ನಟಿ ಮೃಣಾಲ್ ಜೊತೆ ಧನುಷ್ ಕದ್ದು ಮುಚ್ಚಿ ಡೇಟಿಂಗ್

ಮೃಣಾಲ್ ಬರ್ತ್ ಡೇ ಪಾರ್ಟಿಯಲ್ಲಿ ಧನುಷ್ ಮಾಡಿದ್ದೇನು?

Untitled design 2025 08 07t162017.946

ಸೂಪರ್ ಸ್ಟಾರ್ ರಜನೀಕಾಂತ್ ಮಗಳಿಗೆ ಡಿವೋರ್ಸ್‌ ನೀಡಿದ ನಟ ಧನುಷ್, ಇದೀಗ ಮತ್ತೊಬ್ಬ ನಟಿ ಜೊತೆ ಲವ್ವಿ ಡವ್ವಿ ನಡೆಸ್ತಿದ್ದಾರೆ. ಪಾರ್ಟಿ, ಪಬ್ಬು ಅಂತ ಮೋಜು ಮಸ್ತಿ ಮಾಡ್ತಿದ್ದಾರೆ. ಇದೇ ಕಾರಣಕ್ಕೇನಾ ಹೆಂಡ್ತಿ ಜೊತೆ ಕುಸ್ತಿ ಮಾಡಿ ದೂರ ಆಗಿದ್ದು ಅಂತೆಲ್ಲಾ ನೆಟ್ಟಿಗರು ಪ್ರಶ್ನಿಸ್ತಿದ್ದಾರೆ. ಇಷ್ಟಕ್ಕೂ ಯಾರೊಟ್ಟಿಗೆ ಧನುಷ್ ಡೇಟಿಂಗ್..? ಮದ್ವೆ ಆಗ್ತಾರಾ..? ಅನ್ನೋ ಕ್ಯೂರಿಯಾಸಿಟಿಗೆ ಉತ್ತರ ಇಲ್ಲಿದೆ.

ಕಾಲಿವುಡ್ ಸೂಪರ್ ಸ್ಟಾರ್ ಧನುಷ್ ಸದ್ಯ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಅದಕ್ಕೆ ಕಾರಣ ಕುಬೇರ ಸಿನಿಮಾದ ಸಕ್ಸಸ್ ಅಲ್ಲ. ಬದಲಿಗೆ ನಟಿಮಣಿಯೊಂದಿಗೆ ಡೇಟಿಂಗ್ ಮಾಡ್ತಿರೋದು. ಯೆಸ್.. ಇತ್ತೀಚೆಗೆ ತಲೈವಾ ರಜನೀಕಾಂತ್‌ ಪುತ್ರಿ ಐಶ್ವರ್ಯಾ ಜೊತೆಗಿನ ವೈವಾಹಿಕ ಸಂಬಂಧ ಕಡಿದುಕೊಂಡು, ವಿಚ್ಚೇದನ ನೀಡಿದ ನಟ ಧನುಷ್, ಇದೀಗ ಮತ್ತೊಬ್ಬ ನಟಿಮಣಿಯೊಂದಿಗೆ ಕದ್ದುಮುಚ್ಚಿ ಲವ್ ಡುಯೆಟ್ ಹಾಡ್ತಿದ್ದಾರೆ ಎನ್ನಲಾಗ್ತಿದೆ.

2022ರಲ್ಲೇ ಡಿವೋರ್ಸ್‌ ಅನೌನ್ಸ್ ಮಾಡಿದ್ರೂ ಸಹ, 2024ರ ಏಪ್ರಿಲ್‌‌ನಲ್ಲಿ ಡಿವೋರ್ಸ್‌ ಗೆ ಫೈಲ್ ಮಾಡಿ ನವೆಂಬರ್‌‌ನಲ್ಲಿ ಅಧಿಕೃತವಾಗಿ ವಿಚ್ಚೇದನ ಪಡೆದರು. ಒಂದ್ಕಡೆ ಡಿವೋರ್ಸ್‌ ಪಡೆಯುತ್ತಿದ್ದಂತೆ ಮತ್ತೊಂದು ಸೀಕ್ರೆಟ್ ಲವ್ ಶುರುವಿಟ್ಟಿದ್ದಾರೆ ಧನುಷ್. ಹೌದು.. ಇಷ್ಟು ದಿನದಿಂದ ಇಲ್ಲದೇ ಇರೋದು ಇದೀಗ ಸಡನ್ ಆಗಿ ಫ್ರೀ ಬರ್ಡ್‌ ಆದ ಬಳಿಕ ಧನುಷ್ ತಮ್ಮ ನಿಜ ಬಣ್ಣ ತೋರಿಸ್ತಿದ್ದಾರೆ ಅಂತೆಲ್ಲಾ ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.

