಗಿ ಪ್ರತಿಷ್ಠಿತ ಗೋಲ್ಡ್ ಮೈನ್ಸ್ ಕಂಪೆನಿ ಹೂಡಿಕೆ ಮಾಡಲು ಮುಂದಾಗಿದೆ. ಈ ಚಿತ್ರದ ಡೈರೆಕ್ಟರ್ ಯಾರು..? ಕಥೆ ಏನು..? ಯಾರೆಲ್ಲಾ ಇರಲಿದ್ದಾರೆ ಅನ್ನೋದ್ರ ಪಿನ್ ಟು ಪಿನ್ ಡಿಟೈಲ್ಸ್ ಇಲ್ಲಿದೆ ನೋಡಿ.
ಧ್ರುವ ಸರ್ಜಾ.. ಐದೇ ಚಿತ್ರಗಳಿಂದ ಪ್ಯಾನ್ ಇಂಡಿಯಾ ಸಂಚಲನ ಮೂಡಿಸಿದ ಸ್ಯಾಂಡಲ್‌ವುಡ್‌ನ ಒನ್ ಅಂಡ್ ಓನ್ಲಿ ಆ್ಯಕ್ಷನ್ ಪ್ರಿನ್ಸ್. ಕರುನಾಡ ಚಕ್ರವರ್ತಿ ಡಾ ಶಿವರಾಜ್‌ಕುಮಾರ್ ರೀತಿ ಆರಂಭದ ಮೂರು ಚಿತ್ರಗಳ ಬ್ಲಾಕ್ ಬಸ್ಟರ್ ಹಿಟ್ಸ್‌ನಿಂದ ಹ್ಯಾಟ್ರಿಕ್ ಹೀರೋ ಅನಿಸಿಕೊಂಡರು. ನಟನಾ ಗತ್ತು, ಡೈಲಾಗ್ ಡೆಲಿವರಿ ಗಮ್ಮತ್ತು, ಆ್ಯಕ್ಷನ್ ಖದರ್‌ನಿಂದ ಕಡಿಮೆ ಕಾಲಾವಧಿಯಲ್ಲಿ ದೊಡ್ಡ ಫ್ಯಾನ್ ಫಾಲೋಯಿಂಗ್ ಸಂಪಾದಿಸಿಕೊಂಡರು.
ಡೆಲ್ಲಿ ಪ್ರೊಡ್ಯೂಸರ್ ಜೊತೆ ಧ್ರುವ.. ಮಹಾನಟಿ ಡೇಟ್ಸ್ ಕ್ಲ್ಯಾಶ್
DS-7 ಮುಹೂರ್ತಕ್ಕೆ ಕ್ಷಣಗಣನೆ.. ಕನ್ನಡಕ್ಕೆ ಗೋಲ್ಡ್ ಮೈನ್ಸ್
ಪೊಗರು ಬಳಿಕ ಪ್ಯಾನ್ ಇಂಡಿಯಾ ಪರ್ವ ಹೊರಟ ಧ್ರುವ ಸರ್ಜಾಗೆ ಮಾರ್ಟಿನ್ ಒಂದೊಳ್ಳೆ ವೇದಿಕೆ ಆಯ್ತು. ಮಾವ ಅರ್ಜುನ್ ಸರ್ಜಾ ಬರೆದ ಆ್ಯಕ್ಷನ್ ಕಥೆಯಿಂದ ದೇಶದಾದ್ಯಂತ ಸದ್ದು ಮಾಡಿದ್ರು ಧ್ರುವ. ಇದೀಗ ಜೋಗಿ ಪ್ರೇಮ್ ಹಾಗೂ ಕೆವಿಎನ್ ಪ್ರೊಡಕ್ಷನ್ಸ್ ಜೊತೆಗಿನ ಕೆಡಿ ಸಿನಿಮಾ ರಿಲೀಸ್‌ಗೆ ಸಜ್ಜಾಗ್ತಿದೆ. ಧ್ರುವ ಜೊತೆ ಇಲ್ಲಿ ಕಿಚ್ಚ ಸುದೀಪ್, ಸಂಜಯ್ ದತ್, ಶಿಲ್ಪಾ ಶೆಟ್ಟಿ, ರಮೇಶ್ ಅರವಿಂದ್ ಹಾಗೂ ರವಿಚಂದ್ರನ್ ಅಂತಹ ದೊಡ್ಡ ಸ್ಟಾರ್ಸ್ ಇಲ್ಲಿ ಬಣ್ಣ ಹಚ್ಚಿದ್ದಾರೆ.
ಟೀಸರ್ ಹಾಗೂ ಸಾಂಗ್ಸ್‌ನಿಂದ ಹಂಗಾಮ ಮಾಡ್ತಿರೋ ಕೆಡಿ, ರಿಲೀಸ್ ಡೇಟ್ ಅನೌನ್ಸ್ ಮಾಡೋಕೆ ಮೊದಲೇ ಧ್ರುವ ಮತ್ತೊಂದು ನ್ಯೂ ವೆಂಚರ್‌ಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಯೆಸ್.. ಡಿಎಸ್-07 ಸಿನಿಮಾ ಇದೇ ನವೆಂಬರ್ 18ರ ಸಂಜೆ 4 ಗಂಟೆಗೆ ಬುಲ್ ಟೆಂಪಲ್ ಎದುರು ಎರುವ ಅನ್ನಪೂರ್ಣ ನವ ಮಂತ್ರಾಲಯ ಮಂದಿರದಲ್ಲಿ ಸೆಟ್ಟೇರುತ್ತಿದೆ. ಇಂಟರೆಸ್ಟಿಂಗ್ ಅಂದ್ರೆ ಈ ಸಿನಿಮಾದ ಮುಖೇನ ಪ್ರತಿಷ್ಠಿತ ಗೋಲ್ಡ್ ಮೈನ್ಸ್ ಕಂಪೆನಿ ಕನ್ನಡಕ್ಕೆ ಎಂಟ್ರಿ ಕೊಡ್ತಿದೆ.
