ಇಂದು ರಾಜ್ಯಾದ್ಯಂತ ತೆರೆ ಕಂಡ ಸ್ಪಾರ್ಕ್ ಸಿನಿಮಾ

ಜ್ಞಾನೇಶ್ (4)

ಸಾಕಷ್ಟು‌ ನಿರೀಕ್ಷೆ ಹುಟ್ಟಿಸಿದ್ದ ಸ್ಪಾರ್ಕ್ ಸಿನಿಮಾ ಇಂದು ರಾಜ್ಯಾದ್ಯಂತ ರಿಲೀಸ್ ಆಗಿದೆ. ಹೊಸ ಪ್ರಯೋಗದ ಮೂಲಕ ಥಿಯೇಟರ್‌‌‌ಗೆ ಎಂಟ್ರಿಕೊಟ್ಟ ಸ್ಪಾರ್ಕ್.. ಪ್ರೇಕ್ಷಕರ ಬ್ರೈನ್‌ಗೆ ಕಿಡಿ ಹಚ್ಚಿದೆ. ಹಾಗಾದ್ರೆ ಸ್ಪಾರ್ಕ್ ಫಸ್ಟ್ ಡೇ ಫಸ್ಟ್ ಹೇಗಿದೆ..? ಪ್ರೇಕ್ಷಕರು ಕೊಟ್ಟ ಮಾರ್ಕ್ಸ್ ಎಷ್ಟು..? ಸ್ಪಾರ್ಕ್ ಸಿನಿಮಾದಲ್ಲಿ ನಿರಂಜನ್ ಹಾಗೂ ಪ್ರೇಮ್ ಜುಗಲ್‌‌ಬಂದಿ ಹೇಗಿದೆ ಅನ್ನೋದಕ್ಕೆ ಈ ರಿವ್ಯೂ ರಿಪೋರ್ಟ್ ಒಮ್ಮೆ ನೋಡಿ.

ಸ್ಪಾರ್ಕ್.. ಮಹಾಂತೇಶ್ ಹಂದ್ರಾಳ್ ನಿರ್ದೇಶನದ ಹಾಗೂ ಗರಿಮಾ ಅವಿನಾಷ್ ವಸಿಷ್ಟ ನಿರ್ಮಾಣದ ಚೊಚ್ಚಲ ಸಿನಿಮಾ. ಇಂದು ಗ್ರ್ಯಾಂಡ್ ಆಗಿ ರಿಲೀಸ್ ಆಗಿ ಪ್ರೇಕ್ಷಕರನ್ನು ಮ್ಯಾಗ್ನೆಟ್‌ನಂತೆ ಸೆಳೆಯುತ್ತಿದೆ. ಮಾಧ್ಯಮ, ಖಾಕಿ ಪಡೆ ಹಾಗೂ ರಾಜಕೀಯ ರಂಗದ ಸುತ್ತ ಹೆಣೆದಿರೋ ಈ ಕಥೆಗೆ ಶ್ರೀಧರ್ ವಿ. ಸಂಭ್ರಮ್ ನೀಡಿದ ಹಿನ್ನೆಲೆ ಸಂಗೀತ ಮತ್ತು ಹಾಡುಗಳು ಕಥೆಯ ತೀವ್ರತೆಯನ್ನು ಹೆಚ್ಚಿಸಿವೆ. ಪ್ರೊಡಕಷನ್ ವ್ಯಾಲ್ಯೂಸ್ ಪ್ರತೀ ಫ್ರೇಮ್‌ನಲ್ಲೂ ರಿಚ್ ಆಗಿ ಕಂಗೊಳಿಸ್ತಿದ್ದು, ಮೇಕಿಂಗ್ ಹಾಗೂ ಮೈ ನವಿರೇಳಿಸೋ ಟೇಕಿಂಗ್‌ಗೆ ಆಡಿಯನ್ಸ್ ಫುಲ್ ಫಿದಾ ಆಗಿದ್ದಾರೆ.

