ಬೆಂಗಳೂರು: ನಟ ಧ್ರುವ ಸರ್ಜಾ ವಿರುದ್ಧ ನಿರ್ದೇಶಕ ಮತ್ತು ನಿರ್ಮಾಪಕ ರಾಘವೇಂದ್ರ ಹೆಗಡೆಯವರಿಂದ 3.15 ಕೋಟಿ ರೂಪಾಯಿಗಳನ್ನು ಪಡೆದುಕೊಂಡು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ, ಈ ಆರೋಪವನ್ನು ಸುಳ್ಳು ಎಂದು ಧ್ರುವ ಮ್ಯಾನೇಜರ್ ಅಶ್ವಿನ್ ಗ್ಯಾರಂಟಿ ನ್ಯೂಸ್‌ಗೆ ಸ್ಪಷ್ಟನೆ ಕೊಟ್ಟಿದ್ದಾರೆ.
ನಿರ್ದೇಶಕ ರಾಘವೇಂದ್ರ ಹೆಗ್ಡೆ ಅವರಿಂದ ಧ್ರುವ ಸರ್ಜಾ ಅವರ ಮೇಲೆ 3 ಕೋಟಿ ರೂಪಾಯಿ ವಂಚನೆಯ ಆರೋಪಗಳನ್ನು ಅವರ ಮ್ಯಾನೇಜರ್ ಅಶ್ವಿನ್ ಶುದ್ಧ ಸುಳ್ಳು ಎಂದು ಆರೋಪವನ್ನು ನಿರಾಕರಿಸಿದ್ದಾರೆ. 2018ರಲ್ಲಿ ಸೋಲ್ಜರ್ ಸಿನಿಮಾ ಮಾಡಲು 3.15 ಕೋಟಿ ರೂಪಾಯಿ ಹಣ ನೀಡಿದ್ದರು. ನಂದಿನಿ ಎಂಟರ್ಟೇನ್ಮೆಂಟ್ನಿಂದ 20 ಲಕ್ಷ ರೂಪಾಯಿ ಹಾಗೂ ರಾಘವೇಂದ್ರ ಕಡೆಯಿಂದ 2.95 ಲಕ್ಷ ರೂಪಾಯಿ ಬಂದಿತ್ತು. ನಂದಿನಿ ಸಂಸ್ಥೆ ಹಾಗೂ ರಾಘವೇಂದ್ರ ಅವರಿಗೆ ಏನೋ ಸಮಸ್ಯೆ ಆಗಿದ್ದರಿಂದ 20 ಲಕ್ಷ ರೂಪಾಯಿ ಹಣವನ್ನು ನಾವು ಹಿಂದಿರುಗಿಸಿದ್ದೆವು. ಉಳಿದ ಹಣಕ್ಕೆ ಒಂದು ಸಿನಿಮಾ ಮಾಡಬೇಕಿತ್ತು. ಇದಕ್ಕಾಗಿ ಅವರು ಮೂರು ತಿಂಗಳು ಅವಕಾಶ ಕೇಳಿದ್ದರು’ ಎಂದು ಧ್ರುವ ಮ್ಯಾನೇಜರ್ ಅಶ್ವಿನ್ ತಿಳಿಸಿದ್ದಾರೆ.
ಚಿತ್ರದ ವಿಳಂಬಕ್ಕೆ ಕಾರಣವೇನು?
ರಾಘವೇಂದ್ರ ಅವರು ನಿರಂತರವಾಗಿ ಸಮಯ ಕೇಳುತ್ತಿದ್ದರು. ನಾಲ್ಕೂವರೆ ವರ್ಷಗಳ ನಂತರ ಸ್ಕ್ರಿಪ್ಟ್‌ನ ಮೊದಲಾರ್ಧವನ್ನು ಸಲ್ಲಿಸಿದರು. ಎರಡನೆಯ ಭಾಗ ಇನ್ನೂ ಸಿಗಲಿಲ್ಲ. ಈ ಅವಧಿಯಲ್ಲಿ ಅವರು ಹಠಾತ್ತನೆ ಕನ್ನಡದ ಬದಲು ತೆಲುಗು/ಹಿಂದಿಯಲ್ಲಿ ಚಿತ್ರ ಮಾಡಬೇಕೆಂದು ಸೂಚಿಸಿದರು. ರಾಘವೇಂದ್ರ ಅವರು ಸೋಲ್ಜರ್ ಚಿತ್ರವನ್ನು ತೆಲುಗು/ಹಿಂದಿಯಲ್ಲಿ ಮಾಡಲು ಒತ್ತಾಯಿಸಿದಾಗ ಧ್ರುವ ಅವರು ‘ಕನ್ನಡದಲ್ಲೇ ಮಾಡಬೇಕು’ ಎಂದು ಪಟ್ಟು ಹಿಡಿದರು.
ನಾವು ಇದೇ ಜೂನ್ 28ರ ಭೇಟಿಯಾಗಿದ್ದೆವು. ಆಗ ಮತ್ತೆ ಪ್ರಸ್ತಾಪ ಮಾಡಿದ್ದರೂ, ಧ್ರುವ ನಿರಾಕರಿಸಿದರು. ಅಂತಿಮವಾಗಿ ಕನ್ನಡದಲ್ಲೇ ಚಿತ್ರೀಕರಣ ಎಂದು ತೀರ್ಮಾನಿಸಲಾಯಿತು. ಅಕ್ಟೋಬರ್‌ನಿಂದ ಡೇಟ್ಸ್ ಕೇಳಿದ ರಾಘವೇಂದ್ರ ಅವರಿಗೆ ನಾವು ತಕ್ಷಣ ಸಿದ್ಧತೆ ತಿಳಿಸಿದೆವು ಆದರೆ, ಜುಲೈನಲ್ಲಿ ನೋಟೀಸ್ ಕೊಟ್ಟ ನಂತರವೂ ಅವರು 100 ಬಾರಿ ಕರೆ ಮಾಡಿದರೂ ಅವರು ಉತ್ತರಿಸಲಿಲ್ಲ ಉದ್ದೇಶಪೂರ್ವಕವಾಗಿ ವಿಳಂಬ ಮಾಡಿದ್ದಾರೆ
ನಾವು ಹಣ ಕೊಡಲು ನಿರಾಕರಿಸಿಲ್ಲ. ರಾಘವೇಂದ್ರ ಅವರೊಂದಿಗೆ ಕುಳಿತು ಬಗೆಹರಿಸಲು ನಿರಂತರ ಪ್ರಯತ್ನಿಸಿದೆವು. ಆದರೆ ಅವರು ಅಲ್ಲಿ ವಿರುದ್ಧ ವರ್ತನೆ ತೋರಿಸಿದರು. ಕೋರ್ಟ್‌ನಲ್ಲಿ ಎಲ್ಲಾ ದಾಖಲೆಗಳನ್ನು ಸಲ್ಲಿಸಲಿದ್ದೇವೆ. ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಇದೆ. ವಂಚನೆಯ ಆರೋಪ ಸಂಪೂರ್ಣ ಸುಳ್ಳು. ಚಿತ್ರ ವಿಳಂಬ ಮತ್ತು ಭಾಷಾ ಒತ್ತಾಯಗಳ ಆಡಿಟ್ ರಿಪೋರ್ಟ್‌ಗಳು ಎಲ್ಲವೂ ಕೋರ್ಟ್ ಮುಂದೆ ಬರಲಿವೆ ಎಂದು ಅಶ್ವಿನ್ ಹೇಳಿದ್ದಾರೆ.