He Was Everything To Me-ಧರ್ಮೇಂದ್ರ ಬಗ್ಗೆ ಹೇಮಾಮಾಲಿನಿ ಭಾವುಕ ಪೋಸ್ಟ್‌

Untitled design (98)

ಮುಂಬೈ: ಬಾಲಿವುಡ್‌ನ ಲಿವಿಂಗ್ ಲೆಜೆಂಡ್, ಹೀ ಮ್ಯಾನ್ ಧರ್ಮೇಂದ್ರ (89) ಅವರು ನವೆಂಬರ್  ರಂದು ಬೆಳಗ್ಗೆ ತಮ್ಮ ಮುಂಬೈ ನಿವಾಸದಲ್ಲಿ ಕೊನೆಯುಸಿರೆಳೆದ ನಂತರ ಸಿನಿರಂಗ ಮತ್ತು ಅಭಿಮಾನಿ ವಲಯ ದಿಗ್ಭ್ರಮೆಗೊಂಡಿದೆ. ಧರ್ಮೇಂದ್ರ ಅವರ ಎರಡನೇ ಪತ್ನಿ, ಖ್ಯಾತ ನಟಿ ಹೇಮಾಮಾಲಿನಿ ಇಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ಭಾವುಕ ಪೋಸ್ಟ್‌ ಹಂಚಿಕೊಂಡಿದ್ದಾರೆ.

ತಮ್ಮ ಪೋಸ್ಟ್‌ನಲ್ಲಿ, ನನಗೆ ಪತಿಯಾಗಿ, ತಂದೆಯಾಗಿ, ಅತ್ಯಂತ ಪ್ರೀತಿಯ ಸ್ನೇಹಿತನಾಗಿ, ಮಾರ್ಗದರ್ಶಕರಾಗಿ, ನನ್ನ ಎರಡು ಹೆಣ್ಣುಮಕ್ಕಳಾದ ಈಶಾ ಡಿಯೋಲ್ ಮತ್ತು ಅಹಾನಾ ಡಿಯೋಲ್‌ಗೆ ಅಪ್ಪಟ ಪ್ರೀತಿಯ ತಂದೆಯಾಗಿ, ಎಲ್ಲ ಕೆಟ್ಟ ಸಮಯದಲ್ಲೂ ಮತ್ತು ಒಳ್ಳೆಯ ಸಮಯದಲ್ಲೂ ನನ್ನ ಜೊತೆಯಲ್ಲಿದ್ದ ಏಕೈಕ ವ್ಯಕ್ತಿ. ನನಗೆ ಅವರೇ ಎಲ್ಲವೂ ಆಗಿದ್ದರು.

ಅವರು ನನ್ನ ಕುಟುಂಬದೊಂದಿಗೆ ತುಂಬಾ ಪ್ರೀತಿಯಿಂದ ಬೆರೆತುಹೋಗಿದ್ದರು. ಸನ್ನಿ, ಬಾಬಿ, ಈಶಾ, ಅಹಾನಾ ಎಲ್ಲರ ಮೇಲೂ ಅಪಾರ ವಿಶೇಷ ಕಾಳಜಿ, ಪ್ರೀತಿ ಇಟ್ಟುಕೊಂಡಿದ್ದರು. ಹೊರಗಿನ ಜಗತ್ತಿಗೆ ಅವರು ದೊಡ್ಡ ಸ್ಟಾರ್ ಆಗಿದ್ದರೂ, ಮನೆಯೊಳಗೆ ಅವರು ಅತ್ಯಂತ ನಮ್ರತೆಯಿಂದ ಹಾಗೂ ಸರಳವಾಗಿದ್ದರು. ಜೊತೆಗೆ ಮನೆಯಲ್ಲಿ ಎಲ್ಲರೊಂದಿಗೆ ಪ್ರೀತಿಯಿಂದ ನಡೆದುಕೊಳ್ಳುತ್ತಿದ್ದರು.

ಧರ್ಮೇಂದ್ರ ಅವರ ಅಂತಿಮ ದರ್ಶನಕ್ಕೆ ಮುಂಬೈನ ಜುಹುದಲ್ಲಿರುವ ಅವರ ನಿವಾಸದಲ್ಲಿ ಸಾವಿರಾರು ಅಭಿಮಾನಿಗಳು ಗುಂಪುಗೂಡಿದ್ದರು. ಸನ್ನಿ ಡಿಯೋಲ್, ಬಾಬಿ ಡಿಯೋಲ್, ಈಶಾ ಡಿಯೋಲ್, ಅಹಾನಾ ಡಿಯೋಲ್, ಅಭಯ ಡಿಯೋಲ್ ಸೇರಿದಂತೆ ಕುಟುಂಬದ ಎಲ್ಲ ಸದಸ್ಯರು ಭಾವುಕರಾಗಿದ್ದರು.

ಗುರುವಾರ (ನವೆಂಬರ್ 27) ಸಂಜೆ ಮುಂಬೈನ ಪಂಚತಾರಾ ಹೋಟೆಲ್‌ನಲ್ಲಿ ವಿಶೇಷ ಪ್ರೇಯರ್ ಮೀಟ್ ಆಯೋಜಿಸಲಾಗಿದೆ. ಇದರಲ್ಲಿ ಅಮಿತಾಭ್ ಬಚ್ಚನ್, ಶಾರುಖ್ ಖಾನ್, ಸಲ್ಮಾನ್ ಖಾನ್, ಐಶ್ವರ್ಯ ರೈ, ರಾಕೇಶ್ ರೋಷನ್, ಅನಿಲ್ ಕಪೂರ್ ಸೇರಿದಂತೆ ಬಾಲಿವುಡ್‌ನ ದಿಗ್ಗಜರು ಭಾಗವಹಿಸುವ ನಿರೀಕ್ಷೆ ಇದೆ.

ಧರ್ಮೇಂದ್ರ ಅವರು 60 ವರ್ಷಗಳ ಬಣ್ಣಮಯ ಸಿನಿಮಾ ಜೀವನದಲ್ಲಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಶೋಲೆ, ಚುಪ್ಕೆ ಚುಪ್ಕೆ, ಸೀತಾ ಔರ್ ಗೀತಾ, ಧರ್ಮವೀರ್, ಯಮಲಾ ಪಗ್ಲಾ ದೀವಾನಾ ಸೇರಿದಂತೆ ಅನೇಕ ಕಾಲಾತೀತ ಚಿತ್ರಗಳನ್ನು ನೀಡಿದ್ದಾರೆ. ಪದ್ಮಶ್ರೀ, ಫಿಲ್ಮ್‌ಫೇರ್ ಲೈಫ್‌ಟೈಮ್ ಅಚೀವ್‌ಮೆಂಟ್ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಭಾಜನರಾಗಿದ್ದರು. ಧರ್ಮೇಂದ್ರ ಅವರ ನಿಧನದಿಂದ ಬಾಲಿವುಡ್ ಒಂದು ಯುಗದ ಅಂತ್ಯ ಕಂಡಿದೆ ಎನ್ನುತ್ತಿದೆ ಸಿನಿಪ್ರೇಕ್ಷಕ ವಲಯ.

Exit mobile version