ಇನ್ನೂ ತೆರೆಯ ಮೇಲೆ ಪವರ್‌‌‌ಫುಲ್ ಜರ್ನಲಿಸ್ಟ್ ಅವತಾರದಲ್ಲಿ ಮಿಂಚಿರೋ ನಿರಂಜನ್ ಸುಧೀಂದ್ರ ಹಾಗೂ ಇನ್ವೆಸ್ಟಿಗೇಟಿವ್ ಆಫೀಸರ್ ಆಗಿ ಲವ್ಲಿಸ್ಟಾರ್ ಪ್ರೇಮ್ ಕಾಣಿಸಿಕೊಂಡಿದ್ದಾರೆ. ಸದ್ಯ ಇಬ್ಬರ ಕೆಮಿಸ್ಟ್ರಿ ಅಕ್ಷರಶಃ ಪಟಾಕಿಯಂತೆ ಸಿಡಿಯುತ್ತಿದೆ. ಗ್ಲಾಮರಸ್ ಬ್ಯೂಟಿ ರಚನಾ ಇಂದರ್ ತಮ್ಮ ಕ್ಯೂಟ್ ಅಭಿನಯದಿಂದ ಯುವಕರ ನಿದ್ದೆ ಗೆಡಿಸಿದ್ದಾರೆ. ಇವರ ಜೊತೆಗೆ ರಮೇಶ್ ಇಂದಿರ, ಧರ್ಮಣ್ಣ, ಮಹಾಂತೇಶ್ ಮತ್ತು ನವನಟ ಅಭಯ್ ಸೇರಿದಂತೆ ದೊಡ್ಡ ತಾರಾಗಣವಿದೆ. ಪ್ರತಿಯೊಂದು ಪಾತ್ರವೂ ಕಥೆಗೆ ಒಂದೊಳ್ಳೆ ಆಯಾಮವನ್ನು ತಂದುಕೊಟ್ಟಿವೆ. ಬೆಂಗಳೂರಿನ ಸಂತೋಷ್ ಥಿಯೇಟರ್ ಗೆ ಆಗಮಿಸಿದ ಪ್ರೇಮ್, ನಿರಂಜನ್ ಹಾಗೂ ಸ್ಪಾರ್ಕ್ ತಂಡ ಪ್ರೇಕ್ಷಕರ ಜೊತೆ ಸಿನಿಮಾ ನೋಡಿ ಹೇಳಿದ್ದು ಹೀಗೆ.

ಸಿನಿಮಾದ ಅಸಲಿ ಕಥೆಯ ಗೇಮ್ ಚೇಂಜರ್ ಅಂದ್ರೇನೆ ಪತ್ರಿಕೋದ್ಯಮದ ಪವರ್. ಸಮಾಜದಲ್ಲಿ ಜಾತಿ ಅನ್ನೋದನ್ನೇ ಅಸ್ತ್ರವನ್ನಾಗಿ ಇಟ್ಟುಕೊಂಡು, ಜನರ ನಂಬಿಕೆಯನ್ನೇ ಬಂಡವಾಳವಾಗಿಸಿಕೊಂಡು ಹೇಗೆ ಕೋಟಿ ಕೋಟಿ ಲೂಟಿ ಮಾಡಿ ಮೋಸ ಮಾಡಬಹುದು ಅನ್ನೋ ಕಹಿ ಸತ್ಯವನ್ನು ಈ ಚಿತ್ರ ಕಣ್ಣಿಗೆ ಕಟ್ಟುವಂತೆ ಬಿಚ್ಚಿಟ್ಟಿದೆ. ಬ್ಯಾಂಕಿಂಗ್ ಸೆಕ್ಟರ್‌ನಲ್ಲಿ ನಡೆಯೋ ಕೋಟಿ ಕೋಟಿ ಹಣದ ಲೂಟಿಯನ್ನು ಲೈವ್ ಆಗಿ ಎಕ್ಸ್‌‌ಪೋಸ್ ಮಾಡೋ ಸ್ಟಿಂಗ್ ಆಪರೇಷನ್ ಈ ಕಥೆಯ ಹಾರ್ಟ್ ಬೀಟ್. ಕಷ್ಟಪಟ್ಟು ದುಡಿದ ಸಾಮಾನ್ಯ ಜನರ ಹಣ ನುಂಗಿ ನೀರು ಕುಡಿದ ಬ್ಯಾಂಕ್ ಇದ್ದಕ್ಕಿದ್ದಂತೆ ದಿವಾಳಿಯಾದಾಗ, ಅದರ ಹಿಂದಿರೋ ಅಸಲಿ ಸೂತ್ರಧಾರ ಯಾರು ಅನ್ನೋದೇ ಬಿಗ್ ಸಸ್ಪೆನ್ಸ್.