ಅಂದಹಾಗೆ ಮೃಣಾಲ್ ಠಾಕೂರ್ ಸದ್ಯ ಪ್ಯಾನ್ ಇಂಡಿಯಾದ ಮೋಸ್ಟ್ ಡಿಮ್ಯಾಂಡಿಂಗ್ ನಟಿಮಣಿ. ಮಹಾರಾಷ್ಟ್ರ ಮೂಲದ ಈಕೆ ಮರಾಠಿ ಚಿತ್ರಗಳಿಂದ ಕರಿಯರ್ ಶುರು ಮಾಡಿದ್ರೂ ಸಹ, ಸೌತ್ ದುನಿಯಾದಲ್ಲಿ ಸಿಕ್ಕಾಪಟ್ಟೆ ಸಕ್ಸಸ್ ಆದ್ರು. ಸೀತಾ ರಾಮಮ್, ಹಾಯ್ ನಾನ್ನ, ಕಲ್ಕಿ ಚಿತ್ರಗಳಿಂದ ಟಾಕ್ ಆದ್ರು. ಬಹುಭಾಷಾ ನಟಿಯಾಗಿ ಮಿಂಚು ಹರಿಸ್ತಿರೋ ಈಕೆಯ ಬರ್ತ್ ಡೇ ಪಾರ್ಟಿಯಲ್ಲಿ ಇತ್ತೀಚೆಗೆ ನಟ ಧನುಷ್ ಕಾಣಿಸಿಕೊಂಡಿದ್ದಾರೆ. ಪರಸ್ಪರ ಕೈ ಹಿಡಿದುಕೊಂಡು ಕುಚ್ ಕುಚ್ ಅಂತ ಮಾತಾಡಿಕೊಂಡಿದ್ದಾರೆ.

ಅಲ್ಲದೆ ಕಳೆದ ತಿಂಗಳಲ್ಲಿ ನಡೆದ ಧನುಷ್‌ರ ತೇರೆ ಇಷ್ಕ್ ಮೇ ಚಿತ್ರದ ಸಕ್ಸಸ್ ಪಾರ್ಟಿಯಲ್ಲಿ ಮೃಣಾಲ್ ರಾಜಾರೋಷವಾಗಿ ಭಾಗಿಯಾಗಿ ಪಾರ್ಟಿ ಮಾಡಿದ್ರು. ಇಬ್ಬರೋ ಒಟ್ಟೊಟ್ಟಿಗೆ ಸಿನಿಮಾ ಮಾಡಿಲ್ಲ. ಮಾಡುವ ಪ್ಲ್ಯಾನ್ ಕೂಡ ಇಲ್ಲ. ಆದ್ರೆ ಇವರಿಬ್ಬರ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ. ಇದೇ ಕಾರಣದಿಂದ ಪತ್ನಿ ಐಶ್ವರ್ಯಾಗೆ ಡಿವೋರ್ಸ್‌ ನೀಡಿದ್ರಾ ಧನುಷ್ ಅನ್ನೋ ಅನುಮಾನ ಕೂಡ ಕಾಡ್ತಿದೆ.

42 ವರ್ಷ ವಯಸ್ಸಿನ ಧನುಷ್ ಕಾಲಿವುಡ್‌‌ನಿಂದ ಹಾಲಿವುಡ್‌‌ವರೆಗೆ ಸುಮಾರು 50 ಸಿನಿಮಾಗಳನ್ನ ಮಾಡಿದ್ದಾರೆ. ಮೃಣಾಲ್‌ಗೀಗ 33 ವರ್ಷ. ಇವರಿಬ್ಬರ ನಡುವಿನ ವಯಸ್ಸಿನ ಅಂತರ 9 ವರ್ಷ. ಆದಾಗ್ಯೂ ಕೂಡ ಮನಸುಗಳು ಹಾಗೂ ದೇಹಗಳು ಬೆರೆತಂತಿವೆ. ಹಾಗಾಗಿಯೇ ಇವ್ರ ಪ್ರೀತಿ, ಗೀತಿ, ಇತ್ಯಾದಿ ಕಥೆ ಸಂಚಲನ ಮೂಡಿಸಿದೆ. 18 ವರ್ಷಗಳ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದ ಧನುಷ್, ಈ ಪ್ರೀತಿಯನ್ನ ಮುಂದುವರೆಸಿ, ಸಪ್ತಪದಿ ವರೆಗೂ ತರ್ತಾರಾ ಅಥ್ವಾ ಅದನ್ನೂ ಬೇಗ ಎಂಡ್ ಮಾಡಿಕೊಳ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version