ಪತ್ನಿಗೆ ಡಿವೋರ್ಸ್ ನೀಡಿ ಒಂಟಿಯಾಗಿದ್ರೂ ಕೂಡ.. ನಟ ಧನುಷ್‌ಗೆ ಮಾತ್ರ ಮಾಜಿ ಮಾವ ಸೂಪರ್ ಸ್ಟಾರ್ ರಜನಿಕಾಂತ್ ಮೇಲಿನ ಪ್ರೀತಿ ಕಿಂಚಿತ್ತೂ ಕಮ್ಮಿ ಆಗಿಲ್ಲ. ತಲೈವಾ ವರ್ಸಸ್ ಧನುಷ್ ಅಂತ ಅಂದುಕೊಂಡಿದ್ದ ಕಾಲಿವುಡ್ ಬಾಕ್ಸ್ ಆಫೀಸ್‌ಗೆ ಖುದ್ದು ಅಳಿಮಯ್ಯ ಧನುಷ್ ಅವ್ರೇ ಹೊಸ ಸಂದೇಶ ರವಾನಿಸಿದ್ದಾರೆ. ಅದೇನು ಅನ್ನೋದು ಗೊತ್ತಾಗ್ಬೇಕಂದ್ರೆ ಈ ಸ್ಟೋರಿ ನೋಡಿ.
- ರಜನಿ v/s ಧನುಷ್ ಅಲ್ಲ.. ‘ಓಂ’ ವಿತ್ ತಲೈವಾ ‘ಜೈಲರ್-2’
- ಮಾಜಿ ಮಾವ.. ಸೂಪರ್ ಸ್ಟಾರ್ ಮೇಲಿನ ಪ್ರೀತಿ ಕಮ್ಮಿ ಆಗಿಲ್ಲ
- ಜೈಲರ್‌ಗಾಗಿ ಧನುಷ್ ತನ್ನ ‘ಓಂ’ ಸಿನಿಮಾ ಪೋಸ್ಟ್‌ಪೋನ್
- ಸೂರ್ಯ ಜೊತೆ ದೀಪಾವಳಿಗೆ ಬರುವ ‘ಸೀನ್’ ಇಲ್ಲ ಓಂ..!!
ಕ್ಯಾಪ್ಟನ್ ಮಿಲ್ಲರ್ ಸಿನಿಮಾದ ಮನೋಜ್ಞ ಅಭಿನಯಕ್ಕಾಗಿ ಇತ್ತೀಚೆಗೆ ರಾಷ್ಟ್ರಪತಿಗಳಿಂದ ನ್ಯಾಷನಲ್ ಅವಾರ್ಡ್ ಸ್ವೀಕರಿಸಿದ ತಮಿಳು ನಟ ಧನುಷ್‌ಗೆ ಇದ್ದಕ್ಕಿದ್ದಂತೆ ಮಾಜಿ ಮಾವ ರಜನಿಕಾಂತ್ ಮೇಲೆ ಪ್ರೀತಿ, ಉಕ್ಕಿ ಹರಿದಿದೆ. ಯೆಸ್.. ಇದೇ ಅಕ್ಟೋಬರ್ 16ರಂದು ವಿಜಯ ದಶಮಿ ಹಬ್ಬದ ವಿಶೇಷ ತೆರೆ ಕಾಣಬೇಕಿದ್ದ ತಾವೇ ನಟಿಸಿ, ನಿರ್ಮಾಣ ಮಾಡಿರೋ ಓಂ ಸಿನಿಮಾದ ರಿಲೀಸ್‌ನ ಮುಂದೂಡಿದ್ದಾರೆ. ಅದಕ್ಕೆ ಕಾರಣ ತಲೈವಾ ರಜನಿ.
