ಆಗ ಮಾದೇವ..ಈಗ ಬಲರಾಮ..ಮಾಕಾಳಮ್ಮ ಕಾಪಾಡಮ್ಮಾ

ಬಿಗ್ ಹಿಟ್ ನಿರೀಕ್ಷೆ.. ವಿನೋದ್ ಪ್ರಭಾಕರ್ ಮೇಲೆ ಭರವಸೆ..!!

Untitled design 2026 06 13T181852.757

ಕಳೆದ ವರ್ಷ ಮಾದೇವ ಅನ್ನೋ ಹಿಟ್ ಮೂವಿ ನೀಡಿದ್ದ ವಿನೋದ್ ಪ್ರಭಾಕರ್, ಈ ವರ್ಷ ಬಲರಾಮನ ದಿನಗಳು ಚಿತ್ರದ ಮೂಲಕ ಅಂಥದ್ದೇ ಭರವಸೆ ಮೂಡಿಸಿದ್ದಾರೆ. ಅದಕ್ಕೆ ಬಂಡೆ ಮಾಕಾಳಮ್ಮನ ಆಶೀರ್ವಾದ ಕೂಡ ಸಿಕ್ಕಾಗಿದೆ. ಅಧಿಕೃತವಾಗಿ ಪ್ರಮೋಷನ್ಸ್‌ಗೆ ಚಾಲನೆ ನೀಡಿರೋ ಚಿತ್ರತಂಡದ ಹುರುಪು, ಹುಮ್ಮಸ್ಸು ಎಂಥದ್ದು ಅನ್ನೋದಕ್ಕೆ ಉತ್ತರ ಇಲ್ಲಿದೆ ನೋಡಿ.

ಬಲರಾಮನ ದಿನಗಳು.. ಇದೇ ಜೂನ್ 26ಕ್ಕೆ ತೆರೆಗೆ ಬರ್ತಿರೋ ಕನ್ನಡದ ಈ ವರ್ಷದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಮೂವಿ. ಯಾಕಂದ್ರೆ ಕಳೆದ ವರ್ಷ ಮಾದೇವ ಅನ್ನೋ ಬಿಗ್ ಹಿಟ್ ನೀಡಿದ್ದ ನಟ ವಿನೋದ್ ಪ್ರಭಾಕರ್ ಈ ವರ್ಷ ಅದೇ ರೀತಿ ಬಲರಾಮನ ದಿನಗಳು ಸಿನಿಮಾನ ಬಾಕ್ಸ್ ಆಫೀಸ್ ಹಿಟ್ ಆಗಿಸೋ ಧಾವಂತದಲ್ಲಿದ್ದಾರೆ. ಅಂದಹಾಗೆ ಅದಕ್ಕೆ ಪೂರಕವಾಗಿ ಸಿನಿಮಾದ ಕಥೆ, ಪಾತ್ರಗಳು, ಮೇಕಿಂಗ್ ಕೂಡ ಇದೆ.

ಬೆಂಗಳೂರು ಭೂಗತಲೋಕದ ಕಥಾನಕ ಹೊಂದಿರೋ ಈ ಸಿನಿಮಾ ರೆಟ್ರೋ ರೌಡಿಸಂ ಜಾನರ್‌ನದ್ದಾಗಿದೆ. ಅಲ್ಲದೆ, ಅದರ ನಡುವೆ ನವಿರಾದ ಪ್ರೇಮಕಥೆ ಕೂಡ ಹೊಂದಿದೆ. ವಿನೋದ್ ಪ್ರಭಾಕರ್‌ಗೆ ಜೋಡಿಯಾಗಿ ಅಪ್ಪು ರಾಜಕುಮಾರ ಚಿತ್ರದ ನಾಯಕನಟಿ ಪ್ರಿಯಾ ಆನಂದ್ ಬಣ್ಣ ಹಚ್ಚಿದ್ದು, ಆನೆ ವಿನಯ್, ಆಶೀಶ್ ವಿದ್ಯಾರ್ಥಿ, ಅತುಲ್ ಕುಲಕರ್ಣಿ, ರಮೇಶ್ ಇಂದಿರಾ ಸೇರಿದಂತೆ ಸಾಕಷ್ಟು ನುರಿತ ಕಲಾವಿದರ ದಂಡಿದೆ.

ಈಗಾಗ್ಲೇ ಟೀಸರ್, ಸಾಂಗ್ಸ್ ದೊಡ್ಡ ಮಟ್ಟಕ್ಕೆ ರೀಚ್ ಆಗಿದ್ದು, ಸದ್ಯದಲ್ಲೇ ಟ್ರೈಲರ್ ಕೂಡ ಬಿಡುಗಡೆ ಆಗಲಿದೆ. ಇಂಟರೆಸ್ಟಿಂಗ್ ಅಂದ್ರೆ ಈ ಸಿನಿಮಾಗೆ ಆ ದಿನಗಳು ಸಿನಿಮಾ ಖ್ಯಾತಿಯ ಚೈತನ್ಯ ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ. ಇತ್ತೀಚೆಗೆ ಸಿನಿಮಾದ ಪ್ರಮೋಷನ್ಸ್‌ಗೆ ಬಂಡೆ ಮಹಾಕಾಳಿ ಆಲಯದಲ್ಲಿ ವಿಶೇಷ ಪೂಜೆ ಸಲ್ಲಿಸೋ ಮೂಲಕ ಚಾಲನೆ ನೀಡಿತು ಚಿತ್ರತಂಡ. ರಾಜ್ಯಾದ್ಯಂತ ಸಂಚರಿಸೋ ಟ್ಯಾಬ್ಲೋಗೆ ಪೂಜೆ ಸಲ್ಲಿಸಿ, ರಾಜ್ಯ ಯಾತ್ರೆಗೆ ಕಳುಹಿಸಿದ್ದು ಇಂಟರೆಸ್ಟಿಂಗ್.

ತಮಿಳಿನ ಸಂತೋಷ್ ನಾರಾಯಣನ್ ಸಂಗೀತ ಸಂಯೋಜನೆ ಈ ಸಿನಿಮಾಗಿದ್ದು, ಹಿರಿಯನಟಿ ತಾರಾ ಅವರ ಪತಿ ಹೆಚ್ ಸಿ ವೇಣು ಸಿನಿಮಾಟೋಗ್ರಫಿಯಲ್ಲಿ ನೋಡುಗರಿಗೆ ಮುದ ನೀಡುವಂತಹ ಕಲರ್ ಪ್ಯಾಲೆಟ್‌‌ನಲ್ಲಿ ಚಿತ್ರ ತಯಾರಾಗಿದೆ. ಪದ್ಮಾವತಿ ಜಯರಾಮ್ ಹಾಗೂ ಶ್ರೇಯಸ್ ನಿರ್ಮಾಣದ ಸಿನಿಮಾ ಇದಾಗಿದೆ. 7 ಕೋಟಿಗಿಂತ ಜಾಸ್ತಿ ಬಜೆಟ್ ಬೇಡ ಅಂತ ವಿನೋದ್ ಪ್ರಭಾಕರ್ ಹೇಳಿದ್ರೂ ಸಹ, ಸಿನಿಮಾ ಮೇಲಿನ ಪ್ಯಾಷನ್‌‌ನಿಂದ ನಿರ್ಮಾಪಕರು ಬಹುಕೋಟಿ ವೆಚ್ಚದಲ್ಲಿ ಚಿತ್ರ ನಿರ್ಮಿಸಿದ್ದಾರೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್  

Exit mobile version