ಕೆರೆಬೇಟೆ ಡೈರೆಕ್ಟರ್ ಜೊತೆ ಧ್ರುವ ಪ್ಯಾನ್ ಇಂಡಿಯಾ ಬೇಟೆ
KD ರಿಲೀಸ್‌ಗೂ ಮೊದಲೇ ಆ್ಯಕ್ಷನ್ ಪ್ರಿನ್ಸ್ ನ್ಯೂ ವೆಂಚರ್..!
ಹೌದು.. ಡೆಲ್ಲಿ ಮೂಲದ ಗೋಲ್ಡ್ ಮೈನ್ಸ್ ಕಂಪೆನಿ ಬಹುದೊಡ್ಡ ಹೊಸರು ಮಾಡಿರೋ ನ್ಯಾಷನಲ್ ಲೆವೆಲ್ ಬ್ಯಾನರ್ ಆಗಿದ್ದು, ಮನೀಶ್ ಶಾ ಮಾಲೀಕತ್ವದ್ದಾಗಿದೆ. ಭಾರತೀಯ ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಬಹುದೊಡ್ಡ ಛಾಪು ಮೂಡಿಸಿರೋ, ಸಾವಿರಾರು ಸಿನಿಮಾಗಳನ್ನ ಡಿಸ್ಟ್ರಿಬ್ಯೂಟ್ ಮಾಡಿರೋ ಗೋಲ್ಡ್ ಮೈನ್ಸ್ ಧ್ರುವ ಸರ್ಜಾ ಜೊತೆ ಕೈ ಜೋಡಿಸ್ತಿರೋದು ಗ್ರೇಟ್. ಈ ಇಬ್ಬರ ಮಹಾ ಸಂಗಮದಿಂದ ಬಹುದೊಡ್ಡ ಪ್ಯಾನ್ ಇಂಡಿಯಾ ಸಿನಿಮಾ ತಯಾರಾಗಲಿದೆ.
ಅಂದಹಾಗೆ ಕೆರೆಬೇಟೆ ಚಿತ್ರದ ಮೂಲಕ ಗೋವಾ ಫಿಲ್ಮ್ ಫೆಸ್ಟ್‌ವರೆಗೂ ಎಲ್ಲರ ಗಮನ ಸೆಳೆದಂತಹ ನಿರ್ದೇಶಕ ರಾಜ್‌ಗುರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಮೂಲಕ ಧ್ರುವ ಪ್ಯಾನ್ ಇಂಡಿಯಾ ಬೇಟೆಗೆ ಸಜ್ಜಾಗಿದ್ದಾರೆ. ಸಿನಿಮಾಗಳ ಪಾತ್ರಗಳಿಗೆ ಅನುಗುಣವಾಗಿ ದೇಹವನ್ನು ಸಿದ್ಧಗೊಳಿಸೋ ಧ್ರುವ ಸರ್ಜಾ, ಈ ಬಾರಿ ವೆಯ್ಟ್ ಹೆಚ್ಚಿಸಿಕೊಳ್ತಾರಾ ಅಥ್ವಾ ಕಡಿಮೆ ಮಾಡಿಕೊಳ್ತಾರಾ ಅನ್ನೋದು ಸರ್‌ಪ್ರೈಸ್. ಒಟ್ಟಾರೆ ಈ ಕಾಂಬೋದಿಂದ ಒಂದೊಳ್ಳೆ ಹೈ ವೋಲ್ಟೇಜ್ ಆ್ಯಕ್ಷನ್ ವೆಂಚರ್ ಹೊರಬರಲಿದೆ.
ಧ್ರುವ ಸರ್ಜಾಗೆ ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್ ನಾಯಕನಟಿ ಅನ್ನೋದು ಎಲ್ಲೆಡೆ ಹರಿದಾಡ್ತಿದೆ. ಆದ್ರೆ ಕೀರ್ತಿ ಸುರೇಶ್ ಈ ಚಿತ್ರದಲ್ಲಿ ನಟಿಸ್ತಿಲ್ಲ ಅನ್ನೋದು ಎಷ್ಟೋ ಮಂದಿಗೆ ಗೊತ್ತಿಲ್ಲ. ಹೌದು.. ಡೇಟ್ಸ್ ಕ್ಲ್ಯಾಶ್‌ನಿಂದಾಗಿ ಕೀರ್ತಿ ಸುರೇಶ್ ಜೊತೆಗಿನ ಮಾತುಕತೆ ವಿಫಲವಾಗಿದೆ. ಕೇಳಿದಷ್ಟು ರೆಮ್ಯುನರೇಷನ್ ಕೊಡಲು ಸಿದ್ದವಿದ್ದರೂ ಸಹ, ಆಕೆ ಬೇರೆ ಚಿತ್ರಗಳಿಗೆ ಕಮಿಟ್ ಆಗಿರೋದ್ರಿಂದ ಕನ್ನಡಕ್ಕೆ ಕಾಲಿಡೋ ಕೀರ್ತಿ ಸುರೇಶ್ ಪ್ರಯತ್ನ ವ್ಯರ್ಥವಾಗ್ತಿದೆ.