ಸೂಪರ್ ಸ್ಟಾರ್ ನಟನೆಯ ಮೆಗಾ ಮಲ್ಟಿಸ್ಟಾರರ್ ಜೈಲರ್-2 ಅಕ್ಟೋಬರ್ 15ಕ್ಕೆ ಗ್ರ್ಯಾಂಡ್ ಆಗಿ ರಿಲೀಸ್ ಆಗ್ತಿರೋದು ಎಲ್ಲರಿಗೂ ಗೊತ್ತೇಯಿದೆ. ಆದ್ರೆ ಅದರ ಮರುದಿನವೇ ಓಂ ಚಿತ್ರ ಬಂದ್ರೆ.. ಬಾಕ್ಸ್ ಆಫೀಸ್ ನಲ್ಲಿ ರಜನಿಕಾಂತ್ ವರ್ಸಸ್ ಧನುಷ್ ಅಂತ ಥಿಯೇಟರ್ ಹಾಗೂ ಕಲೆಕ್ಷನ್ ಕ್ಲ್ಯಾಶ್ ಆಗಲಿದೆ. ಅದನ್ನ ತಪ್ಪಿಸಲು ಖುದ್ದು ಧನುಷ್ ಅವರೇ ಈ ನಿರ್ಧಾರ ತೆಗೆದುಕೊಂಡಿದ್ದು, ತಲೈವಾ ಜೈಲರ್-2 ಜೊತೆ ರಿಲೀಸ್ ಮಾಡದೆ ಡೇಟ್‌ನ ಪೋಸ್ಟ್‌ಪೋನ್ ಮಾಡಿಕೊಂಡಿದ್ದಾರೆ.
ಅಷ್ಟೇ ಅಲ್ಲ.. ತಮ್ಮ ಮಾಜಿ ಮಾವ ರಜನಿಯನ್ನ ನಾವೆಲ್ಲಾ ಅವ್ರ ಸಿನಿಮಾಗಳನ್ನ ದಶಕಗಳಿಂದ ನೋಡ್ತಾ ಆರಾಧಿಸೋ ಸೂಪರ್ ಸ್ಟಾರ್ ಅವರು. ಅವ್ರ ಜೊತೆ ಬೇಡ ಅಂತ ಮುಂದೂಡಿದ್ದೀವಿ ಅಂತೆಲ್ಲಾ ಪ್ರೀತಿ ತೋರಿದ್ದಾರೆ. ಇನ್‌ಫ್ಯಾಕ್ಟ್ ಸೂರ್ಯ ನಟನೆಯ ಸೀನ್ ಸಿನಿಮಾ ಕೂಡ ಇದೇ ದೀಪಾವಳಿಗೆ ಬಿಡುಗಡೆ ಆಗ್ತಿದ್ದು, ಅದ್ರ ಜೊತೆಗೂ ಬರಲ್ಲ ಅನ್ನೋದನ್ನ ಸ್ಪಷ್ಟಪಡಿಸಿದ್ದಾರೆ. ಇದೊಂಥರಾ ಬಾಕ್ಸ್ ಆಫೀಸ್ ಕ್ಲ್ಯಾಶ್ ತಪ್ಪಿಸುತ್ತಿರುವುದು ಅನ್ನೋದಕ್ಕಿಂತ ಹೆಚ್ಚಾಗಿ ಪರಸ್ಪರ ಒಡಂಬಡಿಕೆ, ಪ್ರೀತಿ, ಅಭಿಮಾನ, ಗೌರವ ಎದ್ದು ಕಾಣ್ತಿದೆ. ಧನುಷ್ ಅವ್ರ ಈ ನಿರ್ಧಾರ ಟ್ರೆಂಡ್ ಸೆಟ್ ಮಾಡಲಿದೆ.
ಈ ಕುರಿತು ಒಂದು ಪತ್ರ ಬರದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರೋ ಧನುಷ್.. ತಮಿಳು ಚಿತ್ರ ಪ್ರೇಮಿಗಳ ಜೊತೆ ತಲೈವಾ, ಸೂರ್ಯ ಫ್ಯಾನ್ಸ್ ದಿಲ್ ಕೂಡ ದೋಚಿದ್ದಾರೆ. ಇದೊಂಥರಾ ಮೆಚೂರ್ಡ್ ಮೂವ್ ಕೂಡ ಹೌದು.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