ಇನ್ನು ಸಿನಿಮಾದ ಕ್ಲೈಮಾಕ್ಸ್ ನಲ್ಲಿ ಬಿಗ್ ಟ್ವಿಸ್ಟ್ ಕೊಡೋದೇ ನಟಿ ಭಾವನಾ. ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿರೋ ಜಾಕಿ ಭಾವನಾ, ತಮ್ಮ ಗಂಭೀರ ಹಾಗೂ ಪವರ್‌ಫುಲ್ ಅಭಿನಯದ ಮೂಲಕ ಇಡೀ ಕಥೆಯ ಗತಿಯನ್ನೇ ಬದಲಿಸಿ ಬಿಗ್ ಟ್ವಿಸ್ಟ್ ಕೊಟ್ಟಿದ್ದಾರೆ. ಇದರ ಜೊತೆಗೆ ಥಿಯೇಟರ್‌ಗಳಲ್ಲಿ ಯುವಜನತೆಯನ್ನು ತೂಗಾಡಿಸಿದ್ದು ಶ್ರೀಧರ್ ವಿ. ಸಂಭ್ರಮ್ ಅವರ ಮ್ಯೂಸಿಕ್‌ನಲ್ಲಿ ಮೂಡಿಬಂದ ಚಾರ್ಟ್‌ಬಸ್ಟರ್ ಹಾಡುಗಳು. ಅದ್ರಲ್ಲೂ ಶಕಲಕ ಸಾಂಗ್‌ನಲ್ಲಿ ನಿರಂಜನ್ ಸುಧೀಂದ್ರ ಹೊಡೆದಿರೋ ಮಾಸ್ ಅಂಡ್ ಕ್ಲಾಸ್ ಸ್ಟೆಪ್ಸ್‌ಗೆ ಫ್ಯಾನ್ಸ್ ಅಕ್ಷರಶಃ ಕುಣಿಯುತ್ತಿದ್ದಾರೆ.

ಒಟ್ಟಿನಲ್ಲಿ, ಜಾತೀಯತೆ ಮತ್ತು ಭ್ರಷ್ಟಾಚಾರದ ವಿರುದ್ಧ ಕಣ್ಣು ತೆರೆಸೋ ಸಾಮಾಜಿಕ ಸಂದೇಶದ ಜೊತೆಗೆ ಕಮರ್ಷಿಯಲ್ ಎಲಿಮೆಂಟ್ಸ್‌ಗಳನ್ನು ಹದವಾಗಿ ಬೆರೆಸಿ ಸಿದ್ಧಪಡಿಸಿದ ಮಾಸ್ ಮಿರ್ಚಿ ಈ ಸ್ಪಾರ್ಕ್. ರಾಜಕೀಯದ ಕುತಂತ್ರವನ್ನು ಮೆಟ್ಟಿ ನಿಂತು ನಾಯಕ ಗೆಲ್ತಾನಾ..? ನಿರಂಜನ್ ಹಾಗೂ ಪ್ರೇಮ್ ನಡುವಿನ ಈ ಹೈ-ವೋಲ್ಟೇಜ್ ಜುಗಲ್‌ಬಂದಿಯಲ್ಲಿ ಗೆದ್ದು ಬೀಗೋದು ಯಾರು..? ಈ ಸಸ್ಪೆನ್ಸ್ ಹಾಗೂ ಎಂಟರ್‌‌ಟೈನ್ಮೆಂಟ್‌‌ನ ಎಕ್ಸ್‌ಪೀರಿಯೆನ್ಸ್ ಮಾಡಬೇಕು ಅಂದ್ರೆ ತಡಮಾಡದೇ ಹತ್ತಿರದ ಥಿಯೇಟರ್‌ಗೆ ಭೇಟಿ ನೀಡಿ.

ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್

 

 

 

Exit mobile version